Thursday, April 28, 2011

ಅಳಿಯ ದೇವರು!!

ಅದೊಂದು ಸುಂದರ  ಹಳ್ಳಿ.ಅಲ್ಲೊಂದು ಸಣ್ಣ  ಸಂಸಾರ.ಆ ಮನೆಯಲ್ಲಿ ಒಂದು ಅಜ್ಜಿಯು ಇತ್ತು.ತನ್ನ ಒಬ್ಬಳೇ ಮಗಳ ಮದುವೆ ಆಗಿದೆ,ಹಾಗೆ ತನ್ನ ಮಗನ ಮದುವೆ ಕೂಡ ಒಂದೆರಡು ವರ್ಷದ ಮುಂಚೆಯಷ್ಟೇ ಆಗಿದೆ.
ಗಂಡ  ತೀರಿಕೊಂಡಿದ್ದರೂ ಆ ನೋವನ್ನು ಮರೆತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾ,ತೋಟದಲ್ಲಿ ಏನಾದರು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದಾಳೆ...ಈ ಅಜ್ಜಿಯ ಮಗ ಆ ಊರಿನ ದೇವಸ್ಥಾನದ ಕಾರ್ಯದರ್ಶಿ,ಊರಲ್ಲಿ ಒಳ್ಳೆ ಮರ್ಯಾದೆ ಗೌರವ ಇದೆ..ತನ್ನ ಗಂಡ ತೀರಿಕೊಂಡ ಮೇಲೆ ಆ ಸ್ಥಾನ ಆಕೆಯ ಮಗನಿಗೆ ಸಿಕ್ಕಿತು.
ಹೀಗೆ ಒಂದು ದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಪಾದಕ್ಕೆ ಒಂದು ಮುಳ್ಳು ಹೊಕ್ಕಿತು.ಅದು ಸಾಧಾರಣ  ಮುಳ್ಲಾಗಿರಲಿಲ್ಲ,ಅದೊಂದು ವಿಷ ಪೂರಿತ ಮುಳ್ಳು...
ಆ ಮುಳ್ಳಿನಿಂದ ಆಕೆಯ ಪಾದದಲ್ಲಿ ಸಣ್ಣ ಗಾಯ ಆಯಿತು,ಅದು ಕ್ರಮೇಣ ದೊಡ್ಡದಾಗುತ್ತ ಹೋಯಿತು...ಆಕೆ ಚಿಕ್ಕಂದಿನಿಂದ  ಹೊಲ ಗದ್ದೆಗಳಲ್ಲಿ ಒಡನಾಟ ಜಾಸ್ತಿ ಇತ್ತಾದ್ದರಿಂದ ಇದೊಂದು ಮಾಮೂಲಿ ಎಂದು ಸುಮ್ಮನಾದಳು.ಅದು ದೊಡ್ಡ ಗಾಯವಾದಮೇಲೆ ಅವರು ಆಸ್ಪತ್ರೆಯ ಕಡೆ ಹೋಗಿದ್ದು.
ಆಗ ಗೊತ್ತಾಯಿತು ಆಗಲೇ ಆಕೆಗೆ ಗ್ಯಾಂಗ್ರಿನ್  ಕಾಯಿಲೆ ತಗುಲಿ ಆಗಿದೆ ಎಂದು..ಕಾಲು ಕತ್ತರಿಸಬೇಕು ಇಲ್ಲವಾದರೆ ಆಕೆಯ ಸಾವು ಹತ್ತಿರದಲ್ಲೇ  ಇದೆ ಎಂದು ವೈದ್ಯರು ಸಾರಾಸಗಟಾಗಿ ಹೇಳಿದರು..
