Saturday, April 2, 2011

ಯುಗಾದಿಗೆ ಊರಿಗೆ ಹೋಗುವಾಗ ಈಗಾಗಿತ್ತು.......!!


ಇಂಜಿನಿಯರಿಂಗ್    ಮೊದಲ  ವರ್ಷ ..ಮಾರನೆಯ  ದಿನ  ಯುಗಾದಿ  ಹಬ್ಬ  ಇದೆ .
ಹಾಗಾಗಿ  ಊರಿಗೆ  ಹೋಗುವ  ಹುಮ್ಮಸ್ಸಿನಲ್ಲಿ  ಮಧ್ಯಾನದ  ಕ್ಲಾಸ್  ಬಂಕ್  ಮಾಡಿ  ಊರಿಗೆ  ಹೊರಟೆ .
ಬಂಕ್ ಮಾಡಿದರೂ  ಕೂಡ  ಹೊರಡುವುದು  ಸ್ವಲ್ಪ  ತಡ  ಆಯಿತು .ಸಂಜೆ  ಅಗೋಗಿ ಬಿಟ್ಟಿತ್ತು .
ಸರಿ  ಇನ್ನೇನ್  ಮಾಡೋದ್  ಅಂತ  ಹೊರಟೆ .ತುಮಕೂರಿನಲ್ಲಿ  ಬಸ್  ಅತ್ತಿದೆ ,ಆಗ್ಲೇ  ಸಂಜೆ  ಆಗಿದ್ದರಿಂದ
ನಾನು  ಅರಸೀಕೆರೆ   ತಲುಪುವ  ವೇಳೆಗೆ  ನಮ್ಮ  ಊರಿಗೆ  ಲಾಸ್ಟ್  ಬಸ್  ಅರಸೀಕೆರೆ  ಮತ್ತು  ಬಾಣಾವರ  ೨  ಕಡೆ ಇಂದ  ಹೋಗಿ  ಬಿಟ್ಟಿರುತ್ತೆ .
ಹಾಸನದಿಂದ   ನಮ್ಮ  ಊರಿಗೆ  ಲಾಸ್ಟ್  ಬಸ್  ರಾತ್ರಿ  ೯ಕ್ಕೆ  ಇದೆ .ಆದ್ದರಿಂದ  ತಿಪಟೂರಿನಲ್ಲಿ  ಇಳಿದು  ಹಾಸನಕ್ಕೆ  ಹೋಗುವ  ಪ್ಲಾನ್  ಮಾಡಿದೆ.ಸರಿ  ತಿಪಟೂರಿನಲ್ಲಿ  ಇಳಿದು  ಸ್ವಲ್ಪ  ಸಮಯ  ಕಾದೆ  ,ಒಂದು  ಬಸ್  ಇಲ್ಲ  ಹಾಸನಕ್ಕೆ .
 ಯಾರೋ ಒಬ್ರನ್ನ  ಕೇಳ್ದಾಗ  ಅವರು  ಹೇಳಿದ್ರು ,"ಇವಾಗ  ಹಾಸನಕ್ಕೆ  ಯಾವ್ದು  ಬಸ್  ಇಲ್ಲಪ್ಪ ,ಯಾವ್ದಾದ್ರು
ಟೆಂಪೋಗೋ  ಅಥವಾ  ಲಾರಿಗೋ  ಹೋಗು "ಅಂತ .
ಇನ್ನೇನ್  ಮಾಡೋದು  ಅಂತ  ಕಾಯುತ್ತ ಇದ್ದೆ ,ಒಂದು  ಲಾರಿ  ಬಂತು ,ಸರಿ  ಅಲ್ಲಿದ್ದ  ಎಷ್ಟೋ  ಜನ  ಮುಗಿ  ಬಿದ್ರು ,ಆ  ಲಾರಿ  ಅತ್ತಕ್ಕೆ.ನಾನು  ಕೂಡ  ಒಬ್ಬ  ಅದ್ರಲ್ಲಿ .ಮಾರನೆಯ ದಿನ  ಹಬ್ಬ  ಆದ್ದರಿಂದ   ತುಂಬ ಜನ  ಪೇಟೆಗೆ  ಅದು  ಇದು  ತಗೊಂಡ್ ಹೋಗಕ್ಕೆ  ಬಂದಿದ್ರು  ಅನ್ಸುತ್ತೆ .ಹೇಗೋ ಲಾರಿ  ಅತ್ತಿ  ಆಯಿತು ,ನೋಡ್ಕೋತೀನಿ  ನನ್ನ ಪರ್ಸ್  ಇಲ್ಲ .ಬಿದ್ದೋಗಿ  ಬಿಟ್ಟಿತ್ತು.
