Showing posts with label ಕಥೆ. Show all posts
Showing posts with label ಕಥೆ. Show all posts

Tuesday, December 25, 2012

ಅವಳ ಹೆಣ ಸುಟ್ರಂತೆ

ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮಾಡಿ,ಬಂದ ಹೆಣ್ಣುಮಕ್ಕಳಿಗೆ ಕುಂಕುಮ ನೀಡಿ ಎಲ್ಲರಿಗೂ ಸಿಹಿ ಹಂಚಿ, ಬಾಗಿಲಿಗೆ ದೀಪ ಹಚ್ಚಿಟ್ಟಿದ ನಂತರ,ಅಂದು ಬೆಳಗ್ಗೆ ಮನೆ ಮುಂದೆ ಸಗಣಿ ಸಾರಿಸಿ ಬಿಟ್ಟಿದ್ದ ರಂಗೋಲಿಯನ್ನು ಕಣ್ತುಂಬಿ ಕೊಳ್ಳುತ್ತಾ ರಂಗೋಲಿಯ ಮೇಲೂ ಮೂರ್ನಾಲ್ಕು ದೀಪಗಳನ್ನು ಹಚ್ಚಿಟ್ಟಳು ಸರೋಜಮ್ಮ .ವ್ಯಾಪಾರಿಯೂ ಆದ ತನ್ನ ಗಂಡ ಪ್ರತಿ ವರ್ಷ ಒಳ್ಳೆ ದುಡಿಮೆಯನ್ನೇ ಮಾಡುತ್ತಿದ್ದ.ಪ್ರತಿಷ್ಠೆಗಾಗಿ ಗರಿ ಗರಿ ನೋಟುಗಳನ್ನೇ ಪೂಜೆಗೆ ಇಡುತ್ತಿದ್ದ.ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಮಕ್ಕಳು ಸುಡುತ್ತಿದ್ದರು .ಪಟಾಕಿಯ ವಿಷಯದಲ್ಲೂ ಪ್ರತಿಷ್ಠೆ  ಮೆರೆಯುತ್ತಿದ್ದ.ಆದರೆ ಈ ವರ್ಷ ಸರಿಯಾಗಿ ಮಳೆ ಆಗದೆ ಇದ್ದಿದ್ದರಿಂದ,ರೈತರಿಗೆ ಬೆಳೆಯೂ ಸರಿಯಾಗಿ ಆಗಲಿಲ್ಲ.ಈ ವರ್ಷ ರಾಮೇಗೌಡನ ವ್ಯಾಪಾರವೂ ಸ್ವಲ್ಪ ಮಟ್ಟಿಗೆ ಮಂಕಾಯಿತು.ಅವನ ಮಕ್ಕಳಿಗೆ ಹಚ್ಚು ಪಟಾಕಿ ಸಿಡಿಸಲಿಲ್ಲ ಎಂಬ ಅಸಮಧಾನ ತಳ ಊರಿತು.

ಈ ವರ್ಷ ನೆಟ್ಟಗೆ ಮಳೆ ಇಲ್ಲ ,ಬೆಲೆ ಇಲ್ಲ,ಆಗಾಗಿ ವ್ಯಾಪರನೂ ಅಷ್ಟಾಗಿ ಆಗಲಿಲ್ಲ,ಅದಕ್ಕೆ ಈ ವರ್ಷ ಅಷ್ಟು ಜೋರಾಗಿ ಪೂಜೆ ಮಾಡಲಿಲ್ಲ ಎಂದು ಬಂದವರಿಗೆಲ್ಲ ಗಂಡ ಹೆಂಡತಿ ಇಬ್ಬರೂ ಸಬೂಬು ಕೊಟ್ಟಿದ್ದಾಯಿತು.ಊರಿಗೆ ಊರೇ ಮಳೆರಾಯನಲ್ಲಿ ಮೊರೆಯಿಡುತ್ತಿತ್ತು.ಮಳೆಗಾಗಿ ಪೂಜೆ,ಹವನಗಳು,ಪರೇವುಗಳು ನಡೆದವು.ಆದರೂ ಮಳೆರಾಯ ಕೃಪೆ ತೋರಲಿಲ್ಲ.
 ------------------------------

ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ರಾಮೇಗೌಡನ ಹಮಾಲಿ ವೆಂಕಟ ಬಂದ .ಬಂದವನು ಮತ್ತೇರಿಸಿಕೊಂಡೆ ಬಂದಿದ್ದನು. ತೂರಾಡುತ್ತಿದ್ದ ವೆಂಕಟನನ್ನು ದುರುಗುಟ್ಟಿಕೊಂಡು ನೋಡಿದ ಗೌಡ" ಥೂ ಹಲ್ಕಾ ನನ್ ಮಗನೆ.ಹಬ್ಬದ ದಿನನಾದ್ರು ನೆಟ್ಟಗೆ ಇರಕ್ಕೆ ಆಗಲ್ವೆನ್ಲಾ ನಿಂಗೆ,ಕೊಟ್ಟಿದ್ದ ದುಡ್ಡೆಲ್ಲ ಬರಿ ಕುಡಿಯೋಕ್ಕೆ ಆಯ್ತೇನೋ " ಎಂದು ಬೈಯ್ಯುತ್ತಿದ್ದಾಗ ಉರಿಯೋ ಬೆಂಕಿಗೆ ತುಪ್ಪ ಅನ್ನೋ ಹಾಗೆ ಹಾಗೆ,ಸರೋಜಮ್ಮ ಕೂಡ "ಮಕ್ಕಳಿಗೆ ಏನಾದ್ರೂ ಕೊಡ್ಸಿದ್ಯೋ ಇಲ್ವೋ ?" ಎನ್ನುತ್ತಾ "ಇನ್ ಮುಂದೆ ಈ ಹೆಂಡ ಗುಡುಕನಿಗೆ ದುಡ್ಡು ಕೊಡ ಬ್ಯಾಡಿ,ಇವನ ಕೂಲಿ ದುಡ್ಡನ್ನೆಲ್ಲ ಇವನ ಹೆಂಡತಿ ಕೈಲಿ ಕೊಡಿ" ಎಂದು ಗಂಡನಿಗೆ ತಾಕಿತು ಮಾಡಿದಳು.


"ಅಯ್ಯೋ ನಾನು ಕುಡಿದಿರೋದು ಬಿಟ್ಟಾಕಿ,ಈ ವರ್ಷ ನೋಡಿ ಮಳೆ ಇಲ್ದೆ ನಿಮ್ಮ ವ್ಯಾಪಾರ ಇಲ್ಲ.ಲಕ್ಷ್ಮಿ ಪೂಜೆ ಹೀಗೆ ಮಾಡಬೇಕಾಯಿತು" ಎಂದು ಬೇರೆ ಕಡೆ ಮಾತು ಎಳೆಯಲು ನೋಡಿದ.


"ಹೋಗ್ಲಿ ಬಿಡ್ಲಾ ಈ ವರ್ಷ ಹಿಂಗಾಯಿತು.ಮುಂದಿನ ವರ್ಷ ಮಳೆ ಚೆನ್ನಾಗಿ ಆಗುತ್ತೆ" ಅಂದ ಗೌಡ.


"ಥೋ ಗೌಡ್ರೆ,ಮುಂದಿನ ವರ್ಷ ಯಾಕೆ,ನಾಳೆನೆ ಮಳೆ ಬರುತ್ತೆ ನೋಡಿ" ಎಂದು ಅಭಯ ಸೂಚಿಸಿದ.


"ಮುಚ್ಕಂಡು ಹೋಗ್ಲ,ಅದೇನೋ ಹಬ್ಬದ ಊಟ ಇಸ್ಕಂಡು ಉಂಡು,ಮಲ್ಕೋ ಹೋಗು.ಕುಡಿದಿರೋದು ಇಳಿದ ಮೇಲೇ ಬೆಳಗ್ಗೆ ಬಾ" ಎಂದು ಗದರಿದ..


"ಇಲ್ಲ ಗೌಡ್ರೆ,ಈ ವರ್ಷ ಮಳೆ ಬರದೆ ಇರೋದಕ್ಕೆ ನಿಮ್ಮ ಜಾತಿಯವರೇ ಕಾರಣ.ಆ ಹುಚ್ಚಿ ಇದ್ಲಲ್ಲ ಆ ತೀರ್ಥಿ ಅವಳೇ ಕಾರಣ"ಅಂದ..

--------------------------------------
ತೀರ್ಥಿ,ಚಿಕ್ಕ ವಯಸ್ಸಿಗೆ ಮದುವೆ ಮಾಡಿಸಿದ್ದರಿಂದ ಸಂಸಾರ ಮಾಡಲು ಒಲ್ಲೆ ಎಂದು ಕೆಲವೆ ದಿನಗಳಲ್ಲಿ ತವರಿಗೆ ಬಂದಿದ್ದಳು.ಊರಿನ ಜನ ಗಂಡ ಬಿಟ್ಟವಳು ಎಂದು ಚೇಡಿಸುತ್ತಿದ್ದರು.ಗಂಡನ ಮನೆಯಿಂದ ಬರುವಷ್ಟರಲ್ಲಿ ಗರ್ಭಿಣಿ ಆಗಿದ್ದ ತೀರ್ಥಿ ಕೆಲವು ದಿನಗಳಲ್ಲಿ ಒಂದು ಹೆಣ್ಣು ಮಗುವನ್ನು ಹಡೆದಳು .ಅಷ್ಟರಲ್ಲೇ ಎಲ್ಲರ ಹಿರಿತದ ಮಾತುಗಳನ್ನು ಕೇಳಿ ಕೇಳಿ ಅವಳ ಮನಸ್ಥಿತಿ ಹದಗೆಟ್ಟಿತ್ತು.ತನ್ನ ಮಗುವಿಗೆ ಎದೆ ಹಾಲು ಉಣಿಸುವಷ್ಟು ಪ್ರಮೇಯವೂ ಅವಳಲ್ಲಿ ಇರಲಿಲ್ಲ..ಎಲ್ಲರೂ ತಲೆ ಕೆಟ್ಟವಳು ಎಂದು ಕರೆಯುತ್ತಿದ್ದರು.ಕೊನೆಗೊಂದು ದಿನ ಅವಳು ಹುಚ್ಚಿಯೇ ಆಗಿಬಿಟ್ಟಳು.

ಅವಳ ಗಂಡ ಬಂದು ತನ್ನ ಮಗುವನ್ನು ಕರೆದು ಕೊಂಡು ಹೋದ.ಇವಳನ್ನು ಯಾವ ಆಸ್ಪತ್ರೆಗೆ ತೋರಿಸಿದರೂ ಕಾಯಿಲೆ ವಾಸಿ ಆಗಲಿಲ್ಲ.ಕೊನೆಗೆ ತವರು ಮನೆಯವರು ಕೂಡ ಮನೆಯಿಂದ ಹೊರದಬ್ಬಿದರು.ನಂತರ ವರ್ಷಾನು ಗಟ್ಟಲೆ ಬೀದಿ ಬೀದಿ ಅಲೆಯುತ್ತ,ಊರೂರು ಅಲೆಯುತ್ತ ಯಾರ್ಯಾರೋ ಮನೆಯಲ್ಲಿ ಉಳಿದಿದ್ದು ಅಳಸಿದ್ದನೆಲ್ಲ ಕೊಟ್ಟರೆ ಅದನ್ನೇ ಇಸಿದು ಕೊಂಡು ತಿಂದು ಬದುಕುತ್ತಿದ್ದಳು. ಅವಳನ್ನು ಕಂಡು ದಯೆ ತೋರಿದವರು ಒಂದಷ್ಟು ಜನ.ಅಯ್ಯೋ ಪಾಪ ಎಂದು ಮರುಗಿದವರು ಇನ್ನಷ್ಟು ಜನ.ತಿಂಗಳು ಗಟ್ಟಲೆ ಉಟ್ಟ ಸೀರೆಯಲ್ಲೇ ಇದ್ದು ,ರವಿಕೆ ಎಲ್ಲ ಹರಿದು ಹೊಗಿ,ಸ್ತನಗಳೆಲ್ಲ ಕಾಣಿಸುತ್ತಿದ್ದರೂ ಅದರ ಪ್ರಮೇಯವೇ ಇಲ್ಲದೆ ಅವಳು ಓಡಾಡುತ್ತಿದ್ದಾಗ ಬಟ್ಟೆ ಉಡಿಸಿದ ಹೆಂಗಸರು ಒಂದಷ್ಟು ಜನ.ಕೆಲವೊಮ್ಮೆ ಸೆರಗು ಕೆಳಗಿಳಿದು ಹೇಗೆ ಬೇಕಾಗಿ ಹಾಗೆ ಇದ್ದಾಗ,ಛೇಡಿಸಿದ ಮನಸುಗಳು ಕೆಲವು ,ಕಾಮಾಂಧತೆ ಇಂದ ನೋಡಿದ ಕಣ್ಣುಗಳು ಹಲವು.ಹೀಗಿದ್ದ ತೀರ್ಥಿ ಒಂದು ದಿನ ಸತ್ತಳು.

"ಪಾಪ,ಆ ಹುಚ್ಚಿ ಏನ್ ಮಾಡಿದ್ಲು ನಿಮಗೆ ?ಏನೋ ಸತ್ತಳು,ಅವಳು ಬದುಕಿದ್ದರು ಏನ್ ಪ್ರಯೋಜನ ಇತ್ತು ಬಿಡಿ,ಪಾಪ ಅವಳ ಮಗಳು ಬೇರೆ ದೊಡ್ದವಳಾಗುತಿದ್ದಾಳೆ. ಇಂಥವಳು ತನ್ನ ತಾಯಿ ಅಂತ ಅವಳಿಗೆ ಗೊತ್ತಾಗದೆ ಇರೋದೇ ಒಳ್ಳೇದು.ಪಾಪ ಅವಳ ಗಂಡ ಹೇಗೋ ಸಾಕ್ತಿದ್ದಾನೆ ಆ ಮಗೂನ."ಎಂದು ಅವಳ ಬಗ್ಗೆ ಕರುಣೆ ತೋರುತ್ತಾ ವೆಂಕಟನಿಗೆ ಹೇಳಿದಳು

"ಅಯ್ಯೋ,ಅಮ್ಮ ಅವಳ ಬೆನ್ನಲ್ಲಿ ತೊನ್ನು ಇತ್ತು.ಅವಳನ್ನು ಹೂತಾಕುವ ಬದಲು ಸುಟ್ಟಿದ್ರೆ ಈ ಥರ ಬರಗಾಲ ಬರುತ್ತಿರಲಿಲ್ಲ" ಎಂದು ಮುಂದುವರೆಸಿದ..

'ಅವಳಿಗೆ ತೊನ್ನು ಇದ್ದದಕ್ಕು ,ಮಳೆ ಬರದೆ ಇರೋದಕ್ಕೂ ಏನ್ಲಾ ಸಂಭಂದ "ಎಂದು ಗೌಡ ಗದರಿದ.

'ಆ ತೊನ್ನು ಭೂಮಿ ಒಳಗೆ ಕರಗಲ್ವಂತೆ ಬುದ್ಧಿ.. ಆ ಮೂಳೆಗಳು ಬೇರು ಬಿಡುತ್ತಂತೆ..ಅದು ಹಾಗೆ ಬೆಳಿತಾ ಹೋಗುತ್ತೆ.ಅಲ್ದೆ ಅವರ ಬಾಯಿ ಯಾವಾಗಲೂ ಕಿಸ್ಕೊಂಡೆ ಇರುತ್ತಂತೆ.ಅಂಥವರನ್ನ ಸುಡಬೇಕಂತೆ.ಹೂತಾಕಿದರೆ ಅದೊಂಥರ ಶಾಪ ಇದ್ದ ಹಾಗೆ,ಮಳೆ ಬರಲ್ವಂತೆ .ನೋಡಿ ಅವಳು ಸತ್ತಿದ್ದು ಯುಗಾದಿಗು ಮುಂಚೆ.ಅವತ್ತಿಂದ ಇವತ್ತಿನವರೆಗೂ ಒಂದು ಹನಿ ಮಳೆ ಬಂದಿಲ್ಲ": ಅಂದ..

ಗೌಡ ಯೋಚನಾ ಮಗ್ನನಾಗಿದ್ದಾಗ ವೆಂಕಟ ಮತ್ತೆ ಮುಂದುವರೆಸುತ್ತಾ "ಈ ವರ್ಷ ಈ ಅಶ್ವಿನಿ,ಭರಣಿ ಮಳೆ ಯಾವ್ದು ಬರಲಿಲ್ಲ.ಏಕಾದಶಿ ದಿನ ಕಡೆ ಪಕ್ಷ ಒಂದು ಹನಿನಾದ್ರು ಮಳೆ ಬರೋದು..ಈ ವರ್ಷ ಆ ಪಾಪ್ ಮುಂಡೆ ದೆಸೆ ಇಂದ ಒಂದೇ ಒಂದು ಹನಿ ಮಳೆ ಇಲ್ಲ..ಇನ್ನೊಂದೆರಡು ತಿಂಗಳು ಕುಡಿಯೋಕ್ಕೂ ನೀರಿರಲ್ಲ ನೋಡ್ತಿರ್ರಿ" ಅಂದ.

ಅಷ್ಟರೊಳಗೆ ಸ್ವಲ್ಪ ವಿಜ್ಞಾನ ಓದಿಕೊಂಡಿದ್ದ ಗೌಡನ ಹಿರಿ ಮಗ ಬಂದು: "ವೆಂಕಟಪ್ಪ ಚರ್ಮದಲ್ಲಿ ಮೆಲಾನಿನ್ ಅಂಶ ಕಡಿಮೆ ಆದಾಗ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತೆ.ಅದು ಒಂಥರಾ ಚರ್ಮ ರೋಗ ಅಷ್ಟೇ.ಅದಕ್ಕೂ ಮಳೆ ಬರದೇ ಇರೋದಕ್ಕೂ ಏನು ಸಂಭಂದ ಇಲ್ಲ. ಕುಡಿದು ಏನೇನೋ ಮಾತಾಡಬೇಡ ಹೋಗು"ಅಂದ..

"ನೋಡ್ತಿರ್ರಿ.ನೀವೆಲ್ಲ ,ಇವತ್ತು ಅವಳ ಹೆಣ ಹೊರಗೆ ತೆಗೆದು ಸುಡ್ತಿವಿ,ನಮ್ಮ ಹಟ್ಟಿಯವರು,ಬೆಸ್ತರ ಹಟ್ಟಿಯವರು ಎಲ್ಲ ಸೇರ್ಕೊಂಡು " ಎಂದು ತಾನು ಏನೋ ಸಾಧಿಸಲು ಹೊರಟಿರುವ ಹಾಗೆ ಬೀಗಿದ..

"ಯಾರೋ ನಿಂಗೆ ಇದನ್ನೆಲ್ಲಾ ಹೇಳಿದ್ದು "ಅಂದಾಗ "ಪಕ್ಕದ ಊರಿನ ಭೋರಾಚಾರಿ .ಅದೇ ಶಾಸ್ತ್ರ ಹೇಳುತ್ತಾನಲ್ಲ ಅವನು"ಅಂದ.

"ಗೌಡ್ರೆ,ಇವತ್ತು ಅಮಾವಾಸ್ಯೆ ಅಲ್ವ ಇವತ್ತೇ ಮಧ್ಯ ರಾತ್ರಿ ಹೆಣ ಹೊರಕ್ಕೆ ತೆಗೆದು ಸಡಬೇಕಂತೆ.ಇವತ್ತು ನಾವೊಂದು ೧೫-೨೦ ಜನ ನಮ್ಮ ಹಟ್ಟಿಯವರು ಹೋಗ್ತಿದ್ದೀವಿ .ಹೋದ ತಿಂಗಳು ಅಮಾವಾಸ್ಯೆ ದಿನ ಸಡಕ್ಕೆ ಯೋಚನೆ ಮಾಡಿದ್ವಿ.ಆ ಆಚಾರಿ ಯಾವ್ದೋ ಊರಿಗೆ ಪೂಜೆಗೆ ಹೋಗಿದ್ದ,ಅದಕ್ಕೆ ಈ ತಿಂಗಳು ಅಮಾವಾಸ್ಯೆ  ದಿನ ಪೂಜೆ ಮಾಡ್ತೀನಿ ಅಂತ ಹೇಳಿದ್ದ "

"ಮುಚ್ಕಂಡ್ ಹೋಗ್ಲಾ , ಆ ಅಚಾರಿಗೆ ಯಾವ್ದು ಗಂಟು ಹೊಡೆಯೋ ಪೂಜೆ ಇರಲಿಲ್ಲ ಅನ್ಸುತ್ತೆ ಈ ಅಮಾವಾಸ್ಯೆಗೆ ,ಅದಕ್ಕೆ ನಿಮಗೆ ಏನೇನೋ ತಲೆಗೆ ಹಚ್ಚಿದ್ದಾನೆ ಅವನು, ಮಳೆ ಬರೋ ಹಾಗಿದ್ರೆ ಹೋದ ತಿಂಗಳೇ ಸುಟ್ಟಿದ್ದರೆ ಇಷ್ಟೊತ್ತಿಗೆ ಮಳೆ ಬರೋದಲ್ವ " ಎಂದು ಕೇಳಿದ ..

"ಹೋಗ್ಲಿ ಬಿಡಿ,ನಾಳೆ ಒಳಗೆ ಮಳೆ ಬರ್ಲಿಲ್ಲ ಅಂದರೆ ಕೇಳಿ,ಅವಾಗ ಮಾತಾಡ್ತೀನಿ,ನಿನ್ನೆ ಪೂಜೆಗೆ ಬೇಕಾಗಿರೋ ಸಾಮನುಗಳನ್ನ ಕೊಡ್ಸಿ ಬಂದಿದ್ದೀವಿ."ಎಂದು ತಿರುಗುತ್ತರ ನೀಡಿ ಹಬ್ಬದ ಊಟ ಉಂಡು ಮನೆ ಕಡೆ ಹೊರಟ .

ಕುಡಿದ ಅಮಲಿನಲ್ಲಿ ವಾಕ್ ಇಲ್ಲದವನ ಹಾಗೆ ಮಾತಾಡುತ್ತಿದ್ದಾನೆ ಬಡ್ಡಿ ಮಗ,ನಾಳೆ ಬರಲಿ,ಜಾಡಿಸ್ತಿನಿ ಎಂದು ಗೊಣಗುತ್ತಾ ಒಳ ನಡೆದ ಗೌಡ..
 ______________________________________________

ಬೆಳ ಬೆಳಗ್ಗೆ ಬಾಗಿಲಿಗೆ ನೀರು ಹಾಕಿ ಸಾರಿಸಲು ಹೊರ ಬಂದ ಸರೋಜಮ್ಮ ಹಿಂದಿನ ದಿನ ರಂಗೋಲಿಯ ಮೇಲೆ ಇಟ್ಟಿದ್ದ ದೀಪ ತರಲು ಹೋದಾಗ ,ರಂಗೊಲಿಯೆಲ್ಲ ಅಳಿಸಿ ಹೋಗಿದ್ದು,ಸಾರಿಸಿದ ಸಗಣಿ ಎಲ್ಲ ಮರೆಯಾಗಿದ್ದು,ದೀಪಗಳು ಕೂಡ ರಾತ್ರಿ ಇಡೀ ಸುರಿದ ಮಳೆಯ ನೀರಿನ ಜೊತೆ ಕೊಚ್ಚಿ ಕೊಂಡು ಹೋಗಿತ್ತು ಅಷ್ಟರಲ್ಲಿ ಮನೆಯ ಕೆಲಸಕ್ಕೆ ಬಂದ ವೆಂಕಟನ ಹೆಂಡತಿ "ಅಮ್ಮ, ರಾತ್ರಿ,ಆ ಆಚಾರಿ,ಆ ಹುಚ್ಚಿ ಇದ್ಲಲ್ಲ ತೀರ್ಥಿ ,ಅವಳ ಹೆಣಾನ ಸಮಾಧಿ ಇಂದ ಹೊರಕ್ಕೆ ತೆಗೆದು ಸುಟ್ಟು ಹಾಕಿದನಂತೆ "ಎಂದಳು.

ಅವಳ ಧ್ವನಿಯಲ್ಲಿ ಆಶ್ಚರ್ಯ ಭಯ ಎಲ್ಲವೂ ಇತ್ತು ಮತ್ತು ಈ ಕಾರ್ಯ ಯೋಜನೆಯಲ್ಲಿ ಅವಳ ಗಂಡನ ಸಹ ಭಾಗಿತ್ವವೂ ಇದೆ ಮತ್ತು ಇದು ಮುಂಚೆಯೇ ಯೋಜಿಸಿದ್ದು ಎಂದು ಅವಳಿಗೆ ತಿಳಿದಂತೆ ಕಂಡು ಬರಲಿಲ್ಲ..

"ಅಯ್ಯೋ ಶಿವನೆ, ನೆನ್ನೆ ರಾತ್ರಿ ನಿನ್ನ ಗಂಡ ಹೇಳಿದಾಗ ನಾವು ಕುಡಿದು ಏನೇನೋ ಮಾತಾಡುತ್ತಿದ್ದಾನೆ ಅಂದು ಕೊಂಡಿದ್ವಿ ಆ ಆಚಾರಿ ಜೊತೆ ನಿನ್ನ ಗಂಡನೂ ಹೋಗಿದ್ದ ಅನ್ಸುತ್ತೆ " ಎಂದು ಹೇಳುತ್ತಾ "ಇನ್ನು ಏನೇನ್ ಕಾದಿದೆಯೋ ಈ ಊರಲ್ಲಿ" ಎಂದು ಗೊಣಗುತ್ತ ಮನೆ ಒಳ ಒಕ್ಕಳು ...

[ಈ ಕಥೆಯಲ್ಲಿ ಇರುವ ಪಾತ್ರಗಳು ಕಲ್ಪನೆ ಅಷ್ಟೇ... ಆದರೆ ಕೆಲವು ಸನ್ನಿವೇಶಗಳು ಕೆಲವು ಹಳ್ಳಿಗಳಲ್ಲಿ ಇರುವ ಒಂದು ಮೂಢ ನಂಬಿಕೆ.ಅದು ವಾಸ್ತವದ ಸಂಗತಿ ಕೂಡ ಹೌದು...]
(ಅಂದ ಹಾಗೆ ಬಹಳ ದಿನಗಳ ನಂತರ ಒಂದು ಕಥೆ ಬರೆದಿದ್ದೇನೆ..)

Tuesday, February 28, 2012

ಅವಳು

ಸುಮಾರು ೧೫೦ ಮನೆಗಳಿರುವ ಗ್ರಾಮ ಕೆಂಚಾಪುರ..ಕೃಷಿಯಿಂದ ಹಿಡಿದು ಕಮ್ಮಾರ,ಚಮ್ಮಾರ,ಹಜಾಮ,ಕುಕ್ಕೆ ನೆಯ್ಯುವ ಕುಕ್ಕೆ ಕೊರ್ಮರು ,ವ್ಯಾಪಾರ,ಬೆಸ್ತರು,ಗಾಣಿಗ ವೃತ್ತಿ,ಹೀಗೆ ಹಲವಾರು ಕುಲ ಕಸುಬುಗಳನ್ನು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜನ.ಬಡವರಿಂದ ಹಿಡಿದು ಶ್ರಿಮಂತರಾದಿಯಾಗಿ ಜನರು,ಗುಡಿಸಲಿನಿಂದ  ಹಿಡಿದು ಹೆಂಚಿನ ಮನೆಯಾದಿಯಾಗಿ ತಾರಸಿ ಮನೆಗಳೂ ಅಲ್ಲಲ್ಲಿ ಕಾಣಸಿಗುತ್ತಿದ್ದವು.ಇಂಥ ಒಂದು ಊರಲ್ಲಿ ಕೆಲವರು ಕುಟುಂಬ ಸಮೇತರಾಗಿ ಊರು ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗಿ ಜೀವನ ಮಾಡುತ್ತಿದ್ದರು.ಇನ್ನು ಕೆಲವು ಯುವಕರು ಕುಲ ಕಸುಬು ಮಾಡಲು ಹಿಂಜರಿಕೆಯೋ ಅಥವಾ ತಮ್ಮ ಪೂರ್ವಜರ ಕೆಲಸವು  ಆರಾಮದಾಯಕದಲ್ಲದು ಎಂದೋ ಅಥವಾ ಇದು ಅಷ್ಟೂ ಲಾಭದಾಯಕವಲ್ಲದು ಎಂದೋ ಅಥವಾ ನಗರದ ಐಶಾರಾಮಿ ಜೀವನಕ್ಕೆ ಆಕರ್ಶಿತರಾಗಿಯೋ ಅಥವಾ ಇನ್ನ್ಯಾವುದು ಕಾರಣಕ್ಕೋ ಉರೋ ಬಿಟ್ಟು ನಗರ ಸೇರಿ ಕೆಲಸ ಮಾಡತೊಡಗಿದರು.ಕೆಲವರು ತಮ್ಮ ಕುಲ ಕಸುಬನ್ನು ನಗರದಲ್ಲಿ ಕೂಡ ಮಾಡ ತೊಡಗಿದರು.

ಹೀಗೆ ಊರು ಬಿಟ್ಟು ಪಟ್ಟಣ ಸೇರಿದ ಯುವಕರನ್ನು ಕಂಡರೆ ಊರಿನ ಕೆಲವರಿಗೆ ಒಂದು ರೀತಿಯ ಅಸಡ್ಡೆ.ನಗರ ಸೇರಿದ ಹುಡುಗರು ಕೆಟ್ಟ ಕೆಟ್ಟ ಅಭ್ಯಾಸಗಳಿಗೆ ದಾಸರಾಗುತ್ತಾರೆ ,ಕುಡಿಯೋದು,ಜೂಜಾಡುವುದು,ಇನ್ನೂ ಕೆಲವರಿಗೆ ಹುಡುಗಿಯರ ಚಟ ಬೇರೆ ಇರುತ್ತೆ ಅಂತ ಅವರ ತರ್ಕ.ಕೆಲವು ಹುಡುಗರು ಕೆಲಸ ಹುಡುಕಿಕೊಂಡು ಹೋಗಿ ಕೆಲ ಸಮಯದ ನಂತರ ಊರಿಗೆ ಯಾವುದೋ ಹಬ್ಬ ಹರಿದಿನಕ್ಕೆ ಬಂದಾಗ ಅವರ ವೇಷ ಭೂಷಣಗಳಲ್ಲಾಗಲಿ ,ಅವರ ನಡವಳಿಕೆಗಳಲ್ಲಾಗಲಿ ಭಾರೀ ಬದಲಾವಣೆ ಆಗುತ್ತಿತ್ತು.ಕೆಲವರಂತೂ ಊರಿನ ಮುಂದೆ ಇರುವ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಂಡು ಹಿಂದೂ ಮುಂದು ನೋಡದೆ ಯಾರಿಗೂ ಹೆದರದೆ ರಾಜಾರೋಷವಾಗಿ ಸೇದುತ್ತಾ ದಾರಿಯಲ್ಲಿ ನಡೆದು ಹೋಗುತ್ತಿದ್ದರು ಎಂಬುದೇ ಇದಕ್ಕೆ ಕಾರಣ.ಇದನ್ನು ಕಂಡ ಕೆಲವರು ಪಟ್ಟಣ ಸೇರಿ ಹಾಳಾಗಿ ಹೋದ ಮುಂಡೆದು,ಹಿರಿಯರು ಕಿರಿಯರು ಅನ್ನೋ ಭಯ ಭಕ್ತಿ ಇಲ್ಲ ಇವಕ್ಕೆ ಅಂತ ಹಿಂದಿನಿದ ಬೈದು ಕೊಳ್ಳುತ್ತಿದ್ದರು.

ಊರು ಬಿಟ್ಟು ಕೆಲಸ ಹರಸಿ ನಗರ ಸೇರಿದ ಎಷ್ಟೋ ಹುಡುಗರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಊರಿಗೆ ವಾಪಸ್ ಬಂದರು.ಅಲ್ಲದೆ ಇನ್ನಷ್ಟು ಯುವಕರು ಈಗಾಗಲೇ ಪಟ್ಟಣ ಸೇರಿ  ಅಲ್ಲಿ  ಹಳೆ ಹುಲಿಗಳಾಗಿರುವ ತಮ್ಮ ಸ್ನೇಹಿತರ ಅಪೇಕ್ಷೆಯ ಮೇರೆಗೆ ಮತ್ತು ಅವರಲ್ಲಾದ ಶೋಕಿಯ ಬದಲಾವಣೆ ಕಂಡು ತಾವು ಅವರಂತಾಗಬೇಕೆಂದು ಹಳ್ಳಿ ಬಿಟ್ಟು ನಗರ ಸೇರಿದರು.ಇವರೆಲ್ಲ ಊರಿನವರ ಕೆಂಗಣ್ಣಿಗೆ ಕಾರಣರಾಗಿದ್ದರೂ,ಇವರ್ಯಾರು ಯಾರಿಗೂ ಕ್ಯಾರೆ ಅನ್ನುತ್ತಿರಲಿಲ್ಲ.ಇದರಲ್ಲಿ ಕೆಲವರು ಮತ್ತೆ ಊರಿಗೆ ಬರುವ ಯೋಜನೆ ಹಾಕಿಕೊಂಡಿದ್ದರೂ,ಇನ್ನೂ ಕೆಲವರು ತಮಗೆ ಬೇಕಾದ ಹುಡುಗಿಯರನ್ನು ನೋಡಿಕೊಂಡು ಮದುವೆಯಾದರು.ಇದರಲ್ಲಿ ಕೆಲವು  ಹುಡುಗರು ದುಡಿದ ದುಡ್ಡನ್ನು ಬಿಟ್ಟಿ ಶೋಕಿ ಮಾಡುತ್ತಾ ಬೇಕಾಬಿಟ್ಟಿ ಖರ್ಚು ಮಾಡಿಕೊಂಡು ಮನೆಗೆ ನಯಾ ಪೈಸೆ ಕೊಡದೆ ಇದ್ದು ಬಿಡುತ್ತಿದ್ದರು,ಇನ್ನು ಕೆಲವರು ಭುದ್ದಿವಂತರು ಮನೆಗೊಂದಿಷ್ಟು ದುಡ್ಡಿ ಕಳಿಸುತ್ತಾ ತಾವು ಒಂದಿಷ್ಟನ್ನು ಉಳಿಸಿಕೊಳ್ಳುತ್ತಿದ್ದರು.

