Tuesday, March 15, 2011

ಇಂಥವರಿಗೆ ಏನು ಮಾಡಬೇಕು ...???

ಒಂದು  ಹಂದಿ  ಕೊಳಚೆ  ನೀರಿನಲ್ಲಿ  ಬಿದ್ದು  ಒದ್ದಾಡುತ್ತಿತ್ತು. ಇದನ್ನು ನೋಡಿ ದೇವೇಂದ್ರ ಆ ಹಂದಿಯ ಮೇಲೆ ಕನಿಕರದಿಂದ  "ಅಯ್ಯೋ ಯಾಕಪ್ಪ ಆ ಕೊಳಚೆ ಒಳಗೆ  ಬಿದ್ದಿದಿಯ? " ಅಂತ  ಅದನ್ನ  ಮೇಲಕ್ಕೆ ಎತ್ತಕ್ಕೆ  ಹೋಗುತ್ತಾನೆ .
ಆದರೆ ಹಂದಿ ಮಾತ್ರ  "ನಾನು  ಇಲ್ಲೇ  ಇರ್ತೀನಿ " ಅಂತ  ಹಠ  ಮಾಡುತ್ತೆ .
ಹೇಗಾದರೂ ಮಾಡಿ ಇದನ್ನ ಮೇಲಕ್ಕೆ ಕರಿಬೇಕು ಅಂತ ದೇವೇಂದ್ರ "ನೋಡು  ನೀನು  ಮೇಲಕ್ಕೆ ಬಂದ್ರೆ ನಿನ್ನನ್ನ  ನಾನು ಸ್ವರ್ಗ  ಲೋಕಕ್ಕೆ ಕರ್ಕೊಂಡು  ಹೋಗ್ತಿನಿ ,ಅಲ್ಲಿ  ನೀನು ತಿಳಿ ನೀರಲ್ಲಿ  ಸ್ನಾನ  ಮಾಡಬಹುದು , ಈ  ಥರಾ  ಕೊಳಚೆ  ನೀರಲ್ಲಿ  ಇದ್ದರೆ  ಯಾವ  ಯಾವ  ಕಾಯಿಲೆ  ಬರುತ್ತೆ  ಗೊತ್ತಿಲ್ಲ ನಿಂಗೆ ,ಬಾ  ಮೇಲಕ್ಕೆ  "ಅಂತ  ಹೇಳ್ತಾನೆ .
ಇದು  ಯಾವದಕ್ಕೂ  ಬಗ್ಗದ  ಹಂದಿ  "ಏ ಇಲ್ಲ  ನಾನು  ಇಲ್ಲೇ  ಇರ್ತೀನಿ ,ನನಗೇನೆ ಆದರೂ ಪರವಾಗಿಲ್ಲ " ಅನುತ್ತೆ .
ಸರಿ  ದೇವೇಂದ್ರ  ಕಡೆ  ಪ್ರಯತ್ನ  ಅಂತ "ಸ್ವರ್ಗ ಲೋಕದಲ್ಲಿ  ರಂಭೆ  ಉರ್ವಸಿ  ಮೆನಕೆಯವರೆಲ್ಲ  ಇರ್ತಾರೆ ,ಅವರೆಲ್ಲ   ನೃತ್ಯ  ಮಾಡ್ತಿರ್ತಾರೆ ,ನೀನು
ಆರಾಮಾಗಿ  ಅವರ  ನ್ರುತ್ಯನೆಲ್ಲ  ನೋಡಬಹುದು ,ಅವರೆಲ್ಲ ನಿಂಗೆ ಸ್ನಾನ ಮಾಡಿಸುತ್ತಾರೆ  , ಬಾ  ಹೋಗಣ " ಅಂತ  ಕರಿತಾನೆ .
ಏನೆ ಮಾಡಿದ್ರು  ಆ  ಹಂದಿ  " ಇಲ್ಲ  ಇಲ್ಲ  ನಾನ್  ಇಲ್ಲೇ  ಇರ್ತೀನಿ ,ನಂಗೆ  ಇದೆ  ಚೆನ್ನಾಗಿದೆ " ಅಂತ  ಹೇಳುತ್ತೆ .
ಸರಿ  ದೇವೇಂದ್ರ  ಇನ್ನೇನು  ಮಾಡಕ್ಕಾಗಲ್ಲ  ಈ  ಹಂದಿಗೆ  ಅಂತ  ಸುಮ್ನೆ ಆಗಿಬಿಡುತ್ತಾನೆ .
ಇದೆ  ಥರಾ  ನಮ್ಮ ಮಧ್ಯದಲ್ಲೂ  ಕೆಲವು  ಜನ  ಇರುತ್ತಾರೆ . " ತಪ್ಪು  ದಾರಿಯಲ್ಲಿ  ಹೋಗುತ್ತಿದ್ದಿರ " ಅಂತ  ಒಳ್ಳೆ  ದಾರಿ  ತೋರಿಸಿದರು  ,
ಅವರಿಗೆ  ತಾವು  ಮಾಡಿದ್ದೆ  ಸರಿ ,ತಾವು  ಮಡ್ತಿರೋದೆ  ಸರಿ  ಅಂತ  ತಿಳಿದು  ಕೊಂಡಿರುವವರು .
ನಾವು  ಇರೋದೇ  ಹೀಗೆ  ಸ್ವಾಮಿ  ಅಂತ  ಹೇಳ್ತಾರೆ  ಈ  ಜನ.
ತಮ್ಮ  ಸ್ವಂತ  ಬುದ್ದಿ  ಯೋಚನೆ  ಇರಬೇಕು ,ಆದರೆ  ಬೇರೆಯವರು  ಹೇಳಿದ್ದನ್ನ  ಸ್ವಲ್ಪ  ಮಟ್ಟಿಗಾದರೂ  ಕೇಳಬೇಕು .
ಯಾವಾಗಲು  ಬೇರೆಯವರು  ಹೇಳಿದ್ದನ್ನ  ಕೇಳಲೂ ಬಾರದು ,ಆದರೆ  ಅದು  ಸರಿಯೋ  ತಪ್ಪೋ  ಅಂತ  ಯೋಚಿಸಿ  ನಿರ್ಧಾರ  ಮಾಡುವ  ವಿವೆಚನೆಯಾದರು  ಇರಬೇಕು .
ತಮ್ಮನ್ನು  ತಾವೇ  ಮೇಧಾವಿಗಳು  ಅಂತ ತಿಳಿದು ,ಬೇರೆ  ಯಾರೇ  ಏನೆ  ಹೇಳಿದರು  ಅದನ್ನ  ತಪ್ಪು  ಅಂತ  ಹೇಳುವ  ಅವಿವೇಕಿಗಳಿಗೆ  ಏನು  ಮಾಡಬೇಕು ?
(ಇದು  ಕೆಲವು  ದಿನಗಳ  ಹಿಂದೆ  ಒಂದು  ಕಾರ್ಯಕ್ರಮದಲ್ಲಿ  ಒಬ್ಬ  ಉಪನ್ಯಾಸಕರು  ಹೇಳಿದ  ಕಥೆ )

