ಕಣ್ಣಾ ಮುಚ್ಚೇ.....
ಕಾಡೇ ಗೂಡು.....
ಉದ್ದಿನ ಮೂಟೆ......
ಉರುಳೆ ಹೋಯಿತು.....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೇ.....
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ........
ಬಾಲ್ಯದಲ್ಲಿ ಪ್ರತಿಯೊಬ್ಬರೂ ಈ ಹಾಡನ್ನು ಏನಿಲ್ಲ ಅಂದರೂ ಸಾವಿರ ಸರಿ ಆದರೂ ಹಾಡಿರುತ್ತೀವಿ....ಹುಡುಗಾಟದ ವಯಸ್ಸಿನಲ್ಲಿ ಇದನ್ನು ಬಹಳ ಖುಷಿ ಇಂದ ಮನೆಯ ಸುತ್ತ ಮುತ್ತಲ ಮಕ್ಕಳೆಲ್ಲಾ ಸೇರಿ ಅದೆಷ್ಟು ಸಂಭ್ರಮದಿಂದ ಹಾಡಿರುತ್ತಿದ್ದೆವು.... ಆದರೆ ಇದು ನಮ್ಮ ಜೀವನದ ಅಂತ್ಯಕ್ಕೆ ಎಷ್ಟು ಹೋಲಿಕೆ ಆಗುತ್ತದೆ.....
ಈ ಪದಗಳನ್ನು ನಮ್ಮ ಜೀವನಕ್ಕೆ ಈ ರೀತಿ ಹೋಲಿಸಬಹುದು...
ಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು,ಮನುಷ್ಯನ ಅಂತ್ಯ ..
ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...ಇಲ್ಲಿರುವುದು ಸುಮ್ಮನೆ,ಅಲ್ಲಿರುವುದು ನಮ್ಮನೆ ಎಂಬ ಹಾಗೆ ನಾವು ಸಧ್ಯ ಇರುವ ಮನೆ ಅದು ಕೇವಲ ಕ್ಷಣಿಕ,ಶಾಶ್ವತ ಅಲ್ಲ...ನಮ್ಮ ಸಮಾಧಿಯೇ ನಮಗೆ ಶಾಶ್ವತ...
ಉದ್ದಿನ ಮೂಟೆ ಅಂದರೆ ನಮ್ಮ ೬೦ ಕಿಲೋ,೮೦ ಕಿಲೋ, ಅಥವಾ ಕ್ವಿಂಟಾಲ್ ತೂಕದ ದೇಹ......
ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....ಇಲ್ಲಿ ಉದ್ದಿನ ಮೂಟೆ ಉರುಳಿ ಹೋಯಿತು ಎಂಬುದನ್ನು ಸೂಚಿಸುತ್ತದೆ....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....ಸತ್ತಾಗ ಪ್ರಾಣ ಪಕ್ಷಿ ಹಾರಿ ಹೋಯಿತು ಎಂದು ಹೇಳುವ ಹಾಗೆ ಇದು ಕೂಡ...
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು...
(ಹಾಗೆ ಇದು ಒಂದು ವ್ಯಾಖ್ಯಾನ ಅಷ್ಟೇ !!! ಇದರಲ್ಲಿ ತಪ್ಪು-ಒಪ್ಪುಗಳು ಇದ್ದರೂ ಇರಬಹುದು)