ಇಂಥ ಒಂದು ಯುವಕರ ಪಡೆಯಲ್ಲಿ ಸದಾಶಿವ ಎಂಬ ಹುಡುಗನೂ ಇದ್ದ.ಬೇರೆಯವರಿಗಿಂತ ಸ್ವಲ್ಪ ಬುದ್ಧಿವಂತನೂ ಆಗಿದ್ದ.ಸ್ವಲ್ಪ ಛಲವಾದಿ,ಏನಾದರೂ ಸಾಧಿಸಬೇಕೆಂಬ ಆಸೆ.ಬಡತನದಿಂದ ಅನುಭವಿಸಿದ ಯಾತನೆ ಅವನನ್ನು ಹಾಗೆ ಮಾಡಿತ್ತು. ಇತರೆ ಹುಡುಗರೆಲ್ಲ ಕೆಲವೇ ವರ್ಷಗಳಲ್ಲಿ ವಾಪಸ್ ಹಳ್ಳಿಗೆ ಮರಳಿದರೆ,ಇವನು ಸುಮಾರು ವರ್ಷಗಳ ತನಕ ನಗರದಲ್ಲೇ ಕೆಲಸ ಮಾಡಿಕೊಂಡಿದ್ದ,ಅಲ್ಲದೆ ವಾಪಸ್ ಮರಳಿದ ಹುಡುಗರಲ್ಲಿ ಯಾರನ್ನಾದರೂ ಯಾಕೆ ಕೆಲಸ ಬಿಟ್ಟು ಬಂದ್ರಿ,ಅವನು ನೋಡಿದ್ರೆ ಇನ್ನೂ ಚೆನ್ನಾಗಿ ದುಡಿತಿದ್ದಾನೆ ಅಂದ್ರೆ ತಮ್ಮ ತಮ್ಮ ತೇಪೆಗಳನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಅಯ್ಯೋ,ಅವನೆಲ್ಲಿ ಕೆಲಸ ಮಾಡ್ತಾನೆ,ಆರಾಮಾಗಿ ಯಾವ್ ಯಾವನ್ ಜೊತೆಗೋ ಅಲೆದಾಡಿಕೊಂಡು ಇದ್ದಾನೆ,ಯಾರ್ಯಾರದೋ ಸಹವಾಸ" ಅಂತ ಹೇಳಿಬಿಡುತ್ತಿದ್ದರು.ಇಷ್ಟು ಸಾಲದು ಅನ್ನದೆ ಮದುವೆ ಆಗೂ ಅಂದರೆ ಈಗಲೇ ಬೇಡ ಅಂತ ಹೇಳುತ್ತಿದ್ದನು.ಇದನ್ನೆಲ್ಲಾ ಕಂಡ ಜನರಿಗೆ ಇವನ ಮೇಲೆ ಒಂದು ತೆರೆನಾದ ಗುಮಾನಿ ಎದ್ದು ಬಿಟ್ಟಿತ್ತು.ಬೇರೆಯವರೆಲ್ಲ ಊರಿಗೆ ವಾಪಸ್ ಬನದ್ರೂ,ಅವರೆಲ್ಲ ಮದುವೆ ಆದರೂ,ಇವನ ಮದುವೆ ಆಗದೆ ಊರಿಗೆ ಬರದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು.ಅಲ್ಲದೆ ಇವನು ಮದುವೆ ಆಗ್ತೀನಿ ಅಂದರೂ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿರಲಿಲ್ಲ.ಆಗಂತ ಅವನೇನು ಸಾಚ ಆಗಿರಲ್ಲಿಲ.ಅವನಿಗೂ ಕೆಲವು ಚಟಗಲಿದ್ದವು.

ಕೆಲ ವರ್ಷದ ನಂತರ,ತನ್ನ ೪೦ರ ವಯಸ್ಸಿನ ಆಸುಪಾಸಿನಲ್ಲಿ ನಗರ ಜೀವನಕ್ಕೆ ವಿದಾಯ ಹೇಳಿ ಊರಲ್ಲಿ ತನ್ನ ಸ್ವಂತ ವ್ಯಾಪಾರ ಶುರು ಮಾಡಲು ಮರಳಿದ.ಇಷ್ಟು ವರ್ಷ ದುಡಿದ ದುಡ್ಡಿನಲ್ಲಿ ವ್ಯಾಪಾರ ಆರಂಭಿಸಲು ಯೋಚಿಸಿದ್ದನು.ಆಗ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ಮದುವೆ ಆಗಲು ಒಪ್ಪಿಕೊಂಡ.ಹುಡುಗಿಯ ಹುಡುಕಾಟವೂ ಶುರು ಆಯಿತು.ಜೊತೆಗೆ ಊರಿನವರ ಬಾಯಿಗೆ ಹುಳು ಆಗಿ ಬಿಟ್ಟಿದ್ದ.ಯಾರ ಹತ್ತಿರಾನೋ ಕೆಲಸ ಮಾಡ್ತಿದ್ದನಲ್ಲ,ಅಲ್ಲಿ ಅವರ ಹತ್ತಿರ ಒಂದಿಷ್ಟು ದುಡ್ಡು ದೋಚಿಕೊಂಡು ಬಂದಿದ್ದಾನೆ,ಅಂತ ಬಾಯಿಂದ ಬಾಯಿಗೆ ಹಬ್ಬಿ ಬಿಟ್ಟಿತ್ತು.ಇವನಿಗೆ ಸುತ್ತ ಮುತ್ತ ಊರಿನವರು ಹೆಣ್ಣು ಕೊಡಲು ತಯ್ಯಾರಿರಲಿಲ್ಲ.ಕೊನೆಗೆ ಅದೇ ಊರಿನ ಮಾದಪ್ಪನ ಮಗಳನ್ನು ಕೇಳಿದ.ಮಾದಪ್ಪನಿಗೆ ಇದ್ದದ್ದು ಸ್ವಲ್ಪವೇ ಜಮೀನು,ಆಗಾಗಿ ಕೂಲಿಯನ್ನು ಮಾಡುತ್ತಾ ತನ್ನ ಪಿತ್ರಾರ್ಜಿತ ನಾಟಿ ಹೆಂಚಿನ ಹಳೆ ಮನೆಯಲ್ಲಿ ವಾಸ ಮಾಡುತ್ತಿದ್ದ.ತನ್ನ ಮಗನನ್ನು ನಗರಕ್ಕೆ ಕಳಿಸಿ ದುಡಿಸಬೇಕೆಂಬ ಹಂಬಲ ಅವನಲ್ಲೂ ಇತ್ತು,ಬೇರೆಯವರಂತೆ ಕೆಡದಿದ್ದರೆ ಸಾಕು,ಸ್ವಲ್ಪ ದುಡಿದು ಕೊಟ್ಟರೆ ಸಾಕು ಎಂಬ ಬಲವಾದ ಹಂಬಲ ಇತ್ತು.ಆದರೆ ಅವನು ಬೇರೆ ಹುಡುಗರ ಜೀವ ಶೈಲಿಗೂ ಮರುಳಾಗದೆ ಕಷ್ಟವೂ ಪಡದೆ ಬಹಳ ಸೋಮಾರಿಯಾಗಿ ಓದನ್ನೂ ಮುಂದುವರಿಸದೆ ಸುಖಾ ಸುಮ್ಮನೆ ಉರಿನಲ್ಲಿ ತಿರುಗಿ ಕೊಂಡು ಕಾಲ ಹರಣ ಮಾಡಿಕೊಂಡಿದ್ದನು.ಇವನ ಬೇಜವಾಬ್ದಾರಿಯನ್ನು ಮನಗಂಡ ಮಾದಪ್ಪ ಇವನು ತನ್ನ ತಂಗಿಯ ಮದುವೆಯನ್ನು ಮಾಡಲು ಜವಾಬ್ದಾರಿ ವಹಿಸುವುದಿಲ್ಲ ಎಂದೂ ತಿಳಿದಿದ್ದ.

ಆಗಲೇ ಕಾಲೆಜು ಮುಗಿಸಿದ್ದ ಅವನ ಮಗಳು ಯಮುನಾಳಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದ ವೇಳೆಗೆ,ಸದಾಶಿವ ಅವಳನ್ನು ಮದುವೆ ಆಗುವುದಾಗಿ ಕೇಳಿಕೊಂಡ.ಊರಿನ ಜನರೆಲ್ಲಾ ಸೇರಿ ಮಾದಪ್ಪನಿಗೆ "ಅಷ್ಟು ದೊಡ್ದವನಿಗೆ ಯಾಕ್ ಕೊಡ್ತಿಯ,ನಿನಗೆನ್ ಬುದ್ಧಿ ಗಿದ್ದಿ ಇದ್ಯಾ?" ಅಂತ ಹೇಳಿ "ಅಲ್ಲದೆ,ಇಷ್ಟು ವರ್ಷ ಪ್ಯಾಟೆಲಿ ಇದ್ದವನು,ಯಾರ್ಯಾರ್ ಸಹವಾಸವೋ,ಯಾರಿಗೋ ಮೋಸ ಮಾಡಿ ದುಡ್ಡು ತಗಂಡು ಬಂದು ಇಲ್ಲಿ ವ್ಯಾಪಾರ ಶುರು ಮಾಡಿದ್ದಾನೆ,ಅವರು ಯಾವಾಗ ಹುಡುಕಿಕೊಂಡು ಬರ್ತಾರೋ?" ಅಂತೆಲ್ಲ ಹೇಳಿ ಒಟ್ಟಿನಲ್ಲಿ ಹೆಣ್ಣು ಕೊಡುವುದು ಬೇಡ ಅಂತ ಪುಸಲಾಯಿಸಿದ್ದರು.ಆದರೆ ಆ ಸಮಯದಲ್ಲಿ ಮಾದಪ್ಪನ ಮಗ "ಸದಾಶಿವನಿಗೆ ಕೊಟ್ಟು ಮದುವೆ ಮಾಡಬೇಕು,ಇಲ್ಲದಿದ್ದರೆ ತಾನು ಸಾಯುವುದಾಗಿ " ಎಂದು ಹಠ ಹಿಡಿದ.ತನ್ನ ಬೇಜವಾಬ್ದಾರಿ ಮಗನ ಮೇಲೆ ಯಾವುದೇ ಮಮಕಾರ ಮಾದಪ್ಪನಿಗೆ ಇರಲಿಲ್ಲ.ಆದರೂ ಮಗನ ಸಾವು ಅಂತ ಹೆದರಿ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ.ಯಮುನಾ ಕೂಡ ಒಂದು ಕಡೆಯಿಂದ ಸದಾಶಿವನ ಶ್ರೀಮಂತಿಕೆಗೆ ಮರುಳಾಗಿ,ಇಷ್ಟು ವರ್ಷ ಬಡತನದಲ್ಲಿ ಕಷ್ಟ ಪಟ್ಟಿದ್ದು ಸಾಕು,ಇನ್ನು ಮುಂದೆ ಆದರೂ ಸುಖವಾಗಿರಬಗುದು ಎಂದು ತಿಳಿದು ಅವನನ್ನು ಮದುವೆ ಆಗಲು ಒಪ್ಪಿಕೊಂಡಳು.ಇಬ್ಬರ ವಯಸ್ಸಿನ ಅಂತರ ತಿಳಿದಿದ್ದ ಅವಳ ಒಳ ಮನಸ್ಸು ಒಪ್ಪಿರಲಿಲ್ಲ,ಆದರೂ ವಯಸ್ಸಿನ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೆ ಕೇವಲ ಸುಖ ಭೋಗದ ಕನಸು ಕಂಡಳು.ಅಲ್ಲದೆ ಮಾದಪ್ಪನಿಗೆ ಆದಷ್ಟು ಬೇಗ ಮಗಳ ಮದುವೆ ಮಾಡಬೇಕೆಂದು ಅವನ ಸುಪ್ತದಲ್ಲಿ ಅಡಕವಾಗಿತ್ತು.ಕೊನೆಗೊಂದು ದಿನ ಮದುವೆಯೂ ಆಯಿತು,ಅವಳು ಗಂಡನ ಮನೆಯನ್ನೂ ಸೇರಿದಳು.

ಸಂಸಾರ ನೌಕೆ ಸಾಗುತ್ತಿತ್ತು.ಒಂದು ವರ್ಷ ಕಳೆಯಿತು.ಅಷ್ಟರೊಳಗೆ ಸಣ್ಣ ಪುಟ್ಟ ಜಗಳಗಳು ವಿರಸಗಳು  ನಡೆದಿದ್ದವು.ಕೆಲವನ್ನು ಸದಾಶಿವನ  ತಾಯಿ ಹೇಗೋ ನಿಭಾಯಿಸಿ ಮತ್ತೆ ಒಂದು ಮಾಡುತ್ತಿದ್ದಳು.ಕೇವಲ ಸುಖ ಜೀವನದ ಆಸೆ ಹೊತ್ತಿದ್ದ  ಯಮುನಾಳಿಗೆ ತನಗಿಂತ ದುಪ್ಪಟ್ಟು ವಯಸ್ಸಿನ ಗಂಡನೊಡನೆ ಸಂಸಾರ ನಡೆಸುವುದು ಕಷ್ಟ ಆಗುತ್ತಿತ್ತು.ಹೆಣ್ಣು ಮೊದಲೇ ಚಂಚಲೆ.ಅಲ್ಲದೆ ಇಬ್ಬರ ಮನಸ್ಥಿತಿಯಲ್ಲಿ ಯಾವೊಂದು ಸಾಮ್ಯತೆ ಇರಲಿಲ್ಲ.ಇಷ್ಟು ಅಲ್ಲದೆ ಅವನು,ಇಷ್ಟು ವರ್ಷ ನಗರದಲ್ಲಿದ್ದು ಬಂದವನು,ಇವಳು ಹಳ್ಳಿಯಲ್ಲೇ ಕೂತು ಪಟ್ಟಣದ ಕಲ್ಪನೆ ಮಾಡಿಕೊಂಡವಳು,ಮತ್ತು ಅಂತ ಒಂದು ಜೀವನದ ಬಗ್ಗೆ ಆಸೆ ಇಟ್ಟು ಕೊಂಡವಳು.ಇದೆಲ್ಲದಕ್ಕಿಂತ ಅವಳಿಗೆ ಹೆಚ್ಹಾಗಿ ಕಾಡುತ್ತಿದ್ದದ್ದು ವಯಸ್ಸಿನ ಅಂತರ,ಅವಳ ಬಯಕೆಗೆ ಬೇಕಾದ ಪ್ರೀತಿ ಪ್ರೇಮವನ್ನು ಅವನಿಂದ ನೀಡಲು ಸಾಧ್ಯ ಆಗಲಿಲ್ಲ.. ಹೆಣ್ಣು ತನ್ನ ಗಂಡನಿಂದ ಕೇವಲ ಸುಖ ಭೋಗಗಳನ್ನು ನಿರೀಕ್ಷಿಸುವುದಿಲ್ಲ,ಬದಲಾಗಿ ಪ್ರೀತಿಯನ್ನೂ ಅಪೇಕ್ಷಿಸುತ್ತಾಳೆ.ಅಲ್ಲೇ ಅವನು ವಿಫಲನಾದದ್ದು.ಕೇವಲ ತನ್ನ ವ್ಯಾಪಾರವೇ ಅವನಿಗೆ ಹೆಚ್ಹಾಗಿ ಹೋಗಿತ್ತು.ಇಬ್ಬರೂ ಯಾವುದಾದರು ಕಾರ್ಯಕ್ರಮಕ್ಕೆ ಹೋದರೆ "ಎಂಥ ಸುಖ ದಂಪತಿ" "ಇಬ್ಬರೂ ಸೌಭಾಗ್ಯರು" ಎಂದು ಜನ ಮಾತಾಡುತ್ತಿದ್ದರು,ನಿಜಾಂಶ ಗೊತ್ತಿದ್ದು ಅವಳಿಗೆ ಮಾತ್ರ.ಆದರೆ ಸದಾಶಿವ ಮಾತ್ರ ತನ್ನ ಕೆಲಸದಲ್ಲಿ ನಿರತನಾಗಿದ್ದ.ಅವಳಿಗೆ ತಾನೊಬ್ಬಳು ಶ್ರೀಮಂತ ನೊಬ್ಬನಿಗೆ ತನ್ನನ್ನು ತಾನು ಮಾರಿಕೊಂದವಳು ಎಂದು  ಭಾಸವಾಗುತ್ತಿತ್ತು.ಇದೊಂದು ಪ್ರೀತಿ ಇಲ್ಲದ ಗೊಡ್ಡು ಸಂಸಾರ ಎಂದು ತಿಳಿದಿದ್ದಳು.

ಇಂಥ ಇಕ್ಕಟ್ಟಿನಲ್ಲಿ ತನಗೆ ಜೀವನವೇ ಬೇಡವೆಂದು,ತಾನು ಇವನನ್ನು ಮದುವೆ ಆಗಿ ತಪ್ಪು ಮಾಡಿದೆನೆಂದು  ವಿಷ ಕುಡಿದು ಸಾಯಲು ಪ್ರಯತ್ನಿಸಿದಳು.ಆದರೆ ಹೇಗೋ ಬದುಕುಳಿದಳು.ಮತ್ತೆ ಗಂಡನೊಂದಿಗೆ  ಹೊಂದಾಣಿಕೆಯ ಸಂಸಾರದ ಯಾವುದೇ ಭರವಸೆ ಅವಳಲ್ಲಿ ಇರಲಿಲ್ಲ.ಆದರೆ ಕಡೆ ಪಕ್ಷ ಬದುಕಬಹುದೆಂಬ ಆಶಾ ಭಾವನೆ ಇತ್ತು.ಮತ್ತೂ ಗಂಡನ ಪ್ರೀತಿಯಿಂದ ದೂರವಿದ್ದಳು.ಅವಳ ಮನಸ್ಸಿನಲ್ಲಿ ಕೆಲವು ರೀತಿಯ ಬದಲಾವಣೆಗಳು ಆಗ ತೊಡಗಿದವು .ವಯೋಸಹಜ ಪ್ರೀತಿಯ ಅಭಿಲಾಷೆ ಇದ್ದೆ ಇತ್ತು .ಅದೇ ಊರಿನ  ಗುಡಿಸಲಿನಲ್ಲಿ ವಾಸವಾಗಿದ್ದ ತನ್ನ ವಯಸ್ಸಿನ ಹುಡುಗನ ಜೊತೆ ಅವಳಿಗೆ ಪ್ರೀತಿ ಬೆಳೆದಿತ್ತು.ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಇವರ ಸಂಭಂದವನ್ನು ಗಮನಿಸಿದ ಮತ್ತು ತಿಳಿದ ಕೆಲವರು "ಎಂಥ ಮರ್ಯಾದಸ್ಥನಿಗೆ,ಎಂಥ ಹೆಂಡತಿ" ಎಂದು ಅವಳನ್ನು ದೂಷಿಸಿದರು.ಪಟ್ಟಣದಿಂದ ವಾಪಸ್ ಬಂದವನು,ಇಷ್ಟು ವರ್ಷ ಮದುವೆ ಆಗದಿರುವುದಕ್ಕೆ ಯಾವುದೋ ಕಾಯಿಲೆ ಸಮಸ್ಯೆಯೂ ಅಥವಾ ಇನ್ನೇನೂ ಕಾರಣ ಕೊಟ್ಟು,ಅವನನ್ನು ಹಿಂದಿನಿದ ಬೈಯುತ್ತಿದ್ದ ಜನ ಇಗ ಅವಳನ್ನೇ ಬೈಯುತ್ತಿದ್ದಾರೆ.ಕೊನೆಗೆ ಅವಳಿಗೆ ವೇಶ್ಯೆಯ ಪಟ್ಟವನ್ನೂ ಕಟ್ಟಿದರು.

ಶ್ರೀಮಂತನೊಬ್ಬನಿಗೆ ತನ್ನ ದೇಹ ಮಾರಿಕೊಂಡಂತೆ ನಡೆಸುತ್ತಿದ್ದ ತನ್ನ ಸಂಸಾರವನ್ನು ಹಾಲಿನಂತ ಸಂಸಾರ ಎಂದೂ,ತಾನು ಸುಖದಿಂದ ಪ್ರೇಮವನ್ನು ಅನುಭವಿಸಿದ ಈ ಪ್ರೀತಿಯ ಸಂಭಂದವನ್ನು  ಕೆಟ್ಟ ಕಳ್ಳ ಸಂಭಂದ ಎಂದ ಜನರ ಮೇಲೆ ಅಸಾಧ್ಯ ಕೋಪ ಬರುತ್ತಿತ್ತು,ಆದರೂ ಅಸಹಾಯಕಳಾಗಿದ್ದಳು.ಅವರ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಕೊನೆಗೆ ಆತ್ಮ ವಿಮರ್ಶೆ,ಆತ್ಮಾಭಿಮಾನಕ್ಕೊಳಗಾಗಿ ತನ್ನ ಗಂಡನೊಂದಿಗಿನ ಸಂಸಾರವನ್ನು,ಆತನೊಂದಿಗಿನ ಸಂಭಂದವನ್ನು
ತನ್ನ ಮನಸ್ಸಿನೊಳಗೆ ಪಣಕ್ಕಿಟ್ಟಲು..ಎಷ್ಟೇ ಕಷ್ಟ ಬಂದರೂ ನೆಮ್ಮದಿ ಇಲ್ಲದಿದ್ದರೂ ಪ್ರೀತಿಯ ಧಾರೆ ಇಲ್ಲದಿದ್ದರೂ ಗಂಡನೊಂದಿಗೆ ಇರುವುದಾಗಿ ನಿಶ್ಚಯಿಸಿದಳು.ಎರಡು ಆತ್ಮ ಹತ್ಯೆಯಲ್ಲಿ ವಿಫಲಳಾದವಳು ತಾನು ಎಂದು ಭಾವಿಸಿಕೊಂಡು ಮತ್ತೊಮ್ಮೆ ಗಂಡನೊಂದಿಗೆ ಪ್ರೀತಿ ಪ್ರೇಮದ ಆಶಾ ಭಾವನೆ ಇಲ್ಲದೆ ಸಂಸಾರ ಮಾಡ ತೊಡಗಿದಳು.
ಜನರ  ಬಾಯಲ್ಲಿ "ಅವಳು" "ಅವನ ಹೆಂಡತಿ"ಯಾಗಿಯೇ ಉಳಿದಳು.
      

Sunday, October 30, 2011

ಮತಾಂತರ !!!

ಎಂದೂ ತಪ್ಪದ ದೇವಸ್ಥಾನದ ಪೂಜೆ,ಸ್ವಾಮಿಗಳಿಗೆ ನಿಷ್ಟರಾಗಿದ್ದ ಜನ ,ಎಲ್ಲರೂ ಒಂದೊಂದು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಜನ ಇದ್ದಂತಹ ಊರಲ್ಲಿ ಒಂದು ಹಲಗೇರಿ ಇತ್ತು..ಊರು ಇದ್ದ ಕಡೆ ಹೊಲಗೇರಿ ಎಂಬಂತೆ.ಯಾವ ಕುಲಕ್ಕೂ ಸೀಮಿತವಾಗದ ದೇವಸ್ಥಾನದಲ್ಲಿ ಮೇಲ್ಜಾತಿಯವರೇ ಪೂಜೆ ಮಾಡುತ್ತಿದ್ದರೂ,ಊರಿನ ಕುಲದಿನೆಂಟು ಜಾತಿಯವರೂ,ಹಕ್ಕಿ ಶಿಕಾರ್ರು,ಕುಕ್ಕೆ ಕೊರಮರು ಹೀಗೆ ನಾನಾ ಪಂಗಡಗಳಿಗೆ ಸೇರಿದ ಜನರು  ಅಲ್ಲಿಗೆ ಬರುತ್ತಿದ್ದರು,ಕೆಲವೊಮ್ಮೆ ಭಜನೆಗೂ ಎಲ್ಲಾ ಜನರು ಬರುತ್ತಿದ್ದರು.

ಇಂಥ ಊರಲ್ಲಿ ಇದಕಿದ್ದ ಹಾಗೆ ಹೊಲಗೇರಿಯ ಕೆಲವು ದಲಿತರ ಮನೆಗಳ ಮೇಲೆ ಶಿಲುಬೆ ಏರತೊಡಗಿತು,ಕಾರ್ತಿಕ ಮಾಸ ಮುಗಿದ ಕೂಡಲೇ ಮನೆ ಮುಂದೆ ಕ್ರಿಸ್ಮಸ್ ನಕ್ಷತ್ರಗಳು  ಮೀನುಗ  ತೊಡಗಿತು.ಆ ಕಾಲೋನಿಯ ಎಷ್ಟೋ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು.ಶಿವ,ರಾಮ,ಹರಿಯ ಭಜನೆ ಮಾಡುತ್ತಿದ್ದವರು ಏಸು ಪ್ರಭು ಎಂದು ಗುನುಗುನಿಸಲು ಶುರು ಮಾಡಿದರು.ಇದೆಲ್ಲರ ಹಿಂದಿನ ರೂವಾರಿ,ದಲಿತರ ಕಾಲೋನಿಯ ಏಕೈಕ ಡಿಗ್ರಿ ಪಧವಿದರ ಸುರೇಶ ಮತ್ತು ಗ್ರಾಮ ಪಂಚಯ್ತೀ ಸದಸ್ಯೆಯೂ ಆದ,ತನ್ನ ತಾಯಿ ವಿಧವೆ ನೀಲಮ್ಮ.

ಕೆಲವು ಪಂಗಡಗಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು,ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೊತೆ ಕೆಲಸಕ್ಕೆ ಹಾಕಿಕೊಳ್ಳುತ್ತಿದ್ದರು.ಆದರೆ ಕೆಲವು ಮೇಲ್ಜಾತಿ ವರ್ಗದವರು ಮಾತ್ರ ಹೆಚ್ಹಾಗಿ ಓದಿಕೊಂಡಿದ್ದರು.ಇಂಥ ಸನ್ನಿವೇಶದಲ್ಲಿ ತಂದೆ ಕಳೆದುಕೊಂಡ ಸುರೇಶ ಮಾತ್ರ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತಾನೆ.

ಒಂದು ಕ್ರೈಸ್ತ ಮಿಷನರಿ ನಡೆಸುತ್ತಿದ್ದ ಉಚಿತ ಹಾಸ್ಟೆಲ್ಲಿನಲ್ಲಿ ಸೇರುತ್ತಾನೆ,ಬೇರೆ ಕಡೆ ದುಡ್ಡು ಕಟ್ಟುವ ಶಕ್ತಿ ಇಲ್ಲದ ಕಾರಣ..ಹೀಗೆ ಅವನ ಓದು ಸಾಗುತ್ತಿದ್ದಾಗ,ಅವನ ಕಾಲೇಜಿನಲ್ಲೇ ಓದುತ್ತಿದ್ದ ಹಾಸ್ಟೆಲ್ಲಿನ ಪಕ್ಕದಲ್ಲೇ ಇದ್ದ ಚರ್ಚಿಗೆ ಪ್ರತಿ ಭಾನುವಾರ ಬರುತ್ತಿದ್ದ ಹುಡುಗಿಯ ಪರಿಚಯವಾಯಿತು.ಮೊದಮೊದಲು ನೆಪವೊಡ್ಡಿ ಚರ್ಚಿಗೆ ತಪ್ಪಿಸಿಕೊಳ್ಳುತ್ತಿದ್ದ ,ಬೈಬಲ್ ಓದಲು ಇಷ್ಟ ಪಡದ  ಸುರೇಶ ಅವಳ ಜೊತೆ ಚರ್ಚಿಗೆ ಹೋಗಲು ಮೊದಲು ಮಾಡಿದ.

ಬಿರುಗಾಳಿಯನ್ನು ತಡೆಯಲು ಹೇಗೆ ಸಾಧ್ಯ?ಸಮುದ್ರದ ಭೀಕರ ತೊರೆಯನ್ನು ನಿಲ್ಲಿಸಲು ಹೇಗೆ ಸಾಧ್ಯ ? ಅದೇಗೆ ಏಸು ಇದ್ದ ಒಂದು ರೊಟ್ಟಿಯನ್ನು ಅಷ್ಟೊಂದು ರೊಟ್ಟಿ ಮಾಡಿ ಸಾವಿರಾರು ಜನರಿಗೆ ನೀಡಿದ? ಇದೆಲ್ಲ ನಿಮ್ಮ ಮೂಡ ನಂಬಿಕೆ ಏನು ಬೈಬಲ್ಲಿನ ಸನ್ನಿವೇಶಗಳನ್ನು ಸುಳ್ಳು ಎಂದು ವಾದ ಮಾಡುತ್ತಿದ್ದ...ಕಾಲ ಜರುಗಿದಂತೆ ಫ್ಲೇವಿಯ ಎಂಬ ಹುಡುಗಿಯ ಪ್ರೀತಿಯ ಹಂಬಲದಲ್ಲಿ ಬಿದ್ದು,ಅವಳು ಮಡಿದ ಬೈಬಲ್ ಪಟನೆಗೆ ತಲೆದೂಗತೊಡಗಿದ.ಊರಿನ ತನ್ನ ಮನೆಯಲ್ಲಿದ್ದ  ಭಜನೆ ಪುಸ್ತಕಗಳು,ಶಾಲೆಯಲ್ಲಿ ಕೊಟ್ಟಿದ್ದ ಭಗವದ್ಗೀತೆ ಎಲ್ಲಾ ಓಲೆ ಸೇರಿದವು,ತಾನು ಕೂಡ ಬೈಬಲ್ ಓದಲು ಶುರು ಮಾಡಿದ..

ತಮ್ಮಿಬ್ಬರ ಮದುವೆ ಆಗಬೇಕೆಂದರೆ ಸುರೇಶ ತಮ್ಮ ಧರ್ಮಕ್ಕೆ ಬರಬೇಕು,ಅವನು ಇದನ್ನೇ ಪಾಲಿಸಬೇಕು ಎಂದು ಅರಿತಿದ್ದ ಫ್ಲೇವಿಯ ಅವನ ತಾಯಿಯನ್ನು ಹೇಗಾದರೂ ಒಪ್ಪಿಸಬೇಕು ಎಂದು ಪಣ ತೊಟ್ಟು,ಆಗಾಗ ಅವನ ಜೊತೆ ಇವನ ಹಳ್ಳಿಗೆ ಬರಲು ಶುರು ಮಾಡಿದಳು.ಪ್ರತಿ ಬಾರಿ ಬಂದಾಗಲು,ಸುರೇಶನ ತಾಯಿಗೆ ಏನೇನೋ ತುಂಬಲು ಶುರು ಮಾಡಿದಳು.ಮೇಲ್ಜಾತಿಯವರು ನಿಮ್ಮ ಓಣಿಗೆ ಬರಲ್ಲ,ನಿಮ್ಮ ಕೈಲಿ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಬಿಡಲ್ಲ,ಇಲ್ಲಿ ಸಮಾನತೆ ಇಲ್ಲ,ಆದರೆ ನಮ್ಮ ಧರ್ಮದಲ್ಲಿ ಈ ರೀತಿ ಇಲ್ಲ... ಏನೇನೋ ಹೇಳತೊಡಗಿದಳು...

ನೀವು ನಮ್ಮ ಧರ್ಮಕ್ಕೆ ಬನ್ನಿ,ನಿಮ್ಮ ಒಳ್ಳೆಯ ಸವಲತ್ತು ಗಳನ್ನು  ಕೊಡುತ್ತೇವೆ ಎಂದೆಲ್ಲಾ ಹೇಳಿ ಮೊದಲೇ ದುಡ್ಡು ಎಂದರೆ  ಬಾಯಿ ಬಿಡುತ್ತಿದ ನೀಲಮ್ಮ ಚರ್ಚಿನವರು ಕೊಟ್ಟ ಒಂದಷ್ಟು ಪಡೆದು  ಅಲ್ಲಿ ಒಂದು ಪುಸ್ತಕಕ್ಕೆ ಸಹಿ ಮಾಡಿ ಆ ಧರ್ಮಕ್ಕೆ ಮತಾಂತರಗೊಂಡಳು..ಇದರ ಹಿಂದೆಯೇ ತನ್ನ ಮದುವೆಗೆ ಅನುಕೂಲವಾಗುತ್ತದೆ ಎಂದು ಮೊದಲೇ ಅರಿತಿದ್ದ ಸುರೇಶ ಕೂಡ...ಇದರ ಜೊತೆಗೆ ಈ ಉರಿನಲ್ಲಿ ಹೊಸ ಪಂಗಡ ಒಂದು ಶುರು ಆಯಿತು..

ಆ ಹುಡುಗಿ ಪ್ರತಿ ಬಾರಿ ಊರಿಗೆ ಬಂದಾಗ ಸುರೇಶನ ಮನೆಯಲ್ಲಿ ಒಂದೊಂದು ಬದಲಾವಣೆ ಆಗ ತೊಡಗಿತು.ಮೊದಲು ಪ್ರತಿ ಸೋಮವಾರ ನಡೆಯುತ್ತಿದ್ದ ಪೂಜೆ ನಿಂತಿತು,ಭಾನುವಾರ ಚರ್ಚಿಗೆ ಹೋಗಲು ಶುರು ಮಾಡಿದಳು ನೀಲಮ್ಮ...ನಂತರ ಮನೆಯಲ್ಲಿದ್ದ ಗಣಪತಿ,ಶಿವ,ಲಕ್ಷ್ಮಿ ಪಟಗಳು ಗೋಡೆಯಿಂದ ತೆಗೆಯಲ್ಪಟ್ಟಿತ್ತು...ಇವೆಲ್ಲ ಸುಟ್ಟು ಬೂದಿ ಆದವು...ಶಿಲುಬೆಯ ಆಕೃತಿ ಗೋಡೆಯಲ್ಲಿ ಅಲಂಕಾರ ಗೊಂಡಿತು...ನಂತರ ಈ ಒಡವೆ ಗಳೆಲ್ಲ ಬರೀ ವಿಜೃಂಭಣೆ ,ಇದು ಏಸುವಿಗೆ ಇಷ್ಟವಿಲ್ಲ ಎಂದು ಹೇಳಿ,ನೀಲಮ್ಮನ ಬಳೆ,ಕಿವಿಯಲ್ಲಿದ್ದ ಓಲೆ,ಸರಗಳನ್ನು ತೆಗೆಸಿದಳು...ಹಣೆಗೆ ಕುಂಕುಮ ಹರಿಶಿನ ಹಚ್ಚಿಕೊಳ್ಳುವುದು ನಿಂತ ನಂತರ ಅವುಗಳೆಲ್ಲ ತಿಪ್ಪೆ ಸೇರಿದವು..ಹಬ್ಬ ಹರಿದಿನಗಳು  ಗುತ್ತು ಗುರಿ ಇಲ್ಲದಂತಾಯಿತು...ಕೇವಲ ಕ್ರಿಸ್ಮಸ್ ಆಚರಣೆ ಶುರು ಆಯಿತು..ಹೀಗೆ ಒಂದೊಂದು ಬದಲಾವಣೆ ಆದ ನಂತರ ನೀಲಮ್ಮ ಪೂರ್ತಿ ಕ್ರೈಸ್ತ ಮಹಿಳೆ ಆದಳು...

ತನ್ನ ಅಣ್ಣ,ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದಾಗ ,ಅದು ಚರ್ಚಿನಲ್ಲಿ ಮದುವೆ ಸಮಾರಂಭ ಇಟ್ಟು ಕೊಳ್ಳೋಣ ಎಂದ್ದಾಗ,ಈ ಮದುವೆ ಮುರಿದು ಬಿತ್ತು ಅಲ್ಲದೆ ನೀಲಮಮ್ನ ಅಣ್ಣ ಅವಳ ಜೊತೆ ಜಗಳ ಮಾಡಿಕೊಂಡು ಹೋದ...