Friday, March 4, 2011

ಹಕ್ಕಿಗಳು ಹಾರುವ ಶೈಲಿ

ಹಕ್ಕಿಗಳು ಗುಂಪಾಗಿ  ಹಾರುವುದನ್ನು ನಾವು ಗಮನಿಸಿದ್ದೇವೆ.ಬೇಸಿಗೆ ಕಾಲದಲ್ಲಿ ಕೆಲವು ಪಕ್ಷಿಗಳು ಗುಂಪು ಗುಂಪಾಗಿ ಒಂದೇ ಕಡೆಯಿಂದ ಇನ್ನೊಂದೆಡೆಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿ.ಆದರೆ ಅವು ಹಾರುವಾಗ ಒಂದು ವಿಶೇಷತೆ ಇದೆ.ಅವು ಯಾವಾಗಲು v -ಆಕಾರದಲ್ಲಿ ಹಾರುತ್ತವೆ.


ಇದು ಒಂದು ರೀತಿಯಲ್ಲಿ aerodynamics ನ theory .ಮೇಲಿನ ಚಿತ್ರದಲ್ಲಿ ಇರುವ ಹಾಗೆ ಸಾಮಾನ್ಯವಾಗಿ ಹಕ್ಕಿಗಳು ಹಾರುತ್ತವೆ.
ಇದಕ್ಕೆ ಬಹಳ ಕಾರಣಗಳು ಇರಬಹುದು.ಮುಖ್ಯವಾಗಿ ಹಕ್ಕಿಗಳು ಒಂಟಿಯಾಗಿ ಹಾರಿದರೆ ತುಂಬ ಶ್ರಮ ಪಡಬೇಕಾಗುತ್ತದೆ ಮತ್ತು ತುಂಬ ದೂರ ಹಾರಲು ಸಾಧ್ಯವಿಲ್ಲ.ಅದ್ದರಿಂದ ಅವು ಒಟ್ಟಿಗೆ ಹಾರುತ್ತವೆ .
ಮುಖ್ಯ ವಾಗಿ  ಕೆಲವೊಮ್ಮೆ ಅವು ಗಾಳಿಯ ವಿರುದ್ದವಾಗಿ ಹಾರುತ್ತವೆ.ಮೇಲಿನ ಚಿತ್ರದಲ್ಲಿ ಇರುವಂತೆ ಮುಂದೆ ಇರುವ ಹಕ್ಕಿಯು ತನ್ನ ರೆಕ್ಕೆಯನ್ನು ಜೋರಾಗಿ ಬಡಿಯುತ್ತದೆ ಮತ್ತು ಬೇರೆ ಹಕ್ಕಿಗಳಿಗೆ ಹೋಲಿಸಿದರೆ ಮುಂದಿನ ಹಕ್ಕಿಯು ಶ್ರಮ ಪಡುವುದು ಜಾಸ್ತಿ.ಆ ಸಮಯದಲ್ಲಿ ಅದರ ಹಿಂದೆ ಅಂದರೆ ೨ನೆ ಸಾಲಿನಲ್ಲಿರುವ ಹಕ್ಕಿಗಳು ಸ್ವಲ್ಪ ಕಡಿಮೆ ಶ್ರಮ ಪಟ್ಟರೆ ,ಎಲ್ಲದಕ್ಕೂ ಹಿಂದಿನ ಸಾಲಿನಲ್ಲಿರುವ ಹಕ್ಕಿಯು ಸ್ವಲ್ಪ ಪರಿಶ್ರಮದಿಂದ ಹಾರುತ್ತದೆ.ಮುಂದಿನ ಹಕ್ಕಿಯು ರೆಕ್ಕೆ ಬಡಿದಾಗ ಅದು ಗಾಳಿಯಲ್ಲಿ ದ್ದರಿ ಮಡಿದ ಹಾಗೆ.ನಂತರ ಅದರ ಹಿಂದೆ ಇರುವ ಹಕ್ಕಿಗಳು ಅದನ್ನ ಹಿಂಬಾಲಿಸುತ್ತವೆ.

