ಹೊನ್ನಾರು...ಇದು ಉಗಾದಿಯಲ್ಲಿ ಹಳ್ಳಿಗಳಲ್ಲಿ ನಡೆಯುವ ಒಂದು ಪದ್ದತಿ.
ಉಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತಾರೆ...ಆದ್ದರಿಂದ ಹೊಸ ವರುಷದ ದಿನ ಹಳ್ಳಿಗಳಲ್ಲಿ ತಮ್ಮ ತಮ್ಮ ಜಮೀನಿನಲ್ಲಿ ಮೊದಲ ಬೇಸಾಯ ಮಾಡುತ್ತಾರೆ...ಈ ಮೊದಲ ಬೇಸಾಯಕ್ಕೆ ಹೊನ್ನಾರು ಹೂಡುವುದು ಎಂದು ಹೇಳುತ್ತಾರೆ...
ಈ ದಿನ ರೈತರು ತಮ್ಮ ನೇಗಿಲುಗಳನ್ನೆಲ್ಲ ಸ್ವಚ್ಛ ಮಾಡಿ ,ಎತ್ತುಗಳಿಗೆ ಸ್ನಾನ ಮಾಡಿಸಿ,ನೇಗಿಲು ಮತ್ತು ಎತ್ತಿಗೆ ಪೂಜೆ ಮಾಡುತ್ತಾರೆ.ನಂತರ ಎತ್ತನ್ನು ಅಲಂಕರಿಸಿ ಅದರ ಕೊರಳಿಗೆ ಗಂಟೆಯ ಹಾರ ಮತ್ತು ಹೂವಿನ ಹಾರ ಹಾಕುತ್ತಾರೆ,
ಅದರ ಅಲಂಕಾರದ ಭಾಗವಾಗಿ ಎತ್ತಿನ ಕೊಂಬಿಗೆ ಬಣ್ಣ ಹಚ್ಚುತ್ತಾರೆ,ಜೊತೆಗೆ ಅದರ ಬೆನ್ನಿನ ಮೇಲೆ ಹೊಸ ಬಟ್ಟೆ ಹಾಕುತ್ತಾರೆ,ಕೆಲವರು ರೇಷ್ಮೆ ಬಟ್ಟೆ ಹಾಕಿದರೆ,ಕೆಲವರು ಸಾಮಾನ್ಯ ಬಟ್ಟೆ ಹಾಕುತ್ತಾರೆ,ಆದರೆ ಅದು ಹೊಸ ಬಟ್ಟೆ ಆಗಿರುತ್ತದೆ.
ಇದೆ ರೀತಿ ಮನೆಯಲ್ಲಿ ಯಾರಾದ್ರೂ ಒಬ್ಬರು ಆ ದಿನ ಬೇಸಾಯ ಮಾಡಬೇಕು,ಕೆಲವೊಮ್ಮೆ ಮನೆಯ ಯಜಮಾನ ಅಥವಾ ಹಿರಿಯ ಮಗ ,ಹೀಗೆ ಯಾರಾದರು ಒಬ್ಬರು ಸಜ್ಜಾಗುತ್ತಾರೆ.ಅದಲ್ಲದೆ ಬೇಸಾಯ ಮಾಡುವ ವ್ಯಕ್ತಿ ಕೂಡ ಹೊಸ ಬಟ್ಟೆ(ಬಿಳಿ ಬಟ್ಟೆ ) ಹಾಕಿಕೊಂಡು ಮಧು ಮಗನಂತೆ ತಯಾರಾಗುತ್ತಾನೆ..ತಲೆಗೆ ಪೇಟವನ್ನು ಕೂಡ ಕಟ್ಟುತ್ತಾರೆ,ಇದಲ್ಲದೆ ಆ ವ್ಯಕ್ತಿ ಕೈಯಿಗೆ ಉಂಗುರ ಹಾಕಿಕೊಳ್ಳುವುದು ವಾಡಿಕೆ.
ಅವನಿಗೆ ಮನೆಯ ಹೆಣ್ಣು ಮಕ್ಕಳು ಆರತಿ ಎತ್ತಿ,ಹಣೆಗೆ ಅಕ್ಷತೆಯನ್ನು ಇಟ್ಟು ಅರಸಿ ಕಳಿಸಿಕೊಡುತ್ತಾರೆ.
ಇದೆ ರೀತಿ ಪ್ರತಿಯೊಂದು ಮನೆಗಳಲ್ಲಿ ನಡೆಯುತ್ತದೆ...ನಂತರ ಊರಿನ ಹೆಬ್ಬಾಗಲಿನ ವರೆಗೂ ಇವರು ನೇಗಿಲನ್ನು ಹೊತ್ತು,ಎತ್ತುಗಳನ್ನು ಹಿಡಿದು ಹೋಗುತ್ತಾರೆ,
ಪ್ರತಿಯೊಂದು ಮನೆಯವರು ಕೂಡ ಹೆಬ್ಬಾಗಲಿನ ವರೆಗೂ ಬರುತ್ತಾರೆ,ನಂತರ ಅವರೆಲ್ಲರೂ ತಮ್ಮ ತಮ್ಮ ಹೊಲಗಳಿಗೆ ಹೋಗಿ
ಬೇಸಾಯ ಮಾಡಿಕೊಂಡು ಬರುತ್ತಾರೆ..ಆ ದಿನ ಅವರು ಕೇವಲ ೩ ಸುತ್ತು ಮಾತ್ರ ಹೂಡುತ್ತಾರೆ,ಕೆಲವು ಊರುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ...