ಗ್ರಾಮದಲ್ಲಿ ನಡೆಯುವ ಸಿದ್ಧ ಮಲ್ಲೇಶ್ವರನ ಜಾತ್ರೆಗೆ ಹೋಗುವುದನ್ನು ನಿಲ್ಲಿಸಿದಳು...ದೇವಸ್ಥಾನಕ್ಕೆ ಕಾಣಿಕೆ ನಿಲ್ಲಿಸಿದಳು...ಆಗಾಗ ಮನೆಗೆ ಬರುತ್ತಿದ್ದ ಸ್ವಾಮಿಯನ್ನು ಕರೆಯುವುದನ್ನು ನಿಲ್ಲಿಸಿದಳು..ಬದಲಾಗಿ ಚರ್ಚಿನ ಫಾದರ್ ಗಳು ಬರಲು ಶುರು ಮಾಡಿದರು...

ಇದೆಲ್ಲದರ ಜೊತೆಗೆ ಮನೆಯಲ್ಲಿ ಒಂದಿಷ್ಟು ಬೈಬಲ್ ಪ್ರತಿಗಳನ್ನು ಇಟ್ಟುಕೊಂಡು,ತನ್ನ ಓಣಿಯ ಹೆಂಗಸರಿಗೆಲ್ಲ ಓದಲು ಬರದ ನೀಲಮ್ಮ,ತನ್ನ ಮಗನಿಂದ ಮತ್ತು ಆ ಹುಡುಗಿಯಿಂದ ಮತ್ತು ಚರ್ಚಿನಲ್ಲಿ ಹೇಳುತ್ತಿದ್ದ ಬೈಬಲ್ಲಿನ ಪಾಠವನ್ನು ಒಪ್ಪಿಸ ತೊಡಗಿದಳು...ಇದಕ್ಕೆಲ್ಲ ಕಾರಣ,ಇನೊಂದಿಷ್ಟು ಜನರನ್ನು ಚರ್ಚಿಗೆ ತಂದರೆ ಇನ್ನಷ್ಟು ದುಡ್ಡನ್ನು ಕೊಡುತ್ತೇವೆ ಎಂದು ಹೇಳಿದ್ದೆ ಕಾರಣ...

ಇದರಿಂದ ತಮಗೂ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ತಿಳಿದ ಎಮ್ಮೆ ಮಲ್ಲನ ಹೆಂಡತಿ ನಾಗಮ್ಮ, ಸುಣ್ಣದ ಬಸವನ ಸೊಸೆ ಕಾಳಮ್ಮ..ಹೀಗೆ ಒಬ್ಬೊಬ್ಬರಾಗಿ ಚರ್ಚಿಗೆ ಹೋಗಲು ಶುರು ಮಾಡಿದರು...

ಕೆಲವು ಗಂಡಸರು ಮಾತ್ರ ತಮ್ಮ ಮನೆಗೆ ಬಂದ ಫಾದರ ಗಳಿಗೆ ಬೈದು ,ಇನ್ನೊಮ್ಮೆ ಬಂದರೆ ಕಾಲು ಮುರಿಯುವುದಾಗಿ ಬೆದರಿಸಿ ಕಳುಹಿಸಿದರು..

ಅಲ್ಲದೆ ಅವರು ಮುಖ್ಯ ಗುರಿಯಾಗಿಸಿಕೊಂಡಿದ್ದು ಕಾಯಿಲೆ ಬಿದ್ದವರನ್ನು ,ಅವರಿಗೆ ಬೈಬಲ್ ನಲ್ಲಿರುವ ಏಸು ಕಾಯಿಲೆ ವಾಸಿ ಮಾಡಿದ ಪ್ರಸಂಗಗಳನ್ನು ಹೇಳಿ ತಾವು ಚರ್ಚಿಗೆ ಬಂದರೆ ತಮ್ಮ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿದರೂ,ಚರ್ಚಿಗೆ ಹೋದರು ತಮ್ಮ ಕಾಯಿಲೆ ವಾಸಿ ಆಗದೆ ಇದ್ದಾಗ ಇದೆಲ್ಲ ಸುಳ್ಳು ಎಂದು ನಂಬಿ ತಮಗೆ ಸಿಕ್ಕ ದುಡ್ಡನ್ನು ಇಟ್ಟಿಕೊಂಡು ಚರ್ಚಿಗೆ ಹೋಗುವುದನ್ನು ಕೆಲವರು ನಿಲ್ಲಿಸಿದರು...

ವರ್ಷಕ್ಕೊಮ್ಮೆ ಮಾಸ್ತಮ್ಮ ದೇವರಿಗೆ ಕೋಳಿ,ಕುರು ಬಲಿ ಕೊಡಲು ಓಣಿಗೆ ಒಣಿಯೇ ಗಾಡಿಗಳಲ್ಲಿ ಹೋಗುತ್ತಿದ್ದರೆ,ಈ ಬಾರಿ ಹೋಗುವವರ ಸಂಖ್ಯೆ ಕಡಿಮೆ ಆಗ ತೊಡಗಿತು...

ಹೀಗೆ ಕೆಲವು ಜನರು ಊರಿನ ಹಿರಿಯರ ಸಲಹೆ ಅಂತೆ ಮತ್ತೆ ತಮ್ಮ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಾಗೆ ಮುಂದುವರೆದರು, ನೀಲಮ್ಮನಂಥ  ಕೆಲವರು ಚರ್ಚಿಗೆ ಹೋಗಲು ನಿಲ್ಲಿಸಲಿಲ್ಲ... ಸುರೇಶ ಫ್ಲೆವಿಯಳನ್ನು ಮದುವೆ ಆಗಿ ಅದೇ ಚರ್ಚಿನಲ್ಲಿ ಕೆಲಸಕ್ಕೆ ಆ ಧರ್ಮ ಪ್ರಚಾರಕ್ಕೆ ಕೆಲ್ಸಕ್ಕೆ ಸೇರಿಕೊಂಡ... ತನ್ನ ಉರಿನಲ್ಲಿ ಕೂಡ ಇನ್ನಷ್ಟು ಜನರನ್ನು ಚರ್ಚಿಗೆ ಕರೆ ತರಲು ಪ್ರಯತ್ನ ಮಾಡಿದರೂ  ಊರಿನ ಗಂಡಸರೆಲ್ಲ ಸೇರಿ ಧರ್ಮದೇಟು ಕೊಟ್ಟಾಗ ತನ್ನ ಉರಿನಲ್ಲಿ ಆ ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ....

--------------------------------------------------------------------------
## ಕಥೆ ##

Saturday, October 1, 2011

ಅಳಲು !!!

ದೊಡ್ಡೇಗೌಡ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬ...ವರ್ತಕರ ಸಂಘದ ಸದಸ್ಯ ಕೂಡ....ಉರಿನಲ್ಲಿ ಒಳ್ಳೆ ಹೆಸರಿದೆ... ಸಂತೆ ಬೀದಿಯಲ್ಲಿ ಬಿಳಿ ಪಂಚೆ,ಬಿಳಿ ಅಂಗಿ ಹಾಕಿಕೊಂಡು ನಡೆದು ಬಂದ ಅಂದರೆ ಅಲ್ಲಿರುವವರೆಲ್ಲರೂ ಎದ್ದು ನಮಸ್ಕರಿಸುತ್ತಾರೆ... ಗಟ್ಟಿಗ,ಧೈರ್ಯವಂತ,ಯಾರೊಬ್ಬರಿಗೂ ಒಂದು ರೂಪಾಯೀ ಮೋಸ ಮಾಡಿಲ್ಲ,ವ್ಯಾಪಾರದಲ್ಲಿ ಕೂಡ,ಹಾಗೆ ಯಾರೇ ಇವನಿಗೆ ಮೋಸ ಮಾಡಿದರೆ ಹಾಗೆ ಬಿಡುವ ಅಸ್ಸಾಮಿ ಅಲ್ಲ... ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಹಿರಿ ಮಗ ವೆಂಕಟೇಶ ಮತ್ತು ಕೊನೆ ವರ್ಷದ  ಡಿಗ್ರಿ ಮಾಡುತ್ತಿರುವ ಮಗಳು,ಇಬ್ಬರು ಮಕ್ಕಳ ಮದುವೆಯನ್ನು ಒಂದೇ ಚಪ್ಪರದಲ್ಲಿ ಮಾಡ ಬೇಕೆಂಬ ಆಸೆಯೊಂದಿಗೆ ಇಬ್ಬರಿಗೂ ವಧು ಮತ್ತು ವರನ ಅನ್ವೇಷಣೆಯಲ್ಲಿ ಕೂಡ ಇದ್ದನು...
ಅದೊಂದು ಭಾನುವಾರ ತನ್ನ ತೋಟ ಮತ್ತು ಅಂಗಡಿಯ ಕೆಲಸದವರಿಗೆ  ಬಟವಾಡೆ ಎಲ್ಲ ಮುಗಿಸಿ ತೋಟದ ಕಡೆ ಹೋಗಿದ್ದ... ಮನೆಯಲ್ಲಿ ಹೆಂಡತಿ ಒಬ್ಬಳೇ ಇದ್ದಳು... ಮಗ ವೆಂಕಟೇಶ ಒಂದು ಹುಡುಗಿಯ ಜೊತೆ ಮನೆಗೆ ಬಂದು,ತನ್ನ ತಾಯಿ ಹತ್ತಿರ ಅವಳನ್ನು ಮದುವೆ ಹಾಗಿರುವುದಾಗಿ ತಿಳಿಸಿದ....
ದೊಡ್ಡೇಗೌಡನ  ಹೆಂಡತಿ ದ್ಯಾವಮ್ಮ ಕುಸಿದು ಬೀಳುವಂತಾದಳು.... ಆಕಾಶ ಕಳಚಿ ತಲೆ ಮೇಲೆ ಬಿದ್ದ ಹಾಗೆ ಆದಳು...ಮಗನ ಈ ಮಾತಿಗೆ ಏನು ಹೇಳಬೇಕೆಂದು ತೋಚದೆ ಗಾಬರಿ ಬಿದ್ದಳು...ಇಂತ ಸಮಯದಲ್ಲಿ ಗಂಡ ಮನೆಯಲ್ಲಿ ಇರಬೇಕಿತ್ತು ಎಂದು ಕೊಂಡಳು ... ಅಳು ಬಂದರೂ ನುಂಗಿಕೊಂಡು "ಯಾಕ್ ಹೀಗ್ ಮಾಡಿದೆ? ನಮಗೆ ಹೇಳಿದ್ರೆ ನಾವೇ ಮದುವೆ ಮಾಡಿಸ್ತಿರ್ಲಿಲ್ವ ? ಯಾವಾಗ ಮದುವೆ ಆದೆ ? ಎಲ್ಲಿ ಆದೆ ? ಅವಳ ಮನೆಯಲ್ಲಿ ಈ ವಿಷಯ ಗೊತ್ತ ?" ಹೀಗೆ ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದಳು...
ಮನಸ್ಸಿನಲ್ಲಿ ಇನ್ನು  ಮಗಳ ಮದುವೆ   ಮಾಡಬೇಕು,ಈ ವಿಷಯ ಊರಿನ ಜನರಿಗೆ ಗೊತ್ತಾದರೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ,ನಮ್ಮ ಮರ್ಯಾದೆ ಏನಾಗಬೇಕು,ಊರವರ ಬಾಯಿಗೆ ಹುಳ ಹಾಗಿ ಬಿಟ್ವಿ....ಹೀಗೆ ಹತ್ತು ಹಲವಾರು ಯೋಚನೆಗಳು ತೊಳಲಾಡ ತೊಡಗಿದವು..
"ಒಂದು ವಾರ ಆಯಿತು ಮದುವೆ ಆಗಿ,ಅಲ್ಲೇ ಸಬ್ ರೆಜಿಸ್ಟ್ರಾರ್ ಆಫಿಸಿನಲ್ಲಿ ಆದ್ವಿ,ಏನೋ ಸ್ವಲ್ಪ ಪ್ರಾಬ್ಲಂ ಆಯಿತು,ಅದಕ್ಕೆ ಆದ್ವಿ..ಹೇಳಬೇಕು ಅಂತ ಇದ್ವಿ,ಹೇಗೂ ಹೇಳಲೇ ಬೇಕು ಅಂತ ಸುಮ್ಮನಾದ್ವಿ ಅಷ್ಟೇ"

"ಏನ್ ಅಂತ ಪ್ರಾಬ್ಲಂ.ಮನೇಲಿ ಹೇಳಿದ್ರೆ ಆಗ್ತಿರಲಿಲ್ವ,ನಿಮ್ಮ ಅಪ್ಪನ ಹತ್ತಿರನಾದ್ರು ಹೇಳಬಾರದಿತ್ತಾ ?? "

"ಅದನ್ನೆಲ್ಲ ಹೇಳಕ್ಕೆ ಆಗಲ್ಲ,ಇವಾಗೆನ್ ಅವರನ್ನು ಒಪ್ಪಿಸ್ತೀನಿ ಬಿಡು "

"ಏನ್ ಒಪ್ಕೋತಾರೆ,ನಿಮ್ಮ ಅಪ್ಪಂಗೆ ನೀನ್ ಹುಟ್ಟಿದ್ಯೋ ಅಥ್ವಾ ನಿಮ್ಮ ಅಪ್ಪ ನಿನಗೆ ಹುಟ್ಟಿದನೋ ? ಮಾಡೋದ್ ಮಾಡ್ಬಿಟ್ಟು ಹೇಳದು ನೋಡು,ಏನಾದ್ರೂ ಮಾಡ್ಕೋ  " ಅಂತ ಹೇಳಿ ಸಿಟ್ಟು  ನುಂಗಿ ಕೊಂಡು ಸೆರಗನ್ನು ಬಾಯಲ್ಲಿ ಕಚ್ಚಿಕೊಂಡು ಹಿತ್ತಲ ಬಾಗಿಲ ಬಳಿ ಹೋಗಿ ಕುಳಿತಳು....ಮಕ್ಕಳ ಮದುವೆ ಬಗ್ಗೆ ಕಂಡ ಕನಸುಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿ ಹೋದಂತೆ ಆದವು...

ಸ್ವಲ್ಪ ಸಮಯದ ನಂತರ ತೋಟದಿಂದ ಬಂದ ದೊಡ್ದೆ ಗೌಡನಿಗೆ ಹೆಂಡತಿ "ಒಳಗೆ ಹೋಗಿ ನೋಡಿ,ಯಾವಳೋ ತಾಟ್ಗಿತ್ತಿನ ಮದುವೆ ಹಾಗಿ ಬಂದವನೇ ನಿಮ್ಮ ಮಗ "

ಇವನಿಗೆ ಏನು ಹೇಳಬೇಕೋ ತೋಚದೆ ಸೀದಾ ಒಳ ನಡೆದು ಮಗನ ಮುಂದೆ ನಿಂತ...ಏನು ಮಾತಾಡ ಬೇಕು ಎಂದು ತಿಳಿಯದೆ ತನ್ನ ಕೋಪ ಸಿಟ್ಟು ಯಾವುದನ್ನು  ತೋರಿಸಿಕೊಳ್ಳದೆ ಸುಮ್ಮನೆ ನಿಂತು ಬಿಟ್ಟ...ತನ್ನ ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಧೃತಿ ಗೆಡದೆ ಇದ್ದ ಅವನ ತಂದೆಗೆ ಕಣ್ಣೀರು ಗೊತ್ತಿಲ್ಲದೇ ಹರಿಯಿತು... ಈಗ ಬಹಳ ಬುದ್ಧಿವಂತಿಕೆ ಇಂದ ಕೆಲಸ ಮಾಡಬೇಕಾದ  ಪರಿಸ್ಥಿತಿ ಬಂತು... ಊರಿನವರಿಗೆ ವಿಷಯ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತದೆ...

ಮದುವೆ ಆಗಿ ಬಂದಿರುವುದರಿಂದ ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು,ಇಲ್ಲದೆ ಹೋದರೆ ಉರಿಬ ದೊಡ್ಡ ಮನುಷ್ಯನೇ ಹೀಗೆ ಮಾಡಿದರೆ ಸರಿ ಇರುವುದಿಲ್ಲ....ಆ ಹುಡುಗಿ ಬೇರೆ ಜಾತಿ ಎಂದು ತಿಳಿದಾಗಲಂತೂ ಅವನ ಅಪ್ಪ ಅಮ್ಮ ಇಬ್ಬರೂ ಕೆಂಡಾಮಂಡಲವಾದರು  .... ಆದರೂ  ಬೇರೆ ದಾರಿ ಇಲ್ಲ...ಹುಡುಗಿಯ ಮನೆಯಲ್ಲಿ ಒಪ್ಪದೇ ಇರುವ ವಿಷಯ ತಿಳಿದು ಅವರ ಮನೆಗೆ ಹೋದರೆ ಹುಡುಗಿಯ ತಂದೆ "ತನಗೆ ಯಾವುದೇ ಸಂಬಂಧ ಇಲ್ಲ "ಎಂದು ಮಗಳ ಬಗ್ಗೆ ಕನಿಕರ ಇಲ್ಲದೆ ಸಾರಾ ಸಗಟಾಗಿ ಹೇಳಿಬಿಟ್ಟರು....

ಇವನ ತಂದೆ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ... ಕೊನೆಗೆ ಅವಳ ಅಪ್ಪ "ಮದುವೆಗೆ ಮುಂಚೆ ಬಸುರಿ ಆಗಿ ಬಂದು,ನಮ್ಮ ಮನೆತನದ ಗೌರವ ಹಾಳು ಮಾಡಿದ್ದು ಸಾಕು,ಇನ್ನು ಮುಂದೆ ಅವಳು ನಮ್ಮ ಮನೆಗೆ ಬರುವುದು ಬೇಡ" ಎಂದು
ಹೇಳಿದಾಗಲೇ ಅವನು  ಯಾಕೆ ಮನೆಯಲ್ಲಿ ಹೇಳದೆ ಮದುವೆ ಆಗಿದ್ದು ಮತ್ತು ಅವನು ಮುಚ್ಚಿಟ್ಟಿದ್ದ ಸತ್ಯ ತಿಳಿದಿದ್ದು....

ಸುಮಾರು ಒಂದು ತಿಂಗಳ ಹಿಂದೆಯೇ ಇವರಿಬ್ಬರೂ ಬಂದು ಇವಳು ಗರ್ಭಿಣಿ ಆಗಿರುವ ವಿಷಯ ತಿಳಿಸಿದ್ದು ಮತ್ತು ತಾನು ಮದುವೆ ಮಾಡಿಕೊಡಲು ಒಪ್ಪದೇ ಇದ್ದಿದಕ್ಕೆ ಇವರು ಮದುವೆ ಆಗಿರಬೇಕು ಎಂದು,ಎಲ್ಲ ವಿಷಯಗಳನ್ನು ಹುಡುಗಿಯ ತಾಯಿ ದೊಡ್ದೆಗೌಡನಿಗೆ ಹೇಳುತ್ತಾಳೆ...

ಈ ಸಂಗತಿ ತಿಳಿದಾಗ ಬಹಳ ಜಾಗರೂಕರಾದ ಗೌಡ ಉಪಾಯ ಮಾಡಿ ರೆಜಿಸ್ಟಾರ್ ಆಫಿಸಿನಲ್ಲಿ ಆಗಿರುವ ಮದುವೆಯನ್ನು  ಇನ್ನೊಮ್ಮೆ ಶಾಸ್ತ್ರೋಕ್ತವಾಗಿ ಮಾಡಿಸಲು ನಿಶ್ಚಯಿಸುತ್ತಾನೆ..ಜೊತೆಗೆ ಒಳಗೆ ತಳಮಳ ಶುರು ಆಯಿತು ಅವನಿಗೆ,ಬೇರೆ ಜಾತಿಯ ಹುಡುಗಿಯನ್ನು ಮನೆ ಸೊಸೆ ಮಾಡಿ ಕೊಂಡರೆ ತನ್ನ ಸಮಾಜದಲ್ಲಿ ತನಗೆ ಇರುವ ಹೆಸರು ಕೆಡುತ್ತದೆ ಅಲ್ಲದೆ ಇಬ್ಬರಿಗೂ,ಇರುವ ಇನ್ನೊಬ್ಬ ಮಗಳ ಮದುವೆಯ ಬಗ್ಗೆ ಚಿಂತ ಅತ್ತ ತೊಡಗಿತು... ಅಣ್ಣ ಈ ರೀತಿ ಮಾಡಿದ್ದಾನೆ ಅಂತ ಗೊತ್ತಾದರೆ ಇವಳನ್ನು ಮದುವೆ  ಆಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂಬ ಆತಂಕ....

ಇಂಥ ಆತಂಕದ ನಡುವೆ , ಆಗಿರುವ ಮದುವೆಗೆ ಇನ್ನೊಮ್ಮೆ ನಾಮಕಾವಸ್ಥೆ ಶಾಸ್ತ್ರೋಕ್ತವಾಗಿ ಮಾಡಿಯೂ ಆಯಿತು.... ಆದರೆ ಹುಡುಗಿಯ ಮನೆ ಕಡೆ ಇಂದ ಯಾರು ಬರಲಿಲ್ಲ... ತಂಗಿಯ ಮದುವೆ ಮೊದಲು ಮಾಡುವ ಬದಲು ಇವನು ಯಾಕೆ ಆದ,ಜವಾಬ್ದಾರಿ ಇಲ್ಲದವನು ಎಂದು ಕೆಲವರು ಬೈದು ಕೊಂಡರೆ,ಇನ್ನು ಕೆಲವರು ಹುಡುಗಿಯ ಮನೆ ಕಡೆಯವರು ಯಾರು ಬರದೆ ಇರುವ ವಿಷಯ ತಿಳಿದು ಏನೋ ಎಡವಟ್ಟಾಗಿದೆ ,ಅದಕ್ಕೆ ಈ ರೀತಿ ಇಷ್ಟು ಬೇಗ ಮಾಡುತ್ತಿದ್ದಾರೆ ಎಂದು ಮಾತಾಡಲು ಶುರು ಮಾಡಿದರೆ,ಕೆಲವರ ಸಂಶಯದ ನಡುವೆ ಕಲ್ಯಾಣ ಮುಗಿಯಿತು...ಆದರೆ ದೊಡ್ದೆ ಗೌಡ ಆಗಲಿ ಅವನ ಹೆಂಡತಿಯ ಮುಖದಲ್ಲಿ ಯಾವುದೇ ತರಹದ ಸಂತೋಷದ ಛಾಯೆ ಇರಲಿಲ್ಲ,ಬದಲಾಗಿ ದುಖ, ಸಮಾಜದಲ್ಲಿ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಅಂಜಿಕೆ ಎದ್ದು ಕಾಣುತಿತ್ತು...

ಬಹಳ ವಿಜೃಂಭಣೆಯಿಂದ  ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದ ಮದುವೆ ಈ ರೀತಿ ಆಗುತ್ತಿರುವುದಕ್ಕೆ ಬೇಸರ ಅಲ್ಲದೆ ಒಂದು ರೀತಿಯ ಸೂತಕದ ಲಕ್ಷಣಗಳು ಕಂಡವು...ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಮಂಕಾಗದ ಅವನ ತಂದೆ ಇವತ್ತು ಮಂಕಾಗಿದ್ದರು,ಇಬ್ಬರಲ್ಲೂ ನೊಂದ ಭಾವ ಅಡಗಿತ್ತು....ಮಗನನ್ನು ಬೆಳೆಸಿ ಓದಿಸಿದಕ್ಕೆ ಇವನು ಕೊಟ್ಟ ದೊಡ್ಡ ಉಡುಗೊರೆ ಎಂದರೆ ತಮ್ಮ ಕನಸುಗಳನ್ನು ನುಚ್ಚು ನೂರು ಮಾಡಿದ್ದು ಮತ್ತು ಸಮಾಜದಲ್ಲಿ ತಮ್ಮ ಗೌರವ ಘನತೆ ಆಳು ಮಾಡಿದ್ದು....

ಸಂಭ್ರಮ ಇಲ್ಲದ ಮದುವೆ ಮುಗಿದು ದಂಪತಿಗಳನ್ನು ಕಳಿಸಿದ ಮೇಲೆ ಉರಿನಲ್ಲಿ ಇವರ ಮದುವೆ ವಿಷಯ ಎಲ್ಲರ ಬಾಯಲ್ಲಿ ಹರಿದಾಡ ತೊಡಗಿತು... ಕೆಲವರಿಗೆ ನಿಜ ಸಂಗತು ತಿಳಿಯ ತೊಡಗಿತು... ಊರಿನ ಜನರೆಲ್ಲಾ ಇವನ ಮನೆಯವರನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡ ತೊಡಗಿದರು...ಮದುವೆ ಆಗಿ ೬ ವರೆ ತಿಂಗಳಿಗೆ ಮಗು ಆದಾಗ  ಜನ  ಕೆಟ್ಟ ರೀತಿಯಲ್ಲಿ ಕಾಣತೊಡಗಿದರು,ಅಲ್ಲದೆ ಅವನ ತಂಗಿಗೆ ಒಂದು ಸಂಭಂದ ಹುಡುಕುವುದು ಕಷ್ಟ ಆಯಿತು...ಅವಳು ತನ್ನ ಅಳಲು ತೋಡಿಕೊಳ್ಳಲು ಆಗದ ಪರಿಸ್ಥಿತಿ ತಲುಪಿದಳು....ನೆಂಟರಿಷ್ಟರು ದೂರ ಮಾಡಲು ಶುರು ಮಾಡಿದರು....

ಎಲ್ಲದರಿಂದ ಆಸಕ್ತಿ ಕಳೆದು ಕೊಂಡ ತಂದೆ ಮಗಳ ಮದುವೆ ಬಗ್ಗೆ ಚಿಂತ ಮಾಡತೊಡಗಿದ .......ಇವೆಲ್ಲದರಿಂದ ಬೇಸತ್ತ ವೆಂಕಟೇಶನ ತಾಯಿ ಅರೆ  ಹುಚ್ಚಿ ಆಗಿಬಿಟ್ಟಳು...

Monday, September 5, 2011

ಜೀವನ ಒಂದು ಆಯ್ಕೆ !!!

ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...

ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...

"ಸುಷ್ಮಾ,ಒಂದು ಮಾತು ಕೇಳಲಾ ?"

"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...

"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.

"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"

"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...

ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....

Monday, August 22, 2011

ಜೈಲು ... !!!

ಊರ ಹೊರಗಿನ ಹನುಮಪ್ಪನ ಗುಡಿ ದಾಟಿ ಸ್ವಲ್ಪ ಮುಂದೆ ಹೋದರೆ ಬಳೆಗಾರ ಶೆಟ್ಟರ ಕೆಂಗಾಡು ಹೊಲ...ಅಲ್ಲಿಂದ ಮುಂದೆ ಇರುವ ದಿಬ್ಬ ಹತ್ತಿ ಅಲ್ಲೇ ಪಕ್ಕದಲ್ಲೇ ಒಂದು ಎತ್ತಿನ ಗಾಡಿ ಹೋಗುವಷ್ಟು ಅಗಲವಾದ ಓಣಿ.. ಒಂದು ಫರ್ ಲಾಂಗ್ ಸಾಗಿದರೆ ಊರಿನವರೆಲ್ಲ ತಮ್ಮ ದನ ಕರುಗಳನ್ನು ಮೈ ತೊಳೆಯುವ ಚಿಕ್ಕದಾದ ಕಟ್ಟೆ ,ಅದರ ಹೆಸರು ಕೆಂಚನ ಕಟ್ಟೆ... ಕೆಲವು ಚಿಕ್ಕ ಮಕ್ಕಳು ಅಲ್ಲೇ ಈಜು ಆಡುತ್ತಾರೆ..ಅದೇಗೆ ಅದರಲ್ಲಿ ಬೀಳುತ್ತಾರೋ ಆ ಹನುಮಪ್ಪನೆ ಬಲ್ಲ.. ಪಕ್ಕದಲ್ಲೇ ಛೇರ್ಮನ್ ಮಲ್ಲೇಗೌಡರ ಜಮೀನು...ಇದು ಮುಂಚೆ ಗೋಮಾಳ ಆಗಿತ್ತಂತೆ... ಮಲ್ಲೇಗೌಡ ಛೇರ್ಮನ್ ಆದಮೇಲೆ ತನ್ನ ಹೆಸರಿಗೆ ಮಾಡಿಸಿಕೊಂಡ ಅಂತ ಉರವರೆಲ್ಲ ಹೇಳ್ತಾರೆ.... ಒಂದಾನೊಂದು ಕಾಲದ ಆ ಗೋಮಾಳ ಬಿಟ್ಟು ಮುಂದೆ ಹೋಗುತ್ತಾ ಎಡಗಡೆ ನೋಡಿದರೆ  ಮಾರಮ್ಮ ದೇವಸ್ಥಾನ ಇರುವ ಬೆಟ್ಟ. ದೇವಸ್ಥಾನ ದಿಂದ ಇನ್ನು ಮೇಲಕ್ಕೆ ಹೋದರೆ ಅದು ಕೋಡುಗಲ್ಲು .... ಆ ಗೋಮಾಳದಿಂದ ಮುಂದೆ ಹೋಗಿ ಅಲ್ಲೇ ಸ್ವಲ್ಪ ಎಡಗಡೆ,ಬೆಟ್ಟದ ಹಿಂದೆ ಬೆಸ್ತರ ಹಟ್ಟಿ ರಾಮಯ್ಯನ ಹೊಲ....

ರಾಮಯ್ಯ ತನ್ನ ವಂಶ ಪರಂಪರೆ ಅಂತೆ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದಾನೆ..ಜೊತೆಗೆ ಸ್ವಲ್ಪ ಜಮೀನು ಇದೆ,ಮಳೆಗಾಲದಲ್ಲಿ ಅದು ಇದು ಬೆಳೆ ತೆಗೆಯುತ್ತಾನೆ,ಜೊತೆಗೆ ೨ ಹಸು ಮತ್ತು ಒಂದು ಜೊತೆ ಎತ್ತು ಇದೆ....ತನ್ನ ಎತ್ತಿನಲ್ಲಿ ತನ್ನ ಜಮೀನು ಅಲ್ಲದೆ ಬೇರೆಯವರ ಹೊಲದಲ್ಲಿ ಬೇಸಾಯ ಮಾಡಿ ಕೂಲಿ ತೆಗೆದು ಕೊಂಡು ಹೇಗೋ  ಸಂಪಾದನೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾನೆ... ಇವನ ಮನೆ ಇರುವುದು ಭೈರಾಪುರದ ಹೊರ ಭಾಗದಲ್ಲಿ,ಬೆಸ್ತರ ಹಟ್ಟಿ ಅಂತ ಕರೆಯಲ್ಪಡುವ ಒಂದು ಕಾಲೋನಿ... ಅಲ್ಲಿ ರಾಮಯ್ಯ ಬಿಟ್ಟರೆ ಇನ್ನು ಯಾರು ತಮ್ಮ ಪೂರ್ವಜರ ವೃತ್ತಿಯನ್ನು ನಡೆಸಿಕೊಂಡು ಬಂದಿಲ್ಲ...

ಅದು ಗುರುವಾರ...ಭೈರಾಪುರದಿಂದ ೪ ಕಿಮಿ ದೂರ ಇರುವ ಸಿಂಗನೂರಿನಲ್ಲಿ ವಾರದ ಸಂತೆ... ಬೇರೆ ದಿನ ಯಾರದಾದರೂ ತೋಟದಲ್ಲಿ ಕೂಲಿ ಹೋಗುವ ರಾಮಯ್ಯ ಗುರುವಾರ ಯಾವುದೇ ಕಾರಣಕ್ಕೂ ಹೋಗಲ್ಲ...ಅವತ್ತು ಸಂತೆಗೆ ಬೆಳ್ಳಗೆ ಬೇಗನೆ ಎದ್ದು  ಮೀನು ಮಾರಲು ಹೋಗುತ್ತಾನೆ.... ತನ್ನ ವ್ಯಾಪಾರ ವಹಿವಾಟು ಮುಗಿದ ಮೇಲೆ ತನ್ನ ಹೆಂಡತಿಗೆ ದುಡ್ಡು ಕೊಟ್ಟು ಸಂತೆ ಮಾಡಲು ಕಳುಹಿಸುತ್ತಾನೆ.... ಹೆಣ್ಣು ಮಕ್ಕಳೇ ಸಂತೆ ಮಾಡಿದರೆ ಸರಿ,ಮನೆಗೆ ಏನೇನ್ ಬೇಕೋ ಅವರಿಗೆ ಚೆನ್ನಾಗಿ ಗೊತ್ತಿರದು ಅಲ್ವೇ?.ರಾಮಯ್ಯನ ಹೆಂಡತಿ ಪುಟ್ಟವ್ವ ಪ್ರತಿ ವಾರ ಮಧ್ಯಾನದ ವೇಳೆಗೆ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳೊಂದಿಗೆ ಜೊತೆ ಗೂಡಿ ಸಂತೆ ಮಾಡಲು ನಡೆದೇ ಹೋಗುತ್ತಾರೆ....

ಅವತ್ತು ಮಾತ್ರ ತನಗೆ ಗ್ರಾಮ ಲೆಕ್ಕಾಧಿಕಾರಿ  ಹತ್ತಿರ ತನ್ನ ಜಮೀನಿಗೆ  ಸಂಭಂದ ಪಟ್ಟ ಕೆಲಸ ಇದ್ದರಿಂದ ಮತ್ತು ಆ ಪುಣ್ಯಾತ್ಮ ವಾರಕ್ಕೆ ಒಂದೇ ದಿನ ಕೈಗೆ ಸಿಗುವುದರಿಂದ  ಅವತ್ತೇ ಆ ಕೆಲಸ ಮಾಡಿಸಿ ಕೊಳ್ಳಬೇಕಿತ್ತು  ... ಸಂತೆ ಬೇರೆ,ತುಂಬ ಜನ ಇರುತ್ತಾರೆ,ಎಷ್ಟೊತ್ತು ಆಗುತ್ತೋ ಏನೋ ಎಂದು ತಿಳಿದು ತನ್ನ ಹೆಂಡತಿಗೆ ಇವತ್ತು ಪೇಟೆಯಲ್ಲಿ ನನಗೆ ಸ್ವಲ್ಪ ಕೆಲಸ ಇದೆ,ನಾನು ಬರುವುದು  ಲೇಟ್ ಆಗಬಹುದು...ನೀನು ಹಸುಗಳನ್ನು ಮೇಯಿಸುತ್ತಿರು,ಹಂಗೆ ಏನೇನ್ ತರ್ಬೇಕೋ ಒಂದು ಚೀಟಿ ಬರೆದು ಕೋಡು...ಇವತ್ತು ನಾನೇ ಸಂತೆ ಮಾಡ್ಕಂಡ್ ಬರುತ್ತೀನಿ ಅಂತ ಹೇಳಿ ಚೀಟಿ ತೆಗೆದು ಕೊಂಡು ಮೀನು ಮಾರಲು ಹೋದ...ಹೀಗೆ ಯಾವುದೇ ರೀತಿಯ ಅನುಮಾನ ಪಡದೆ  ಹೇಳಿ ಹೋದ ರಾಮಯ್ಯನಿಗೆ  ತಾನು ಅಕಸ್ಮಾತ್ ಬೇಗ ಬಂದರೆ ತನ್ನ ಹೆಂಡತಿಯ ಇನ್ನೊಂದು ಮುಖ ತಿಳಿಯುತ್ತದೆ ಎಂದು ಭಾವಿಸಿರಲಿಲ್ಲ...