ಯಾರೋ ಒಬ್ಬರು ನೆಂಟರು ನಾಟಿ ವೈದ್ಯರ ಬಳಿ ಆದರೆ ಇದು ವಾಸಿ ಆಗುತ್ತದೆ ಎಂದು ಹೇಳಿದರು,ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಕೂಡ  ವಾಸಿ ಆಗದೆ,ಅವರು ಕೂಡ ಈಗಾಗಲೇ ಸಮಯ ಮೀರಿ ಆಗಿದೆ,ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಏನು ತೋಚದೆ ವಿಧಿ ಬರಹ ಹೀಗೆ ಇರಬಹುದೇನೋ ಎಂದು ಆಕೆಯನ್ನು ಮನೆಗೆ ವಾಪಸ್ ಕರೆ ತಂದರು..
ಆದರೂ  ಆಕೆಯ ಅಳಿಯ ಮಾತ್ರ ಮತ್ತೆ ಬೇರೆ ಕಡೆ ಒಳ್ಳೆಯ ಆಸ್ಪತ್ರೆಗೆ ಸೇರಿಸಲು ತನ್ನ ಹೆಂಡತಿಯೊಂದಿಗೆ ಒತ್ತಾಯ ಮಾಡುತ್ತಾನೆ ,ಆದರೆ ಆಕೆಯ ಮಗ ಮಾತ್ರ ಒಪ್ಪಲಿಲ್ಲ,ಎಲ್ಲಿ ದುಡ್ಡು ಕೊಡಬೇಕಾಗುತ್ತದೋ ಎಂದು..
ಆ ಅಳಿಯ ಬೇರೆ ಉರಿನಲ್ಲಿ ಕೆಲಸದ ಮೇಲೆ ಇದ್ದ ಕಾರಣ ತನಗೆ ಸ್ವತಃ ಬಂದು ತನ್ನ ಅತ್ತೆಯನ್ನು ನೋಡಲು ಸಾಧ್ಯವಾಗಲಿಲ್ಲ,ಹೇಗಾದರೂ ಮಾಡಿ ಆಕೆಯನ್ನು ಆ ಕಾಯಿಲೆ ಇಂದ  ಪಾರು ಮಾಡಬೇಕು,ಆದಷ್ಟು ಇನ್ನಷ್ಟು ದಿನ ಬದುಕುವ ಹಾಗೆ ಮಾಡಬೇಕು ಎಂದು ತನ್ನ ಹೆಂಡತಿಗೆ ಹೇಳಿ ಆಸ್ಪತ್ರೆಗೆ ಸೇರಿಸುತ್ತಾನೆ,ಆಸ್ಪತ್ರೆಯ ಖರ್ಚನ್ನೆಲ್ಲ ತಾನೇ ನೋಡಿಕೊಳ್ಳುವುದಾಗಿ ,ಆಸ್ಪತ್ರೆಗೆ ಸೇರಿಸಲು ಬೇಡ ಅಂದಿದ್ದ ಆಕೆಯ ಮಗನಿಗೆ ಹೇಳುತ್ತಾನೆ..
ಇತ್ತ ಆಸ್ಪತ್ರೆಯಲ್ಲಿ ನಿಧಾನವಾಗಿ ಸ್ವಲ್ಪ ಮಟ್ಟಿಗೆ  ಚೇತರಿಸಿಕೊಳ್ಳುತ್ತಿದ್ದಾಳೆ  ಅಜ್ಜಿ,ಆದರೆ ಮಗ ಮಾತ್ರ ಆಕೆ ಇನ್ನೇನು ಸತ್ತು ಹೋಗುತ್ತಾಳೆ ಎಂದು ವೈದ್ಯರು ಹೇಳಿದ್ದಾರೆ  ಎಂದು ತಿಳಿದು,ಇನ್ನೂ ಜಾಸ್ತಿ ದಿನ ಬದುಕುವುದಿಲ್ಲ ಎಂದು ನಂಬಿ ,ದೇವಸ್ಥಾನದ ಕಾರ್ಯಕ್ರಮಗಳಿಗೆ ಬರುವ  ಹೊಲಗೇರಿಯ   ವಾದ್ಯದವರಿಗೆ  ತನ್ನ ತಾಯಿಯ  ಶವ ಸಂಸ್ಕಾರಕ್ಕೂ ಬರಬೇಕು ಎಂದು ಶವ ಸಂಸ್ಕಾರಕ್ಕೆ ಅಣಿ ಮಾಡಿಕೊಳ್ಳುತ್ತಿದ್ದಾನೆ.