೧. ತಿಳಿನೀರಿಗೆ ಕಲ್ಲೆಸೆದು ಮೂಡಿದ ನೂರೆಂಟು ಬಿಂಬಗಳೆಂಬ
'ನಾನು'ಗಳಲ್ಲೇ ಹುಡುಕುತ್ತಿಹೆನು ನಾನು ನನ್ನನು..
೨. ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
ಮುತ್ತಿಟ್ಟರೆ ಅರಳುವ ಅವಳ ತುಟಿ ,
ನಾಚಿದ ಬಳ್ಳಿಯಂತೆ ಮುದುಡುವುದವಳ ಕಣ್ಣ ರೆಪ್ಪೆ !!!
೩. ಅಲೆಯೊಂದು ಸೃಷ್ಟಿಯಾಯಿತು ನನ್ನೆದೆಯ ಬಡಿತಕ್ಕೆ,
ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ
ಮಿಲನವಾದವು ಎರಡೂ ಅಲೆಗಳು ..
ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ....
ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...
ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ
ಮಿಲನವಾದವು ಎರಡೂ ಅಲೆಗಳು ..
ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ....
ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...
೪. ನಿನ್ನ ಪ್ರೀತಿಗೆ ನನ್ನ ಸಿಹಿ ಮುತ್ತುಗಳೇ ಸುಂಕ ಗೆಳತಿ ,
ಮುತ್ತಲ್ಲದೆ ಬೇರೇನೂ ಕೇಳಬೇಡ..
೫.. ಕಣ್ತುಂಬ ಕನಸುಗಳನ್ನು ಬಿತ್ತಿ ,
ಕಣ್ಣಂಚಲೇ ಮರೆಯಾದವಳು .
ನೆನಪುಗಳು ಅಳಿಯುವ ಮುನ್ನವೇ
ಹಳೆ ಕನಸುಗಳಿಗೆ ಹೊಸ ಬಣ್ಣ ಹಚ್ಚುತ್ತಿಹಳು..
೬. ನನ್ನೆದೆಯ ವೀಣೆಯ ಸ್ವರಕ್ಕೆ ನುಡಿಯಾದವಳು ,
ಕಣ್ಮುಚ್ಚಿ ಮಲಗಿದರೂ ಕಣ್ಣೊಳಗಿನ ಬಿಂಬವಾಗಿ ಕಾಡುತ್ತಿಹಳು..
೭. ಚಳಿಗೆ ಕನಸುಗಳೂ ಹೆಪ್ಪುಗಟ್ಟು ತ್ತಿವೆ ಗೆಳತಿ ,
ನೀನಾದರೂ ಇರಬಾರದೇ ಸನಿಹ ?
ಬೆಚ್ಚಗೆ ಅಪ್ಪಿಕೊಳ್ಳಲು , ಬಿಸಿ ಮುತ್ತೊಂದ ನೀಡಲು..