ಜೆಲೇಬಿ ಮೀನು,ಹಾವು  ಮೀನು,ಕಾಟ್ಲ, ಮೀಸೆ ಮೀನು,ಗೆಂಡೆ ಮೆನು  ಎಲ್ಲವನ್ನು ಮಾರಿ ಆ ಗ್ರಾಮ ಲೆಕ್ಕಿಗನಿಗೆ ಹಂಗೆ ಒಂದು ಗಾಂಧೀ ಪೇಪರ್ ಕೊಟ್ಟು ತನ್ನ ಕೆಲಸವನ್ನು ಸ್ವಲ್ಪ ಸಲೀಸಾಗಿ ಮತ್ತು  ಬೇಗ  ಮುಗಿಸಿಕೊಂಡು,ಹೇಗೂ ಇನ್ನೂ ಸಮಯ ಇದೆ ,ಅವಳೇ ಸಂತೆ ಮಾಡಿದರೆ ಸರಿ,ಆಮೇಲೆ ಸುಮ್ನೆ ಅದು ತಂದಿಲ್ಲ,ಇದು ಬೇಡವಾಗಿತ್ತು ಅಂತ ರಗಳೆ ಯಾಕೆ,ಅವಳನ್ನೇ ಕಳಿಸಿದರಾಯಿತು ಅಂತ ಹಾಗೆ ಸ್ವಾರ್ಣಲೋಕ ಬಾರ್  ಕಡೆ ಹೆಜ್ಜೆ ಹಾಕಿ ಸಂಜೆಗೆ ಮೀನಿನ ಫ್ರೈ ಜೊತೆ ಬೇಕಾಗುತ್ತೆ ಅಂತ ಎರಡು ಕ್ವಾಟರ್ MC ವಿಸ್ಕಿ ತೆಗೆದು ಕೊಂಡು ಮೀನು ತಂದಿದ್ದ ಕುಕ್ಕೆಯಲ್ಲಿದ್ದ ತಕ್ಕಡಿಯಲ್ಲಿಟ್ಟು ಮನೆ ಕಡೆ ಹೊರಟ....ಬೇರೆ ದಿನ ಪ್ಯಾಕೆಟ್ ಸಾರಾಯಿ ಕುಡಿಯವ ರಾಮಯ್ಯ ಮೀನಿನ ವ್ಯಾಪಾರ ಜೋರಾಗಿತ್ತು ಅನ್ಸುತ್ತೆ ಅವತ್ತು ಮಾತ್ರ ಬಾರಿಗೆ ಹೋಗಿ ವಿಸ್ಕಿ ಕೊಂಡ.... ಜೇಬಲ್ಲಿ ದುಡ್ಡಿದ್ದರೆ ತೂಕ ಅಲ್ವ? ಅಲ್ಲದೆ ದುಡ್ಡು  ಜೇಬಲ್ಲಿ ಕುಣಿಯುತ್ತೆ ಬೇರೆ....

ಇತ್ತ ಪುಟ್ಟವ್ವ ಹಾಲು ಕರೆದು ಡೈರಿಗೆ ಹಾಕಿ ಬಂದು ಮಕ್ಕಳಿಗೆ ತಿಂಡಿ ಮಾಡಿ ಕೊಟ್ಟು ಅವರನ್ನು ಶಾಲೆಗೆ ಕಳಿಸಿ ಹೇಗೂ ಇವರೇ ಸಂತೆ ಮಾಡ್ಕೊಂಡು ಬರುತ್ತಾರೆ,ಹೊಲ ಬೇರೆ ಅಷ್ಟೂ ದೂರ ಅಂತ ಮಧ್ಯಾನಕ್ಕೆ  ಬುಟ್ಟಿ ಕಟ್ಟಿಕೊಂಡು   ಹಸುಗಳನ್ನು ಮೇಯಿಸುವುದಕ್ಕೆ  ಹೋಗಿದ್ದಾಳೆ....

ಇತ್ತ  ರಾಮಯ್ಯ ಮನೆಗೆ ಬಂದವನೇ ತಂದಿದ್ದ ಬಾಟಲಿಗಳನ್ನು ಅಟ್ಟದ ಮೇಲಿಟ್ಟು ಹೆಂಡತಿಯನ್ನು ಸಂತೆಗೆ ಕಳುಹಿಸುವ ಸಲುವಾಗಿ  ಹೊಲದ ಕಡೆ ಹೆಜ್ಜೆ ಹಾಕ ತೊಡಗಿದ...ತನ್ನ ಹೊಲದಲ್ಲಿ ಮಧ್ಯದಲ್ಲಿ ತೆಂಗಿನ ಗರಿ ಇಂದ ಒಂದು ಸಣ್ಣ ಗುಡಿಸಲು ಕಟ್ಟಿದ್ದಾನೆ,ಇಟ್ಟಿಗೆ ಇಂದ ಕಟ್ಟಿಸುವಷ್ಟು  ಶಕ್ತನಲ್ಲ ಹಾಗಾಗಿ...ಸೀದಾ ಬಂದವನೇ ಅತ್ತಿತ್ತ ಕಣ್ಣಾಯಿಸಿ ಹಸುಗಳನ್ನು ಕಟ್ಟಿದ್ದ
ಜಾಗಕ್ಕೆ ಹೋಗಿ,ಮತ್ತೊಮ್ಮೆ ಜೋಳದ ಮೇವು ಕೂಯ್ದು ಅವುಗಳಿಗೆ ಹಾಕಿ ಹೆಂಡತಿಯನ್ನು ಹುಡುಕಿದ,ಬಹುಷಃ ಗುಡಿಸಿಲಿನಲ್ಲಿ ಇರಬಹುದು ಎಂದು ಅತ್ತ ಹೊರಟ.... ಮಾರಮ್ಮ ಬೆಟ್ಟದ ಕೋಡುಗಲ್ಲಿನ ಮೇಲೆ ಇರುವ ಬೃಹದಾಕಾರದ ಒಂದು ಬಂಡೆ,ಚಿಕ್ಕವನಾಗಿದ್ದಾಗಿಂದಲೂ ಅದು ಹೇಗೆ ಪುಟ್ಟ ಪುಟ್ಟ ಬಂಡೆಗಳ ಮೇಲೆ ಕೂತಿದೆ ಎಂದು ಯೋಚಿಸುತ್ತಿದ್ದ ರಾಮಯ್ಯನಿಗೆ ಆ ದೊಡ್ಡ ಬಂಡೆ ಸೀದಾ ತನ್ನ ಮೇಲೆ ಉರುಳುತ್ತಿರುವಂತೆ ಭಾಸವಾಯಿತು....

 ತನ್ನ ಹೊಲದ ಪಕ್ಕದಲ್ಲೇ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ,ಅಲ್ಲಿಂದ ಮುಂದೆ ಹೋದರೆ ಚೋಮನ ದೇವರ ಗುಡಿ ಇರುವ ಒಂದು  ಗುತ್ತಿ,ಅಲ್ಲೇ ಮುಂದೆ ಸಾಗಿದರೆ ಸಿಗುವ ಕಾಗೆ ಹಳ್ಳ ದಾಟಿ ಅರ್ಧ ಮೈಲಿ ಹೋದರೆ ೨೦ ಮನೆ ಇರುವ  ಕುಂಚನಗೆರೆ ಗ್ರಾಮ....ಆ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ ಆ ಕುಂಚನಗೆರೆ ಪಟೇಲರ ಎರಡನೇ ಮಗ ಸಿದ್ದೇಗೌಡನಿಗೆ ಸೇರಿದ್ದು....ರಾಮಯ್ಯ ಬಲಕ್ಕೆ ಒಮ್ಮೆ ಕಣ್ಣಾಯಿಸಿ ನೋಡಿದಾಗ ಅಲ್ಲೇ ಒಂದು ಬುಲ್ಲೆಟ್ ಕಂಡಿತು,ಅದು ಸಿದ್ದೆಗೌಡನದ್ದು...ಸುತ್ತ ಎಂಟಳ್ಳಿಯಲ್ಲಿ ಇವನ ಹತ್ತಿರ ಬಿಟ್ಟರೆ ಬೇರೆ ಯಾರ ಹತ್ತಿರವೂ ಈ ಬೈಕು ಇಲ್ಲ....

ಗುಡಿಸಲಿನ ಮುಂದೆ ಎರಡು ಜೊತೆ ಚಪ್ಪಲಿಗಳನ್ನು ಕಂಡಾಗ ರಾಮಯ್ಯನಿಗೆ ದಿಗಿಲು ಬಡಿದಂತಾಯಿತು ...
ಸಿದ್ದೇಗೌಡನಿಗೆ ಮೀನು ತಿನ್ನುವ ಚಪಲ,ತನ್ನ ಮನೆಯಲ್ಲಿ ಪಕ್ಕಾ ಸಸ್ಯಾಹಾರಿ,ಬಹುಷಃ ಇವನಿಗೆ ಮಾಂಸ ತಿನ್ನುವ ಚಟ ಇದೆ ಅಂತ ತಿಳಿದರೆ ಅವನನ್ನು ಮನೆಯಿಂದ ಹೊರ ಹಾಕುವುದಕ್ಕೂ ಯೋಚಿಸಲ್ಲ ಅವನ ತಾಯಿ...
ಆದ್ದರಿಂದ ಅವಾಗವಾಗ ತನ್ನ ತೋಟದ ಪಕ್ಕದಲ್ಲೇ ಇರುವ ರಾಮಯ್ಯನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ..ಹೇಗೂ ಇವನು ಮೀನು ಹಿಡಿದು ಮಾರುತ್ತಾನೆ,ಬರೀ ತಂದು ಕೊಟ್ಟರೆ ಸಾಲದು,ಅವನಿಗೇನು ಅಡುಗೆ  ಮಾಡಕ್ಕೆ ಬರುತ್ತಾ ?,ಪುಟ್ಟವ್ವನೆ ಅದನ್ನು ಭೇಯಿಸಿ ತಂದು ಕೊಡುತ್ತಿದ್ದಳು...ರಾಮಯ್ಯ ಸಿದ್ದೇಗೌಡನ  ತೋಟಕ್ಕೂ  ಕೂಲಿ ಕೆಲ್ಸಕ್ಕೆ ಹೋಗುತ್ತಿದ್ದನಾದ್ದರಿಂದ ಅವನು ಇವನಿಗೆ ಹೇಳಿ ತರಿಸುತ್ತಿದ್ದ...

ಒಂದು ಕ್ಷಣ ಪಟೇಲರು ಮೀನು ತಿನ್ನುವುದಕ್ಕೆ ಬಂದಿರಬಹುದು ಎಂದು ತಿಳಿದರೂ ಕೂಡ , ಗುಡಿಸಲಿನ ಬಾಗಿಲು ಹಾಕಿದ್ದರಿಂದ ಅವನಿಗೆ ಅನುಮಾನ ಶುರು ಆಯಿತು...ಬಾಗಿಲು ಹಾಕಿದರೆ ಒಳಗಡೆ ಬೆಳಕು ಬರುವುದಿಲ್ಲ... ಅ ಕತ್ತಲಲ್ಲಿ ತಿನ್ನಲು ಸಾಧ್ಯವಿಲ್ಲ...
ಯಾಕೋ ಮನಸ್ಸಿಗೆ  ಒಂದು ರೀತಿ ಆಗಿ,ದುಡುಕಬಾರದು ಎಂದು ತಿಳಿದು ಸಂಜೆ ಮನೆಯಲ್ಲಿ ವಿಚಾರಿಸಿದರೆ ಆಗುತ್ತದೆ ಎಂದು ಸಂತೆ ಕಡೆ ಹೊರಟ....

ಹೆಂಡತಿಯ ಮೇಲೆ ವಿಪರೀತ ಕೋಪ ಇದ್ದ ರಾಮಯ್ಯ ಸಂತೆ ಇಂದ ಬರುವಾಗ ಕುಂಟ ರಾಜನ ಪೆಟ್ಟಿಗೆ ಅಂಗಡಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ,ಮಕ್ಕಳಿಬ್ಬರೂ ಕೂಡ ಪ್ರತಿ ದಿನ ಇವನ ಅಣ್ಣನ ಮನೆಗೆ ಓದಿಕೊಳ್ಳಲು ಹೋಗುತ್ತಾರೆ....ಅಲ್ಲಿ ಅಣ್ಣನ ಮಗಳು ಇವರು ಪಾಠ ಹೇಳಿಕೊಡುವುದರಿಂದ ಅಲ್ಲಿಗೆ ಹೋಗುವ ಅಭ್ಯಾಸ...ಇವತ್ತು ರಾಮಯ್ಯ ಸಂತೆ ಇಂದ ಬರುವ ವೇಳೆಗೆ ಮಕ್ಕಳು ಆಗಲೇ ಅಲ್ಲಿಗೆ ಹೋಗಿದ್ದರು,ಬಂದವನೇ ಹೆಂಡತಿಯ ಹತ್ತಿರ ಹೇಗೆ ಮಾತು ಶುರು ಮಾಡುವುದು ಎಂದು ತಿಳಿಯದೆ ಚಿಂತಿಸ ತೊಡಗಿದ...ಸೀದಾ ಮನೆ ಹೊರಗಡೆ ಹೋದವನೇ ಒಂದು ದಡಿ ಕೋಲು ತಂದು ಅಡುಗೆ ಮನೆಯಲ್ಲಿ  ಒಲೆ ಅಚ್ಚುತ್ತಿದ ಪುಟ್ಟವ್ವನಿಗೆ ಒಡೆಯಲು ಶುರು ಮಾಡಿದ ...

ಅಯ್ಯಯ್ಯೋ,ದಮ್ಮಯ್ಯ ,ಯಾಕೆ ಹೊಡಿತಿದ್ದಿರ ಅಂತ ಕಿರುಚಿದರೂ ಇನ್ನು ತನ್ನ ಆಟವನ್ನು ನಿಲ್ಲಿಸಿಲ್ಲ...
'ನಾನು ಮಧ್ಯಾನ ಹೊಲಕ್ಕೆ ಬಂದಿದ್ದೆ,ಆ ಪಟೇಲ ಗುಡಿಸಿನಲ್ಲೇ  ಇದ್ದ ಅಲ್ವಾ?' ಅಂತ ಹೇಳಿದಾಗ, ಯಾರೋ ಬಂದು ಹಸುಗಳಿಗೆ ಮೇವು  ಹಾಕಿ ಹೋಗಿರುವುದು ನೆನಪಾಗಿ  ,ಇದು ತನ್ನ ಗಂಡನೇ ಎಂದು ತಿಳಿದು ಅವಳಿಗೆ ತನ್ನ ತಪ್ಪಿನ ಅರಿವಾಯಿತು...

ಅಷ್ಟೊತ್ತಿಗಾಗಲೇ ಪಕ್ಕದ ಮನೆಯಲ್ಲೇ ಇದ್ದ ತಮ್ಮ ಮಕ್ಕಳು ಮತ್ತು ಅಣ್ಣ ಅತ್ತಿಗೆ ಎಲ್ಲಾ ಅಲ್ಲಿಗೆ ಬಂದರು...ಆದರೆ ಯಾಕೆ ಜಗಳ ಮಾಡುತ್ತಿದ್ದೀವಿ ಎಂದು ರಾಮಯ್ಯ ಅಥವಾ ಪುಟ್ಟವ್ವ ಇಬ್ಬರೂ  ಹೇಳುವ ಸ್ಥಿತಿಯಲ್ಲಿ ಇರಲಿಲ್ಲ..
ಎಲ್ಲರೂ ಕುಡಿದು ಬಂದು ಜಗಳ ಮಾಡುತ್ತಿದ್ದಾನೆ ಎಂದು ಸುಮ್ಮನಾದರು...

ನಂತರ  ಮಕ್ಕಳಿಗೆ ಊಟ ಬಡಿಸಿ ಅವರು ಮಲಗಿದ ನಂತರ ಅಟ್ಟದ ಮೇಲಿದ್ದ ವಿಸ್ಕಿ ಬಾಟಲಿಗೆ ಕೋಸಿಗೆ ಸಿಂಪಡಿಸಲು ತಂದಿದ್ದ ಔಷಧಿ ಬೆರೆಸಿ  ಕುಡಿದು ಬಿಟ್ಟಳು...ಊಟ ಮಾಡದೆ ಮನೆಯ ಜಗುಲಿಯ ಮೇಲೆ ಮಲಗಿದ್ದ ರಾಮಯ್ಯನಿಗೆ ಇದರ ಅರಿವೇ ಇಲ್ಲ....
ಮಧ್ಯ ರಾತ್ರಿ ಇದ್ದಕಿದ್ದ ಹಾಗೆ ನೋವು  ತಡೆಯಲಾರದೆ ಅವಳು ಕಿರುಚಲು ಶುರು ಮಾಡಿದಾಗ ಒಳಗೆ ಬಂದು ನೋಡಿದರೆ ನೆಲದ ಮೇಲೆ ಹೊರಳಾಡುತ್ತಿದ್ದಾಳೆ,ಮತ್ತು ಅವಳ ಬಾಯಲ್ಲಿ ಒಂದು ರೀತಿಯ ರಸ ಸೋರುವುದನ್ನು ಗಮನಿಸಿ ಏನೋ ಅನಾವುತ ಮಾಡಿಕೊಂಡಿದ್ದಾಳೆ ಎಂದು ತಿಳಿದು ನಡು ರಾತ್ರಿಯಲ್ಲಿ ಎತ್ತಿನ ಗಾಡಿಯಲ್ಲಿ ಅವಳನ್ನು ಪೇಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ...

ಬೆಳಗ್ಗೆ ಹೊತ್ತಿಗೆ ತನ್ನ ಅಣ್ಣ ಅತ್ತಿಗೆ ಮಕ್ಕಳು ಎಲ್ಲಾರಿಗೂ ವಿಷಯ ತಿಳಿದು ಎಲ್ಲಾ ಆಸ್ಪತ್ರೆಗೆ ಬಂದರು...ಪುಟ್ಟವ್ವನ ಸ್ಥಿತಿ ಆಗಲೇ ಗಂಭೀರ ಆಗಿತ್ತು...ಚಿಕಿತ್ಸೆ ಕೊಡುವ ಮೊದಲು ವೈದ್ಯರು ಒಂದು ಫಾರಂಗೆ ಇವನ ಬಳಿ ಸಹಿ ಪಡೆದಿದ್ದರು...ಇತ್ತ ರಾಮಯ್ಯನಿಗೂ ತನ್ನ ತಪ್ಪಿನ ಅರಿವಾಯಿತು...ಅವಳು ಬದುಕುವುದಿಲ್ಲ ಎಂದು ಖಾತರಿ ಆದ ಮೇಲೆ ಅಲ್ಲಿಂದ ಕಾಲು ಕಿತ್ತ...ಸ್ವಲ್ಪ ಸಮಯದಲ್ಲೇ
ಪುಟ್ಟವ್ವ ತೀರಿಕೊಂಡಳು....
ಸರಿ  ಅಷ್ಟೊತ್ತಿಗಾಗಲೇ ಅವನು ಪರಾರಿ ಆಗಿರುವ  ವಿಷಯ ಎಲ್ಲರಿಗೂ ತಿಳಿಯಿತು,ಅವನು ಬರುವುದಿಲ್ಲ ಎಂದು ತಿಳಿದು ಅವನ ಅಣ್ಣನೆ ಆಕೆಯ ಅಂತ್ಯ ಕ್ರಿಯೆ ಹೊಣೆ ಹೊತ್ತನು...ಅವಳ ಹೆಣವನ್ನು ಸುಡುವುದನ್ನು ರಾಮಯ್ಯ ಅದೇ ಕೋಡುಗಲ್ಲಿನ ದೊಡ್ಡ ಬಂಡೆಯ ಬಳಿ ನಿಂತು ಅಲ್ಲಿಂದ ನೋಡಿದ...೩-೪ ದಿನ ಅಲ್ಲಿ ಇಲ್ಲಿ ಸುತ್ತಾಡಿದ ಇವನು ,ತನ್ನ ಮಕ್ಕಳನ್ನು ನೆನೆದು ಮನೆಗೆ
ಹಿಂದಿರುಗಿದ,ಆದರೆ ಆಗಲೇ ಪೊಲೀಸರು ಇವನ ಹಿಂದೆ ಬಿದ್ದಿರುವುದು ಅವನಿಗೆ ತಿಳಿದೇ ಇರಲಿಲ್ಲ...

ಬಂದವನೇ ತನ್ನ ಸ್ನೇಹಿತ ರಂಗಯ್ಯನ ಹತ್ತಿರ ನಡೆದ ವಿಷ್ಯ ಎಲ್ಲಾ ಹೇಳಿದ್ದ,ರಂಗಯ್ಯನ ಮಗಳು ಮತ್ತು ಇವನ ಮಗಳು ಒಂದೇ ಕ್ಲಾಸ್ಸಿನಲ್ಲಿ ಓದುತ್ತಿದ್ದಾರೆ....ಪೊಲೀಸರಿಗೆ ಇವನು ಬಂದಿರುವ ಸುಳಿವು  ಸಿಕ್ಕೊಡನೆ ಇವನನ್ನು ಅರೆಸ್ಟ್ ಮಾಡಿದರು ಮತ್ತು ಕೋರ್ಟಿನಲ್ಲಿ ಇರಿಂಗ್  ನಡೆಯುತ್ತಿತ್ತು ,ಇವನು ಪೋಲಿಸ್ ವಶದಲಿದ್ದ...
ಇತ್ತ ಮಕ್ಕಳು ಅಣ್ಣನ ಮನೆಯಲ್ಲಿ ಇದ್ದಾರೆ ,ಅತ್ತಿಗೆಯೇ ಇವನ ಮಕ್ಕಳಿಂದ  ಪೊಲೀಸರಿಗೆ ದೂರು ಕೊಡೆಸಿದ್ದಳು.... ಏನು ಮಾಡುತ್ತಿದ್ದೇವೆ,ಇದರಿಂದ ತನ್ನ ತಂದೆ ಜೈಲಿಗೆ ಹೋಗುತ್ತಾರೆ ಎಂಬ ಸುಳಿವು ಸಿಗದ ಹಾಗೆ ಅವರಿಂದ ದೂರು ಕೊಡಿಸುತ್ತಾಳೆ....

ಈ ಮಕ್ಕಳಿಗೆ ಶಾಲೆಯಲ್ಲಿ ಒಂದು ರೀತಿಯ ಕಿರಿ ಕಿರು ಶುರು ಆಯಿತು....ಎಲ್ಲರೂ ನಿಮ್ಮಪ್ಪ ಜೈಲಲ್ಲಿ ಇದಾರಂತೆ,ನಿಮ್ಮ ಅಪ್ಪ,ನಿಮ್ಮ ಅಮ್ಮನ ಸಾಯ್ಸಿದರಂತೆ?ಹೀಗೆ ಕೇಳಲು ಶುರು ಮಾಡಿದರು... ಮಕ್ಕಳು ಅಳಲು  ಶುರು ಮಾಡಿದರು.... ಆಗ ರಂಗಯ್ಯನ ಮಗಳು ಮನೆಯಲ್ಲಿ  ಈ ವಿಷಯ ಹೇಳಿದಾಗ, ಎಲ್ಲಾ ವಿಷಯ ತಿಳಿದಿದ್ದ ರಂಗಯ್ಯ ಊರಿನ ಕೆಲವು ಮುಖಂಡರೊಡನೆ ಚರ್ಚಿಸಿ ,ಮಕ್ಕಳು ಓದುತ್ತಿದ್ದ ಶಾಲೆಯ ಮಾಸ್ತರು ಬಳಿ ವಿಷಯ ತಿಳಿಸಿ ರಾಮಯ್ಯನ ಮಕ್ಕಳಿಗೆ ತನ್ನ ತಂದೆಯ ತಪ್ಪಿಲ್ಲ ಮತ್ತು ಅವರು ಕೊಟ್ಟಿರುವ ದೂರನ್ನು ಹಿಂಪಡೆಯಲು  ಹೇಳಿ ಎಂದು ಹೇಳಿದ...ಅವನ ಅತ್ತಿಗೆಗೆ ಊರಿನವರೆಲ್ಲ ಇವನನ್ನು ಜೈಲಿನಿಂದ ಬಿಡಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಮಕ್ಕಳ ಕಿವಿಗೆ  ಏನೇನೋ ತುಂಬುತ್ತಿದ್ದಾರೆ   ಎಂದು ತಿಳಿದು ಅವರನ್ನು ಶಾಲೆಗೇ ಕಳುಹಿಸುವುದನ್ನು ನಿಲ್ಲಿಸುತ್ತಾಳೆ..........

ಇತ್ತ ಮಕ್ಕಳಿಗೆ ತಾಯಿಯು ಸತ್ತಿದ್ದಾಳೆ,ಬದುಕಿರುವ ತಂದೆ ಜೈಲಿನಲ್ಲಿ  ಇದ್ದಾರೆ,ಒಂದು ರೀತಿಯಲ್ಲಿ ಮಾನಸಿಕೆ ಹಿಂಸೆ ಅಲ್ಲದೆ ತಮ್ಮ ದೊಡ್ಡಮ್ಮ ಕೂಡ ಹಿಂಸೆ ಕೊಡುತ್ತಿದ್ದಾರೆ ....,ಹೇಗೋ ಹಠ ಹಿಡಿದು ಕಡೆ ಪಕ್ಷ ಶಾಲೆಗಾದರು ಹೋಗಬೇಕು ಎಂದು ಶಾಲೆಗೇ ಹೋಗಲು ಶುರು ಮಾಡಿದರು... ಹಿಂದೆ ಒಂದು ದಿನ ತಮ್ಮ ಮೇಷ್ಟ್ರು ತಮ್ಮ ತಾಯಿ ಸತ್ತ ನಂತರ ತಮ್ಮ
ತಂದೆಯನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಹೇಳಿದ್ದು  ನೆನಪಾಗಿ ಅವರ ಹತ್ತಿರ ಹೋದರು... ಮಾಸ್ತರಿಗೆ ಇವರು ಇಷ್ಟು ದಿನ ಯಾಕೆ ಶಾಲೆಗೇ ಬಂದಿರಲಿಲ್ಲ ಎಂಬ ವಿಷಯ ಗೊತ್ತಿತ್ತು ಮತ್ತು ಮಕ್ಕಳನ್ನು ನೋಯಿಸಬಾರದು ಎಂದು ಅದರ ಬಗ್ಗೆ ಕೇಳಲೇ ಇಲ್ಲ...

ರಂಗಯ್ಯನನ್ನು ಶಾಲೆಗೇ ಕರೆಸಿ ಮೇಷ್ಟ್ರು ಮತ್ತು ರಂಗಯ್ಯ ಇಬ್ಬರೂ ಮಕ್ಕಳಿಗೆ ತಮ್ಮ ತಂದೆ ಹೊಡೆದಿದ್ದರಿಂದ ತಮ್ಮ ತಾಯಿ ಸತ್ತಿಲ್ಲ,ಅವಳು ವಿಷ ಕುಡಿದು ಸತ್ತಿದ್ದು, ಅವನೇ ಹೊಡೆದಿದ್ದರೆ ಅವನಾಗೇ ಯಾಕೆ ಆಸ್ಪತ್ರೆಗೆ ಸೇರಿಸುತ್ತಿದ್ದ ಎಂದೆಲ್ಲ ಹೇಳಿದ ಮೇಲೆ, ಅವರಿಬ್ಬರಿಗೂ ನಡೆದ ವಿಷ್ಯ ಅರ್ಥ ಆಗ ತೊಡಗಿತು...ಆದರೆ ಮೇಷ್ಟ್ರು ಆಗಲಿ,ರಂಗಯ್ಯ ಆಗಲಿ ರಾಮಯ್ಯ ತನ್ನ ಹೆಂಡತಿಗೆ ಯಾಕೆ ಹೊಡೆದ,ಯಾಕೆ ಜಗಳ ಮಾಡಿದ ಎಂಬ ವಿಷಯವನ್ನು ಮಾತ್ರ ಮಕ್ಕಳಿಗೆ ಹೇಳಲಿಲ್ಲ,ಹೇಳಿದ್ದರೆ ಅವರಿಗೆ ತಮ್ಮ ತಾಯಿಯ ಮೇಲೆ ಅಸಡ್ಡೆ ಬರುತಿತ್ತೋ ಅಥವಾ ಅವರ ಮನಸ್ಸಿಗೆ ಎಂದೂ ಮಾಸದ ಗಾಯ ಆಗಿ ಬಿಡುತ್ತಿತ್ತು,...

ಹೇಗೋ ರಾಮಯ್ಯನ ಅತ್ತಿಗೆಗೆ ಗೊತ್ತಾಗದ ಹಾಗೆ ಮಕ್ಕಳನ್ನು ಓಲೈಸುವಲ್ಲಿ ಇವರಿಬ್ಬರೂ ಯಶಸ್ವಿ  ಆಗಿದ್ದರು...ಮುಂದಿನ ಇರಿಂಗ್ ಗೆ ಮಕ್ಕಳೊಡನೆ ಅವನ ಅಣ್ಣ ಮತ್ತು ಅತ್ತಿಗೆ ಇಬ್ಬರು ಬಂದರು,ರಂಗಯ್ಯ ಕೂಡ ಬಂದಿದ್ದ,ಆದರೆ ಮೇಷ್ಟ್ರು ಮಾತ್ರ ಬಂದಿರಲಿಲ್ಲ.... ಕೋರ್ಟಿನಲ್ಲಿ ಲಾಯರ್ ಕೇಳುವ ಪ್ರಶ್ನೆಗಳಿಗೆ ಏನೇನು ಉತ್ತರ ಹೇಳಬೇಕು ಎಂದು ಮೇಷ್ಟ್ರು ಹೇಳಿ ಕೊಟ್ಟಿದ್ದರು...

ಅದರಂತೆ ಮಕ್ಕಳು ತಮ್ಮ ತಂದೆಯನ್ನು ಜೈಲಿನಿಂದ ಕಳುಹಿಸಿ ಎಂದು  ತಮ್ಮ ಮುಗ್ಧ ಭಾವದಿಂದ ಕೇಳಿಕೊಂಡರು,ಕೆಲವು ಪ್ರಶ್ನೋತ್ತರಗಳು ಮುಗಿದ ಮೇಲೆ ದೂರು ಕೊಟ್ಟಿದ್ದ ಮಕ್ಕಳು,ಇದು ನಮಗೆ ತಿಳಿಯದಂತೆ ತಮ್ಮ ದೊಡ್ಡಮ್ಮ ಹೇಳಿಕೊಟ್ಟ ಹಾಗೆ ನಾವು ಪೋಲೀಸರ ಹತ್ತಿರ ಹೇಳಿದ್ದೆವು ಎಂದು ತಿಳಿಸದರು...ಇವರು  ಹೇಳಿದಂತೆ ಪೊಲೀಸರು ಬರೆದು ಕೊಂಡಿದ್ದರು ಅಷ್ಟೇ.... ಅಲ್ಲದೆ  ಇವನ ಅಣ್ಣ ಅತ್ತಿಗೆಗೆ ಒಂದು ರೀತಿಯ ಹಿನ್ನಡೆ ಆಯಿತು...ರಾಮಯ್ಯನ ಅತ್ತಿಗೆ ಈ ರೀತಿ ದೂರು ಕೊಡಲು ಒಂದು ಮುಖ್ಯ ಕಾರಣ ಎಂದರೆ,ಪುಟ್ಟವ್ವ ಅವಳ ಸ್ವಂತ ತಂಗಿ....

ಹೇಗೋ ಒಟ್ಟಿನಲ್ಲಿ ರಾಮಯ್ಯ ಜೈಲಿನಿಂದ ಬಿಡುಗಡೆ ಆದ,ಈಗ ಮಕ್ಕಳನ್ನು ಸಾಕುವ ಹೊಣೆ ಇದೆ,ಜೊತೆಗೆ ಅವರಿಗೆ ಇದರ ಹಿಂದಿನ ವಿಷಯ ತಿಳಿಯಬಾರದು ಮತ್ತು ಅವರಿಗೆ ತಾಯಿಯ ಕೊರಗು
ಬಾರದಂತೆ ನೋಡಿ ಕೊಳ್ಳಬೇಕು....

ಎಷ್ಟೋ ಜನ ಇನ್ನೊಂದು ಮದುವೆ ಮಾಡಿಕೊ ಎಂದರೂ ಕೂಡ,ಇವನು ಮರು ಮದುವೆ ಆಗದೆ ಹಾಗೆ ಇದ್ದಾನೆ....
ಮಕ್ಕಳಿಗೆ ಮಲತಾಯಿ ಬೇಡ ಎಂಬುದು ಇವನ ಆಶಯ...
------
^^^^^^

Wednesday, July 20, 2011

ದೇಹದಾನ !!!

