ಒಂದು ಹಂದಿ ಕೊಳಚೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿತ್ತು. ಇದನ್ನು ನೋಡಿ ದೇವೇಂದ್ರ ಆ ಹಂದಿಯ ಮೇಲೆ ಕನಿಕರದಿಂದ "ಅಯ್ಯೋ ಯಾಕಪ್ಪ ಆ ಕೊಳಚೆ ಒಳಗೆ ಬಿದ್ದಿದಿಯ? " ಅಂತ ಅದನ್ನ ಮೇಲಕ್ಕೆ ಎತ್ತಕ್ಕೆ ಹೋಗುತ್ತಾನೆ .
ಆದರೆ ಹಂದಿ ಮಾತ್ರ "ನಾನು ಇಲ್ಲೇ ಇರ್ತೀನಿ " ಅಂತ ಹಠ ಮಾಡುತ್ತೆ .ಹೇಗಾದರೂ ಮಾಡಿ ಇದನ್ನ ಮೇಲಕ್ಕೆ ಕರಿಬೇಕು ಅಂತ ದೇವೇಂದ್ರ "ನೋಡು ನೀನು ಮೇಲಕ್ಕೆ ಬಂದ್ರೆ ನಿನ್ನನ್ನ ನಾನು ಸ್ವರ್ಗ ಲೋಕಕ್ಕೆ ಕರ್ಕೊಂಡು ಹೋಗ್ತಿನಿ ,ಅಲ್ಲಿ ನೀನು ತಿಳಿ ನೀರಲ್ಲಿ ಸ್ನಾನ ಮಾಡಬಹುದು , ಈ ಥರಾ ಕೊಳಚೆ ನೀರಲ್ಲಿ ಇದ್ದರೆ ಯಾವ ಯಾವ ಕಾಯಿಲೆ ಬರುತ್ತೆ ಗೊತ್ತಿಲ್ಲ ನಿಂಗೆ ,ಬಾ ಮೇಲಕ್ಕೆ "ಅಂತ ಹೇಳ್ತಾನೆ .
ಇದು ಯಾವದಕ್ಕೂ ಬಗ್ಗದ ಹಂದಿ "ಏ ಇಲ್ಲ ನಾನು ಇಲ್ಲೇ ಇರ್ತೀನಿ ,ನನಗೇನೆ ಆದರೂ ಪರವಾಗಿಲ್ಲ " ಅನುತ್ತೆ .
ಸರಿ ದೇವೇಂದ್ರ ಕಡೆ ಪ್ರಯತ್ನ ಅಂತ "ಸ್ವರ್ಗ ಲೋಕದಲ್ಲಿ ರಂಭೆ ಉರ್ವಸಿ ಮೆನಕೆಯವರೆಲ್ಲ ಇರ್ತಾರೆ ,ಅವರೆಲ್ಲ ನೃತ್ಯ ಮಾಡ್ತಿರ್ತಾರೆ ,ನೀನು
ಆರಾಮಾಗಿ ಅವರ ನ್ರುತ್ಯನೆಲ್ಲ ನೋಡಬಹುದು ,ಅವರೆಲ್ಲ ನಿಂಗೆ ಸ್ನಾನ ಮಾಡಿಸುತ್ತಾರೆ , ಬಾ ಹೋಗಣ " ಅಂತ ಕರಿತಾನೆ .
ಏನೆ ಮಾಡಿದ್ರು ಆ ಹಂದಿ " ಇಲ್ಲ ಇಲ್ಲ ನಾನ್ ಇಲ್ಲೇ ಇರ್ತೀನಿ ,ನಂಗೆ ಇದೆ ಚೆನ್ನಾಗಿದೆ " ಅಂತ ಹೇಳುತ್ತೆ .
ಸರಿ ದೇವೇಂದ್ರ ಇನ್ನೇನು ಮಾಡಕ್ಕಾಗಲ್ಲ ಈ ಹಂದಿಗೆ ಅಂತ ಸುಮ್ನೆ ಆಗಿಬಿಡುತ್ತಾನೆ .
ಇದೆ ಥರಾ ನಮ್ಮ ಮಧ್ಯದಲ್ಲೂ ಕೆಲವು ಜನ ಇರುತ್ತಾರೆ . " ತಪ್ಪು ದಾರಿಯಲ್ಲಿ ಹೋಗುತ್ತಿದ್ದಿರ " ಅಂತ ಒಳ್ಳೆ ದಾರಿ ತೋರಿಸಿದರು ,ಅವರಿಗೆ ತಾವು ಮಾಡಿದ್ದೆ ಸರಿ ,ತಾವು ಮಡ್ತಿರೋದೆ ಸರಿ ಅಂತ ತಿಳಿದು ಕೊಂಡಿರುವವರು .
ನಾವು ಇರೋದೇ ಹೀಗೆ ಸ್ವಾಮಿ ಅಂತ ಹೇಳ್ತಾರೆ ಈ ಜನ.