ಮುಂದೆ ಹಾರುವ ಹಕ್ಕಿ  ರೈಲಿನ ಎ0ಜಿನು ಇದ್ದ ಹಾಗೆ. ಹಿಂದೆ ಇರುವ ಹಕ್ಕಿಗಳು ಬೋಗಿಯ ಹಾಗೆ.

ನಂತರ ಮುಂದಣ ಹಕ್ಕಿಗೆ ಸುಸ್ತಾದಾಗ ಅದು ಹಿಂದಕ್ಕೆ ಹೋಗುತ್ತದೆ ,ಹಿಂದೆ ಇರುವ ಹಕ್ಕಿಯು ಮುಂದೆ ಬಂದು  ಆ ಗುಂಪಿನ ನಾಯಕತ್ವವನ್ನು ಹೊರುತ್ತದೆ. ಸುಸ್ತಾಗಿದ್ದ ಹಕ್ಕಿಯು ಸ್ವಲ್ಪ ಸಮಯ ರೆಸ್ಟ್ ತೆಗೆದು ಕೊಂಡ ಹಾಗೂ ಹಾಗುತ್ತದೆ,ಅದೇ ರೀತಿ ಸ್ವಲ್ಪ ದೂರ ಹಾರಿದ ಹಾಗೂ ಹಾಗುತ್ತದೆ.
ಇದೆ ರೀತಿ ಒಂದಾದ ನಂತರ ಇನ್ನೊಂದು ಹಕ್ಕಿ ನಾಯಕತ್ವವನ್ನು ತೆಗೆದು ಕೊಂಡು ಗುಂಪನ್ನು ಮುಂದೆ ಸಾಗಿಸುತ್ತದೆ.
ಈ ರೀತಿ ಗುಂಪಿನಲ್ಲಿ ಹೋಗುವ ಬದಲು ಅವು ಒಂಟಿಯಾಗಿ   ಹಾರಿದರೆ ದಿನಕ್ಕೆ ಸುಮಾರು ೧೦೦ km  ಹಾರುವ ಸಾಮರ್ಥ್ಯ ಹೊಂದಿದ್ದರೆ ,ಈ ರೀತಿ ಗುಂಪಿನಲ್ಲಿ ಹಾರಿದರೆ ದಿನಕ್ಕೆ ೧೦೦೦ km  ಕೂಡ ಹಾರಬಹುದು.
ಈ ರೀತಿಯ ಟೀಂ ವರ್ಕ್ ಹಕ್ಕಿಗಳಿಗೆ ಗೊತ್ತಿದೆ ,ಆದರೆ ಮನುಷ್ಯನಿಗೆ ಕೆಲವೊಂದು ಕಡೆ ಸ್ವಾರ್ಥ ತುಂಬಿಕೊಂಡಿದೆ.
ಇದೆ ರೀತಿ ಹಕ್ಕಿಗಳ ಹಾಗೆ ಮನುಷ್ಯ ಕೂಡ ತನ್ನ ಜೀವನದಲ್ಲಿ  ಬೇರೆಯವರಿಗೆ ಸಹಾಯ ಮಾಡಿಕೊಂಡು ಬದುಕಿದರೆ ಎಷ್ಟು ಉತ್ತಮ ಅಲ್ಲವೇ?ಎಲ್ಲರಿಗೂ ಒಳ್ಳೆಯದಾಗುತ್ತದೆ.

Photo Courtesy::Internet