"ಏನ್ ತಾತ,ನಮ್ಮಪ್ಪ ಬಂದು ಕೇಳಿದ್ರೆ ಕೊಡಲ್ಲ ಅಂದಂತೆ "....ಮುಸ್ಸಂಜೆಯಲ್ಲಿ ಹೊಲದಿಂದ ಬಂದು,ಪುಷ್ಪಾಳಿಗೆ   ಟೀ ತರಲು ಏಳಿ ಜಗುಲಿಯ ಮೇಲೆ ಬೀಡಿ ಸೇದುತ್ತ ಕುಳಿತಿದ್ದಾಗ,ಏಕಾ  ಏಕಿ ಯಮುನಾ ಬಂದು ಹೀಗೆ ಕೂಗಾಡಿದಳು...
ಯಮುನಾ ನನ್ನ ಮೊದಲನೇ ಮಗ ಶೇಖರನ  ಮಗಳು....ಪುಷ್ಪ ನನ್ನ ಎರಡನೇ ಮಗ ಮೂರ್ತಿಯ ಹೆಂಡತಿ..
ಇಬ್ಬರೂ ಮಕ್ಕಳಿಗೂ ಬೇರೆ ಬೇರೆ ಮನೆ ಕಟ್ಟಿಸಿ ಕೊಟ್ಟಿದ್ದೇನೆ,
ಹಿರಿಯ ಮಗ ಶೇಖರನಿಗೆ ಹೊಸ ಮನೆಯನ್ನು ಕೊಟ್ಟಿದ್ದೇನೆ,ನನ್ನ ಪಿತ್ರಾರ್ಜಿತ ಹಳೆ ಮನೆಯನ್ನು ಕಿರಿಯ ಮಗನಿಗೆ ಕೊಟ್ಟು,ನಾನು ಅವನ ಮನೆಯಲ್ಲೇ ಇದ್ದೇನೆ,
ಆಗಾಗ  ಎರಡೂ  ಮನೆಗೆ ಹೋಗಿ ಬರುತ್ತಿರುತ್ತೇನೆ...
ಯಮುನಾ ಹೀಗೆ ಗದರುವುದನ್ನು ಕೇಳಿಸಿಕೊಂಡ ಪುಷ್ಪ ಹೊಳಗಿನಿಂದ ಬಂದು "ಏ ಇದೆಲ್ಲ ದೊಡ್ಡವರ ವಿಷಯ,ನಿಮ್ಮಪ್ಪ ಬಂದು ಮಾತಾಡುತ್ತಾರೆ,ನೀನ್ ಇದರಲೆಲ್ಲ ತಲೆ ಹಾಕಬೇಡ,ಸುಮ್ನೆ ಹೋಗಿ ಓದ್ಕೋ ಹೋಗು,
ಯಜಮಾನಗಿತ್ತಿ ತರಹ ಬಂದು ಬಿಟ್ಟಳು " ಅಂತ ಅಂದಳು..
"ಏನ್ ಚಿಕ್ಕಮ್ಮ ,ನಾನೇನ್ ಚಿಕ್ಕವಳಲ್ಲ,ನಾನು ಇವಾಗ ಮೇಜರ್ ,ನನಗೂ ಕೇಳೋ ಹಕ್ಕಿದೆ,ನಿಮಗೆಷ್ಟು  ಹಕ್ಕಿದ್ಯೋ ಅಷ್ಟೇ ನನಗೂ ಇದೆ  "ಎಂದಾಗ ಒಂದು ಕ್ಷಣ ನನ್ನ ಎದೆ ಬಡಿತ ನಿಂತು ಬಿಟ್ಟಿತ್ತು...
ಇವಳೇನಾ ಹದಿನೆಂಟು ವರ್ಷದಿಂದ ಮುದ್ದಾಗಿ ಸಾಕಿದ ಮೊಮ್ಮಗಳು,ನನ್ನ ತೊಡೆ ಮೇಲೆ ಮಲಗಿಕೊಂಡು ಕಥೆ ಕೇಳುತ್ತಿದ್ದವಳು ಇವಳೇನಾ,
ಎಷ್ಟು ಪ್ರೀತಿಯಿಂದ ಸಾಕಿದ್ದೆ,ಪ್ರತಿ ವರ್ಷ ಊರ ಅಮ್ಮನ ಜಾತ್ರೆಗೆ ಹೊಸ ಬಟ್ಟೆ ಕೊಡಿಸುತ್ತಿದ್ದೆ....
ಇದಕಿಂತ ಎರಡು  ದಿನ ಮುಂಚೆ ಅವಳ ಅಪ್ಪ ಬಂದು  ಇದೆ ರೀತಿ ಗಲಾಟೆ ಮಾಡಿದ್ದ..ಹುಟ್ಟಿಸಿದ ತಪ್ಪಿಗೆ ನನ್ನ ಎದೆ ಮೇಲೆ ಒದ್ದಿದ್ದಾನೆ...
ಇಬ್ಬರೂ ಮಕ್ಕಳಿಗೆ ನಾನೇನು ಕಡಿಮೆ ಮಾಡಿಲ್ಲ..
ಇಬ್ಬರ ಹೆಸರಿಗೂ ಇರುವ ಜಮೀನನ್ನು ಸರಿಯಾಗಿ ಪಾಲು ಮಾಡಿ ಪಾಲುಪಾರಿಕತ್ತು ಬರೆದಾಗಿದೆ...ಹಿರಿ ಮಗನ ಗಲಾಟೆ ತಾಳಲಾರದೆ ಈ  ಕೆಲಸವನ್ನು ಬಹಳ ಹಿಂದೆಯೇ ಮಾಡಿ ಬಿಟ್ಟಿದ್ದೇನೆ...ಆದರೆ ಅವರ ಹೆಸರಿಗೆ ಇನ್ನು ನೊಂದಾಯಿಸಿಲ್ಲ ಅಷ್ಟೇ...ಹೇಗೆ ಆದರೂ ಅವರಿಗೆ ಆ ಜಮೀನು ..ಆದರೂ ಹಿರಿ ಮಗ ಮಾತ್ರ ಆದಷ್ಟು ಬೇಗ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ನೋಡುತ್ತಿದ್ದಾನೆ...
ಕೆಲವು ದಿನಗಳ ಹಿಂದೆ ನಂಜೇಗೌಡ ಬಂದು ಅವರವರ  ಜಮೀನನ್ನು ಅವರ ಹೆಸರಿಗೆ ಮಾಡಿಕೊಡು,ಸುಮ್ನೆ ಯಾಕೆ ಇನ್ನು ನಿನ್ನ ಹೆಸರಲ್ಲಿ ಇಟ್ಕೊ೦ಡಿದಿಯ ಅಂತ ಕೇಳಿದ್ದ,ನಿನಗ್ಯಾಕೆ ನಮ್ಮ ಮನೆ ವಿಚಾರ ಅಂತ ಬೈದು ಕಳ್ಸಿದ್ದೆ..ನಂಜೇಗೌಡ ಅಂದ್ರೆ ಕೆರೆ ಪಕ್ಕದ ನಮ್ಮ ಗದ್ದೆಯ ಪಕ್ಕದಲ್ಲೇ ಅವನ ಗದ್ದೆ ಇದೆ..ಅಲ್ಲಿ ನನ್ನ ಇಬ್ಬರೂ ಮಕ್ಕಳಿಗೂ ಪಾಲಿದೆ,ಅದರಲ್ಲಿ ಶೇಖರ ತನ್ನ ಪಾಲನ್ನು ನಂಜೇಗೌಡನಿಗೆ  ಮಾರುವುದಾಗಿ ಹೇಳಿ ಅವನ ಹತ್ತಿರ ಸ್ವಲ್ಪ ಹಣ ಕೂಡ ತಗೊಂಡಿದ್ದಾನೆ...ಅದಕ್ಕಾಗಿ ಈ ರೀತಿ ಅಪ್ಪ ಮಗಳು ಇಬ್ಬರೂ ಜಗಳ ಮಾಡುತ್ತಿದ್ದಾರೆ..

ಇಬ್ಬರು  ಮಕ್ಕಳಲ್ಲಿ ಈ ಶೇಖರ ತುಂಬ ಸೋಮಾರಿ...ಇಬಾರಿಗೂ ತಮ್ಮ ತಮ್ಮ ಜಮೀನನ್ನು ಪಾಲು ಮಾಡಿ ಕೊಟ್ಟು ೨ ವರ್ಷ ಆಯಿತು...ಈ ಮೂರ್ತಿನಾದರು,ಏನಾದ್ರು ಬೆಳೆ ಬೆಳೆದು ಜೀವನ ಮಾಡ್ತಿದ್ದಾನೆ...ಅದರ ಜೊತೆಗೆ ಎರಡು ಹಸು ಸಾಕಿದ್ದಾನೆ...ಗಂಡ ಹೆಂಡತಿ ಇಬ್ಬರೂ ವಿದ್ಯಾವಂತರು... 
ಮನೆ ಹಿರಿ ಮಗ ಆಗಿ ಅವನು ಇರುವ ಜಮೀನನ್ನು ಮಾರಲು ತಯ್ಯಾರಿದ್ದಾನೆ..
ಬೇಲಿಯೇ ಎದ್ದು ಹೊಲ ಮೆಯ್ದ ಹಾಗೆ   ಆಯಿತು..

೩೦ ವರ್ಷದ ಹಿಂದೆ ಸಿಕ್ಕ ಮೇಷ್ಟು ಕೆಲಸ ಬಿಟ್ಟೆ,ಬರಿ ೪೦ ರುಪಯೀ ಸಂಬಳ...ಆಗಿನ ಕಾಲದಲ್ಲಿ ಅದೇ ಹೆಚ್ಚು...ಆದರೂ ನಾನು ನನ್ನ ಅಣ್ಣ ಇಬ್ಬರೂ ಕೆಲಸಕ್ಕೆ ಸೇರಲಿಲ್ಲ...ನಮ್ಮ ಜಮೀನಿನಲ್ಲೆ ಬೇಕಾದಷ್ಟು ಆದಾಯ ಬರುತಿತ್ತು...
ಪಿತ್ರಾರ್ಜಿತ ಆಸ್ತಿಯ ಜೊತೆಗೆ ಒಂದಷ್ಟು ಬೇರೆಯವರಿಂದ ಕೊಂಡು..ಹೊಸ ಮನೆ ಕಟ್ಟಿಸಿ,ಅದನ್ನು ಹಿರಿಯ ಮಗನಿಗೆ ಕೊಟ್ಟಿದ್ದೇನೆ....ಮೂರ್ತಿ ಮತ್ತು ಅವನ ಹೆಂಡತಿ ಇಬ್ಬರಿಗೂ ಸ್ವಲ್ಪ  ಜವಾಬ್ದಾರಿ ಅನ್ನೋದು ಇದೆ...ಆದರೆ ಶೇಖರ ಆಗಲಿ ಅವನ ಹೆಂಡತಿಗಾಗಲಿ ಇಬ್ಬರೂ ಸೋಮಾರಿಗಳೇ...ಭಂಡರು..ದುಡಿದು ತಿನ್ನ ಬೇಕೆಂಬ ಯೋಚನೆಯೇ ಇಲ್ಲ...ಇರುವ ಆಸ್ತಿಯನ್ನು ಮಾರಿ ತಮ್ಮ ಮಗಳ ಮದುವೆ ಮಾಡುವ ನಿರ್ಧಾರ ಮಾಡಿರಬಹುದು..
ಬೇಕಾದಷ್ಟು ಸಾಲ ಮಾಡಿದ್ದಾನೆ,ಅದನ್ನೆಲ್ಲೇ ತೀರಿಸಲು ಈಗ ಜಮೀನನ್ನು  ತನ್ನ ಹೆಸರಿದೆ ಮಾಡಿ ಕೊಡಿ ಎಂದು ಪೀಡಿಸುತ್ತಿದ್ದಾನೆ..

ಅಪ್ಪನ ಆಸ್ತಿಯಲ್ಲಿ ಬೆವರು ಸುರಿದಿ ದುಡಿದು ಅದಕ್ಕೆ ಇನ್ನೊಂದಿಷ್ಟು ಹೊಲ ಗದ್ದೆಗಳನ್ನು ತೆಗೆದು ಕೊಂಡಿದ್ದೇನೆ... ಈಗ ಅವನ ಹೆಸರಿಗೆ ಮಾಡಿ ಕೊಟ್ಟರೆ ಅದನ್ನೆಲ್ಲಾ ನನ್ನ ಕಣ್ಣ ಮುಂದೆಯೇ ಮಾರುತ್ತಾನೆ,,ಅದಕ್ಕೆ ಅವನ ಹೆಸರಿಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದೇನೆ...
ಇದೆಲ್ಲಕಿಂತ ಮಿಗಿಲಾಗಿ  ನನ್ನ ಮುದ್ದು ಮೊಮ್ಮಗಳು ಬಂದು ಈ ರೀತಿ ಕೇಳಿದಳಲ್ಲ?ಅದೇ ಬೇಜಾರು..
"ಸರಿ ಹೋಗಮ್ಮ ,ನಿಮ್ಮ ಅಪ್ಪನ ಬರಕ್ಕೆ ಹೇಳು...ಮುಂದಿನ ವಾರ ತಾಲೂಕ್ ಆಫೀಸಿನಲ್ಲಿ ಎಲ್ಲಾ ದಾಖಲೆಗಳನ್ನ ಕೊಡ್ತೀನಿ ಅಂತ ಹೇಳು ನಿನ್ನ ಅಪ್ಪಂಗೆ "ಅಂದ ಕೂಡಲೇ ಹಿಂದಕ್ಕೆ ತಿರುಗಿ  ನೋಡದ  ಹಾಗೆ ಹೋದಳು..
ನನಗೂ ಅವಳ ಮುಖ ನೋಡಲಿ ಇಷ್ಟ ಇಲ್ಲದೆ ಕತ್ತು ಬಗ್ಗಿಸಿ ಕೊಂಡಿಯೇ ಇದ್ದೆ.....
ಮೊಮ್ಮಗಳ ಆಸೆ ಕೂಡ ಅದೇ ಆಗಿರಬೇಕು...ನನ್ನ ಮಗಳು ಯಾವತ್ತು ಕೂಡ ಈ ರೀತಿ ತಿರುಗಿ ಮಾತಾಡಿರಲಿಲ್ಲ..ಆದರೆ...
ಶೇಖರ ತನ್ನ ಜಮೀನನ್ನು ನಂಜೇಗೌಡರಿಗೆ  ಮಾರುವುದಂತು ಖಚಿತ..ಅವರ ಅಸ್ತಿ ಏನು ಬೇಕಾದರೂ ಮಾಡಿಕೊಳ್ಳಲಿ...

ನನ್ನ ಹೆಂಡತಿ ತೀರಿಕೊಂಡಾಗ,ಶೇಖರ ತನ್ನ ಪಾಲಿನ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಚಕಾರ ಎತ್ತಿದ್ದ....ತಾಯಿ ಅಂತ್ಯಕ್ರಿಯೇಯಲ್ಲೂ ಸಣ್ಣ ಪುಟ್ಟದಕ್ಕೆ ಲೆಕ್ಕ ಬರೆದು ಮೂರ್ತಿ ಹತ್ತಿರ ಖರ್ಚಿನ  ಅರ್ಧ ಭಾಗ ತೆಗೆದು ಕೊಂಡಿದ್ದ...
ನನಗೂ ವಯಸ್ಸಾಯಿತು...ನನ್ನ ಆಯಸ್ಸು ಕೂಡ ಮುಗಿಯುತ್ತ ಬಂತು...ಅವರ ಹೆಸರಿಗೆ ಹೊಲ ತೋಟ ಎಲ್ಲಾ ಮುಂದಿನ ವಾರ ಮಾಡಿಕೊಡುತ್ತೇನೆ..
ಈಗಾಗಲೇ ನನ್ನ ಮರ್ಯಾದೆಯನ್ನು ಮಗ ,ಮೊಮ್ಮಗಳು ಸೇರಿ ಊರವರ  ಮುಂದೆ  ಕಳೆದು ಹಾಗಿದೆ...
ಅದಕ್ಕೆ ಇವರ ಚಿಂತೆಯೇ ಬೇಡ...
ಆಗ ಸಿಕ್ಕಿದ್ದ ಮೇಷ್ಟು ಕೆಲಸಕ್ಕೆ ಹೋಗಿದ್ದರೆ ಈಗ ಈ ರೀತಿ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುವ  ಸ್ಥಿತಿ ಇರುತ್ತಿರಲಿಲ್ಲ...ಈ ನನ್ನ ಹಿರಿ ಮಗನಿಗೆ ಕಡೆ ಪಕ್ಷ ಒಂದು ಜೊತೆ ಚಪ್ಪಲಿ ಕೊಡಿಸಬೇಕೆಂಬ ಆಸೆ ಇಲ್ಲ,ಆದರೆ ಜಮೀನು ಮಾತ್ರ ಬೇಕು...ಆ ಕೆಲ್ಸಕ್ಕೆ ಹೋಗಿದ್ದರೆ ಪಿಂಚಣಿಯಾದರು ಬರುತ್ತಿತ್ತು...
ಅವರಾದರೂ ನೆಟ್ಟಗೆ ಓದಿದ್ದರೆ ಈ ರೀತಿಯ ದುರ್ಬುದ್ಧಿ ಅವನಿಗೆ ಬರುತ್ತಿರಲಿಲ್ಲ... ಆದರೂ ಓದುತ್ತಿರುವ ಮೊಮ್ಮಗಳಿಗೆ ಏಕೆ ಬಂತು?....
ಇನ್ನೇನು ಮಾಡಲು ಸಾಧ್ಯವಿಲ್ಲ...ನಾನು ಸತ್ತಾಗ ಕೂಡ ನನ್ನ ಮಕ್ಕಳು ಕಿತ್ತಾಡುವುದು  ಬೇಡ..ಮರ್ಯಾದೆ ಹಾಳು ಮಾಡಿಕೊಳ್ಳುವುದು ಬೇಡ...ಮತ್ತೆ ಅದೇ ತರಹ ಜಗಳ ಮಾಡಿಕೊಂಡು ಕೂರುವುದು ಬೇಡ...
......ಅದಕ್ಕೆ ಯಾವುದಾದರು ಕಾಲೇಜಿಗೆ ದೇಹದಾನ ಮಾಡಲು ನಿರ್ಧಾರ ಮಾಡಿದ್ದೇನೆ ,ಯಾವುದಾದರು ಆಸ್ಪತ್ರೆಗೆ ಪತ್ರ ಬರೆಯಬೇಕು ಎಂದು ಕೊಂಡಿದ್ದೇನೆ..
ಯಾವ ಮಕ್ಕಳಾದರು ನನ್ನ ದೇಹದಿಂದ ಎನಾದ್ರೂ  ಕಲಿತುಕೊಳ್ಳಲಿ....ಅವರಿಗಾದರೂ ಒಳ್ಳೆಯದಾಗಲಿ...
ಮನೆಯ ಹಿರಿ ಮಗನಿಗೆ ಜವಾಬ್ದಾರಿ ಇಲ್ಲ ಅಂದರೆ ಅಥವಾ ಅವನಿಗೆ ದುಡಿದು ತಿನ್ನ ಬೇಕು ಎಂಬ ಹಂಬಲ ಇಲ್ಲ ಅಂದರೆ,ಹೆತ್ತವರ ಮೇಲೆ ಗೌರವ ಇಲ್ಲ ಅಂದರೆ ಇದೆ ಕಥೆ..
ಏನೋ ಇನ್ನು ಮುಂದೆ ನನಗೆ ನನ್ನ ಬೀಡಿಯೇ ಸಂಗಾತಿ...ಜೀವನದ ಕೊನೆಗಾಲವನ್ನು ಈ ರೀತಿ ಕಳೆಯುತ್ತೇನೆ ಎಂದು ಯಾವತ್ತಿಗೂ ಭಾವಿಸಿರಲಿಲ್ಲ...
 ಕೊನೆ ದಿನಗಳ ಎಣಿಕೆಯಲ್ಲಿ ಸಾಗುತ್ತಿದ್ದೇನೆ..
ಅವನು ತನ್ನ ಜಮ್ಮೀನನ್ನು ನನ್ನ ಕಣ್ಣ ಮುಂದೆ ಬೇರೆಯವರಿಗೆ ಮಾರುವ ಮೊದಲು ನನ್ನ ಕಣ್ಣು ಶಾಶ್ವತವಾಗಿ ಮುಚ್ಚಿದರೆ  ಒಳ್ಳೆಯದು...
 

Saturday, May 7, 2011

ದೀಪಾವಳಿ !!


ನಾಳೆ ದೀಪಾವಳಿ,ಹಬ್ಬದ ತಯಾರಿ ಸ್ವಲ್ಪ ಜೋರಾಗಿಯೇ ನಡೆದಿದೆ....ಮನೆಯಲ್ಲಿ ಏನೋ ಒಂಥರಾ ಸಂಭ್ರಮ...೬ ವರ್ಷದ ಮುದ್ದಾದ ಮಗಳಿದ್ದಾಳೆ,ಅವಳಿಗೆ ಹಬ್ಬದ ಸಂಭ್ರಮ,ಪಟಾಕಿ ಎಲ್ಲಾ  ಕೊಡಿಸಿ ಹಾಗಿದೆ...
 ಇದ್ದಕಿದ್ದ ಹಾಗೆ  ಕಾಲಿಂಗ್ ಬೆಲ್ ರಿಂಗ್ ಆಯಿತು..ಯಾರು ಅಂತ ಬಾಗಿಲು ತೆಗೆದು ನೋಡಿದರೆ ರಮೇಶ...,ರಮೇಶ ಬರುತ್ತಾನೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ...
ರಮೇಶ ಮತ್ತು ನಾನು,ಇಬ್ಬರೂ ಕಾಲೇಜು ದಿನಗಳಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು,ಅವನು ನನ್ನ ಸೀನಿಯರ್,ನಾನು ನನ್ನ ಡಿಗ್ರಿ ಕೊನೆ ವರ್ಷಕ್ಕೆ ಬಂದಾಗ ಅವನಾಗಲೇ
ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ...ನನ್ನ ಡಿಗ್ರಿ ಮುಗಿದ ಮೇಲೆ ಇಬ್ಬರ ಮನೆಯಲ್ಲೂ ಒಪ್ಪಿಸಿ ಮದುವೆ ಮಾಡಿಕೊಳ್ಳುವುದಾಗಿ ಮಾತಾಗಿತ್ತು...ಆಗ ಅವನು ವಾರಕ್ಕೊಮ್ಮೆ ಊರಿಗೆ ಬಂದಾಗ ಇಬ್ಬರೂ ಭೇಟಿ ಮಾಡುತ್ತಿದ್ದೆವು....

ಬೇರೆ ದಿನಗಳಲಿ ಬರಿ ಫೋನು ಮತ್ತು ಇ-ಮೇಲ್ ನಲ್ಲಿ ನಮ್ಮಿಬ್ಬರ ಸಂಭಾಷಣೆ...
ಆದರೆ ದುರದೃಷ್ಟ ಅಂದರೆ ಇದೆ ಇರಬೇಕು.ಮನೆಯಲ್ಲಿ ಈ  ವಿಷಯ ಹೇಗೋ ತಿಳಿದು,ನನಗೆ ಮದುವೆ ನಿಶ್ಚಯ ಮಾಡಿ ಬಿಟ್ಟರು,ನಾನು ಮದುವೆ ಆದರೆ ರಮೆಶನನ್ನೇ ಆಗುತ್ತೇನೆ ಎಂದು ಹಠ ಹಿಡಿದರು ಕೂಡ ಯಾರು  ನನ್ನ ಮಾತನ್ನು ಕೇಳಲು ತಯಾರಿಲ್ಲ,ಕಡೆ ಪಕ್ಷ ನನ್ನ ಅಕ್ಕರೆಯ ಅಕ್ಕ ಕೂಡ,ಪ್ರೀತಿಯ ಅಣ್ಣ ಕೂಡ ಒಪ್ಪಲಿಲ್ಲ,ಅವನೇ ನನ್ನ ಮದುವೆಗೆ ಪಿತೂರಿ ಹೂಡಿದ್ದು...ಅವನೇ ಈ ಹುಡುಗನನ್ನು ಹುಡುಕಿದ್ದು, ಅಹಹ ಎಂತ ಹುಡುಗನನ್ನು ಹುಡುಕಿದ್ದಾನೆ,
ಅವನಿಗೂ ಮತ್ತು ರಮೇಶನಿಗೂ ಅಜ ಗಜಾಂತರ ವ್ಯತ್ಯಾಸ...

ನನ್ನ ತಾಯಿ ಕೂಡ ನನ್ನ ಮಾತನ್ನು ಕೇಳಲು ತಯಾರಿಲ್ಲ ,ಕಡೆ ಪಕ್ಷ ಮದುವೆ ಸ್ವಲ್ಪ ದಿನ ಮುಂದೂಡಿ,ನನ್ನ ಪರೀಕ್ಷೆ ಮುಗಿದ ಮೇಲೆ ಆಗುತ್ತೇನೆ ಎಂದರೂ ಯಾರು ಒಪ್ಪಲಿಲ್ಲ.
ಇಗಲೇ ಮದುವೆ ಆಗ ಬೇಕು ಎಂದರೆ ನಾನು ರಮೇಶನನ್ನು ಆಗುತ್ತೇನೆ ಎಂದೇ,ಆಗ ತಿಳಿಯಿತು ಇವರೆಲ್ಲ ಯಾಕೆ ಇವನನ್ನು ನನ್ನಿಂದ ದೂರ ಮಾಡುತ್ತಿದ್ದಾರೆ ಎಂದು,ನಮ್ಮಿಬ್ಬರದು ಬೇರೆ ಬೇರೆ ಜಾತಿ,ಇದೊಂದೇ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಇವರ್ಯಾರು ಒಪ್ಪಲಿಲ್ಲ ....

ನನಗೆ ಮದುವೆ ಗೊತ್ತಾಗಿರುವ ವಿಷಯ ಅವನಿಗೆ ಇನ್ನೂ ತಿಳಿದಿರಲಿಲ್ಲ.,ನನ್ನ ಮೊಬೈಲನ್ನು ಅಣ್ಣ ಕಿತ್ತುಕೊಂಡಿದ್ದ .ಅವನಿಂದ ಫೋನ್ ಏನಾದ್ರೂ ಬಂದರೆ ಇವನೇ ಮಾತಾಡಿ ಅವನಿಗೆ ವಿಷಯ ಹೇಳುತ್ತಾನೋ ಏನೋ ಭಯ ಕಾಡುತಿತ್ತು..,ಅಥವಾ ಅವನಿಗೆ ಬೆದರಿಕೆ ಏನಾದ್ರೂ ಹಾಕಿದ್ದನೋ ಅದೂ ಗೊತ್ತಿಲ್ಲ . ...ನನ್ನ ಮದುವೆಯ ಸಮಯದಲ್ಲಿ ರಮೇಶ ಬಂದು ನನ್ನ ಅಣ್ಣನ ಜೊತೆ ಮಾತಾಡಿದ್ದ ಅಂತೆ...ಆದರೆ ಅವನಿಗೆ ಅಣ್ಣ ಮತ್ತು  ಅವನ ಸ್ನೇಹಿತರು ಸೇರಿ ಹೊಡೆದಿದ್ದರು... 
ನಂತರ ರಮೇಶ ಸುಮಾರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದನಂತೆ...ಹಾಗೆ ಇವರೆಲ್ಲ ಸೇರಿ ಥಳಿಸಿದ್ದರು.. ಆದಾದ ನಂತರ ನಾನು ಅವನನ್ನು ನೋಡುತ್ತಿರುವುದು ಇದೆ ಮೊದಲು...

ಕೊನೆಗೂ ಮನೆಯವರ ಇಚ್ಚೆಯಂತೆ ನನ್ನ ಮದುವೆ  ಅವರು ನೋಡಿದ ಹುಡುಗನ ಜೊತೆಗೆ ಆಯಿತು,ಈಗ ನಮಗೆ ೬ ವರ್ಷದ ಮಗಳಿದ್ದಾಳೆ...ನಾವು ತುಂಬ ಅನ್ಯೋನ್ಯ ವಾಗಿದ್ದೇವೆ ಎಂದು ತಿಳಿದಿದ್ದರೆ ಅದು ತಪ್ಪು,...
ಆ ಸಮಯದಲ್ಲಿ ಅಣ್ಣ ಅಕ್ಕ ಮತ್ತು ಮನೆಯವರಿಗೆಲ್ಲ ನನ್ನ ಗಂಡನ ವಿಷಯ ಗೊತ್ತಿದ್ದರು ಯಾರು ಕೂಡ ನನಗೆ ಹೇಳಿರಲಿಲ್ಲ,ಇವನಿಗೆ ಆಗಲೇ ಒಂದು ಮದುವೆ ಆಗಿ ಒಬ್ಬ ೧೨  ವರ್ಷದ ಮಗ ಕೂಡ ಇದ್ದನು,ಇವನ ಮೊದಲ ಹೆಂಡತಿಗೆ  ಕಾಯಿಲೆ ಇತ್ತು,ಅವಳು ಜಾಸ್ತಿ ದಿನ ಬದುಕುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ...
ಆದ್ದರಿಂದ ಇವನಿಗೆ ಇನ್ನೊಂದು ಮದುವೆ ಆಗಲು ಕೆಲವರು  ಸಲಹೆ ನೀಡಿದ್ದರು ಮತ್ತು ಇವರು ನಮ್ಮ ದೂರದ ಸಂಭಂದಿ ಕೂಡ ಆಗಿದ್ದರು ..ನನ್ನ ಅಣ್ಣನಿಗೆ ಈ ವಿಷಯ ಮತ್ತು ನನ್ನ ರಮೇಶನ ಸ್ನೇಹದ ವಿಷಯ ಎರಡು ಒಟ್ಟಿಗೆ ಗೊತ್ತಾಗಿತ್ತು...
ಅಪ್ಪ ಅಮ್ಮನನ್ನು ಹೇಗೋ ಒಪ್ಪಿಸಿ ನನ್ನನ್ನು ಇವನ ಜೊತೆ ಮದುವೆ ಮಾಡಿಸಿ ಬಿಟ್ಟ...ನನ್ನ ಗಂಡ ನನಗಿಂತ ಏನಿಲ್ಲ ಅಂದರೂ ೧೫ ವರ್ಷ ದೊಡ್ಡವನು ..
ಆದ್ರೆ ನನಗೆ ಈ ಎಲ್ಲಾ ವಿಷಯ ಗೊತ್ತಾಗಿದ್ದು ನಾನು  ಇಲ್ಲಿಗೆ ಮದುವೆ ಆಗಿ ಬಂದು ೧ ವರ್ಷದ ನಂತರ..ಆದರೆ ಇವರ ಮೊದಲ ಹೆಂಡತಿ ಏಗೋ ಬದುಕಿದ್ದಾಳೆ,
ಆ ಕಾಯಿಲೆ ಕೂಡ ವಾಸಿಯಾಗಿದೆ..ಅವಳು ಮತ್ತು ಅವಳ ಮಗನನ್ನು ಅವಳ ತವರು ಮನೆಯಲ್ಲಿ ಇರಿಸಿದ್ದರಿಂದ ನನಗೆ ಈ  ವಿಷಯವೇ ಗೊತ್ತಿರಲಿಲ್ಲ,ಹೀಗೆ ಒಂದು ದಿನ ಅವಳು ಬಂದು ತನ್ನ ಪಾಲನ್ನು ಕೇಳಿದಾಗಲೇ ನನಗೆ ಗೊತ್ತಾಗಿದ್ದು,...
ಏನು ಮಾಡಬೇಕು ಎಂದು ಯೋಚಿಸುವ  ಸ್ಥಿತಿಯಲ್ಲಿ ಕೂಡ ನಾನು ಇರಲಿಲ್ಲ. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಸ್ಥಿತಿ ಏನು ಎಂದು ಅರ್ಥ ಮಾಡಿಕೊಳ್ಳಬಲ್ಲೆ,ಯಾರೇ ಆದರೂ ತನ್ನ ಗಂಡ ತಾನು ಬದುಕಿರುವಾಗಲೇ ಇನ್ನೊಬ್ಬಳನ್ನು ಮದುವೆ ಆಗುವುದನ್ನು ಸಹಿಸಿಕೊಳ್ಳುವುದಿಲ್ಲ.ನನಗೂ  ಅದೇ ರೀತಿಯ ಸ್ಥಿತಿ,ನನ್ನ ಗಂಡ  ನನಗಿಂತ ಮುಂಚೆ ಇನ್ನೋಬಳನ್ನು ವರಿಸಿದ್ದಾನೆ,ಆಕಾಶವೇ ಮೇಲೆ ಬಿದ್ದ ಹಾಗೆ ಆಯಿತು,ಯಾರನ್ನು ದೂರುವ ಪರಿಸ್ಥಿತಿ ಇಲ್ಲ ನನಗೆ....
ಇವನಿಗೆ ಅವಳ ಜೊತೆ ಸಂಸಾರ ಮಾಡಿ ಎಂದು ಹೇಳುವ ಧೈರ್ಯವೂ ಇಲ್ಲ.

ಕೊನೆಗೆ ಅವಳಿಗೆ ಕಾನೂನಿನ ಪ್ರಕಾರ ವಿಚ್ಚೇದನ ಕೊಟ್ಟು,ಅವಳಿಗೆ ಒಂದು ಮನೆಯನ್ನು ಕೊಡಿಸಿದ್ದಾಯಿತು..

ಸಮಯ ಕಳೆದ ನಂತರ ನಮಗೂ ಒಂದು ಮಗುವಾಯಿತು,ಆದರೆ ನನ್ನ ಗಂಡನಿಗೆ ನನ್ನ ಮೇಲೆ ಒಲವು ಕೂಡ ಕಡಿಮೆ ಆಯಿತು.ಯಾವಾಗಲು ಅವಳ ಮನೆಯಲ್ಲಿ ಇರುತ್ತಾನೆ,ಆಫೀಸು ಮುಗಿದ ಮೇಲೆ ಅವಳ ಮನೆಗೇ ಹೋಗುತ್ತಾನೆ,...
 ನನ್ನ ಅಡುಗೆಯೆಲ್ಲ ಮುಸುರೆಗೆ ಹಾಕುವುದು,ಅಪ್ಪ ಎಲ್ಲಿ ಎಂದು ಕೇಳಿದ ಮಗಳಿಗೆ ಆಫಿಸಿನಲ್ಲಿ ಕೆಲಸ ಇರುವುದರಿಂದ ಇವತ್ತು ಬರಲ್ಲ ನಾಳೆ ಬರುತ್ತಾರೆ ಎಂದು ಸುಳ್ಳು ಹೇಳುವುದು ರೂಡಿ ಆಗಿಬಿಟ್ಟಿದೆ.ಅಲ್ಲದೆ ಅವರು ನನ್ನ ಮಗಳ  ಸ್ಕೂಲಿನ ಫೀ ಕೂಡ ಸರಿಯಾಗಿ ದುಡ್ಡು ಕೊಡುತ್ತಿಲ್ಲ...ಆದರೆ ಅವಳ ಮಗನಿಗೆ ಕಾಲೇಜಿಗೆ ಡೊನೇಶನ್ ಕೊಡುತ್ತಾನೆ...ಮನೆ  ಖರ್ಚಿಗೆ ಕೂಡ ಕೊಡುತ್ತಿಲ್ಲ..ಏನೋ ನಂಬಿಕೆ ಇರುವುದರಿಂದ ನಮ್ಮ ಬೀದಿಯ ಅಂಗಡಿ ಮೂರ್ತಿ  ಸಾಲ ಕೊಡುತ್ತಾರೆ,ಸಾಲ  ವಾಪಸ್ ಕೊಟ್ಟು ಆಗಲೇ ೩ ತಿಂಗಳಾಗಿದೆ.ನಾಳೆ ಹಬ್ಬಕ್ಕೆ ಮನೆಗೆ ಬರುತ್ತಾರೆ ಎಂಬುದು ಅನುಮಾನ...