ತಮ್ಮ ಸ್ವಂತ ಬುದ್ದಿ ಯೋಚನೆ ಇರಬೇಕು ,ಆದರೆ ಬೇರೆಯವರು ಹೇಳಿದ್ದನ್ನ ಸ್ವಲ್ಪ ಮಟ್ಟಿಗಾದರೂ ಕೇಳಬೇಕು .
ಯಾವಾಗಲು ಬೇರೆಯವರು ಹೇಳಿದ್ದನ್ನ ಕೇಳಲೂ ಬಾರದು ,ಆದರೆ ಅದು ಸರಿಯೋ ತಪ್ಪೋ ಅಂತ ಯೋಚಿಸಿ ನಿರ್ಧಾರ ಮಾಡುವ ವಿವೆಚನೆಯಾದರು ಇರಬೇಕು .
ತಮ್ಮನ್ನು ತಾವೇ ಮೇಧಾವಿಗಳು ಅಂತ ತಿಳಿದು ,ಬೇರೆ ಯಾರೇ ಏನೆ ಹೇಳಿದರು ಅದನ್ನ ತಪ್ಪು ಅಂತ ಹೇಳುವ ಅವಿವೇಕಿಗಳಿಗೆ ಏನು ಮಾಡಬೇಕು ?
(ಇದು ಕೆಲವು ದಿನಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ಒಬ್ಬ ಉಪನ್ಯಾಸಕರು ಹೇಳಿದ ಕಥೆ )
ಒಳ್ಳೆ ಕತೆ , ಇಂತವರನ್ನು ಹೀಗೊಮ್ಮೆ ಹಾಗೊಮ್ಮೆ ನೋಡುತ ಇರ್ತಿವಿ ....
ReplyDeleteಪ್ರತಿಯೋಬ್ಬರಿಗೂ ಅವರದೆ nature ಇರುತ್ತದೆ....ಅದು ಬದಲಾಯಿಸಲು ಸ್ವಲ್ಪ ಕಷ್ಟ.....
ReplyDeleteಸೊಗಸಾದ ...
ReplyDeleteಕಟು ಸತ್ಯದ ಮಾತುಗಳು..
ಇಷ್ಟವಾಯಿತು.... ಧನ್ಯವಾದಗಳು...
ನಿಜ, ಅನೇಕ ಜನ ಹೀಗೆ ಇರ್ತಾರೆ
ReplyDelete@ಸಂದೀಪ್:ಇಂತವರು ತುಂಬ ಜನ ಇದ್ದಾರೆ
ReplyDelete@ಆಶಾ:ಅದನ್ನ ಬದಲಾಹಿಸುವುದು ಸ್ವಲ್ಪ ಅಲ್ಲ ತಿಂಬ ಕಷ್ಟ
@ಪ್ರಕಾಶಣ್ಣ:ತುಂಬ ಧನ್ಯವಾದಗಳು.
@ದೀಪಸ್ಮಿತಾ:ನಿಜ ಈ ಥರದ ಜನ ತುಂಬ ಇದ್ದಾರೆ .ಅವರನ್ನ ತಡೆಯೋದು ಬಹಳ ಕಷ್ಟ
nija ee kateyante halavu janaru iddare... oLLeya lekhana
ReplyDelete@ಮನಸು ,
ReplyDeleteಲೇಖನ ಮೆಚ್ಚಿದಕ್ಕೆ ಧನ್ಯವಾದಗಳು
ಹೌದು ತುಂಬ ಜನ ಈ ಥರದ ವ್ಯಕ್ತಿಗಳು ಇದ್ದಾರೆ
hey nice one....
ReplyDeleteThank u ashwini
ReplyDeleteಗಿರೀಶ್ ನಿಜ ಅದು ಕೆಲವರಿಗೆ ಏನು ಮಾಡಿದರೂ ತಲೆಗೆ ಹೋಗುವ ವಿಷಯವೇ ಅಲ್ಲ....ಇಂಥವರಿಗೆ ಬುದ್ಧಿ ಹೇಳುವುದೂ ವ್ಯರ್ಥವೇ...ಚನ್ನಾಗಿದೆ..ವೈಚಾರಿಕತೆಯ ಕಥೆಯೂ...
ReplyDeleteಗಿರೀಶ್,
ReplyDeleteನಿಮ್ಮ ಮಾತು ನಿಜ. ಇಂತಹ ಜನರಿರುತ್ತಾರೆ.. ಕಥೆ ಚೆನ್ನಾಗಿದೆ!
@ ಅಜಾದ್ ಸರ್ ಮತ್ತು ಪುಟ್ಟಿ ಅಮ್ಮ ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
ReplyDeleteಇಂಥ ವ್ಯಕ್ತಿಗಳಿಗೆ ಏನು ಹೇಳುವುದು ವ್ಯರ್ಥವೇ ಸರಿ, ಹೀಗೆ ಬರುತ್ತಿರಿ
kelavaru haage..
ReplyDeletekattemunde hogi kinnari nudisidante... :P
@Shivu: howdu Shivu anthavarige yenu maadakke aagalla..
ReplyDelete