ಹೇಗೋ  ಆ  ನೂಕು  ನುಗ್ಗುಲಲ್ಲಿ ಮತ್ತೆ  ಕೆಳಗೆ ಇಳಿದು  ನೋಡಿದೆ ,ಎಲ್ಲಾದರು ಬಿದ್ದಿದ್ಯ  ಅಂತ,
ನನ್ನ  ಪರ್ಸ್ ನಾಪತ್ತೆ.
೧ ರುಪಾಯಿ  ಕೂಡ  ದುಡ್ಡಿಲ್ಲ .ಎಲ್ಲ  ಅದರಲ್ಲೇ  ಇತ್ತು  .
ಗಾಬರಿ  ಹಾಗೋಯ್ತು  ,ಈಗೇನ್  ಮಾಡೋದು  ಅಂತ . ಈ  ಕಡೆ   ಅಳಬೇಕೋ  ಸಮಾಧಾನ  ಮಾಡ್ಕೊಬೇಕು  ಒಂದು  ತಿಳಿತಿಲ್ಲ .ಪರ್ಸ್ ಕೆಳಗೆ  ಬಿತ್ತೋ ,ಅಥವ  ಯಾರಾದ್ರೂ  ಎತ್ತಿದರೋ ,ಒಂದು  ಗೊತ್ತಿಲ್ಲ .
ಸರಿ ಇನ್ನೇನ್ ಮಾಡೋದು ಅಂತ ಅಲ್ಲಿದ್ದ ಒಬ್ಬ ಟ್ರಾಫಿಕ್ ಪೋಲಿಸ್ ಹತ್ತಿರ ಹೋಗಿ ಸರ್,ಯಾರಾದ್ರೂ ಒಂದು ಪರ್ಸ್ ತಂದು ಕೊಟ್ರ,ಲಾರಿ ಹತ್ತ ಬೇಕಾದ್ರೆ ಕೆಳಗೆ ಬಿದ್ದೋಯ್ತು ಅನ್ಸುತ್ತೆ  ಅಂತ ಕೇಳ್ದೆ,
ಯಾರಪ್ಪ ತಂದು ಕೊಡ್ತಾರೆ ಇಷ್ಟೊಂದ್ ಜನದಲ್ಲಿ ಯಾರ ಕೈಗೆ ಸಿಕ್ತೋ ಏನೋ,ಹಬ್ಬಕ್ಕೆ ಖರ್ಚಿಗೆ ಆಯಿತು ಬಿಡಿ ಅವರಿಗೆ ಅಂತ ಅವರು ಹೇಳ ಬೇಕಾದರೆ  ನಂಗೆ ತೋ ಥ್ಹರಿಕೆ ಏನಪ್ಪಾ ಮಾಡೋದು ಇವಾಗ ಅಂತ ಯೋಚಿಸ್ತಾ ಇದ್ದಾಗ,ಯಾವ್ ಊರು,ಎಷ್ಟಿತ್ತು ದುಡ್ಡು,ಬೇರೆ ಏನೇನ್ ಇತ್ತು ಅಂತ ಎಲ್ಲೇ ಕೇಳಿದ್ರು,
ಅದರಲ್ಲಿ ೨೦೦ ರುಪಾಯಿ ,ನನ್ನ ಲೈಬ್ರರಿ ಕಾರ್ಡ್,ಏಟಿಎಂ ಕಾರ್ಡ್,ಫಿ ರಶೀದಿ ಇತ್ತು,ನನ್ನು ಹಳೇಬೀಡಿಗೆ ಹೋಗಬೇಕು,ಇವಾಗ ಬಸ್ ಸಿಗಲ್ಲ,ಅದಕ್ಕೆ ಹಾಸನಕ್ಕೆ ಹೋಗಿ ನಮ್ಮ ಅಕ್ಕನ ಮನೇಲಿ ಉಳ್ಕೊಂಡು