ಹಾಗೆಯೇ ಶಾಮಿಯಾನ,ಉಳಿ ಅನ್ನ ಮಾಡಲು ಪಕ್ಕದ ಊರಿನ ಬ್ರಾಹ್ಮಣರಿಗೆ ಅಡುಗೆಗೆ ,ಗುಂಡಿ ತೋಡಲು ಕೂಲಿಯವರಿಗೆ ಎಲ್ಲಾ ಹೇಳಿಬಿಟ್ಟಿದ್ದಾನೆ...
ಹೀಗೆ ತನ್ನ ತಾಯಿಯ ಜೀವದ ಬಗ್ಗೆ ಸ್ವಲ್ಪವೂ ಯೋಚಿಸದೆ ಆಕೆಯ ಶವ ಸಂಸ್ಕಾರದ ಬಗ್ಗೆ ಯೋಚಿಸುತ್ತಿದ್ದಾನೆ,ಆದರೆ ಅವನ ಹೆಂಡತಿ ಮಾತ್ರ ಆಸ್ಪತ್ರೆಯಲ್ಲಿ ಅಜ್ಜಿಯ ಮಗಳೊಂದಿಗೆ  ಅಂದರೆ ತನ್ನ ಅತ್ತಿಗೆಯೊಂದಿಗೆ ಅಜ್ಜಿಯ ಸೇವೆ ಮಾಡುತ್ತಿದ್ದಾಳೆ..
ಅಜ್ಜಿಯ ಅಳಿಯನೇ ಇದೆಲ್ಲರ ಖರ್ಚು ನೋಡಿಕೊಳ್ಳುತ್ತಿದ್ದಾನೆ,ಆದರೆ ಅವರು ಮಾತ್ರ ಬೇರೆ ಉರಿನಲ್ಲಿ ತನ್ನ ಕೆಲಸದ ಮೇಲೆ ಇರುವುದರಿಂದ ಬಂದು ನೋಡಲು ಹಾಗಿರಿವುದಿಲ್ಲ,ಹೀಗೆ ಸ್ವಲ್ಪ ದಿನ ಆದ ಮೇಲೆ ಆಸ್ಪತ್ರೆ  ಇಂದ ಮನೆಗೆ ವಾಪಸ್ ಕರೆದುಕೊಂಡು ಬರುತ್ತಾರೆ,ಸ್ವಲ್ಪ  ಲವಲವಿಕೆ ಅಜ್ಜಿಯ ಮುಖದಲ್ಲಿ ಇತ್ತು,ಆದರೂ ತನ್ನ ಮಗ ಒಂದು ದಿನ ತನ್ನನ್ನು ನೋಡಲು ಬಂದಿಲ್ಲ ,ಅವನ ಮನೆಯಲ್ಲಿ ಇರುವುದಕ್ಕೂ ಸ್ವಲ್ಪ ಬೇಸರ ಇತ್ತು..
ಆದರೆ ಮಗ ಮಾತ್ರ ಇನ್ನು ಆಕೆ ಜಾಸ್ತಿ ದಿನ ಬದುಕುವುದಿಲ್ಲ ಎಂದೇ ಭಾವಿಸಿದ್ದಾನೆ...
ಹೀಗೆ ಸುಮಾರು ೨ ವರ್ಷ ಯಾಕೆ ಬದುಕಿರುತ್ತಾಳೆ,ಇಷ್ಟು ದಿನ ಆಕೆಯ ಬದುಕಿಗ ಕಾರಣನಾದ ಅಳಿಯ ಮಾತ್ರ ಒಂದು ದಿನ ನೋಡಲು ಬಂದಿರಲಿಲ್ಲ,ಅದಾರೆ ಅವನಲ್ಲಿ ಪ್ರೀತಿ ಇದೆ.ಬರಬೇಕೆಂಬ ಮನಸ್ಸಿದ್ದರೂ ಕೆಲಸದ ಒತ್ತಡ ದಿಂದ ಬರಲು ಆಗಿಲ್ಲ...