ಕಾಲಿಂಗ್ ಬೆಲ್ ಆದಾಗ ಬಹುಷಃ ನನ್ನ ಗಂಡ ಎಂದು ಬಾಗಿಲು ತೆರೆದರೆ ರಮೇಶ ಬಂದು ನಿಂತಿದ್ದಾನೆ...,ಇಂಥ ಸನ್ನಿವೇಶದಲ್ಲಿ ಅವನನ್ನು ನೋಡಿ ಖುಷಿ  ಪಡಬೇಕೋ ಒಂದೂ ತಿಳಿಯುತ್ತಿಲ್ಲ,ಅವನನ್ನು ನೋಡಿ ಸುಮಾರು ೮ ವರ್ಷ ಆಗಿದೆ,ಅವನನ್ನು ನೋಡುವ ಅವಕಾಶವೇ ಸಿಕ್ಕಿರಲಿಲ್ಲ,

ಈಗ ಅಕಸ್ಮಾತಾಗಿ ಮನೆಗೆ ಬಂದು ಬಿಟ್ಟಿದ್ದಾನೆ,ನಾನು ಒಳಗೆ ಬರಲು ಹೇಳಿ ಮುಂದೆ ನಡೆದೇ,ಅವನಿಗೆ ಮದುವೆ ಆಗಿದೆ ಎಂದು ಭಾವಿಸಿದ್ದೆ  ,ಆದರೆ ಇನ್ನೂ ಆಗಿಲ್ಲ,ಕಾರಣ ಕೇಳಿದರೆ ಆದರೆ ನಿನ್ನನ್ನೇ ಆಗುವುದು,ಇಲ್ಲ ಅಂದರೆ  ಈಗೆ ಇರುತ್ತೀನಿ  ಅಂತ ಬೇರೆ ಹೇಳುತ್ತಿದ್ದಾನೆ,ಅವನ ತಂಗಿ ಮತ್ತು ಇಬ್ಬರೂ ತಮ್ಮಂದಿರ ಮದುವೆ ಆಗಿದ್ದರು ಇವನು ಇನ್ನು ಆಗಿಲ್ಲ...

ಇಷ್ಟು ವರ್ಷ ನನಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ನನ್ನಿಂದ ದೂರ ಇದ್ದ...ಈಗ ನನ್ನ ಕಾಲೇಜು ಸ್ನೇಹಿತರಿಂದ ನನ್ನ ಅಡ್ರೆಸ್ಸ್ ತೆಗೆದುಕೊಂಡು ಬಂದಿದ್ದಾನೆ...

ಇವನು ಬಂದಾಗ ಸಧ್ಯ ನನ್ನ ಗಂಡ ಮನೆಯಲ್ಲಿ ಇಲ್ಲ, ಈಗ  ನನ್ನ ಗಂಡನಿಗೆ ಡಿವೋರ್ಸ್ ಕೊಟ್ಟು ತನ್ನನ್ನು ಮದುವೆ ಆಗಲು ಹೇಳುತ್ತಿದ್ದಾನೆ...
 ನನ್ನ ಮಗಳನ್ನು ಕೂಡ ಕರೆದು ಕೊಂಡು ಹೋಗೋಣ ಎನ್ನುತ್ತಿದ್ದಾನೆ.ಸ್ವಲ್ಪ ಸಮಯ ಯೋಚಿಸ ಬೇಕು ಎಂದು ಹೇಳಿ ಅವನನ್ನು ಕಳಿಸಿ ಬಿಟ್ಟಿದ್ದೇನೆ,ಆದರೆ ಈಗ  ನನ್ನ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲ ಒಂದೇ ಎರಡೇ?

ಒಬ್ಬ ಗಂಡು ಇನ್ನೊಬ್ಬ ಹೆಂಗಸನ್ನು ಮದುವೆ ಆದರೆ ಸಮಾಜ ಒಪ್ಪುತ್ತದೆ,ಆದರೆ ಒಬ್ಬ ಹೆಣ್ಣು ಇನ್ನೊಬ್ಬ ಗಂಡಸನ್ನು ಮದುವೆ ಆದರೆ ಸಮಮಾಜ ಒಪ್ಪುವುದಿಲ್ಲ,ಅದೂ ನೋಡುವ ದೃಷ್ಟಿಯೇ ಬೇರೆ ಆಗಿರುತ್ತದೆ..
ಅಲ್ಲದೆ ಇಷ್ಟು ದಿನ ನನ್ನ ಗಂಡನನ್ನು ಅಪ್ಪ ಎಂದು ಕರೆಯುವ ಮಗಳಿಗೆ ಇವನನ್ನು ಏನು ಅಂತ  ಪರಿಚಯ ಮಾಡಿಕೊಡಲಿ...ಇವನನ್ನು ಏನು ಅಂತ ಕರಿಬೇಕು ಎಂದು  ಹೇಳಿಕೊಡಲಿ?
ಅವಳು ದೊಡ್ಡವಳಾದ ಮೇಲೆ ಕೂಡ ಅವಳಿಗೆ ಈ ವಿಷಯ ಗೊತ್ತಾದರೆ ಅವಳ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು...ನನ್ನ ಮೇಲೆ ಅವಳಿಗೆ ಯಾವ ಭಾವನೆ ಹುಟ್ಟಬಹುದು...
ಅಲ್ಲದೆ ತವರು ಮನೆಯವರ  ಮಾನ  ಮರ್ಯಾದೆ  ಹಾಳು ಮಾಡಿದ  ಹಾಗೆ  ಆಗುತ್ತದೆ ..
ಇದನೆಲ್ಲ  ಯೋಚಿಸಿದರೆ ಬೇಕಿತ್ತಾ ಈ  ಜನ್ಮ ಎಂಬ ಕೊರಗು...ಯಾವಾಗಲೋ ಸಾಯ ಬೇಕು ಎಂದು ನಿರ್ಧಾರ ಮಾಡಿ ಮಗಳ ಮುಖ ನೋಡಿ ಎಷ್ಟಾದರೂ ಕಷ್ಟ ಅನುಭವಿಸಲು ತಯಾರಾಗಿದ್ದೇನೆ...ನಾನು ಸತ್ತರೆ ಅವಳನ್ನು ನನ್ನ ಗಂಡ ಅಂತೂ ಸರಿಯಾಗಿ ಸಾಕುವುದಿಲ್ಲ..ನಾನಿರುವಾಗಲೇ ಹೀಗೆ,ಇನ್ನು ನಾನು ಸತು ಹೋದೆ ಅಂದರೆ ಅವಳ ಜೀವನವನ್ನು ಹಾಳು  ಮಾಡುತ್ತಾನೆ...ಈ ಕಾರಣಕ್ಕೆ ಭಂಡ ಧೈರ್ಯ ಮಾಡಿ ಸಾಯುವ ನಿರ್ಧಾರವನ್ನು ದೂರ ಮಾಡಿದ್ದು....
ಈ ಯೋಚನೆಯಲ್ಲೇ ರಾತ್ರಿ ಪೂರ ನಿದ್ದೆ ಇಲ್ಲದೆ ಕಳೆದದ್ದಾಯಿತು...
ನನ್ನ  ಮಗಳ  ಭವಿಷ್ಯದ ದೃಷ್ಟಿಯಲ್ಲಿ ನೋಡಿದರೆ ನಾನು ರಮೇಶನನ್ನು ಮದುವೆ ಆಗುವುದೇ ಒಳ್ಳೆಯದು ಅನಿಸುತ್ತಿದೆ...ಮಗಳಿಗೆ ಸ್ವಲ್ಪ ಬುದ್ಧಿ ಬಂದ ವಯಸ್ಸಿಗೆ ಈ ವಿಷಯದ ಬಗ್ಗೆ ತಿಳಿ ಹೇಳಬಹುದು ಎಂದು ನನ್ನ ಅನಿಸಿಕೆ...
ರಮೇಶ ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಮತ್ತು ಅವಳ ವಿಧ್ಯಾಭ್ಯಾಸಕ್ಕೆ ಸಹಕರಿಸುತ್ತಾನೆ ಎಂದು ನನ್ನ ನಂಬಿಕೆ...
ಕತ್ತಲು ತುಂಬಿರುವ ನನ್ನ ಬದುಕಲ್ಲಿ ಈ ದೀಪಾವಳಿಯ ದಿನ ರಮೇಶ ಬೆಳಕು ಚೆಲ್ಲಬಹುದು ಎಂಬ ವಿಶ್ವಾಸ ಇದೆ,
ಆದರೂ ಏನು ಮಾಡಬೇಕು ಎಂಬ ಧೃಡ ನಿರ್ಧಾರ ಒಂದಿಲ್ಲ....
ರಮೇಶನ ಜೊತೆ ಹೋದರೆ ಕಟ್ಟಿಕೊಂಡ ಗಂಡನನ್ನು ಬಿಟ್ಟವಳು ಎಂಬ ಹಣೆ ಪಟ್ಟಿ..ಅಲ್ಲದೆ ಗಂಡನ ವರ್ತನೆ  ಈ ರೀತಿ...ಹೇಗೆ ಸಾಗಿಸಲಿ ನನ್ನ ಜೀವನ...ಹೇಗೆ ಸಾಕಲಿ ನನ್ನ ಮಗಳನ್ನ?

Thursday, April 28, 2011

ಅಳಿಯ ದೇವರು!!

ಅದೊಂದು ಸುಂದರ  ಹಳ್ಳಿ.ಅಲ್ಲೊಂದು ಸಣ್ಣ  ಸಂಸಾರ.ಆ ಮನೆಯಲ್ಲಿ ಒಂದು ಅಜ್ಜಿಯು ಇತ್ತು.ತನ್ನ ಒಬ್ಬಳೇ ಮಗಳ ಮದುವೆ ಆಗಿದೆ,ಹಾಗೆ ತನ್ನ ಮಗನ ಮದುವೆ ಕೂಡ ಒಂದೆರಡು ವರ್ಷದ ಮುಂಚೆಯಷ್ಟೇ ಆಗಿದೆ.
ಗಂಡ  ತೀರಿಕೊಂಡಿದ್ದರೂ ಆ ನೋವನ್ನು ಮರೆತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾ,ತೋಟದಲ್ಲಿ ಏನಾದರು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದಾಳೆ...ಈ ಅಜ್ಜಿಯ ಮಗ ಆ ಊರಿನ ದೇವಸ್ಥಾನದ ಕಾರ್ಯದರ್ಶಿ,ಊರಲ್ಲಿ ಒಳ್ಳೆ ಮರ್ಯಾದೆ ಗೌರವ ಇದೆ..ತನ್ನ ಗಂಡ ತೀರಿಕೊಂಡ ಮೇಲೆ ಆ ಸ್ಥಾನ ಆಕೆಯ ಮಗನಿಗೆ ಸಿಕ್ಕಿತು.
ಹೀಗೆ ಒಂದು ದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಪಾದಕ್ಕೆ ಒಂದು ಮುಳ್ಳು ಹೊಕ್ಕಿತು.ಅದು ಸಾಧಾರಣ  ಮುಳ್ಲಾಗಿರಲಿಲ್ಲ,ಅದೊಂದು ವಿಷ ಪೂರಿತ ಮುಳ್ಳು...
ಆ ಮುಳ್ಳಿನಿಂದ ಆಕೆಯ ಪಾದದಲ್ಲಿ ಸಣ್ಣ ಗಾಯ ಆಯಿತು,ಅದು ಕ್ರಮೇಣ ದೊಡ್ಡದಾಗುತ್ತ ಹೋಯಿತು...ಆಕೆ ಚಿಕ್ಕಂದಿನಿಂದ  ಹೊಲ ಗದ್ದೆಗಳಲ್ಲಿ ಒಡನಾಟ ಜಾಸ್ತಿ ಇತ್ತಾದ್ದರಿಂದ ಇದೊಂದು ಮಾಮೂಲಿ ಎಂದು ಸುಮ್ಮನಾದಳು.ಅದು ದೊಡ್ಡ ಗಾಯವಾದಮೇಲೆ ಅವರು ಆಸ್ಪತ್ರೆಯ ಕಡೆ ಹೋಗಿದ್ದು.
ಆಗ ಗೊತ್ತಾಯಿತು ಆಗಲೇ ಆಕೆಗೆ ಗ್ಯಾಂಗ್ರಿನ್  ಕಾಯಿಲೆ ತಗುಲಿ ಆಗಿದೆ ಎಂದು..ಕಾಲು ಕತ್ತರಿಸಬೇಕು ಇಲ್ಲವಾದರೆ ಆಕೆಯ ಸಾವು ಹತ್ತಿರದಲ್ಲೇ  ಇದೆ ಎಂದು ವೈದ್ಯರು ಸಾರಾಸಗಟಾಗಿ ಹೇಳಿದರು..
ಯಾರೋ ಒಬ್ಬರು ನೆಂಟರು ನಾಟಿ ವೈದ್ಯರ ಬಳಿ ಆದರೆ ಇದು ವಾಸಿ ಆಗುತ್ತದೆ ಎಂದು ಹೇಳಿದರು,ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಕೂಡ  ವಾಸಿ ಆಗದೆ,ಅವರು ಕೂಡ ಈಗಾಗಲೇ ಸಮಯ ಮೀರಿ ಆಗಿದೆ,ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಏನು ತೋಚದೆ ವಿಧಿ ಬರಹ ಹೀಗೆ ಇರಬಹುದೇನೋ ಎಂದು ಆಕೆಯನ್ನು ಮನೆಗೆ ವಾಪಸ್ ಕರೆ ತಂದರು..
ಆದರೂ  ಆಕೆಯ ಅಳಿಯ ಮಾತ್ರ ಮತ್ತೆ ಬೇರೆ ಕಡೆ ಒಳ್ಳೆಯ ಆಸ್ಪತ್ರೆಗೆ ಸೇರಿಸಲು ತನ್ನ ಹೆಂಡತಿಯೊಂದಿಗೆ ಒತ್ತಾಯ ಮಾಡುತ್ತಾನೆ ,ಆದರೆ ಆಕೆಯ ಮಗ ಮಾತ್ರ ಒಪ್ಪಲಿಲ್ಲ,ಎಲ್ಲಿ ದುಡ್ಡು ಕೊಡಬೇಕಾಗುತ್ತದೋ ಎಂದು..
ಆ ಅಳಿಯ ಬೇರೆ ಉರಿನಲ್ಲಿ ಕೆಲಸದ ಮೇಲೆ ಇದ್ದ ಕಾರಣ ತನಗೆ ಸ್ವತಃ ಬಂದು ತನ್ನ ಅತ್ತೆಯನ್ನು ನೋಡಲು ಸಾಧ್ಯವಾಗಲಿಲ್ಲ,ಹೇಗಾದರೂ ಮಾಡಿ ಆಕೆಯನ್ನು ಆ ಕಾಯಿಲೆ ಇಂದ  ಪಾರು ಮಾಡಬೇಕು,ಆದಷ್ಟು ಇನ್ನಷ್ಟು ದಿನ ಬದುಕುವ ಹಾಗೆ ಮಾಡಬೇಕು ಎಂದು ತನ್ನ ಹೆಂಡತಿಗೆ ಹೇಳಿ ಆಸ್ಪತ್ರೆಗೆ ಸೇರಿಸುತ್ತಾನೆ,ಆಸ್ಪತ್ರೆಯ ಖರ್ಚನ್ನೆಲ್ಲ ತಾನೇ ನೋಡಿಕೊಳ್ಳುವುದಾಗಿ ,ಆಸ್ಪತ್ರೆಗೆ ಸೇರಿಸಲು ಬೇಡ ಅಂದಿದ್ದ ಆಕೆಯ ಮಗನಿಗೆ ಹೇಳುತ್ತಾನೆ..
ಇತ್ತ ಆಸ್ಪತ್ರೆಯಲ್ಲಿ ನಿಧಾನವಾಗಿ ಸ್ವಲ್ಪ ಮಟ್ಟಿಗೆ  ಚೇತರಿಸಿಕೊಳ್ಳುತ್ತಿದ್ದಾಳೆ  ಅಜ್ಜಿ,ಆದರೆ ಮಗ ಮಾತ್ರ ಆಕೆ ಇನ್ನೇನು ಸತ್ತು ಹೋಗುತ್ತಾಳೆ ಎಂದು ವೈದ್ಯರು ಹೇಳಿದ್ದಾರೆ  ಎಂದು ತಿಳಿದು,ಇನ್ನೂ ಜಾಸ್ತಿ ದಿನ ಬದುಕುವುದಿಲ್ಲ ಎಂದು ನಂಬಿ ,ದೇವಸ್ಥಾನದ ಕಾರ್ಯಕ್ರಮಗಳಿಗೆ ಬರುವ  ಹೊಲಗೇರಿಯ   ವಾದ್ಯದವರಿಗೆ  ತನ್ನ ತಾಯಿಯ  ಶವ ಸಂಸ್ಕಾರಕ್ಕೂ ಬರಬೇಕು ಎಂದು ಶವ ಸಂಸ್ಕಾರಕ್ಕೆ ಅಣಿ ಮಾಡಿಕೊಳ್ಳುತ್ತಿದ್ದಾನೆ.ಹಾಗೆಯೇ ಶಾಮಿಯಾನ,ಉಳಿ ಅನ್ನ ಮಾಡಲು ಪಕ್ಕದ ಊರಿನ ಬ್ರಾಹ್ಮಣರಿಗೆ ಅಡುಗೆಗೆ ,ಗುಂಡಿ ತೋಡಲು ಕೂಲಿಯವರಿಗೆ ಎಲ್ಲಾ ಹೇಳಿಬಿಟ್ಟಿದ್ದಾನೆ...
ಹೀಗೆ ತನ್ನ ತಾಯಿಯ ಜೀವದ ಬಗ್ಗೆ ಸ್ವಲ್ಪವೂ ಯೋಚಿಸದೆ ಆಕೆಯ ಶವ ಸಂಸ್ಕಾರದ ಬಗ್ಗೆ ಯೋಚಿಸುತ್ತಿದ್ದಾನೆ,ಆದರೆ ಅವನ ಹೆಂಡತಿ ಮಾತ್ರ ಆಸ್ಪತ್ರೆಯಲ್ಲಿ ಅಜ್ಜಿಯ ಮಗಳೊಂದಿಗೆ  ಅಂದರೆ ತನ್ನ ಅತ್ತಿಗೆಯೊಂದಿಗೆ ಅಜ್ಜಿಯ ಸೇವೆ ಮಾಡುತ್ತಿದ್ದಾಳೆ..
ಅಜ್ಜಿಯ ಅಳಿಯನೇ ಇದೆಲ್ಲರ ಖರ್ಚು ನೋಡಿಕೊಳ್ಳುತ್ತಿದ್ದಾನೆ,ಆದರೆ ಅವರು ಮಾತ್ರ ಬೇರೆ ಉರಿನಲ್ಲಿ ತನ್ನ ಕೆಲಸದ ಮೇಲೆ ಇರುವುದರಿಂದ ಬಂದು ನೋಡಲು ಹಾಗಿರಿವುದಿಲ್ಲ,ಹೀಗೆ ಸ್ವಲ್ಪ ದಿನ ಆದ ಮೇಲೆ ಆಸ್ಪತ್ರೆ  ಇಂದ ಮನೆಗೆ ವಾಪಸ್ ಕರೆದುಕೊಂಡು ಬರುತ್ತಾರೆ,ಸ್ವಲ್ಪ  ಲವಲವಿಕೆ ಅಜ್ಜಿಯ ಮುಖದಲ್ಲಿ ಇತ್ತು,ಆದರೂ ತನ್ನ ಮಗ ಒಂದು ದಿನ ತನ್ನನ್ನು ನೋಡಲು ಬಂದಿಲ್ಲ ,ಅವನ ಮನೆಯಲ್ಲಿ ಇರುವುದಕ್ಕೂ ಸ್ವಲ್ಪ ಬೇಸರ ಇತ್ತು..
ಆದರೆ ಮಗ ಮಾತ್ರ ಇನ್ನು ಆಕೆ ಜಾಸ್ತಿ ದಿನ ಬದುಕುವುದಿಲ್ಲ ಎಂದೇ ಭಾವಿಸಿದ್ದಾನೆ...
ಹೀಗೆ ಸುಮಾರು ೨ ವರ್ಷ ಯಾಕೆ ಬದುಕಿರುತ್ತಾಳೆ,ಇಷ್ಟು ದಿನ ಆಕೆಯ ಬದುಕಿಗ ಕಾರಣನಾದ ಅಳಿಯ ಮಾತ್ರ ಒಂದು ದಿನ ನೋಡಲು ಬಂದಿರಲಿಲ್ಲ,ಅದಾರೆ ಅವನಲ್ಲಿ ಪ್ರೀತಿ ಇದೆ.ಬರಬೇಕೆಂಬ ಮನಸ್ಸಿದ್ದರೂ ಕೆಲಸದ ಒತ್ತಡ ದಿಂದ ಬರಲು ಆಗಿಲ್ಲ...
ಹೀಗ ಮಾತ್ರ ಅಜ್ಜಿ ದಿನ ಏಣಿಸುವ ಪರಿಸ್ಥಿತಿಯಲ್ಲಿ ಇದ್ದಾಳೆ,ಅವಳ ಮೈಯಲ್ಲಿ ಶಕ್ತಿ ಪೂರ್ತಿ ಕುಂದಿ ಹೋಗಿದೆ.ಆಕೆಗೂ ತಾನು ಸಾಯುವ ದಿನ ಹತ್ತಿರ ಬಂದಿದೆ ಎಂದು ತಿಳಿಯಿತು,ಕೊನೆಗೆ ತನ್ನ ಅಳಿಯನನ್ನು ಆದಷ್ಟು ಬೇಗೆ ಕರೆಸಿ ಎಂದು ಗೋಳಿಟ್ಟಳು ..
ಅಳಿಯ ಕೂಡ ಈ ವಿಷಯ ತಿಳಿದು ಒಂದು ದಿನ ಬಿಡುವು ಮಾಡಿಕೊಂಡು ಬರುತ್ತಾನೆ,ಹಾಸಿಗೆ ಹಿಡಿದಿದ್ದ ಆಕೆಗೆ ಒಂದಷ್ಟು  ಅನ್ನ ತಿನ್ನಿಸಿ ,ಸ್ವಲ್ಪ  ನೀರು ಕುಡಿಸುತ್ತಾನೆ..ಆದಾದ ಸ್ವಲ್ಪ ಒಟ್ಟಿಗೆ ಆಕೆ ನಿರಾಳವಾಗಿ ಪ್ರಾಣ ಬಿಡುತ್ತಾಳೆ,ಕೊನೆ ಕಾಲದಲ್ಲಿ ಮಗ ಚೆನ್ನಾಗಿ ನೋಡಿಕೊಳ್ಳದಿದ್ದಾಗ ಅಳಿಯ ಆದಷ್ಟು ಪ್ರೀತಿ  ತೋರಿಸಿದ್ದ,
ಮಗ  ಬಹು ದಿನದಿಂದ ಶವ ಸಂಸ್ಕಾರಕ್ಕೆ ಕಾಯುತ್ತಿದ್ದ ,ಅದಕ್ಕೆ ಮುಂಚೆಯೇ ಎಲ್ಲರಿಗೂ ಹೇಳಿದ್ದ,
ಆದರೆ ಆ ದಿನ ಮನೆಗೆ ಬಂದ ನೆಂಟರು,ಬಂಧುಗಳು,ಉರ ಜನ ಇವರೆಲ್ಲರ ಬಾಯಲ್ಲಿ "ಇಂತ ಅಳಿಯನನ್ನು ಪಡೆಯಕ್ಕೆ ಎಷ್ಟು ಪುಣ್ಯ ಮಾಡಿದ್ದಳೋ ಈ ಅಜ್ಜಿ "
"ಮಗ ಸರಿಯಾಗಿ ನೋಡಿ ಕೊಳ್ಳಲಿಲ್ಲ,ಆದರೆ ಅಳಿಯ ಮಾತ್ರ ಎಷ್ಟು ಚೆನ್ನಾಗಿ ನೋಡಿಕೊಂಡ "
"ಕೊನೆ ತುತ್ತು ಅಳಿಯನ ಕೈಲೆ ತಿನ್ನಬೇಕು ಅಂತ ಇಷ್ಟು ದಿನ ಕಾಯುತ್ತಿದ್ದಲೋ ಏನೋ?"ಹೀಗೆ ಮಾತಾಡಿಕೊಳ್ಳುತ್ತಿದ್ದರು.
(ಮೊದಲ ಬಾರಿ ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ,ತಪ್ಪಿದ್ದರೆ ತಿಳಿಸಿ,ತಿದ್ದಿಕೊಳ್ಳುವೆ,
ಎಡವಿದ್ದರೆ ಎಬ್ಬಿಸಿ, ಎಚ್ಚರಗೊಲ್ಲುವೆ....)

Sunday, April 17, 2011

ಒಂದು ಮಧುರ ಪ್ರೇಮ ಕಥೆ.....!!!!!!!!!!!


Onsite offer!!
ಈ ಐಟಿ ಕಂಪನಿ ಅಂದ ಮೇಲೆ ಅವಾಗ  ಅವಾಗ  ಬರ್ತಾ  ಇರುತ್ತೆ !!!
ಫ್ಲೈಟ್ ನಲ್ಲಿ  ಕೂತಿದ್ದೀನಿ  ,ಇನ್ನೊಮ್ಮೆ  ಆನ್ ಸೈಟ್ ..... .ಪ್ಲೇನ್  ಟೇಕ್  ಆಫ್  ಆಗಿದೆ  ,ಆಕಾಶದಲ್ಲಿ  ತೇಲುತ್ತ  ಇದೀನಿ . ಹಾಗೆ ಕಿಡಕಿಯಿಂದ   ಹೊರಗಡೆ  ಸುಮ್ಮನೆ ನೋಡಿದೆ ,ಸಂಜೆಯ  ಸುಂದರ  ದೃಶ್ಯಗಳು .ಸ್ವರ್ಗದಂತೆ   ಭಾಸವಾಗುತ್ತ  ಇದೆ .
ಆ  ಸುಂದರ ದೃಶ್ಯದಲ್ಲಿ  ನನ್ನಲ್ಲಿ  ನಾನು  ಕಳೆದು  ಹೋಗಿಬಿಟ್ತಿದ್ದೆ...

ಯಾರದೋ  ಧ್ವನಿ  ಎಚ್ಚರಿಸಿತು "excuse me sir, would you like to have something?"

ಹಿಂದಕ್ಕೆ  ತಿರುಗಿ  ನೋಡಿದ್ರೆ  ನನಗೆ  ಆಶ್ಚರ್ಯ ,ನನ್ನ  ಸುಂದರ  ಹಳೆ  ಸ್ಕೂಲ್  ಮೇಟ್  ಬಿಂದು  .
"ಏ ಬಿಂದು  , ನೀನು ? ಇಲ್ಲಿ ? ವಾವ್  .........ಇಷ್ಟು  ಚೆನ್ನಾಗಿ ಕಾಣ್ತಿದ್ಯ ,........  ಅದು  air-hostess ಡ್ರೆಸ್ನಲ್ಲಿ "

ಸೀರೆ  ಉಟ್ಟು ,ಮಲ್ಲಿಗೆ  ಹೂವು  ಮುಡಿದಿದ್ದರೆ  ಇನ್ನೂ  ಚೆನ್ನಾಗಿ  ಕಾಣುತ್ತಿದ್ದಳು .ಮುದ್ದಾದ ಬೊಂಬೆಯ  ಹಾಗೆ ...ಆದರೆ ಅವರಿಗೆ ಅದೇ ಯೂನಿ ಫಾರಂ ...
"ಗಿರಿ ,ವಾವ್ ,ನಂಗೆ  ನಂಬಕ್ಕೆ  ಆಗ್ತಿಲ್ಲ .....ಏನಿಲ್ಲಿ .ಓಹ್  ಸಾರೀ .ನಾನು  ಡ್ಯೂಟಿಯಲ್ಲಿ  ಇದೀನಿ ,ಆಮೇಲೆ  ಮಾತಡ್ತಿನಿ "
ಒಂದು  ಕಿರು  ನಗೆ  ಬೀರಿ ,ಆಕಡೆ  ಹೋದಳು .ನನ್ನ  ಕಣ್ಣಿಗೆ  ನಂಬಕ್ಕೆ  ಆಗ್ತಿಲ್ಲ ..ನನ್ನ  ಸ್ಕೂಲ್  ದಿನಗಳ  ನೆನಪಾಯಿತು..

ಅವಳ  ಬಗ್ಗೆ  ಎಷ್ಟು  ತಲೆ  ಕೆಡಿಸ್ಕೊಂಡಿದ್ದೆ ,ಸ್ಕೂಲ್  ಬಿಟ್ಟಮೇಲೆ  ಅವಳ  ಹಿಂದೆ  ಫಾಲೋ  ಮಾಡ್ಕೊಂಡ್ ಹೋಗೋದು..... ಎಷ್ಟೊಂದ್  ಲವ್  ಲೆಟರ್  ಬರ್ದಿದ್ದೆ  ,ಆದ್ರೆ  ಯಾವದನ್ನು  ಅವಳಿಗೆ  ಕೊಡೋ   ಧೈರ್ಯ  ಆಗಿರಲಿಲ್ಲ..........ಕ್ಲಾಸ್ನಲ್ಲಿ  ಲಾಸ್ಟ್  ಬೆನ್ಚಿಂದ  ಅವಳನ್ನೇ  ನೋಡ್ತಾ ಕುರ್ತಿದ್ದು.....ಎಲ್ಲಾ ನೆನಪಾಗ್ತಿದೆ  ,ಅವಳು  ನಮ್ಮ  ಕ್ಲಾಸಿನ  ಬ್ಯೂಟಿ ಕ್ಯೂನ್....... .
ಅವಳಿಗೋಸ್ಕರ  2-3 ಜನ  ಹುಡುಗರು ,ನನ್ನ ಕ್ಲಾಸ್ ಮೇಟ್ಸ್ ಗಳ   ಜೊತೆ  ಜಗಳ  ಆಡಿದ್ದು.... .

ನನಗೆ  ತಡೆಯೋಕ್ಕೆ   ಹಾಗ್ತಿಲ್ಲ ,ಅವಳನ್ನ  ಇನ್ನೊಮ್ಮೆ  ನೋಡ್ತಾ  ಇದ್ದೆ , ಬಿಂದು ಸ್ಕೂಲ್  ದಿನಗಳಿಗಿಂತ  ಇವಾಗ  ಇನ್ನೂ  ಚೆನ್ನಾಗಿ  ಕಾಣ್ತಿದ್ದಾಳೆ...

ಅವಳು  ಕೂಡ  ನನ್ನ  ಕಡೆ  ನೋಡಿ  ನಕ್ಕಳು ,ನಂತರ  ಬೇರೆ  air-hostess ಗಳಿಗೆ  ಏನೋ  ಹೇಳಿದಳು .ಅವರು  ಕೂಡ  ನನ್ನ  ಕಡೆ  ತಿರುಗಿ  ಕಿರು  ನಗೆ  ಬೀರಿದರು..
ಆಮೇಲೆ  ಏನಾಯಿತು  ಅಂತ  ಗೊತ್ತೇ  ಆಗ್ಲಿಲ್ಲ ,ಅವಳ  ಕೊಲಿಗೂ   ಕೂಡ  ಸಕತ್  ಆಗಿದ್ದಾಳೆ..

ಒಹ್  ಮೈ  ಗಾಡ್ !!!!!!!!!!!!!!!ಇವತ್ತು  ನನ್ನ  ಒಂದು  ಕನಸನ್ನು  ನನಸು  ಮಾಡ್ಬಿಟ್ಟೆ .
ಅವಳ  ಹತ್ತಿರ  ಹೋಗಿ  ಮಾತಾಡೋಣ  ಅಂದುಕೊಂಡೆ ,ಆದ್ರೆ  ಅದು  ಅವಳ  ಜಾಬ್  ಅಂತ  ಗೊತ್ತಿತ್ತು .....ಅವಳಿಗೆ ತೊಂದರೆ ಕೊಡಬಾರದು ಅಂತ ಸುಮ್ಮನಾದೆ...

ಮತ್ತೆ  ಹೊರಗಡೆ  ನೋಡಲು  ಶುರು  ಮಾಡಿದೆ ,ನಾವಾಗಲೇ  ಮೋಡಗಳ   ಮೇಲೆ  ಇದ್ವಿ .ಹೊರಗಡೆ  ಮುಸ್ಸಂಜೆ  ತುಂಬ  ಚೆನ್ನಗಿಕಾಣ್ತಿತ್ತು  ,ಹೊಳಗಡೆ  ಕೂಡ ,ಅವಳ  ನಗುವಿಂದಾಗಿ ............. .
ಹೇಗೋ  ಧೈರ್ಯ  ಮಾಡಿಕೊಂಡು  ಅವಳ  ಹತ್ತಿರ   ಮಾತಾಡಿಸೋಣ  ಅಂತ  ಹೋದೆ ,ಅವಳಿಗೂ  ನನಗೇನ್  ಬೇಕು  ಅಂತ  ತಿಳಿದಿರಬೇಕು .
ನನ್ನ  ಹತ್ತಿರ  ಬಂದು "ಸಾರೀ  ಕಣೋ ,ನಿನ್ನ  ಜೊತೆ  ತುಂಬ  ಮಾತಾಡಕ್ಕೆ  ಆಗ್ಲಿಲ್ಲ ......,
so ಹೇಗಿದ್ದೀಯ ,ಇಷ್ಟು  ವರ್ಷ  ಎಲ್ಲಿದ್ದೆ  ????,ಏನು  ನಿನ್ನ  ಜೀವನದ  ಕಥೆ ,ಏನಕ್ಕೆ  ಹೋಗ್ತಿದ್ಯ ?"