ಬೆಳಗ್ಗೆ ಹೋಗ್ತೀನಿ ಅಂದೆ,ಸರಿ ಇನ್ನ್ಮುಂದೆ ಹುಷಾರಾಗಿ ಇಟ್ಕೋ ಅಂತ ಹೇಳಿ ೨೫ ರುಪಾಯಿ ಕೊಟ್ಟು ನೆಕ್ಷ್ತ ಬಸ್ಸಿಗೆ ಹೋಗು ಅಂತ ಹೇಳಿದ್ರು.
ನಾನು ಕಕ್ಕಾ  ಬಿಕ್ಕಿ ಅದೇ,ಆ ಟ್ರಾಫಿಕ್ ಪೋಲಿಸ್ ಗೆ ಏನ್ ಹೇಳ್ಬೇಕು ಅಂತ ಗೊತ್ತಾಗಲಿಲ್ಲ,ಸರ್ ಥ್ಯಾಂಕ್ಸ್ ಅಂದೆ,ಇರ್ಲಿ ಇರ್ಲಿ ಹುಷಾರಾಗಿ ಹೋಗು,ದುಡ್ಡನ್ನ ಸರಿಯಾಗಿ ಇಟ್ಕೋ ಅಂತ ಹೇಳಿ ಹೋದರು.
ಮತ್ತೆ  ಅದೇ  ರೀತಿ  ಸ್ವಲ್ಪ  ಕಾಯ್ತಾ  ಇದ್ದೆ ,ಆ  ಬಸ್  ಸ್ಟಾಪ್  ಹತ್ತಿರ ಫುಟ್  ಪಾತಿನಲ್ಲಿ   ಒಬ್ರು  ಗಂಡ  ಹೆಂಡತಿ  ಹಣ್ಣು
ಮಾರುತ್ತ ಇದ್ರೂ ಬಹುಷಃ  ಆ  ಪೋಲಿಸ್  ನನ್ನ  ಬಗ್ಗೆ  ಅವರಿಗೆ  ಹೇಳಿರಬೇಕು  ಅನ್ಸುತ್ತೆ .
ಅವರು  ನನ್ನನ್ನು  ಕರೆದು  "ಬಾರಪ್ಪ  ಇಲ್ಲಿ ,ದುಡ್ಡನ್ನ  ಹುಷಾರಾಗಿ  ಇತ್ಕೊಲದು  ತಾನೆ ,ಇಷ್ಟೊಂದ್  ಜನ  ಇದಾರೆ ,ಯಾರ್  ಎತ್ಕಂಡ್ರೋ   ಏನೋ ?"
ಅಂತ ಹೇಳಿ ಬೇಡ ಅಂದ್ರು ಊಟ  ಮಾಡಿದ್ಯೋ  ಇಲ್ವೋ , ತಗೋ ,ತಿನ್ನು ಅಂತ ಬಾಳೆಹಣ್ಣು ಕೊಟ್ಟರು
ಸರಿ  ಹಾಸನದಲ್ಲಿ  ನಮ್ಮ  ಅಕ್ಕನ  ಹತ್ರ  ಹೇಳಿ  ದುಡ್ಡು  ಇಸ್ಕೊಳನ  ಅಂತ  ಅಂದ್ರೆ ,ಯಾಕೋ  ಭಯ ಆಯಿತು ,ಅವರು  ಬೈತಾರೆ  ಅಂತ .
ಅವಾಗ  ನನ್ನ  ಹತ್ರ  ಮೊಬೈಲ್  ಕೂಡ  ಇರ್ಲಿಲ್ಲ .ಎಷ್ಟೋ  ಜನದ  ಫೋನ್  ನಂಬರ್  ನೆನಪಲ್ಲಿತ್ತು .
ತಕ್ಷಣ  ಅಲ್ಲಿ  ಕಾಯಿನ್  ಫೋನ್  ಇಂದ  ಅರಸಿಕೆರೆಯಲ್ಲಿರುವ  ನನ್ನ  ಒಬ್ಬ  ಫ್ರೆಂಡ್ ಗೆ   ಫೋನ್  ಮಾಡಿ ,ಇಂಗಿಂಗೆ ಆಗೋಗಿದೆ ,ನಂಗೆ  ದುಡ್ಡು  ಬೇಕು  ಇವಾಗ ,ಇನ್ನು  ಅರ್ಧ  ಗಂಟೇಲಿ
ಅಲ್ಲಿಗೆ  ಬರ್ತೀನಿ  ಅಂತ  ಹೇಳಿ  ಹೊರಟೆ .
