Onsite offer!!
ಈ ಐಟಿ ಕಂಪನಿ ಅಂದ ಮೇಲೆ ಅವಾಗ ಅವಾಗ ಬರ್ತಾ ಇರುತ್ತೆ !!!
ಫ್ಲೈಟ್ ನಲ್ಲಿ ಕೂತಿದ್ದೀನಿ ,ಇನ್ನೊಮ್ಮೆ ಆನ್ ಸೈಟ್ ..... .ಪ್ಲೇನ್ ಟೇಕ್ ಆಫ್ ಆಗಿದೆ ,ಆಕಾಶದಲ್ಲಿ ತೇಲುತ್ತ ಇದೀನಿ . ಹಾಗೆ ಕಿಡಕಿಯಿಂದ ಹೊರಗಡೆ ಸುಮ್ಮನೆ ನೋಡಿದೆ ,ಸಂಜೆಯ ಸುಂದರ ದೃಶ್ಯಗಳು .ಸ್ವರ್ಗದಂತೆ ಭಾಸವಾಗುತ್ತ ಇದೆ .
ಫ್ಲೈಟ್ ನಲ್ಲಿ ಕೂತಿದ್ದೀನಿ ,ಇನ್ನೊಮ್ಮೆ ಆನ್ ಸೈಟ್ ..... .ಪ್ಲೇನ್ ಟೇಕ್ ಆಫ್ ಆಗಿದೆ ,ಆಕಾಶದಲ್ಲಿ ತೇಲುತ್ತ ಇದೀನಿ . ಹಾಗೆ ಕಿಡಕಿಯಿಂದ ಹೊರಗಡೆ ಸುಮ್ಮನೆ ನೋಡಿದೆ ,ಸಂಜೆಯ ಸುಂದರ ದೃಶ್ಯಗಳು .ಸ್ವರ್ಗದಂತೆ ಭಾಸವಾಗುತ್ತ ಇದೆ .
ಆ ಸುಂದರ ದೃಶ್ಯದಲ್ಲಿ ನನ್ನಲ್ಲಿ ನಾನು ಕಳೆದು ಹೋಗಿಬಿಟ್ತಿದ್ದೆ...
ಯಾರದೋ ಧ್ವನಿ ಎಚ್ಚರಿಸಿತು "excuse me sir, would you like to have something?"
ಹಿಂದಕ್ಕೆ ತಿರುಗಿ ನೋಡಿದ್ರೆ ನನಗೆ ಆಶ್ಚರ್ಯ ,ನನ್ನ ಸುಂದರ ಹಳೆ ಸ್ಕೂಲ್ ಮೇಟ್ ಬಿಂದು .
"ಏ ಬಿಂದು , ನೀನು ? ಇಲ್ಲಿ ? ವಾವ್ .........ಇಷ್ಟು ಚೆನ್ನಾಗಿ ಕಾಣ್ತಿದ್ಯ ,........ ಅದು air-hostess ಡ್ರೆಸ್ನಲ್ಲಿ "
ಸೀರೆ ಉಟ್ಟು ,ಮಲ್ಲಿಗೆ ಹೂವು ಮುಡಿದಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿದ್ದಳು .ಮುದ್ದಾದ ಬೊಂಬೆಯ ಹಾಗೆ ...ಆದರೆ ಅವರಿಗೆ ಅದೇ ಯೂನಿ ಫಾರಂ ...
"ಗಿರಿ ,ವಾವ್ ,ನಂಗೆ ನಂಬಕ್ಕೆ ಆಗ್ತಿಲ್ಲ .....ಏನಿಲ್ಲಿ .ಓಹ್ ಸಾರೀ .ನಾನು ಡ್ಯೂಟಿಯಲ್ಲಿ ಇದೀನಿ ,ಆಮೇಲೆ ಮಾತಡ್ತಿನಿ "
ಒಂದು ಕಿರು ನಗೆ ಬೀರಿ ,ಆಕಡೆ ಹೋದಳು .ನನ್ನ ಕಣ್ಣಿಗೆ ನಂಬಕ್ಕೆ ಆಗ್ತಿಲ್ಲ ..ನನ್ನ ಸ್ಕೂಲ್ ದಿನಗಳ ನೆನಪಾಯಿತು..