"hmmm...ನಾನ್  ಅಲ್ಲೇ  ಇದ್ದೆ ,ನೀನೆ  ಸ್ಕೂಲ್   ಮುಗಿದ  ಮೇಲೆ  ಎಲ್ಲಾ  ಬಿಟ್ಟು  ಹೋಗಿದ್ದು ,ನಿನ್ನನ್ನ  ಎಲ್ಲೆಲ್ಲೋ  ಹುಡುಕಿದೆ ,ಆದ್ರೆ  ನೀನ್  ಮಾತ್ರ  ಸಿಗಲಿಲ್ಲ ,ಆಮೇಲೆ  ಕಾಲೇಜ್  ಮುಗಿತು ,
ಒಳ್ಳೆ  ಕಂಪನಿಯಲ್ಲಿ  ಕೆಲಸ  ಸಿಗ್ತು  ,ನಂಗೊತ್ತಿಲ್ಲ ,ನಂಗೆ  ನಮ್ಮ  ಕಂಪನಿ  ಇಷ್ಟೆಲ್ಲಾ  ಕೊಟ್ಟಿದೆ ,ಇವಾಗ  ಆನ್ ಸೈಟ್  ಹೋಗ್ತಾ  ಇದೀನಿ ,ಯಾವಾಗ  ವಾಪಸ್  ಬರ್ತೀನಿ  ಅಂತ  ಗೊತ್ತಿಲ್ಲ ,ಬಿಂದು  ನಿಂಗೊತ್ತಾ,  ನಂಗೆ  ನನ್ನ  ಜೀವನದಲ್ಲಿ  ಎಲ್ಲಾ  ಸಿಕ್ಕಿದೆ ,ಆದ್ರೆ  'ಒಬ್ಬರನ್ನ'  ಬಿಟ್ಟು ,ನನ್ನ  ಸೋಲು ,ಗೆಲುವು ,ನನ್ನ  ಪ್ರಪಂಚ ,ಎಲ್ಲದನ್ನು  ಹಂಚಿಕೊಳ್ಳುವಂತವರು,"

ನೇರವಾಗಿ  ಅವಳ  ಕಣ್ಣನ್ನೇ  ನೋಡಿದೆ ,ಆ  ನೀಲಿ  ಕಂಗಳು ,ನನಗೆ  ಅನ್ನಿಸಿತು  ಅವಳಿಗೆ  'ಒಬ್ಬರನ್ನ' ಅಂದ್ರೆ  ಯಾರು  ಅಂತ  ಗೊತ್ತಾಗಿರಬಹುದು  ಅಂತ .......ಅವಳ  ಕಣ್ಣಲ್ಲಿ  ಸ್ವಲ್ಪ  ನೋವಿತ್ತು  ಅನ್ಸುತ್ತೆ ..........
 "ಸಾರೀ  ಕಣೋ ,ನಾನು  ಹೋಗಬೇಕು ,ನಿಂಗೆ  ನನ್ನ  ಫೋನ್  ನಂಬರ್   ಕೊಡ್ತಿನಿ ,ಆಮೇಲೆ  ಮಾತಾಡೋಣ "ಅಂತ ಹೇಳಿ ಹೋದಳು ...
ವಾಪಸ್  ನನ್ನ  ಸೀಟ್ ನಲ್ಲಿ  ಕುಳಿತೆ ,ನಿಶ್ಯಬ್ಧ .................,ಹೊರಗಡೆ  ನೋಡ್ತಾ  ಇದೀನಿ ,ಅವಳ  ಉತ್ತರಕ್ಕೆ  ಕಾಯ್ತಾ   ಇದೀನಿ ............
ಅಷ್ಟೊತ್ತಿಗಾಲೆ  ಹೊರಗಡೆ  ಕತ್ತಲು  ,ಇದ್ದಕಿದ್ದ  ಹಾಗೆ  ಗುಡುಗು ,ಮಿಂಚು....... ,ನನ್ನ  ಹೃದಯದಲ್ಲಿ  ಆದ  ಹಾಗೆ .........
ಇದ್ದಕಿದ್ದ  ಹಾಗೆ  ಪ್ಲೇನ್  ಕೂಡ  ಅಲುಗಾಡಲು  ಶುರು  ಆಯಿತು...... .ಎಲ್ಲರೂ  ಬೆಚ್ಚಿ  ಬಿದ್ದರು .

ಬಿಂದು  ಮೈಕ್ ಕಡೆ  ಹೋಗುವುದನ್ನು   ನೋಡಿದೆ ,ಯಾರು  ಹೆದರ  ಬಾರದು  ,ಹೊರಗಡೆ  ಗುಡುಗು  ಮಿಂಚಿ  ಇದೆ  ಅಷ್ಟೇ,ಇಲ್ಲೇ ಹತ್ತಿರ ಇರೋ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡ್ತಿವಿ   ಅಂತ  ಮೈಕ್ ನಲ್ಲಿ    ಹೇಳಿದಳು...
ಆದ್ರೆ  ಪ್ಲೇನ್  ಇನ್ನೂ  ಜೋರಾಗಿ  ಅಲುಗಾಡಲು  ಶುರು  ಆಯಿತು  ,ಎಲ್ಲರೂ  ಇದೆ  ತಮ್ಮ  ಜೀವನದ  ಕೊನೆ  ಕ್ಷಣ  ಅಂತ  ಹೆದರಿ  ಬಿಟ್ಟಿದ್ರು .

ನಾನ್  ಮಾತ್ರ  ಬಿಂದುನನ್ನೇ ನೋಡ್ತಿದ್ದೆ ,ಅವಳು  ನನ್ನನ್ನೇ   ನೋಡ್ತಾ  ಇದ್ದಾಳೆ .
ನನ್ನ  ಬೆನ್ನಿಗೆ  ಏನೋ  ತಾಗಿದಂತಾಯಿತು  ,ನನ್ನ  ಮುಂದೆ  ಪೂರ್ತಿ  ಕತ್ತಲು  .ಪೂರ್ತಿ  ನಿಶ್ಯಬ್ಧ ,
ಇನ್ನೂ  ಆ  ಪ್ಲೇನ್  ಅಲುಗಾಡುತ್ತಿದೆ ,ಜನರ  ಹೆದರಿಕೆ ,
ಯಾರೋ  ಕೂಗಿದರು "ಗಿರೀssssssssssssಶ್ !!!!"
"ಗಿರೀಶ್ ,ಎದ್ದೇಳು .ಇವತ್ತು  ಕೂಡ  ಆಫೀಸಿನಲ್ಲಿ  ಮಲಿಗಿದ್ಯ ,..........ನಂಗೆ  ಆ  ರಿಪೋರ್ಟ್  ಬೇಗ  ಬೇಕು "

ಸುತ್ತ ನೋಡಿದೆ ,ಪ್ಲೇನು ಇಲ್ಲ,ಬಿಂದುನೂ  ಇಲ್ಲ,ಆನ್ ಸೈಟು ಇಲ್ಲ
ನನ್ನ  ಮ್ಯಾನೇಜರನ  ದುರುಗುಟ್ಟಿಕೊಂಡು   ನೋಡುತ್ತಾ   ನಿಂತೇ ..ನಿನ್ನಿಂದನೆ   ಆ  ಪ್ಲೇನ್ ಕ್ರಾಶ್  ಆಗಿದ್ದು ಅಂತ ಅವನಿಗೆ ಬೈಯುತ್ತಾ... ..

ಇನ್ನೂ  ಗೊತ್ತಿಲ್ಲ ,ಪ್ರತಿ  ದಿನ ಮಧ್ಯಾನ   2-3 ಗಂಟೆಗೆ  ಯಾಕ್ ಇಗಾಗುತ್ತೆ  ಅಂತ ....

Friday, February 18, 2011

ಹೋಟೆಲಿನಲ್ಲಿ ಒಂದಿಷ್ಟು ದಿನ

 ಹೋಟೆಲಿನಲ್ಲಿ ,ಮ್ಯಾನೇಜರ್  ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ.

ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆಶ್ರಯ ಪಡೆಯುತ್ತಾನೆ.ತನಗೆ ಇಷ್ಟ ಇಲ್ಲದಿದ್ದರೂ ತಮ್ಮ ಮನೆಯ ಹಣಕಾಸಿನ ತೊಂದರೆ ಮತ್ತು ತನ್ನ ತಂದೆ ತಾಯಿಯ ಬಲವಂತದಿಂದಾಗಿ ತನ್ನ ನೆಂಟರ ಮನೆಯಲ್ಲಿ ಕೆಲಸ ಸಿಗುವವರೆಗೂ ಇರಲು ಒಪ್ಪಿಕೊಳ್ಳುತ್ತಾನೆ.
೨-೩ ತಿಂಗಳಾದರೂ ಎಲ್ಲೂ ಕೆಲಸ ಸಿಗದೇ ಬಹಳ ನಿರಾಸೆಗೊಂಡಿರುತ್ತಾನೆ.ಹಾಗೆ ಒಂದು ದಿನ ಇನ್ನೊಂದು ಕಂಪೆನಿಯಿಂದ ಸಂದರ್ಶನಕ್ಕೆ ಕರೆ ಬಂದಾಗ "ಏನಾದ್ರು ಮಾಡಿ ಇಲ್ಲಿ ಕೆಲಸ ಸಿಗಲೇಬೇಕು " ಅಂತ ಪಣ ತೊಟ್ಟು ಹೊರಡುತ್ತಾನೆ. ಅಷ್ಟೊತ್ತಿಗಾಗಲೇ ತಾನು ಇದ್ದ ಮನೆಯಲಿ ತುಂಬಾ ನೋವು ಅನುಭವಿಸಿರುತ್ತಾನೆ ,ಕಾರಣ ಆ ಮನೆಯಲ್ಲಿದ್ದ  ತನ್ನ ವಯಸ್ಸಿನ ಇನ್ನೊಬ್ಬ ಹುಡುಗ.ಅವನಿಗೆ ಈ ಹುಡುಗ ಆ ಮನೆಯಲ್ಲಿ ಇರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ,ಆದ್ದರಿಂದ  ಒಂದು ರೀತಿಯ ಮಾನಸಿಕ ಹಿಂಸೆ ಕೊಡುತ್ತಿರುತ್ತಾನೆ.ಅದರ ಜೊತೆಗೆ ತನ್ನ ಮನೆಯಲ್ಲಿ ದುಡ್ಡಿನ ಕಷ್ಟ.ಡಿಗ್ರಿ ಮುಗಿದರೂ  ತನ್ನ ಖರ್ಚಿಗೆ ಮನೆಯಲ್ಲಿ ಇನ್ನೂ ದುಡ್ಡು ಕೇಳಬೇಕೆ? ಎಂಬ ಪ್ರಶ್ನೆ.ಈ ಕಾರಣದಿಂದ ತುಂಬಾ ನೊಂದ ಈ ಹುಡುಗ ಆದಷ್ಟು ಬೇಗ ಎಲ್ಲಾದರೂ ಸರಿ ಎಂತಾದರು ಸರಿ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಅವನ ದುರಾದೃಷ್ಟ ಆ ಕಂಪೆನಿಯಲ್ಲಿ ಕೂಡ ಕೆಲಸ ಸಿಗುವುದಿಲ್ಲ.

ಸೂರ್ಯನ ಕಿರಣದಂತೆ ಮಿನುಗಬೇಕಾದಂತಹ ಈ "ಕಿರಣ " ಎಂಬ ಹುಡುಗ ಬಹಳ ಹತಾಶೆಗೊಳ್ಳುತ್ತಾನೆ.ಈ ಬೇಸರದಿಂದ ತನ್ನ ಊರಿನವರೆ ಆದ ತಮ್ಮ ಕುಟುಂಬದ  ಆಪ್ತರೊಬ್ಬರ ಆಫೀಸಿಗೆ ಹೋಗುತ್ತಾನೆ,ಅವರಿಗೆ ಈ ಹುಡುಗ ತುಂಬಾ ದಿನದಿಂದ ಕೆಲಸ ಹುಡುಕುತ್ತಿದ್ದ ವಿಷಯ ಗೊತ್ತಿದ್ದರಿಂದ,ಆ ಹುಡುಗನ ಮನೆಯ ಪರಿಸ್ಥಿತಿ ತಿಳಿದಿದ್ದರಿಂದ ಕಿರಣನನ್ನು ತಮ್ಮ ಆಫೀಸಿನ ಬಳಿಯ ಒಂದು ಹೋಟೆಲಿನಲ್ಲಿ ಕೆಲಸ ಕೊಡಿಸಿದರು.ಹೇಗೂ ಬೇರೆ ಯಾವುದಾದರು ಕಂಪೆನಿಯಲ್ಲಿ ಸಿಗುವವರೆಗೂ ಇಲ್ಲೇ ಇರು ,ಮನೆಯಲ್ಲಿ ದುಡ್ಡು ಕೇಳುವುದು ತಪ್ಪುತ್ತದೆ ,ನಿನಗೂ ಖರ್ಚಿಗೆ ಆಗುತ್ತೆ ಅಂತ ಹೇಳಿ ಈ ಹುಡುಗನನ್ನು ಆ ಹೋಟೆಲಿನ ಓನರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ.ಅವರೂ ಕೂಡ ಇವರ ಮಾತಿಗೆ ಸಮ್ಮತಿಸಿ  ಆ ಹುಡುಗನಿಗೆ ತನ್ನ ಲಗೆಜನ್ನು ಮಾರನೆಯ ದಿನ ತಂದು ಕೆಲಸಕ್ಕೆ ಸೇರಿಕೊಳ್ಳಲು ಹೇಳಿ ಕಳುಹಿಸುತ್ತಾರೆ.

ಡಿಗ್ರಿ ಮುಗಿಸಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವುದು ಅಷ್ಟೊಂದು ತರವಲ್ಲ ಎನಿಸಿತಾದರು ಒಲ್ಲದ ಮನಸಿನಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡ ಕಿರಣನಿಗೆ ಮುಂದೇನು ಮಾಡುವುದು ಎಂದು ಬಹಳ ಕಾಡ ತೊಡಗಿತು.ಆದರು ಮಾರನೆಯ ದಿನ ತಾನು ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂಬ ವಿಷಯವನ್ನು ಯಾರಿಗೂ ತಿಳಿಸದೇ ,ತಾನು ಇದ್ದ ನೆಂಟರ ಮನೆಯಲ್ಲಿ ಊರಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ,ತನ್ನ ತಂದೆ ತಾಯಿಗೂ ಇದನ್ನು ಹೇಳದೆ ತನ್ನ ಪಾಲಿಗೆ ನರಕವಾದ  ಹೋಟೆಲ್ ಎಂಬ ಲೋಕಕ್ಕೆ ಬರುತ್ತಾನೆ.ತನ್ನ ಸ್ವಾಭಿಮಾನಕ್ಕೆ ದಕ್ಕೆ ಬರದಹಾಗೆ ಇರುತ್ತಾನೆ.

ಅಲ್ಲಿ ಅವ್ನ ಕೆಲಸ ಬಿಲ್ ಮಾಡುವುದು ಮತ್ತು ದಿನದ ಕೊನೆಯಲ್ಲಿ ಅದರ ಲೆಕ್ಕವನ್ನು ತೋರಿಸುವುದು. ಮೊದಲ ದಿನ ಆ ಬಿಲ್ಲಿಂಗ್ ಸಾಫ್ಟ್ವೇರ್ ಬಗ್ಗೆ ಅಲ್ಲಿದ್ದ ಒಬ್ಬ ವೇಟರ್ ಹತ್ತಿರ ತಿಳಿದುಕೊಂಡ ಈ ಕಿರಣನಿಗೆ ಏನೋ ಒಂದು ರೀತಿಯ ಚಂಚಲತೆ ಇನ್ನೂ ಕಾಡುತಿತ್ತು.ಒಂದೆರಡು ದಿನ ಹೀಗೆ ಬಿಲ್ಲಿಂಗ್ ಮಾಡುತ್ತಾ ರಾತ್ರಿ ಅದರ ಲೆಕ್ಕವನ್ನು ಅಚ್ಚುಕಟ್ಟಾಗಿ ತೋರಿಸುತ್ತಾನೆ.೨ ದಿನ ಆದರು ಮನೆಯಲ್ಲಿ ತಾನು ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಸಿಲ್ಲ.ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಗೊಂದಲ ಮನಸಿನಲ್ಲಿ.ಹೀಗೆಲ್ಲ ಇರುವಾಗ ಆ ಹುಡುಗನಿಗೆ ನಿದ್ರೆ ಎಲ್ಲಿಂದ ಬರಬೇಕು.ಆಗೂ ಹೇಗೂ ಎರಡು ದಿನ ಕಳೆಯುತ್ತಾನೆ.
ನಂತರ ಶುರು ಆಯಿತು ಮ್ಯಾನೇಜರ್ ಮತ್ತು ಓನರ್ ನಿಂದ  ಕಿರಿಕಿರಿ.

"ನಿನ್ನದು ಬರಿ ಬಿಲ್ ಮಾಡುವುದಷ್ಟೇ ಕೆಲಸ ಅಲ್ಲ ,ಹೋಗಿ ಗಿರಾಕಿಗಳ ಹತ್ತಿರ ಏನೇನು ಬೇಕು ಅಂತ ಆರ್ಡರ್ ತಗೊಂಡು ವೇಟರ್ ಗೆ ನೀನೆ ಚೀಟಿ ಕೊಡಬೇಕು " ಅಂತ ದಬಾಯಿಸುವುದಕ್ಕೆ ಶುರು ಮಾಡುತ್ತಾರೆ. ಮೂರನೆ  ದಿನ ಸ್ವಲ್ಪ ಬದಲಾವಣೆ ಆಯಿತು ಅವನ ಕೆಲಸದಲ್ಲಿ,ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು.ಹಾಗೆ ಹಿಂಸೆಯೂ ಆಗುತಿತ್ತು ಆ  ಹುಡುಗನಿಗೆ.

ಇನ್ನೇನ್ ಮಾಡೋದು,ಗ್ರಹಚಾರ ಕೆಟ್ಟಾಗ ಇಂಥ ಪರಿಸ್ಥಿತಿ ಅನುಭವಿಸಬೇಕು ಅಂತ ಅದಕ್ಕೂ ಒಪ್ಪಿಕೊಂಡು ಆರ್ಡರ್ ತೆಗೆದುಕೊಳ್ಳಲು ಶುರು ಮಾಡುತ್ತಾನೆ ಅವನು .
***********************************************

ಈ ಕಿರಿಕಿರಿಯ ಒಂದೆರಡು ದಿನಗಳ ನಂತರ ಒಂದು ಭಾನುವಾರ  ಅಕಸ್ಮಾತ್ತಾಗಿ ತನ್ನ ಕಾಲೇಜಿನ ಇಬ್ಬರು ಗೆಳೆಯರು ಆ ಹೋಟೆಲ್ಲಿಗೆ ಕಾಫಿ ಕುಡಿಯಲು ಬರುತ್ತಾರೆ.ಅವರೂ ಕೂಡ ಈ ಹುಡುಗನ ಹಾಗೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.ಅವನ ಅದೃಷ್ಟಕ್ಕೆ ಆ ಸಮಯದಲ್ಲಿ ಅವನು ಕೌಂಟರ್ ಬಳಿ ಇರಲಿಲ್ಲ.

ಆ ಇಬ್ಬರು ಸ್ನೇಹಿತರು ಇವನನ್ನು ನೋಡಿದ್ದೇ ತಡ "ಏ ಏನ್ ಮಚ್ಚಾ, ಏನ್ ಇಲ್ಲಿ ?ಏನ್ ಸಮಾಚಾರ ?ಹೇಗಿದೆ ಜೀವನ ?"ಅಂತ ಮಾತಿಗಿಳಿಯುತ್ತಾರೆ.ಪಾಪ ಅವರಿದೆ ಏನ್ ಗೊತ್ತು ಇವನ ಸ್ಥಿತಿ.

ಆಗ ಕಿರಣನ ಮನಸಿನಲ್ಲಿ  ಆದಂತಹ ಗೊಂದಲ ಒಂದೆರಡಲ್ಲ.ಮೊದಲನೆಯದು ತಾನು ಇಲ್ಲಿ ಕೆಲಸ ಮಾಡುತ್ತಿರುವ ವಿಷಯ ಅವರಿಬ್ಬರಿಗೂ ತಿಳಿಯಕೂಡದು,ಕಾರಣ ತನ್ನ ವಿಧ್ಯಾಬ್ಯಾಸಕ್ಕೆ ತಕ್ಕ ಕೆಲಸ ಇದಲ್ಲ ಹಾಗು ಅವರ ಮುಂದೆ ತನಗೆ ಅವಮಾನ ಆಗಬಹುದೆಂಬ ಯೋಚನೆ.

ಎರಡನೆಯದು,ತಾನು ಇವರ ಜೊತೆ ಮಾತನಾಡುತ್ತ ನಿಂತಿರಬೇಕಾದರೆ ಯಾರಾದರು ಇವನನ್ನು ಕರೆದರೆ ಅವರಿಗೆ ಇವನ ಮೇಲೆ ಸಂದೇಹ ಬರುಬಹುದೆಂಬ ಕಸಿವಿಸಿ.

ಮೂರನೆಯದು,ಇವರಿಬ್ಬರನ್ನು ಆದಷ್ಟು ಬೇಗ ಕಳುಹಿಸಬೇಕು.
ಇಷ್ಟರ ನಡುವೆ ಅವನು ಅವರಿಬ್ಬರಿಗೆ "ಇಲ್ಲೇ ಪಕ್ಕದಲ್ಲೇ ನನ್ನ ನೆಂಟರೊಬ್ಬರ ಆಫೀಸ್ ಇದೆ.ಅವರನ್ನ ಮೀಟ್ ಮಾಡೋಕ್ಕೆ ಬಂದಿದ್ದೆ.ಹಾಗೆ ಕಾಫಿ ಕುಡಿಯಕ್ಕೆ ಬಂದಿದ್ದೆ "ಅಂತ ಸಮಜಾಯಿಸಿ ನೀಡಿ,ಮೂರು ಜನ ಒಂದು ಟೇಬಲಿನಲ್ಲಿ ಕೂರುತ್ತಾರೆ.

ಬಂದಿರುವ ಗಿರಾಕಿಗಳ ಹತ್ತಿರ ತಾನು ಆರ್ಡರ್ ತಗೋಬೇಕಿತ್ತು,ಆದರೆ ತಾನೇ ದೊಡ್ಡ ಗಿರಾಕಿಯ ಥರಾ ತನ್ನ ಸ್ನೇಹಿತರ ಜೊತೆ ಕೂತಿದ್ದಾನೆ ಅವನು .ನಂತರ ಅಲ್ಲಿದ್ದ ಒಬ್ಬ ವೇಟರ್ ಬಂದು ಕಕ್ಕಾಬಿಕ್ಕಿಯಾಗಿ ನೋಡತೋಡಗುತ್ತಾನೆ .ಅದೇ ಸಮಯದಲ್ಲಿ ಕಿರಣ ಅವರಿಬ್ಬರಿಗೂ ಗೊತ್ತಾಗದ ಹಾಗೆ ಆ ವೇಟರ್ ಗೆ ಕಣ್ಣಿನಲ್ಲಿ ಸಂಜ್ಞೆ ಮಾಡಿ ,ಸ್ವಲ್ಪ ಹೊತ್ತು ಸುಮ್ಮನಿರುವಂತೆ ಹೇಳಿದ್ದಾಗ,ಆ ವೇಟರ್ ಕೂಡ ಅವರಿಬ್ಬರಿಗೂ ಗೊತ್ತಾಗದ ಹಾಗೆ ಒಪ್ಪಿಕೊಳ್ಳುತ್ತಾನೆ. ತನ್ನ ಗೆಳೆಯರು ಆರ್ಡರ್ ಮಾಡಿದ ಕಾಫಿ ಮತ್ತು ತಾನು ತೆಗೆಯಬೇಕಿದ್ದ  ಅದರ ಬಿಲ್ಲನ್ನು ಆ ವೇಟರ್ ತಂದು ಕೊಡುತ್ತಾನೆ.

ಅದರ ಜೊತೆಗೆ ಇವನು ಅವರಿಬ್ಬರ ಸಂಗಡ ಅದು ಇದು ವಿಷಯ ಮಾತಾಡುತ್ತಾನೆ,ಆದಾರು ಮನಸಿನಲ್ಲಿ ಹೆದರಿಕೆ ,"ಎಲ್ಲಿ ಮ್ಯಾನೇಜರ್ ಅಥವಾ ಓನರ್  ಬಂದು ತಾನು ಇಲ್ಲಿ ಕೂತಿರುವುದನ್ನು ನೋಡುತ್ತಾರೋ ?"ಎಂಬ ಗುಮಾನಿ.ಆ  ವೇಟರ್ ಗೆ ಬೇಕಾದರೆ ಹೇಗೋ ಇವರು ತನ್ನ ಸ್ನೇಹಿತರು ಅಂತ ಹೇಳಿ ಸಮಾಧನ ಮಾಡಿದ್ದಾಗಿದೆ,ಇವನ ಕಡೆ ಇಂದ ಏನೂ ತೊಂದರೆ ಇಲ್ಲ ಎಂಬ ಸಮಾಧಾನ.

ಸ್ವಲ್ಪ ಸಮಯದ ನಂತರ ಅವರಿಬ್ಬರೂ ಹೊರಟು ಹೋಗುತ್ತಾರೆ. ಹೇಗೋ ಅವರಿಬ್ಬರಿಗೂ ತಾನು ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ಬರಲಿಲ್ಲ ಎಂಬ ಸಮಾಧಾನದಿಂದ ಇದ್ದರೆ,ಆ ಮ್ಯಾನೇಜರ್ ಮತ್ತು ಓನರ್ ಇಬ್ಬರೂ ಬಂದು ಆ  ಹುಡುಗನ ಮೇಲೆ ರೇಗಾಡುತ್ತಾರೆ.

"ನೆಟ್ಟಗೆ ಕೆಲಸ ಮಾಡೋದು ಬಿಟ್ಟು, ಫ್ರೆಂಡ್ಸ್ ಗಳ ಜೊತೆ ಹರಟೆ ಹೊಡಿತಾ ಕೂರ್ತಿಯ? ಎಷ್ಟೊತ್ತು ಮಾತಾಡೋದು  ?ಸ್ವಲ್ಪ ಹೊತ್ತು ಮಾತಾಡಿ ಕಳಿಸ್ತಾರೆ ,ಅದೂ ಬಿಟ್ಟು ಇಷ್ಟೊತ್ತ  ಮಾತಾಡೋದು ?ಅದೂ ಕೆಲಸ ಬಿಟ್ಟು "
******************************************
ಸದ್ಯ ತನ್ನ ಸ್ನೇಹಿತರ ಮುಂದೆ ಈ ಮಾತುಗಳನ್ನು ಹೇಳಲಿಲ್ಲವಲ್ಲ ಅಂತ ಸಮಾಧಾನದಿಂದ ಒಂದು ಕಡೆ ಆದ್ರೆ ,ತನಗೇನು ಬಂದಿದೆ,ಇವರ ಹತ್ತಿರ ಈ ರೀತಿ ಅನ್ನಿಸಿಕೊಳ್ಳಬೇಕು ಅಂತ  ಬೇಜಾರು ಆದರೂ ಕೂಡ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಇನ್ನೂ ಏನೇನು ಅನುಭವಿಸಬೇಕು ಈ ಜನರ ನಡುವೆ ಅಂತ ಚಿಂತಿಸುತ್ತಾ ಆ ದಿನವನ್ನು ಹೇಗೋ ಕಳೆದು ಮಲಗಲು ಹೋಗುತ್ತಾನೆ.ಆದ್ರೆ ನಿದ್ರಾ ದೇವಿ ಒಲಿಯುವುದೇ ಇಲ್ಲ.ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದ  ಸೂರ್ಯ ರಶ್ಮಿಯಂತೆ ಹೊಳೆಯಬೇಕಾದ ಈ ಕಿರಣನ ಜೀವನದಲ್ಲಿ ಕಪ್ಪು ಕಗ್ಗತ್ತಲು ಆವರಿಸಿದಂತೆ ಭಾಸವಾಯಿತು ಅವನಿಗೆ.   ಇಷ್ಟರ ನಡುವೆ ತನಗೆ ಇಂಥ ಜೀವನ ಬೇಡವೇ ಬೇಡ ಎಂದು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ..ಆ  ಯುವಕ.ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ತಟ್ಟನೆ ತಾನು ಹೋಟೆಲಿನಲ್ಲಿ ಇರುವ ವಿಷಯವನ್ನು ತನ್ನ ತಾಯಿಗೆ ಹೇಳಲು ತಿಳಿಸಲು ಯೋಚಿಸಿ ತನ್ನ ಮನೆಗೆ ಫೋನ್ ಮಾಡಲು ತನ್ನ ಮೊಬೈಲನ್ನು ತೆಗೆದುಕೊಂಡು ನೋಡಿದಾಗ ಸಮಯ ಮಧ್ಯ ರಾತ್ರಿ ೨ ಗಂಟೆ . ಇಷ್ಟೊತ್ತಿನಲ್ಲಿ ಫೋನ್ ಮಾಡಿದರೆ ತನ್ನ ತಂದೆ ತಾಯಿ ಗಾಬರಿಗೊಳ್ಳುತ್ತಾರೆ ಎಂದು ಸುಮ್ಮನಾಗಿ ಸುಮ್ಮನೆ ನಿದ್ದೆ ಮಾಡದೆ  ಹಾಗೆ ಏನೇನೋ ಯೋಚಿಸುತ್ತ  ಕೂರುತ್ತಾನೆ.
****************************************
ಅಲ್ಲಿಗೆ ಬಂದು ಒಂದು ವಾರ ಕೆಳೆದಿದೆಯಷ್ಟೇ ನನಗೆ ಈ ರೀತಿ ಬೇಸರವಾಗಿರಬೇಕಾದರೆ ಇಲ್ಲಿ ಇರುವ ಬೇರೆ ಕೆಲಸಗಾರರು ಹೇಗೆ ಜೀವನ ಮಾಡುತ್ತಿರಬೇಕು ಎಂದು ಯೋಚಿಸುತ್ತ ಅಳುತ್ತ ಕೂತಿದ್ದಾನೆ.ಆದರೂ ಅವನ ಬಗ್ಗೆ ವಿಚಾರಿಸಲು ಅಲ್ಲಿ ತನ್ನವರು ಯಾರು ಅಂತ ಇದ್ದಾರೆ.ತನ್ನ ಕಷ್ಟ ಹೇಳಿಕೊಳ್ಳಲು ಯಾರು ಇಲ್ಲ.ತನ್ನ  ಸ್ನೇಹಿತರಿಗೆ  ತಾನು ತನ್ನ ನೆಂಟರ ಮನೆಯಲ್ಲಿ ಇರುವುದಾಗಿ ,ತನ್ನ ಮನೆಯವರಿಗೆ ತಾನು ತನ್ನ ಸ್ನೇಹಿತರ ಜೊತೆ ಇರುವುದಾಗಿ ಹೇಳಿಕೊಂಡು ತನ್ನ ಮೇಲೆ ಬೇಸರ ಪಟ್ಟುಕೊಂಡು ಕೂತಿರುತ್ತಾನೆ.ತಾನು ತನ್ನ ತಂದೆ  ತಾಯಿಗೆ ಈ ವಿಷಯವನ್ನು ಹೇಳದೆ ಮೋಸ ಮಾಡುತಿದ್ದೆನೆಂಬ ಯೋಚನೆ.

ಇಷ್ಟೆಲ್ಲಾ ಯೋಚಿಸುತ್ತ ಕುತಿರಬೇಕಾದರೆ ಆಗಲೇ ಸೂರ್ಯೋದಯ ಆಗಿತ್ತು.ಇನ್ನೇನು ೧೧ ಗಂಟೆಗೆ ಮತ್ತೆ ಕೆಲ್ಸಕ್ಕೆ ಹೋಗಬೇಕು ಅಂತ ಯೋಚಿಸುತ್ತ ತನ್ನ ತಾಯಿಗೆ ಫೋನ್ ಮಾಡಿ ಮಾತಾಡದೆ ಸುಮ್ಮನೆ ಅಳುತ್ತಿದ್ದಾನೆ, ಅತ್ತ ಹೆತ್ತ  ಕರುಳಿಗೆ ತನ್ನ ಮಗ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿ ಅಳುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆ.ಅವನ ತಾಯಿಯ ಗೋಳು ನೋಡಿ ಅವನ ತಂದೆ ಮಾತಾಡಲು ಬಯಸಿ ಫೋನ್ ತೆಗೆದುಕೊಂಡರೆ ಇನ್ನೂ ಅಳುತ್ತಿದ್ದಾನೆ.ಆ ತಂದೆಗೂ ಕೂಡ ತಮ್ಮ ಒಬ್ಬನೇ ಮಗ ಹೀಗೆ ಅಳುತ್ತಿರುವುದಕ್ಕೆ ಕಾರಣ ಗೊತ್ತಿಲ್ಲದೇ ಅವರೂ ಯೋಚನಾ ಮಗ್ಧರಾಗುತ್ತಾರೆ.ವಿಷಯ ಗೊತ್ತಿಲ್ಲದೇ ಏನು ಅಂತ ಸಮಾಧಾನ ಮಾಡುವುದು ಎಂದು ಅವರಿಗೂ ಗೊತ್ತಿಲ್ಲದೇ ಸುಮ್ಮನಿರುತ್ತಾರೆ.
ನಂತರ ಆ ಹುಡುಗ ಆವರನ್ನು ನೋಡಬೇಕು ಅಂತ ಅನ್ನಿಸುತ್ತಿದೆ ಅಂತ ಹೇಳಿ ಮತ್ತೆ ಸತ್ಯವನ್ನು ಮುಚ್ಚಿಡುತ್ತಾನೆ.ಈ ಸುಳ್ಳಿನಿಂದ ಇಷ್ಟೇ ಸಮಸ್ಯೆ ಎಂಬ ಸುಳ್ಳು ನಂಬಿಕೆಯಿಂದ ಅವನ ಹೆತ್ತವರು ಸಮಾಧಾನಗೊಳ್ಳುತ್ತಾರೆ.