ಹೀಗ ಮಾತ್ರ ಅಜ್ಜಿ ದಿನ ಏಣಿಸುವ ಪರಿಸ್ಥಿತಿಯಲ್ಲಿ ಇದ್ದಾಳೆ,ಅವಳ ಮೈಯಲ್ಲಿ ಶಕ್ತಿ ಪೂರ್ತಿ ಕುಂದಿ ಹೋಗಿದೆ.ಆಕೆಗೂ ತಾನು ಸಾಯುವ ದಿನ ಹತ್ತಿರ ಬಂದಿದೆ ಎಂದು ತಿಳಿಯಿತು,ಕೊನೆಗೆ ತನ್ನ ಅಳಿಯನನ್ನು ಆದಷ್ಟು ಬೇಗೆ ಕರೆಸಿ ಎಂದು ಗೋಳಿಟ್ಟಳು ..
ಅಳಿಯ ಕೂಡ ಈ ವಿಷಯ ತಿಳಿದು ಒಂದು ದಿನ ಬಿಡುವು ಮಾಡಿಕೊಂಡು ಬರುತ್ತಾನೆ,ಹಾಸಿಗೆ ಹಿಡಿದಿದ್ದ ಆಕೆಗೆ ಒಂದಷ್ಟು  ಅನ್ನ ತಿನ್ನಿಸಿ ,ಸ್ವಲ್ಪ  ನೀರು ಕುಡಿಸುತ್ತಾನೆ..ಆದಾದ ಸ್ವಲ್ಪ ಒಟ್ಟಿಗೆ ಆಕೆ ನಿರಾಳವಾಗಿ ಪ್ರಾಣ ಬಿಡುತ್ತಾಳೆ,ಕೊನೆ ಕಾಲದಲ್ಲಿ ಮಗ ಚೆನ್ನಾಗಿ ನೋಡಿಕೊಳ್ಳದಿದ್ದಾಗ ಅಳಿಯ ಆದಷ್ಟು ಪ್ರೀತಿ  ತೋರಿಸಿದ್ದ,
ಮಗ  ಬಹು ದಿನದಿಂದ ಶವ ಸಂಸ್ಕಾರಕ್ಕೆ ಕಾಯುತ್ತಿದ್ದ ,ಅದಕ್ಕೆ ಮುಂಚೆಯೇ ಎಲ್ಲರಿಗೂ ಹೇಳಿದ್ದ,
ಆದರೆ ಆ ದಿನ ಮನೆಗೆ ಬಂದ ನೆಂಟರು,ಬಂಧುಗಳು,ಉರ ಜನ ಇವರೆಲ್ಲರ ಬಾಯಲ್ಲಿ "ಇಂತ ಅಳಿಯನನ್ನು ಪಡೆಯಕ್ಕೆ ಎಷ್ಟು ಪುಣ್ಯ ಮಾಡಿದ್ದಳೋ ಈ ಅಜ್ಜಿ "
"ಮಗ ಸರಿಯಾಗಿ ನೋಡಿ ಕೊಳ್ಳಲಿಲ್ಲ,ಆದರೆ ಅಳಿಯ ಮಾತ್ರ ಎಷ್ಟು ಚೆನ್ನಾಗಿ ನೋಡಿಕೊಂಡ "
"ಕೊನೆ ತುತ್ತು ಅಳಿಯನ ಕೈಲೆ ತಿನ್ನಬೇಕು ಅಂತ ಇಷ್ಟು ದಿನ ಕಾಯುತ್ತಿದ್ದಲೋ ಏನೋ?"ಹೀಗೆ ಮಾತಾಡಿಕೊಳ್ಳುತ್ತಿದ್ದರು.
(ಮೊದಲ ಬಾರಿ ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ,ತಪ್ಪಿದ್ದರೆ ತಿಳಿಸಿ,ತಿದ್ದಿಕೊಳ್ಳುವೆ,
ಎಡವಿದ್ದರೆ ಎಬ್ಬಿಸಿ, ಎಚ್ಚರಗೊಲ್ಲುವೆ....)