ಅವಳ ಬಗ್ಗೆ ಎಷ್ಟು ತಲೆ ಕೆಡಿಸ್ಕೊಂಡಿದ್ದೆ ,ಸ್ಕೂಲ್ ಬಿಟ್ಟಮೇಲೆ ಅವಳ ಹಿಂದೆ ಫಾಲೋ ಮಾಡ್ಕೊಂಡ್ ಹೋಗೋದು..... ಎಷ್ಟೊಂದ್ ಲವ್ ಲೆಟರ್ ಬರ್ದಿದ್ದೆ ,ಆದ್ರೆ ಯಾವದನ್ನು ಅವಳಿಗೆ ಕೊಡೋ ಧೈರ್ಯ ಆಗಿರಲಿಲ್ಲ..........ಕ್ಲಾಸ್ನಲ್ಲಿ
ಅವಳಿಗೋಸ್ಕರ 2-3 ಜನ ಹುಡುಗರು ,ನನ್ನ ಕ್ಲಾಸ್ ಮೇಟ್ಸ್ ಗಳ ಜೊತೆ ಜಗಳ ಆಡಿದ್ದು.... .
ನನಗೆ ತಡೆಯೋಕ್ಕೆ ಹಾಗ್ತಿಲ್ಲ ,ಅವಳನ್ನ ಇನ್ನೊಮ್ಮೆ ನೋಡ್ತಾ ಇದ್ದೆ , ಬಿಂದು ಸ್ಕೂಲ್ ದಿನಗಳಿಗಿಂತ ಇವಾಗ ಇನ್ನೂ ಚೆನ್ನಾಗಿ ಕಾಣ್ತಿದ್ದಾಳೆ...
ಅವಳು ಕೂಡ ನನ್ನ ಕಡೆ ನೋಡಿ ನಕ್ಕಳು ,ನಂತರ ಬೇರೆ air-hostess ಗಳಿಗೆ ಏನೋ ಹೇಳಿದಳು .ಅವರು ಕೂಡ ನನ್ನ ಕಡೆ ತಿರುಗಿ ಕಿರು ನಗೆ ಬೀರಿದರು..
ಆಮೇಲೆ ಏನಾಯಿತು ಅಂತ ಗೊತ್ತೇ ಆಗ್ಲಿಲ್ಲ ,ಅವಳ ಕೊಲಿಗೂ ಕೂಡ ಸಕತ್ ಆಗಿದ್ದಾಳೆ..
ಒಹ್ ಮೈ ಗಾಡ್ !!!!!!!!!!!!!!!ಇವತ್ತು ನನ್ನ ಒಂದು ಕನಸನ್ನು ನನಸು ಮಾಡ್ಬಿಟ್ಟೆ .
ಮತ್ತೆ ಹೊರಗಡೆ ನೋಡಲು ಶುರು ಮಾಡಿದೆ ,ನಾವಾಗಲೇ ಮೋಡಗಳ ಮೇಲೆ ಇದ್ವಿ .ಹೊರಗಡೆ ಮುಸ್ಸಂಜೆ ತುಂಬ ಚೆನ್ನಗಿಕಾಣ್ತಿತ್ತು ,ಹೊಳಗಡೆ ಕೂಡ ,ಅವಳ ನಗುವಿಂದಾಗಿ ............. .
ಹೇಗೋ ಧೈರ್ಯ ಮಾಡಿಕೊಂಡು ಅವಳ ಹತ್ತಿರ ಮಾತಾಡಿಸೋಣ ಅಂತ ಹೋದೆ ,ಅವಳಿಗೂ ನನಗೇನ್ ಬೇಕು ಅಂತ ತಿಳಿದಿರಬೇಕು .
ನನ್ನ ಹತ್ತಿರ ಬಂದು "ಸಾರೀ ಕಣೋ ,ನಿನ್ನ ಜೊತೆ ತುಂಬ ಮಾತಾಡಕ್ಕೆ ಆಗ್ಲಿಲ್ಲ ......,
so ಹೇಗಿದ್ದೀಯ ,ಇಷ್ಟು ವರ್ಷ ಎಲ್ಲಿದ್ದೆ ????,ಏನು ನಿನ್ನ ಜೀವನದ ಕಥೆ ,ಏನಕ್ಕೆ ಹೋಗ್ತಿದ್ಯ ?"