************************************
ನಂತರ ಮತ್ತೆ ಶುರು ಆಗುತ್ತದೆ ಅವನಿಗೆ ಕಿರಿಕಿರಿ.ಹೀಗೆ ಒಂದೆರಡು ದಿನ ಕಳೆದ ಮೇಲೆ ಅವನಿಗೆ ಪರಿಚಯದ ಹುಡುಗಿಯೊಬ್ಬಳು ಹೋಟೆಲ್ಲಿಗೆ ತನ್ನ ಸ್ನೇಹಿತರೊಡನೆ ಬರುತ್ತಾಳೆ.ಮತ್ತಷ್ಟು ಕಕ್ಕಾಬಿಕ್ಕಿಯಾದ ಇವನು ಏನು ಮಾಡಲು ತೋಚದೆ ಆ ಕಡೆ ಈ ಕಡೆ ಹೊದಾದಳು ಶುರು ಮಾಡುತ್ತಾನೆ.ಇವನನ್ನು ಗಮನಿಸಿದ ಆ ಹುಡುಗಿ ಇವನನ್ನು ಮಾತಾಡಿಸಿದಾಗ ಹೀಗೆ ಕಾಫಿ ಕುಡಿಯಲು ಬಂದಿದ್ದಾಗಿಯೂ,ತಾನು ಬೇರೆಡೆಗೆ ಹೋಗಬೇಕೆಂದು ಹೇಳಿ ತಾನು ಮಲಗುತ್ತಿದ್ದ ಕೋಣೆಗೆ ಹೋಗುತ್ತಾನೆ.
ಇದನ್ನು ಗಮನಿಸಿದ ಹೋಟೆಲಿನಲ್ಲಿ  ಬಹಳ ದಿನದಿಂದ ಅಲ್ಲಿ ಕೆಲಸಮಾಡುತ್ತಿದ್ದ ಕುಳ್ಳ ಕೇಶವ ಅವನಲ್ಲಿಗೆ ಬಂದು "ಕೆಲಸ ಮಾಡೋದು ಬಿಟ್ಟು ಆರಾಮಾಗಿ ಇಲ್ಲಿ ಬಂದು ಕೂತಿದ್ಡಿಯ " ಅಂತ ರೇಗಾಡುತ್ತಾನೆ.
"ಗಿರಾಕಿಗಳು ಜಾಸ್ತಿ ಇರಲಿಲ್ಲವಲ್ಲ,ಹಾಗೆ ತಲೆ ನೋಯುತ್ತಿತ್ತು,ಅದಕ್ಕೆ ಬಂದೆ ಅಷ್ಟೇ "ಅಂತ ಸಮಾಧಾನದಿಂದ ,ತಲೆ ತಗ್ಗಿಸಿಕೊಂಡು ಏನೋ ತಪ್ಪು ಮಾಡಿರುವನ ತರ ಹೇಳುತ್ತಾನೆ.
ಅವನ ಮೆದು ಧ್ವನಿಯನ್ನು,ಅವನ ಗಂಭೀರತೆಯನ್ನು ಉಪಯೋಗಿಸಿಕೊಂಡ ಕೇಶವ ಸುಮ್ಮನೆ ವಿನಾ ಕಾರಣ ಅವನ ಮೇಲೆ ರೇಗುತ್ತಾನೆ.ಇದು ಒಂದು ರೀತಿಯಲ್ಲಿ ತಾನು ಇಲ್ಲಿ ದೊಡ್ಡ ಮನುಷ್ಯ ಎಂದು ತೋರುವ ಹಾಗಿತ್ತು.
ಕೊನೆಗೆ "ಏನೂ ಕೆಲಸ ಇಲ್ಲ ಅಂದ್ರೆ ಆ ಸ್ವೀಟ್ ಶೋ ಕೇಸ್ ಧೂಳು ಹಿಡಿದಿದೆ ,ಅದನ್ನ ಒರಸು ಹೋಗು "ಅಂತ ಹೇಳಿ ಹೋಗುತ್ತಾನೆ.
"ಸರಿ ಸ್ವಲ್ಪ ಹೊತ್ತು ಬಿಟ್ಟು ಹೋಗುತ್ತೀನಿ "ಅಂತ ಗೊಣಗುತ್ತಾನೆ ಕಿರಣ.
ಆ ಹುಡುಗಿಯರು ಹೋಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಸ್ವಲ್ಪ ಸಮಯ ಬಿಟ್ಟು ತನ್ನ ಕೆಲಸದ ಜಾಗಕ್ಕೆ ಬರುತ್ತಾನೆ.ಸದ್ಯ ಅವರೂ ಹೊರಟು ಹೋಗಿರುವುದನ್ನು ಗಮನಿಸಿ ಸ್ವಲ್ಪ ಸಮಾಧಾನ ಗೊಳ್ಳುತ್ತಾನೆ.ನಂತರ ಅವನು ವಹಿಸಿದ್ದ ಕೆಲಸ ಮುಗಿಸಿ ಅವನಿಗೆ ತೋರಿಸುತ್ತಾನೆ.
*********************************
ಇನ್ನೊಂದು ದಿನ ಒಬ್ಬ ದಡೂತಿ ಮನುಷ್ಯ ಇನ್ನೊಬ್ಬ ಹೆಂಗಸಿನ ಜೊತೆ ಬಂದು ಕೂರುತ್ತಾನೆ.ಆವರನ್ನು ಗಮನಿಸಿದ ವೇಟರ್ ಒಬ್ಬ "ಈ ವಯ್ಯ ಒಂದೊಂದ್ ದಿನ ಒಂದೊಂದ್ ಹುಡುಗಿ ಜೊತೆ ಬರ್ತಾನಪ್ಪ  "ಅಂದ.
ಆಗ ಇನ್ನೊಬ್ಬ ವೇಟರ್ "ಲೇ ಅವನು ಎಷ್ಟ್ ಜನದ ಜೊತೆ ಬಂದ್ರೆ ನಿನಗೆನ್ ಕಷ್ಟ ,ಸುಮ್ನೆ ಹೋಗಿ ಕೆಲಸ ನೋಡು "ಅಂತ ಆ ವೇಟರ್ ಗೆ ಹೇಳುತ್ತಾನೆ.
ಇವನು ತನ್ನ ಮಾಮೂಲಿ ಕೆಲಸದಂತೆ ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಂಡು ಬರುತ್ತಾನೆ.ಆ ಹುಡುಗನ  ದುರದೃಷ್ಟ ಅವನು ಆರ್ಡರ್ ಮಾಡಿದವುಗಳನ್ನು ವೇಟರ್ ಸ್ವಲ್ಪ ಲೇಟಾಗಿ ತರುತ್ತಾನೆ.ಇದಕ್ಕೆ ಕೋಪಗೊಂಡ ಆ ದಡೂತಿ "ಲೇ ***ಮಗನೆ ಎಷ್ಟ್ ಹೊತ್ತು ಕಾಯಬೇಕು ಇಲ್ಲಿ "ಅಂತ ಪಾಪದ ಹುಡುಗನ  ಕೊರಳ ಪಟ್ಟಿಗೆ ಕೈ ಹಾಕಿ ಹರಿಹಾಯುತ್ತಾನೆ.ಆಗ ಆ ಹುಡುಗ "ಸರ್ ನಾನೇನು ಮಾಡ್ಲಿ,ಸ್ವಲ್ಪ ಹೊತ್ತು ಇರ್ರಿ ,ತರುತ್ತಾರೆ "ಅಂತ ಹೇಳಿದ್ರು ,ಅವನು ಇನ್ನೂ ಕೈಯನ್ನು ಅವನ ಶರ್ಟ್ ಇಂದ ತೆಗೆದಿರುವುದಿಲ್ಲ.
ಅಷ್ಟೊತ್ತಿಗೆ ಅಲ್ಲಿದ್ದ ಎಲ್ಲಾ ವೇಟರ್ ಗಳು ಬಂದು ಅವನನ್ನು ಬಿಡಿಸುತ್ತಾರೆ.
ಆದರೂ ತನ್ನ ದರ್ಪವನ್ನು ಬಿಟ್ಟಿರಲಿಲ್ಲ  ಆ ದಡೂತಿ ದೇಹದವನು.
ಆಗ ಸಭ್ಯ ಹುಡುಗ "ಸರ್ ,ನಮಗೂ ಸ್ವಾಬಿಮನ ಅನ್ನೋದು ಇದೆ,ಸ್ವಲ್ಪ ಮಾತಾಡಬೇಕಾದರೆ ನಾಲಗೆ ಹಿಡಿತದಲ್ಲಿರಲಿ" ಅಂತ ಹೇಳುತ್ತಾನೆ.
ಇನ್ನಷ್ಟು ಕೋಪಗೊಂಡ ಅವನು "ನೀನ್ ಯಾವನೋ ಅದನ್ನ ಹೇಳಕ್ಕೆ?"ಅಂತ ಹೇಳಿ ಮತ್ತೆ ಅವನ ಮೇಲೆ ಕೈ ಮಾಡುತ್ತಾನೆ.
ಕೋಪಗೊಂಡ ಆ ಹುಡುಗ  "ನನ್ ಮಗನೆ ನಿನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೆ "ಅಂತ ಹೇಳಿ ತನ್ನ ಕೈ ಮುಷ್ಠಿ ಗಟ್ಟಿಗೊಳಿಸಿ ಅವನ ಮುಖಕ್ಕೆ ಒಡೆಯುತ್ತಾನೆ.
ಅಷ್ಟೊತ್ತಿಗೆ ಅಲ್ಲಿಗೆ ಬಂದ ಓನರ್ ಏನು ಮಾತಾಡದೆ ಸುಮ್ಮನಿರುತ್ತಾನೆ. ಅವನ ವಿರುದ್ಧ ಮಾತಾಡಿದರೆ ಗಿರಾಕಿ ಕಳೆದುಕೊಳ್ಳುತ್ತೀನಿ ಎಂಬ ಭಯ,ಆದರೆ ಕೊನೆಗ ಓನರ್ ಕೂಡ ಈ ಹುಡುಗನಿಗೆ "ಗಿರಾಕಿಗಳ  ಜೊತೆ ಹೇಗೆ  ಇರಬೇಕು ಅಂತ ಗೊತ್ತಾಗಲ್ವ ನಿಂಗೆ "ಅಂತ ಬೈಯುತ್ತಾನೆ.
"ಅವನೇ ನೆಟ್ಟಗೆ ಮಾತಾಡಿದ್ರೆ ನಾನ್ಯಾಕೆ ಅವನ ಜೊತೆ ಈ ಥರ ಮಾತಾಡಲಿ "ಅಂತ ಸಮರ್ಥಿಸಿಕೊಂದರೂ ಇವನದೇ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ.
ಇದರಿಂದ ಬೇಸರಗೊಂಡ ಈ ಹುಡುಗ ಮತ್ತೆ ತನ್ನ ಕೊನೆಗೇ ಹೋಗಿ ಅಳುತ್ತ ಮಲಗುತ್ತಾನೆ.ಮತ್ತೆ ಅದೇ ಯೋಚನೆಗಳು,ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಭ್ರಮೆ.ತಂದೆ ತಾಯಿಗೆ  ಮೋಸ ಮಾಡುತ್ತಿದ್ದಿನೆಂಬ ಆತಂಕ.ಕೊನೆಗೂ ತಾನು ಇಲ್ಲಿ ಇರುವುದು ಸರಿ ಇಲ್ಲ ಎಂದು ಮಾರನೆಯೇ ದಿನ ಬೆಳಗ್ಗೆ ಅಲ್ಲಿಂದ ಹೊರಡಲು ತೀರ್ಮಾನಿಸುತ್ತಾನೆ.ಆದರೆ ಎಲ್ಲಿಗೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ.
 ************************************
ಬೆಳಗ್ಗೆ ಎದ್ದವನೇ,ಇನ್ನೂ ಯಾವ ಕೆಲಸಗಾರರು ಎದ್ದಿಲ್ಲದಿರುವುದನ್ನು ಪರೀಕ್ಷಿಸಿ ತನ್ನ ಲಗೇಜನ್ನು ಎತ್ತಿ ಕೊಂಡು ಹೊರಡುತ್ತಾನೆ.ಕೊನೆಗೇ ಮನೆಗೆ ವಾಪಸ್ಸು ಹೋಗುವುದು ಒಳ್ಳೆಯದು ಎಂದು ಮನೆಗೆ ಹೋಗುತ್ತಾನೆ.





     

Monday, February 7, 2011

ಬೇಜವಾಬ್ದಾರಿತನದ ಪರಾಕಾಷ್ಠೆ


ಕೆಲವು ದಿನಗಳ ಹಿಂದೆ ನಡೆದತಂತಹ ಸನ್ನಿವೇಶ .
ಬಿಸಿ ಬಿಸಿ ಮುದ್ದೆ ,ಸೊಪ್ಪಿನ ಸಾರು ,ಅನ್ನ  ಉಂಡು ನನ್ನ ರೂಮಿನ ಕಡೆ ಹೋಗುತ್ತಿದಾಗ ಸಮಯ ಸುಮಾರು ೯.೩೦.ಸ್ವಲ್ಪ ಚಳಿ ಇತ್ತಾದರೂ ಬೀಸುತ್ತಿದ್ದ ತಂಗಾಳಿ ಬಹಳ ಮುದ ನೀಡುತ್ತಿತ್ತು .ಆದರೆ ಮನಸ್ಸು ಮಾತ್ರ ಬಹಳ ಚಂಚಲತೆಯಿಂದ ಕೂಡಿತ್ತು .ಬೆಳಗ್ಗೆ ಎದ್ದು ಏನು ಮಾಡುವುದು ? ನಾಳೆಯಾದರು ಏನಾದ್ರು ಒಳ್ಳೆ ಕೆಲಸ ಆಗುತ್ತಾ? ಹೀಗೆ ಹತ್ತು ಹಲವಾರು ಯೋಚನೆಗಳೊಂದಿಗೆ ,ಮರು ದಿನಕ್ಕೆ ಯೋಜನೆಗಳನ್ನು ಹಾಕುತ್ತಿದ್ದ ವೇಳೆಗೆ ನಮ್ಮ ರೂಮಿನ ಹತ್ತಿರದ ಕ್ರಾಸ್ ಬಳಿ ಬಂದಿದ್ದೆ.


ಆ ಕ್ರಾಸ್ ಬಳಿ ಇದ್ದ ಗಣಪನಿಗೊಂದು ಸಲಾಂ ಹಾಕಿ ಆ ತಿರುವಿನಲ್ಲಿ ತಿರುಗಿದ್ದೇ ಕ್ಷಣ ಹತ್ತಾರು ಹೆಂಗಸರು ಮತ್ತು ಆಗೊಂದು ಈಗೊಂದು ಗಂಡಸರ ಧ್ವನಿ ಯಲ್ಲಿ ಕೂಗಾಟ ಕೇಳುತ್ತಿತ್ತು .


ಒಹ್, ನಮ್ಮ ಬೀದಿಯಲ್ಲಿ  ಯಾರದೋ ಮನೆಯಲ್ಲಿ ಏನೋ ಆಗಿರಬೇಕು ಅಂದು ಕೊಳ್ಳುತ್ತಾ ,ಯಾರಿಗದ್ರು ಏನಾದ್ರು ಆಯ್ತಾ ಅಂತ ಯೋಚಿಸುತ್ತ ಮುಂದೆ ಬಂದು ನೋಡಿದ್ರೆ ಅಷ್ಟೂ ಜನ ನಮ್ಮ ಬಿಲ್ಡಿಂಗಿನ ಮುಂದೆಯೇ ನಿಂತಿದ್ದಾರೆ.


ನಮ್ಮ ಬಿಲ್ದಿಂಗಿನಲ್ಲೇ ಏನೋ ಅಚಾತುರ್ಯ ನಡೆದಿದೆ ಅಂತ ಯೋಚಿಸುವಷ್ಟರಲ್ಲೇ  ಯಾರೋ ಒಬ್ಬ ಹೆಂಗಸು "ಎಲ್ಲಪ್ಪಾ,ನಿಮ್ಮಮ್ಮ ಇನ್ನೂ ಬಂದಿಲ್ವಾ ,ಬೇಗ ಹೋಗಿ ಕರ್ಕೊಂಡು ಬಾ " ಅಂತ ನಮ್ಮ ಪಕ್ಕದ ಮನೆಯ ಹುಡುಗನಿಗೆ ಹೇಳಿದ್ರು.
"ಫೋನ್ ಮಾಡಿದಿನಿ ,ಬರ್ತಾ ಇದಾರಂತೆ" ಅಂತ ಸ್ವಲ್ಪ ಮೆದು ಧ್ವನಿ ಯಲ್ಲಿ ಹೇಳಿದ .
ನೋಡಿದ್ರೆ ನಮ್ಮ ಅಕ್ಕ ಪಕ್ಕ ,ಎದುರು ,ಮೇಲೆ ಕೆಳಗಡೆ ಎಲ್ಲ ಮನೆಯ ಹೆಂಗಸರು ಗಂಡಸರುಗಳು ಅಲ್ಲಿ ಜಮಾಯಿಸದ್ದರು,ಏನೋ ಸರ್ಕಸ್ ನಡೀತಿದೆ ಅನ್ನುವ ಥರಾ.
ಈ ನಮ್ಮ ಪಕ್ಕದ ಮನೆಯ ಪುಣ್ಯಾತ್ಮರು ಈ ಮನೆಗೆ ಬಂದು ೨ ತಿಂಗಳು ಆಗಿದೆ ,ಆದರೆ ಮನೆ ಮುಂದೆ ಒಂದು ದಿನ ಕೂಡ ಕಸ ಗುಡಿಸಿದ್ದನ್ನು ನಾನು ನೋಡೇ ಇಲ್ಲ .ಮನೆ ಕ್ಲೀನ್ ಆಗಿ ಇಟ್ಕೊಳ್ಳಿ ಅಂತ ಪಾಪ ಓನರ್ ಅದೆಷ್ಟು ಸಾರಿ ಹೇಳಿದ್ದಾರೋ ಗೊತ್ತಿಲ್ಲ .


ಇವ್ರು ಏನೋ ಕಿತಾಪತಿ ಮಾಡಿದ್ದಾರೆ ಅಂತ ಯೋಚಿಸುವಷ್ಟರಲ್ಲೇ ,ನಮ್ಮ ಓನರ್ ಸಾಹೇಬರು ಅವನ ಮುಂದೆ ಬಂದು ೨ ಕೈಗಳನ್ನು ಜೋಡಿಸಿ ನಮಸ್ಕರಿಸಿ "ನೋಡಪ್ಪ ,ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಅಡ್ವಾನ್ಸ್ ದುಡ್ಡು ಕೊಡ್ತೀನಿ ,ದಯವಿಟ್ಟು ಮನೆ ಖಾಲಿ ಮಾಡ್ರಪ್ಪ " ಅಂತ ತಮ್ಮ ಮಗನಿಗಿಂತ ಚಿಕ್ಕ ವಯಸ್ಸಿನ ಆ ಹುಡುಗನಿಗೆ ಹೇಳಿದ್ರು .
ಮೊದಲೇ ವಿಳ ವಿಳ ಒದ್ದಾಡುತಿದ್ದ ನನ್ನ ಮನಸ್ಸಿನಲ್ಲಿ .ಇಲ್ಲಿ ಏನು ನಡೀತಿದೆ ಎಂದು ಊಯಿಸುವುದು ಸ್ವಲ್ಪ ಕಷ್ಟ ಆಯ್ತು.ಆಗ ತಕ್ಷಣ ನಮ್ಮೆ ಓನರ್ ನ ಮಗನನ್ನು "ಅಣ್ಣ, ಏನಾಯಿತು ?" ಅಂತ ಕೇಳಿದೆ .
ನಮ್ಮ ಪಕ್ಕದ ಮನೆಯ ಕಡೆ ಬೆಟ್ಟು ಮಡಿ ತೋರಿಸಿ "ಆ ಮನೆಯವರು ಸಾಂಬಾರನ್ನು stove  ಮೇಲೆ ಬಿಸಿ ಮಾಡಕ್ಕೆ ಇಟ್ಟು,ಬೀಗ ಹಾಕಿಕೊಂಡು ಎಲ್ಲೋ ಹೋಗಿದ್ದಾರೆ .ಈಗ ಆ ಸಾರು ಉಕ್ಕಿ stove  ಆಫ್  ಆಗಿ ಗ್ಯಾಸ್ ಲೀಕ್ ಆಗಿದೆ .ಇಷ್ಟೊತ್ತು ತುಂಬಾ ವಾಸನೆ ಬರ್ತಿತ್ತು " ಅಂತ ಬಹಳ ಯೋಚನಾ ಮಗ್ಧರಾಗಿ ಹೇಳುತ್ತಿದ್ದವರನ್ನು ನಿಲ್ಲಿಸಿ "ಮತ್ತೆ ಈಗ ಏನ್ ಕಥೆ ?" ಅಂತ ಕೇಳ್ದೆ .


"ಅಯ್ಯೋ ಅದೊಂದ್ ದೊಡ್ಡ ಕಥೆ .ಅವರ ಅಡುಗೆ ಮನೆಯ ಕಿಡಕಿ ಹೊಡೆದು ಹಾಕಿ ,ಗ್ಯಾಸ್ ಆಫ್   ಮಾಡಿದ್ದಾಯ್ತು ". "ಇವನೇ ಆಫ್ ಮಾಡಿದ್ದು" ಅಂತ ನಮ್ಮ ಕೆಳಗಡೆ ಮನೆಯ ಹುಡುಗನ ಕಡೆ ತೋರಿಸಿದರು .


ಅದೇ ಸಮಯದಲ್ಲಿ ಇನ್ನೊಬ್ಬ ಹೆಂಗಸು "ಹೇಗ್ ಆಫ್   ಮಾಡಿದ್ಯೋ ?" ಅಂತ ಅವನನ್ನು ಪ್ರಶ್ನಿಸುತ್ತಾರೆ .
"ಆ ಕೋಲು ತಗಂಡು ಮಾಡಿದೆ ಕಣ್ರೀ " ಅಂತ ವೀರಾವೇಶದಿಂದ ಹೇಳಿದ.
"ಸಾರು ಚೆನ್ನಾಗಿತ್ತು ಕಣ್ರೀ,ಒಳ್ಳೆ ವಾಸನೆ ಬರುತಿತ್ತು ,ಮೊಳಕೆ ಹುರುಳಿಕಲು ಸಾರು " ಅಂತ ಹೇಳುತ್ತಿದ್ದಾಗ ನಂಗೆ ಬಾಯಲ್ಲಿ ನೀರು ಬರುತಿತ್ತು ,ಹಾಗೆಯೇ ನಮ್ಮ ಒವ್ನೆರ್ ನ ಮಗ "ರೀ ಆ ಮನೆಯಲ್ಲಿ ಶಾರ್ಟ್ circuit  ಆಗಿದೆ ,ಕರೆಂಟ್ ಇಲ್ಲ ಇವಾಗ ಅಲ್ಲಿ  " ಅಂತ ಏನೋ ಸ್ವಾರಸ್ಯಕರ ಸುದ್ದಿಯಂತೆ ಎಲ್ಲರಿಗೂ ಒಪ್ಪಿಸಿದರು.


ಇದಕಿದ್ದಂತೆ ಹಾಗೆ ಇನ್ನೊಮ್ಮೆ ಎಚೆತ್ತ ನಮ್ಮೆ ಒವ್ನೆರ್ ಸಾಹೇಬರು "ಬೆಳಗ್ಗೆ ದುಡ್ಡು ಕೊಡ್ತೀನಿ ,ಮೊದಲು ಮನೆ ಖಾಲಿ ಮಾಡ್ರಪ್ಪ ನೀವು ", ಅಂತ ಹೇಳಿ ನಿಲ್ಲುವಸ್ತರಲ್ಲೇ ಅವರ ಧರ್ಮಪತ್ನಿಯವರು "ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮನೆ ಕಟ್ತಿರ್ತಿವಿ, ಏನಾದ್ರು ಹೆಚ್ಚು ಕಡಿಮೆ ಹಾಗಿ ಆ ಸಿಲಿಂಡರ್ ಬರ್ಸ್ಟ್ ಆಗಿದ್ರೆ ನಾವು ಏನ್ ಮಾಡಬೇಕಿತ್ತು ? ಸದ್ಯ ಇವಾಗ ಬರೀ ಕರೆಂಟ್ ಹೋಗಿದೆ ಅಷ್ಟೇ " ಅಂತ ದಬಾಯಿಸುತ್ತಾರೆ, ಆಗ ಹಿಂದೆ ಇಂದ ಒಂದಿಷ್ಟು ಜನ "ಇನ್ಸೂರೆನ್ಸ್ ಮಾಡ್ಸಿದ್ದರೆ ಒಳ್ಳೆದಾಗುತಿತ್ತು " ಅಂತ ಮಾತನಾಡುತ್ತಿರುವಾಗಲೇ , ಯಾರೋ ಒಬ್ಬ ಹೆಂಗಸು ಈ ಸನ್ನಿವೇಶದ ಮುಖ್ಯ ರೂವಾರಿಗಳಾದಂಥಹ  ನಮ್ಮ ಪಕ್ಕದ ಮನೆಯ ಯುವಕನ ಹೆಂಡತಿ ಮತ್ತು ಅವನ ತಾಯಿಯನ್ನು ನೆನಪಿಸಿಕೊಂಡು "ಎಲ್ಲಪ್ಪಾ ,ನಿಮ್ಮಮ್ಮ ,ನಿನ್ ಹೆಂಡತಿ ಇನ್ನೂ ಬರಲಿಲ್ವ ,ಗ್ಯಾಸ್ ಆನ್ ಮಾಡಿ,ಬೀಗ ಹಾಕಿಕೊಂಡು ಹೋಗಿದ್ದಾರಲ್ಲ,ಅವರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ " ಅಂತ ದಬಾಯಿಸುತ್ತಾರೆ.
ಅದೇ ವೇಳೆಗೆ ನಮ್ಮ ಮನಸ್ಸಿನಲ್ಲಿ ಆ ಸಿಲಿಂಡರ್ ಏನಾದ್ರು ಬರ್ಸ್ಟ್ ಆಗಿದ್ದರೆ ನಮ್ಮ ರೂಮು ಕೂಡ ಏನಾದ್ರು ಒಂದು ಗತಿ ಕಾಣುತಿತ್ತು ಅನ್ನಿಸುತಿತ್ತು ,ಕಾರಣ ನಮ್ಮ  ಮತ್ತು ಆ ಮನೆಗೆ ಒಂದು ಕಾಮನ್ ಗೋಡೆ ಇದೆ .ಹೀಗೆ ಯೋಚಿಸುತ್ತಿದ್ದಾಗ ನಮ್ಮ ರೂಮಿನ ಮುಂದೆಯೇ ನನ್ನ ರೂಂ ಮೇಟ್ ವಿನಯ್ ನಿಂತಿರುವುದನ್ನು ಗಮನಿಸಿ ,ಅವನತ್ತ ತಿರುಗಿ "ಏನಿದು ?" ಅಂತ ಕೈ ನಲ್ಲೆ ಸಂಜ್ಞೆ ಮಾಡಿದೆ.
ಅವನು ತನ್ನ ಹಣೆಗೆ ಕೈ ಚಚ್ಚಿ ಕೊಳ್ಳುತ್ತಾ "ಅದೊಂದು ದೊಡ್ಡ ಕಥೆ " ಅಂತ ಹೇಳಿದ .
ಸದ್ಯ ಏನೂ ಅನಾವುತ ಆಗಿಲ್ವಲ್ಲ,ಎಲ್ಲಾ ಹೇಗೋ ಬಚಾವಾದ್ವಿ ಅಂತ ಯೋಚಿಸುತ್ತಿದ್ದ ವೇಳೆಗೆ ,ತಪ್ಪಿದ ಸಿಲಿಂಡರ್ ಸ್ಪೋಟದ ರೂವಾರಿಯಲ್ಲಿ ಒಬ್ಬಳಾದ ಸೊಸೆ ಬರುತ್ತಿರುವದನ್ನು ಗಮನಿಸಿದ ಯಾರೋ ಒಬ್ಬರು ಹೆಂಗಸು "ಬಂದಳು ನೋಡಿ ಹಿರೋಯಿನ್  " ಅಂತ ಅಂದ್ರು . ಯಾವ angle  ಇಂದ ಹಿರೋಯಿನ್  ಅಂತ ಇನ್ನೂ ತಲೆ ಕೆಡಿಸಿಕೊಂಡಿದ್ದೀನಿ.
ಅವಳು ಅಲ್ಲಿ ಬಂದು ನಿಂತಿದ್ದೆ ತಡ ಒಬ್ಬರ ನಂತರ ಇನ್ನೊಬ್ಬರು "ಏನಮ್ಮ ನಿನಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ ,ಏನಾದ್ರು ಹಾಗಿದ್ರೆ ಏನು ಮಾಡ್ತಿದ್ದೆ ನೀನು " ಅಂತ ಗದರಿಸುತ್ತಾರೆ. ಸೆಪ್ಪಗೆ ಮುಖ ಮಾಡಿ ಇನ್ನೇನು ಅಳು ಬರಬೇಕು ಅನ್ನುವ ಸ್ಥಿತಿ ತಲುಪಿದ ಅವಳು ಯಾರ ಪ್ರಶ್ನೆಗೂ ಉತ್ತರಿಸದೆ ಸುಮ್ಮನೆ ನಿಂತು ಬಿಡುತ್ತಾಳೆ.
ಹಾಗೆ ಎಲ್ಲರೂ ಅವಳಿಗೆ ಬೈಯುತ್ತಿದ್ದ ವೇಳೆಗೆ ಅವಳ ಅತ್ತೆ ಗಜ ಗಾಂಭೀರ್ಯದಿಂದ ಆನೆ ನಡಿಗೆಯಲ್ಲಿ ಬರುತ್ತಿದ್ದನ್ನು ಗಮನಿಸಿದ ಒಬ್ಬ ಹೆಂಗಸು "ಬೇಗ ಬಾರಮ್ಮ ,ಬೇಗ ಬೀಗ ತೆಗೆದು ಗ್ಯಾಸ್ ಆಫ್ ಮಾಡು, ಅದು ಇನ್ನೂ ಕರೆಕ್ಟ್ ಆಗಿ ಆಫ್ ಆಗಿಲ್ಲ ಅನ್ನಿಸುತ್ತೆ " ಅನ್ನುವಾಗ ಅಲ್ಲಿಗೆ ಬಂದಂತಹ ಆ ಅತ್ತೆ "ರೀ ನಾನು ಅವಳಿಗೆ (ಸೊಸೆ) ಹೇಳಿದ್ದೆ ಕಣ್ರೀ ,ಗ್ಯಾಸ್ ಆಫ್ ಮಾಡು ಅಂತ ,ಆದ್ರೆ ಅವಳು ಮಾಡದೇ ಹೋಗಿದ್ದಾಳೆ " ಅಂತ ಮೊಸಳೆ  ಕಣ್ಣಿರಿಡುತ್ತಿದ್ದಾಗ ಅಷ್ಟೊತ್ತು ಗಪ್ ಚುಪ್ ಅನ್ನದೆ ಸುಮ್ಮನಿದ್ದ ಸೊಸೆ "ನನಗೆಲ್ಲಿ ಹೇಳಿದ್ರಿ ನೀವು. ನೀವೇ ಆಫ್ ಮಾಡ್ತಿರ ಅಂದುಕೊಂಡಿದ್ದೆ ,ನಿಮಗಿಂತ ಮುಂಚೆನೇ ಹೋಗಿರ್ಲಿಲ್ವ ನಾನು ?" ಅಂತ ಅತ್ತೆಯನ್ನು ಅಷ್ಟೂ ಜನರ ಮುಂದೆ ,ಅದೂ ಬೀದಿಯಲ್ಲಿ ಜಗಳ ಶುರು ಮಾಡುತ್ತಾಳೆ.
ಆಗ ಇನ್ನೊಮ್ಮೆ ನಮ್ಮ ಒವ್ನೆರ್ ಸಾಹೇಬರು ಆ ಅತ್ತೆ ಹತ್ತಿರ "ನೋಡಮ್ಮ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ದುಡ್ಡು ಕೊಡ್ತೀವಿ ,ದಯವಿಟ್ಟು ಮನೆ ಖಾಲಿ ಮಾಡಿ " ಅಂತ ಎಚ್ಚರಿಸುತ್ತಾರೆ .
"ಅಯ್ಯೋ ಮನೆ ಖಾಲಿ ಮಾಡ್ಕೊಂಡು ಎಲ್ಲಿ ಹೋಗ್ಲಿ ನಾನು , ನೋಡಿ ಅವಳು (ಸೊಸೆ) ಮಡಿದ ಈ ಕೆಲಸಕ್ಕೆ ನಾನು ಅನುಭವಿಸಬೇಕು " ಅಂತ ಗೊಗರೆಯುತ್ತಾಳೆ .
ಇದ್ದಕಿದ್ದಂತೆ ಇನ್ನೊಬ್ಬ ಹೆಂಗಸು "ಅವಳ ಮೇಲೆ ಏನಮ್ಮ ಹೇಳ್ತಿಯಾ? ನೀನು ಆಫ್ ಮಾಡಿ ಹೋಗ್ಬೇಕು ಅಂತ ಗೊತ್ತಾಗಲಿಲ್ವ ,ಅತ್ತೆ ಸೊಸೆ ಇಬ್ಬರಿಗೂ ಜವಾಬ್ದಾರಿ ಇಲ್ಲ. ಯಾವ ಸೀಮೆ ಹೆಂಗಸರು ನೀವು ? ಅದೇನು ಸಂಸಾರ ಮಾಡ್ತಿರ?" ಅಂತ ಹೇಳ್ತಾರೆ.
ಇನ್ನೂ ಕೂಡ ಅತ್ತೆ  ಸೊಸೆ ಮಧ್ಯ ವಾಗ್ವಾದ ನಡೆಯುತ್ತಲೇ ಇತ್ತು.


ತಾಯಿಯಂತೆ ಮಗಳು ,ನೂಲಿನಂತೆ ಸೂಜಿ ,ಹಳೆಯ ಮಾತಾದರೆ ,ಅತ್ತೆಯಂತೆ ಸೊಸೆ ,ಇದು ಇಲ್ಲಿಯ ಮಾತು .ಸಂಸಾರದ ಬಗ್ಗೆ ಅರಿವೇ ಇಲ್ಲದ ಆ ಸೊಸೆಗೆ .ಯಾವಾಗಲು ಮೇಕ್ ಅಪ್ ಮಾಡಿಕೊಂಡು ಸುತ್ತಾಡುವಂತಹ ಹುಡುಗಾಟಿಕೆಯ ಮನೋಭಾವ ಮದುವೆ ಆದರೂ ಬಿಟ್ಟಿಲ್ಲ. ಅತ್ತೆಗೆ ಯಾವಾಗಲು ನೆಂಟರ ಮನೆ ಸುತ್ತುವುದೆ ಕೆಲಸ. stove  ಮೇಲೆ ಕಾಯಲು ಸಾಂಬಾರನ್ನು ಇಟ್ಟಿ ಅತ್ತೆ ಹೋಗಿದ್ದು ಅಣ್ಣನ ಮನೆಗೆ ,ಸೊಸೆ ಹೋಗಿದ್ದು ವಾಕಿಂಗ್ ಗೆ. ಇಳೆ ಗೊತ್ತಾಗುತ್ತೆ ಇವರು ಎಷ್ಟರ ಮಟ್ಟಿಗೆ ಜವಾಬ್ದಾರಿಯ ಹೆಂಗಸರು ಎಂಬುದು.
ಹೇಗೋ ಸದ್ಯ ಅನಾವುತ ಆಗಲಿಲ್ಲ. ಇದನ್ನು ತಪ್ಪಿಸಿದ ಕೆಳಗಡೆ ಮನೆಯ ಹುಡುಗನಿಗೆ ,ಅದಕ್ಕೂ ಮುಂಚೆ ಈ ಗ್ಯಾಸ್ ಸೋರುವಿಕೆಯ ವಾಸನೆ ಕಂಡು ಹಿಡಿದ ಒವ್ನೆರ್ ನ ಮಗನಿಗೂ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ನನ್ನ ರೂಮಿನ ಬಳಿ ಬರುತ್ತಿದ್ದಾಗ ಆ ಗ್ಯಾಸ್ ನ ವಾಸನೆ ಇನ್ನೂ ಇತ್ತು .
ಹೇಗೋ ಒಂದು ಗಂಡಾ೦ತರದಿಂದ ಪಾರಾಗಿ ಬಂದು ,ಈ ಸನ್ನಿವೇಶದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನ್ನ ರೂಂ ಮೇಟ್ ಹತ್ತಿರ ತಿಳಿದು ಕೊಳುತ್ತ ,ಆ ಅತ್ತೆ ಸೊಸೆಯಂದಿರ ಬೇಜವಾಬ್ದಾರಿತನದ ಬಗ್ಗೆ ಇನ್ನಷ್ಟು ಉದಾಹರಣೆಗಳನ್ನು ಕೊಡುತ್ತಾ ನೆಮ್ಮದಿಯ ನಿದ್ರಾ ಲೋಕಕ್ಕೆ ಗೊತ್ತಿಲ್ಲದಂತೆ ಜಾರಿ ಬಿಟ್ಟಿದ್ದೆ .