ಮನೆಗೆ ವಾಪಸ್ ಬರುವಾಗ ಯಾರೇ ಆದರು ಅವರು ಹೆಬ್ಬಾಗಲಿನ ಹೊಳಗಡೆ ಹೋಗುವಾಗ ನೇಗಿಲು ಮತ್ತು ನೊಗವನ್ನು
ಎತ್ತಿನ ಮೇಲೆ ಬಿಡುವುದಿಲ್ಲ,ಬದಲಾಗಿ ಅವರು ಅದನ್ನು ಹೊತ್ತುಕೊಂಡು ಹೋಗಬೇಕು.
ಇದು ಪ್ರತಿ ದಿನ ಅವರು ಬೇಸಾಯ ಮಾಡಿ ಮನೆಗೆ ಹಿಂದಿರುಗುವಾಗ ಪಾಲಿಸ ಬೇಕಾದ ಕರ್ತವ್ಯ.
ಹಿಂದೆ ಯಾರಾದರು ಆ ರೀತಿ ಉರ ಹೊಳಕ್ಕೆ ಪ್ರವೇಶ ಮಾಡಿದರೆ,ಊರಿನ ಮುಖಂಡರುಗಳು ಸೇರಿ ಪಂಚಾಯಿತಿ ಮಾಡಿ ಅವರಿಗೆ ದಂಡ ವಿಧಿಸುತ್ತಿದ್ದರು,ಈಗಲೂ ಕೆಲವು ಕಡೆ ಇದು ಚಾಲ್ತಿಯಲ್ಲಿದೆ.
ಆದರೆ ಈ ಬಾರಿ ಉಗಾದಿ ಸೋಮವಾರ ಬಂದಿದ್ದರಿಂದ ಯಾರು ಕೂಡ ಹೊನ್ನಾರು ಮಾಡಲಿಲ್ಲ,ಕಾರಣ ಯಾವುದೇ ಸೋಮವಾರ ಯಾವುದೇ ಹಳ್ಳಿಗಳಲ್ಲಿ ಬೇಸಾಯ ಮಾಡುವುದಿಲ್ಲ,ಯಾಕೆಂದರೆ ಎತ್ತುಗಳನ್ನು ಅವರು ಬಸವ(ನಂದಿ) ಏಂದು ಭಾವಿಸಿ ಪೂಜಿಸುತ್ತಾರೆ,ಮತ್ತು ಬಸವ ಹುಟ್ಟಿದ್ದು ಸೋಮವಾರ ಆದ್ದರಿಂದ ಅವತ್ತು ಯಾವುದೇ ಕಾರಣಕ್ಕೂ ಬೇಸಾಯ ಮಾಡುವುದಿಲ್ಲ.ಆದ್ದರಿಂದ ಈ ಬಾರಿ ಬೇರೆ ದಿನ ಈ ಕಾರ್ಯಕ್ರಮವನ್ನು ಮಾಡುತ್ತಾರೆ.
ನಿಮ್ಮ ಹಳ್ಳಿ ಆಚರಣೆ ಬಗ್ಗೆಯ ವಿವರಣೆ ತುಂಬಾ ಚೆನ್ನಾಗಿದೆ ಗಿರೀಶ್
ReplyDeleteನಿಜವಾಗಿ ಎದುರಿಗೆ ನೋಡಿದಂತೆ ಅನ್ನಿಸಿತು..
ಹೊನ್ನಾರು ಎನ್ನುವ ಹೊಸ ಪದದ ಪರಿಚಯವಾಯ್ತು.. ಧನ್ಯವಾದಗಳು
ಹೊನ್ನಾರು ಆಚರಣೆಯ ಬಗೆಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.
ReplyDeleteಗಿರೀಶ್,
ReplyDeleteದೇಸಿ ಸಂಸ್ಕೃತಿಯ ಮಾಹಿತಿಗೆ ಧನ್ಯವಾದಗಳು.
ಬರಹ ಅದ್ಬುತವಾಗಿದೆ.
ಹೊನ್ನಾರು ಬಗೆಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು
ReplyDelete| ಜನನೀಂ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ | ಎಂದು ರಾಮಾಯಣದಲ್ಲಿ ಉಲ್ಲೇಖವಿದೆ, ಅದೇ ರೀತಿ ನಿಮ್ಮ 'ಹೊನ್ನಾರು' ಬಗ್ಗೆ ಚಿತ್ರಣ ಕೊಟ್ಟಿದ್ದೀರಿ, ಬರೆಯುತ್ತ ಸಾಗಿ, ಶುಭಮಸ್ತು.
ReplyDeletePradeep,Sunaath sir,Sandeep,ಚುಕ್ಕಿಚಿತ್ತಾರ,V.R.Bhat sir,Thank u all:-)
ReplyDelete