ಹೇಗೋ ಧೈರ್ಯ ಮಾಡಿಕೊಂಡು ಅವಳ ಹತ್ತಿರ ಮಾತಾಡಿಸೋಣ ಅಂತ ಹೋದೆ ,ಅವಳಿಗೂ ನನಗೇನ್ ಬೇಕು ಅಂತ ತಿಳಿದಿರಬೇಕು .
ನನ್ನ ಹತ್ತಿರ ಬಂದು "ಸಾರೀ ಕಣೋ ,ನಿನ್ನ ಜೊತೆ ತುಂಬ ಮಾತಾಡಕ್ಕೆ ಆಗ್ಲಿಲ್ಲ ......,
so ಹೇಗಿದ್ದೀಯ ,ಇಷ್ಟು ವರ್ಷ ಎಲ್ಲಿದ್ದೆ ????,ಏನು ನಿನ್ನ ಜೀವನದ ಕಥೆ ,ಏನಕ್ಕೆ ಹೋಗ್ತಿದ್ಯ ?"
"hmmm...ನಾನ್ ಅಲ್ಲೇ ಇದ್ದೆ ,ನೀನೆ ಸ್ಕೂಲ್ ಮುಗಿದ ಮೇಲೆ ಎಲ್ಲಾ ಬಿಟ್ಟು ಹೋಗಿದ್ದು ,ನಿನ್ನನ್ನ ಎಲ್ಲೆಲ್ಲೋ ಹುಡುಕಿದೆ ,ಆದ್ರೆ ನೀನ್ ಮಾತ್ರ ಸಿಗಲಿಲ್ಲ ,ಆಮೇಲೆ ಕಾಲೇಜ್ ಮುಗಿತು ,
ಒಳ್ಳೆ ಕಂಪನಿಯಲ್ಲಿ ಕೆಲಸ ಸಿಗ್ತು ,ನಂಗೊತ್ತಿಲ್ಲ ,ನಂಗೆ ನಮ್ಮ ಕಂಪನಿ ಇಷ್ಟೆಲ್ಲಾ ಕೊಟ್ಟಿದೆ ,ಇವಾಗ ಆನ್ ಸೈಟ್ ಹೋಗ್ತಾ ಇದೀನಿ ,ಯಾವಾಗ ವಾಪಸ್ ಬರ್ತೀನಿ ಅಂತ ಗೊತ್ತಿಲ್ಲ ,ಬಿಂದು ನಿಂಗೊತ್ತಾ, ನಂಗೆ ನನ್ನ ಜೀವನದಲ್ಲಿ ಎಲ್ಲಾ ಸಿಕ್ಕಿದೆ ,ಆದ್ರೆ 'ಒಬ್ಬರನ್ನ' ಬಿಟ್ಟು ,ನನ್ನ ಸೋಲು ,ಗೆಲುವು ,ನನ್ನ ಪ್ರಪಂಚ ,ಎಲ್ಲದನ್ನು ಹಂಚಿಕೊಳ್ಳುವಂತವರು,"
ನೇರವಾಗಿ ಅವಳ ಕಣ್ಣನ್ನೇ ನೋಡಿದೆ ,ಆ ನೀಲಿ ಕಂಗಳು ,ನನಗೆ ಅನ್ನಿಸಿತು ಅವಳಿಗೆ 'ಒಬ್ಬರನ್ನ' ಅಂದ್ರೆ ಯಾರು ಅಂತ ಗೊತ್ತಾಗಿರಬಹುದು ಅಂತ .......ಅವಳ ಕಣ್ಣಲ್ಲಿ ಸ್ವಲ್ಪ ನೋವಿತ್ತು ಅನ್ಸುತ್ತೆ ..........
"ಸಾರೀ ಕಣೋ ,ನಾನು ಹೋಗಬೇಕು ,ನಿಂಗೆ ನನ್ನ ಫೋನ್ ನಂಬರ್ ಕೊಡ್ತಿನಿ ,ಆಮೇಲೆ ಮಾತಾಡೋಣ "ಅಂತ ಹೇಳಿ ಹೋದಳು ...
ವಾಪಸ್ ನನ್ನ ಸೀಟ್ ನಲ್ಲಿ ಕುಳಿತೆ ,ನಿಶ್ಯಬ್ಧ .................,ಹೊರಗಡೆ ನೋಡ್ತಾ ಇದೀನಿ ,ಅವಳ ಉತ್ತರಕ್ಕೆ ಕಾಯ್ತಾ ಇದೀನಿ ............