ಅರಸಿಕೆರೆಯಲ್ಲಿ  ಅವನ  ಹತ್ರ ದುಡ್ಡು  ಇಸ್ಕೊಂಡು  ಹಾಸನಕ್ಕೆ  ಹೋಗಿ ,ನನ್ನ  ಅಕ್ಕನ  ಮನೇಲಿ  ಉಳ್ಕೊಂಡೆ .
ಆ  ಕಡೆ  ನಮ್ಮ  ಮನೇಲಿ  ನಾನು  ಬರ್ತೀನಿ  ಅಂತ  ಅಪ್ಪ  ಅಮ್ಮ  ಇಬ್ರು  ಕಾಯ್ತಿದ್ದಾರೆ  .ರಾತ್ರಿ  ಎಷ್ಟೊತ್ತು  ಆದರು   ಬರ್ಲಿಲ್ಲ  ಅಂತ  ನನ್ನ  ಕ್ಲಾಸ್ ಮೇಟ್  ಒಬ್ಬನಿಗೆ  ಫೋನ್  ಮಾಡಿದ್ದಾರೆ
(ನನ್ನ  ಹತ್ರ  ಮೊಬೈಲ್  ಇರಲಿಲ್ಲವಾದ್ದರಿಂದ  ಅವನೇ  ನನ್ನ  ಮನೆ  ಮತ್ತು  ನಂಗೆ  ಮೀಡಿಯೇಟರ್   ,ನಮ್ಮ  ಮನೆಯಿಂದ  ಏನಾದ್ರು  ವಿಷಯ  ಇದ್ರೆ  ಅವನಿಗೆ  ಫೋನ್  ಮಾಡ್ತಿದ್ರು
"ಅವನು  ಸಂಜೆನೇ  ಹೋದ ,ಅವನನ್ನ  ನಾನೇ  ಬಸ್  ಸ್ಟಾಪ್ ಗೆ  ಡ್ರಾಪ್  ಮಾಡಿದ್ದು " ಅಂತ  ಹೇಳಿ  ಬಿಟ್ಟಿದ್ದ .
ಎಲ್ಲಿ  ಹೋಗಿರಬಹುದು  ಅಂತ   ಮನೇಲಿ  ಯೋಚನೆ ,
ಬೆಳಗ್ಗೆ  ಹೋದ  ಮೇಲೆ  ಲೇಟ್  ಆಯಿತು ,ಅರಸಿಕೆರೆಯಿಂದ   ಬಸ್  ಸಿಗಲಿಲ್ಲ ,ಅದಕ್ಕೆ  ಹಾಸನದಲ್ಲಿ  ಉಳ್ಕೊಂಡೆ  ಅಂತ  ಹೇಳಿದೆ ,ಆದ್ರೆ  ಪರ್ಸ್  ವಿಷ್ಯ  ಮಾತ್ರ  ಹೇಳಲಿಲ್ಲ .
ಕೊನೆಗೂ  ಮನಸು  ತದೆಯೋಕ್ಕೆ  ಆಗದೆ   ಅಮ್ಮನ   ಹತ್ತಿರ  ಹೇಳ್ದೆ ,ಅಪ್ಪಾಜಿಗೆ  ಮಾತ್ರ  ಯಾವದೇ  ಕಾರಣಕ್ಕೂ  ಹೇಳ್ಬೇಡಿ  ಅಂತಾನು  ಹೇಳಿದ್ದೆ .
 ಆದ್ರೆ  ಬ್ಯಾಂಕ್ ನಲ್ಲಿ   ನನ್ನ  ಫೀ ರಶೀದಿ ಕೇಳ್ದಾಗ  ಅದು  ಕೂಡ  ಕಳೆದು  ಹೋದ್ದರಿಂದ  ಅಪ್ಪನ  ಹತ್ರ  ಅವಾಗ  ಈ  ವಿಷ್ಯ  ಹೇಳಲೇ  ಬೇಕಾಯಿತು  .
(ಅವತ್ತು ಆ ಪೋಲಿಸ್ ಮತ್ತು ಹಣ್ಣು ಅಂಗಡಿಯ ಗಂಡ ಹೆಂಡತಿ ಇಷ್ಟು ಜನರ ಸಹಾಯಕ್ಕೆ  ನಾನು ಯಾವತ್ತು ಚಿರ ಋಣಿ )