10 comments:

 1. Hi Girish,

  Nimma blog ge modala bheti....haage nimma modala kathe oduva avakasha....Kathavastu chennagide, Niroopane innu swalpa sharp aagbahudittu...aadre modala sala aadrinda no problem....innu hecchu hecchu kathe nimma Blog nalli moodi barali...nimma haleya barahagalannu odutta iddini....Dhanyavadgalu......

  ReplyDelete
 2. ಕತೆಯನ್ನು ಆಸಕ್ತಿಕರವಾಗಿ ಬರೆಯಬಲ್ಲ ಸಾಮರ್ಥ್ಯ ನಿಮಗಿದೆ. ಬೆರಳಚ್ಚಿನ ಸಮಯದಲ್ಲಿ ಕಾಗುಣಿತದ ದೋಷಗಳು ಆಗಿರಬಹುದು. ಹಾಗಾಗದಂತೆ ಗಮನ ನೀಡಿರಿ.

  ReplyDelete
 3. ಕಥೆ , ಅದರ ನಿರೂಪಣೆ ಚೆನ್ನಾಗಿ ಬಂದಿದೆ , ಇನ್ನಷ್ಟು ಕಥೆಗಳು ಬರಲಿ

  ReplyDelete
 4. ನಿಮ್ಮ ಸಣ್ಣ ಕಥೆಯ ತಿರುಳು ಚೆನ್ನಾಗಿದೆ.ಒಂದೆರಡು ಕಡೆ ಪದಗಳು ತಪ್ಪಾಗಿ ಮುದ್ರಣವಾಗಿದೆ[ ಆಗಲಿಲ್ಲ ಅನ್ನುವುದು ಹಾಗಲಿಲ್ಲ ಆಗಿದೆ ][ನೋಡಲು ಹಾಗಿರಿವುದಿಲ್ಲ ಇದು ನೋಡಲು ಹೋಗಿರಲಿಲ್ಲಾ ಆಗಬೇಕು] ಉಳಿದಂತೆ ಒಳ್ಳೆಯ ನಿರೂಪಣೆ ಚೆನ್ನಾಗಿದೆ.ಪ್ರಯತ್ನ ಮುಂದುವರೆಸಿ.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 5. ಸುನಾಥರು ಹೇಳಿದ್ದನ್ನೇ ಹೇಳುತ್ತಿದ್ದೇನೆ, ಶುಭವಾಗಲಿ

  ReplyDelete
 6. chennagide kathe Girish ,innashtu bereyiri thappade odalu nividdeve...

  ReplyDelete
 7. ತೆಗೆದುಕೊ೦ಡಿರುವ ಕಥಾ ವಿಷಯ ಚೆನ್ನಾಗಿದೆ ಗಿರೀಶ್, ಬರೆಯುತ್ತಾ ಸಾಗಿದ೦ತೆ ಶೈಲಿ ಉತ್ತಮಗೊಳ್ಳುತ್ತದೆ. ಬರೆಯುತ್ತಿರಿ.ಅಭಿನ೦ದನೆಗಳು.

  ReplyDelete
 8. ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿದೆ ಗಿರೀಶ್.. ನಿಮ್ಮಲ್ಲಿ ಪ್ರತಿಭೆ ಹುದುಗಿರುವುದು ನಿಜ.. ಬರೆಯುತ್ತಾ ಹೋದಷ್ಟು ನಿಮ್ಮ ಪ್ರತಿಭೆ ಬೆಳೆಯುತ್ತಾ ಹೋಗುವುದು ಖಂಡಿತ.. ಬರೆಯುತ್ತಿರಿ.. ಅಭಿನಂದನೆಗಳು!

  ReplyDelete
 9. @Ashok sir:ನನ್ನ ಬ್ಲಾಗ್ ಗೆ ತಮಗೆ ಸ್ವಾಗತ..ಖಂಡಿತ ಇನ್ನು ಹೆಚ್ಚು ಕಥೆಗಳನ್ನು ಬರೆಯುತ್ತೇನೆ...ಹೀಗೆ ಬರುತ್ತಿರಿ ಮತ್ತು ಪ್ರೋತ್ಸಾಹಿಸಿ
  @Sunaath sir:ಸರ್ ಧನ್ಯವಾದಗಳು...ಇನ್ನು ಮುಂದೆ ಆ ರೀತಿ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇನೆ
  @Sandeep:ಥ್ಯಾಂಕ್ಸ್
  @Balu sir:ನಿಮ್ಮ ಸಲಹೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು..ಖಂಡಿತ ಪ್ರಯತ್ನ ಮುಂದುವರೆಸುತ್ತೇನೆ.
  @V.R.Bhat sir:ಧನ್ಯವಾದಗಳು

  ReplyDelete
 10. @Asha madam:ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..ಮತ್ತೆ ಭೇಟಿ ಕೊಡಿ
  @Prabhamani madam:ಮತ್ತಷ್ಟು ಕಥೆಗಳನ್ನು ಬರೆಯುತ್ತೇನೆ...ಖಂಡಿತ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನ ಮಾಡುತ್ತೇನೆ..
  @Pradeep:ಧನ್ಯವಾದಗಳು..ಹೀಗೆ ಬರುತ್ತಿರಿ..

  ReplyDelete