ಅಷ್ಟೊತ್ತಿಗಾಲೆ ಹೊರಗಡೆ ಕತ್ತಲು ,ಇದ್ದಕಿದ್ದ ಹಾಗೆ ಗುಡುಗು ,ಮಿಂಚು....... ,ನನ್ನ ಹೃದಯದಲ್ಲಿ ಆದ ಹಾಗೆ .........
ಇದ್ದಕಿದ್ದ ಹಾಗೆ ಪ್ಲೇನ್ ಕೂಡ ಅಲುಗಾಡಲು ಶುರು ಆಯಿತು...... .ಎಲ್ಲರೂ ಬೆಚ್ಚಿ ಬಿದ್ದರು .
ವಾಪಸ್ ನನ್ನ ಸೀಟ್ ನಲ್ಲಿ ಕುಳಿತೆ ,ನಿಶ್ಯಬ್ಧ .................,ಹೊರಗಡೆ ನೋಡ್ತಾ ಇದೀನಿ ,ಅವಳ ಉತ್ತರಕ್ಕೆ ಕಾಯ್ತಾ ಇದೀನಿ ............
ಅಷ್ಟೊತ್ತಿಗಾಲೆ ಹೊರಗಡೆ ಕತ್ತಲು ,ಇದ್ದಕಿದ್ದ ಹಾಗೆ ಗುಡುಗು ,ಮಿಂಚು....... ,ನನ್ನ ಹೃದಯದಲ್ಲಿ ಆದ ಹಾಗೆ .........
ಇದ್ದಕಿದ್ದ ಹಾಗೆ ಪ್ಲೇನ್ ಕೂಡ ಅಲುಗಾಡಲು ಶುರು ಆಯಿತು...... .ಎಲ್ಲರೂ ಬೆಚ್ಚಿ ಬಿದ್ದರು .
ಬಿಂದು ಮೈಕ್ ಕಡೆ ಹೋಗುವುದನ್ನು ನೋಡಿದೆ ,ಯಾರು ಹೆದರ ಬಾರದು ,ಹೊರಗಡೆ ಗುಡುಗು ಮಿಂಚಿ ಇದೆ ಅಷ್ಟೇ,ಇಲ್ಲೇ ಹತ್ತಿರ ಇರೋ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡ್ತಿವಿ ಅಂತ ಮೈಕ್ ನಲ್ಲಿ ಹೇಳಿದಳು...
ಆದ್ರೆ ಪ್ಲೇನ್ ಇನ್ನೂ ಜೋರಾಗಿ ಅಲುಗಾಡಲು ಶುರು ಆಯಿತು ,ಎಲ್ಲರೂ ಇದೆ ತಮ್ಮ ಜೀವನದ ಕೊನೆ ಕ್ಷಣ ಅಂತ ಹೆದರಿ ಬಿಟ್ಟಿದ್ರು .
ನಾನ್ ಮಾತ್ರ ಬಿಂದುನನ್ನೇ ನೋಡ್ತಿದ್ದೆ ,ಅವಳು ನನ್ನನ್ನೇ ನೋಡ್ತಾ ಇದ್ದಾಳೆ .
ನನ್ನ ಬೆನ್ನಿಗೆ ಏನೋ ತಾಗಿದಂತಾಯಿತು ,ನನ್ನ ಮುಂದೆ ಪೂರ್ತಿ ಕತ್ತಲು .ಪೂರ್ತಿ ನಿಶ್ಯಬ್ಧ ,
ಇನ್ನೂ ಆ ಪ್ಲೇನ್ ಅಲುಗಾಡುತ್ತಿದೆ ,ಜನರ ಹೆದರಿಕೆ ,
ಯಾರೋ ಕೂಗಿದರು "ಗಿರೀssssssssssssಶ್ !!!!"
"ಗಿರೀಶ್ ,ಎದ್ದೇಳು .ಇವತ್ತು ಕೂಡ ಆಫೀಸಿನಲ್ಲಿ ಮಲಿಗಿದ್ಯ ,..........ನಂಗೆ ಆ ರಿಪೋರ್ಟ್ ಬೇಗ ಬೇಕು "
ಸುತ್ತ ನೋಡಿದೆ ,ಪ್ಲೇನು ಇಲ್ಲ,ಬಿಂದುನೂ ಇಲ್ಲ,ಆನ್ ಸೈಟು ಇಲ್ಲ
ನನ್ನ ಮ್ಯಾನೇಜರನ ದುರುಗುಟ್ಟಿಕೊಂಡು
ಇನ್ನೂ ಗೊತ್ತಿಲ್ಲ ,ಪ್ರತಿ ದಿನ ಮಧ್ಯಾನ 2-3 ಗಂಟೆಗೆ ಯಾಕ್ ಇಗಾಗುತ್ತೆ ಅಂತ ....