14 comments:

  1. ಈ ತರಹಾ ಸಹಾಯಕ್ಕೆ ಬರೋ ಜನರನ್ನು ನೋಡಿದಾಗ, ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎನ್ನೋ ಭರವಸೆ ಹುಟ್ಟುತ್ತದೆ.

    ReplyDelete
  2. ಪ್ರಿಯ ಗಿರೀಶ್ ಲೇಖನ ಮತ್ತು ಬರವಣಿಗೆಯ ರೀತಿ ಉತ್ತಮವಾಗಿದೆ .ಅಲ್ಲಲ್ಲಿ ಕೆಲವುಕಡೆ "ಅ" ಕಾರದ ಬದಲು "ಹ"ಕಾರವು "ಹ"ಕಾರದ ಬದಲು "ಅ"ಕಾರವು ಕಾಣಿಸುತ್ತದೆ ...... ಸರಿಪಡಿಸಿ

    ಪ್ರೀತಿ ಇರಲಿ

    ಮಹಾಬಲಗಿರಿ ಭಟ್

    ReplyDelete
  3. ee thara traffic police sigodu tumba kashta.... nim adrushta avattu chennagittu anisutte bidi....
    nimage aa varshada mareyada ugadi gift aagittu aa event!!!!?

    HAPPY UGADI:)

    ReplyDelete
  4. ಅಯ್ಯೋ! ಎಷ್ಟು ಕಷ್ಟ ಅನುಭವಿಸಿದಿರಿ.. ಎಲ್ಲರ ಬಳಿ ದುಡ್ಡು ಕೀಳುವ ಪೋಲೀಸರು ನಿಮಗೆ ದುಡ್ಡು ಕೊಟ್ಟರೆಂದರೆ ಆಶ್ಚರ್ಯವಾಯಿತು.

    ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು!

    ReplyDelete
  5. @sunaath sir :ನಿಜ ಮನುಷ್ಯತ್ವ ಇನ್ನು ಜೀವಂಥವಾಗಿರುವುದಕ್ಕೆಇಂಥ ಸನ್ನಿವೇಶಗಳೇ ಸಾಕ್ಷಿ

    @ಮಹಾಬಲಗಿರಿ:ಖಂಡಿತ ತಪ್ಪನು ಸರಿಪಡಿಸುತ್ತೇನೆ,ಧನ್ಯವಾದಗಳು

    @ವಿದ್ಯಾ:ಹೌದು ಆ ವರ್ಷ ಅದು ನನಗೆ ಒಂದು ರೀತಿಯ ಗಿಫ್ಟ್ ಆಗಿತ್ತು

    @ಪ್ರದೀಪ್:ಈ ಥರ ಒಂದೊಂದು ಸನ್ನಿವೇಶಗಳನ್ನ ಅನುಭವಿಸಬೇಕು,ಕೆಲವು ರೀತಿಯ ಪಾಠ ಹೇಳಿ ಕೊಡುತ್ತವೆ ಇವು

    ReplyDelete
  6. Happy Ugadi Girish!!
    thanks for coming to my blog
    :-)
    malathi S

    ReplyDelete
  7. ನಮ್ಮಲ್ಲಿ ಇನ್ನೂ ಮನುಷ್ಯತ್ವ ಇದೆ...ಎಂದು ಪೋಲಿಸ್ ತೋರಿಸಿಕೊಟ್ಟಿದ್ದಾರೆ....

    ReplyDelete
  8. @ವಾಣಿಶ್ರೀ ಭಟ್:Thank u
    @Asha:you are right..some where we will find such people

    ReplyDelete
  9. ಮಾನವೀಯತೆ ಇನ್ನೂ ಇದೆ... ಇದು ಸಮಾಧಾನ ತರುತ್ತದೆ...
    ನಿಮಗೂ ಯುಗಾದಿಯ ಶುಭಾಶಯಗಳು..

    ReplyDelete
  10. ಗಿರೀಶ್,
    ನಿಜ ಚಿರಋಣಿಯಾಗಿರಲೇ ಬೇಕು... ಸಹಾಯಕ್ಕೆ ಬರುವವರು ವಿರಳ ಆದ್ರೆ ಇನ್ನೂ ಮನುಷ್ಯತ್ವ ಜೀವಂತವಾಗಿದೆ ಅಲ್ಲವೇ?

    ReplyDelete