ಹ್ಹ ಹ್ಹಾ! ಗಿರೀಶ್ ಮಧ್ಯಾಹ್ನ ಊಟ ಕಮ್ಮಿ ಮಾಡಿದರೆ 2-3 ಘಂಟೆಗೆ ಹಾಗೆ ಆಗುವುದು ತಪ್ಪುತ್ತದೆ ಅನ್ನಿಸುತ್ತೆ.. ಏನಂತೀರ? ಕಥೆ ಚೆನ್ನಾಗಿದೆ.. ಬರೆಯುತ್ತಿರಿ.. ನಿರೂಪಣೆ ಇನ್ನೂ ಚೆನ್ನಾಗಿ ಮೂಡಿ ಬರಲಿ ಎಂದು ಹಾರೈಸುವೆ..
ReplyDeleteಗಿರೀಶ,
ReplyDeleteಒಳ್ಳೇ ಹಾಸ್ಯಮಯ ಕತೆ. Carry on!
haha.....cool kanasu:)i mean kathe!?:P
ReplyDeleteಗಿರೀಶ್, ಕಥೆ ಮಜವಾಗಿದೆ..ಸೂಪರ್ ಕುತೊಹಲ
ReplyDeleteನೀವು ಸ್ವಲ್ಪ ಲೇಟ್ ಆಗೋದ್ರಿ .... ATLEAST ಫೋನ್ ನಂಬರ್ , ತಗೊಬೇಕಾಗಿತ್ತು..
ಇನ್ನು ಹಲವು ಕಥೆಗಳು ಬರಲಿ ....
@Pradeep:ಊಟ ಕಡಿಮೆ ಮಾಡಿದ್ರು ನಿದ್ದೆ ಬರುತ್ತಲ್ಲ,ಇಂಥ ಕನಸು ಬಿಳುತ್ತೆ
ReplyDelete@Sunaath sir:dhanyavaadagalu
@Vidya:Thank u
@Sandeep:ಹೌದು ಸ್ವಲ್ಪ ಲೇಟ್ ಆಗೋಯ್ತು ,ಫೋನ್ ನಂಬರ್ ತಗೋ ಬೇಕಿತ್ತು ಅಲ್ವ ?
hahaha chennagide kathe nimmadu....
ReplyDeleteayyo ree kanasa??? che nanenu nija ankondu bittidnalaa???!!! bejar madidri..........:-(
ReplyDeleteಚೆನ್ನಾಗಿದೆ.........:)
ReplyDeleteಛೇಯ್ ಬರೀ ಕನಸಾ..........????:(
ಕನಸಲ್ಲಿ ಸಿಕ್ಕ ಬಿಂದು ,ಆನ್-ಸೈಟ್ ಪ್ರಾಜೆಕ್ಟ್ಸ್
ಎಲ್ಲ ನನಸಾಗಲಿ ......:)
kanasu kandu manasannu haguragolisova sulabha upaya...
ReplyDeletechennagide girish ....
@ಮನಸು :ಕಥೆ ಮೆಚ್ಚಿದಕ್ಕೆ ಧನ್ಯವಾದಗಳು
ReplyDelete@ಅಶ್ವಿನಿ:ಇದೆ ಬರಿ ಕನಸು ಅಷ್ಟೇ...ಯಾವುದಾದರು ಕಾಲಕ್ಕೆ ನಿಜ ಆಗಬಹುದು...ಈಗಿನ್ಬ ಬೇಸರ ಅವಾಗ ಮರೆಯಿರಿ
@ಕಾವ್ಯ:ಬರಿ ಕನಸು ..ಏನೋ ನೋಡಣ ನನಸಾಗಬಹುದೇನೋ...
@ಆಶಾ:ಕನಸು ಮನಸ್ಸಿನ ಎಷ್ಟೋ ತುಮುಲಗಳನ್ನು ಹಗುರ ಮಾಡುತ್ತದೆ.