Saturday, May 7, 2011

ದೀಪಾವಳಿ !!


ನಾಳೆ ದೀಪಾವಳಿ,ಹಬ್ಬದ ತಯಾರಿ ಸ್ವಲ್ಪ ಜೋರಾಗಿಯೇ ನಡೆದಿದೆ....ಮನೆಯಲ್ಲಿ ಏನೋ ಒಂಥರಾ ಸಂಭ್ರಮ...೬ ವರ್ಷದ ಮುದ್ದಾದ ಮಗಳಿದ್ದಾಳೆ,ಅವಳಿಗೆ ಹಬ್ಬದ ಸಂಭ್ರಮ,ಪಟಾಕಿ ಎಲ್ಲಾ  ಕೊಡಿಸಿ ಹಾಗಿದೆ...
 ಇದ್ದಕಿದ್ದ ಹಾಗೆ  ಕಾಲಿಂಗ್ ಬೆಲ್ ರಿಂಗ್ ಆಯಿತು..ಯಾರು ಅಂತ ಬಾಗಿಲು ತೆಗೆದು ನೋಡಿದರೆ ರಮೇಶ...,ರಮೇಶ ಬರುತ್ತಾನೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ...
ರಮೇಶ ಮತ್ತು ನಾನು,ಇಬ್ಬರೂ ಕಾಲೇಜು ದಿನಗಳಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು,ಅವನು ನನ್ನ ಸೀನಿಯರ್,ನಾನು ನನ್ನ ಡಿಗ್ರಿ ಕೊನೆ ವರ್ಷಕ್ಕೆ ಬಂದಾಗ ಅವನಾಗಲೇ
ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ...ನನ್ನ ಡಿಗ್ರಿ ಮುಗಿದ ಮೇಲೆ ಇಬ್ಬರ ಮನೆಯಲ್ಲೂ ಒಪ್ಪಿಸಿ ಮದುವೆ ಮಾಡಿಕೊಳ್ಳುವುದಾಗಿ ಮಾತಾಗಿತ್ತು...ಆಗ ಅವನು ವಾರಕ್ಕೊಮ್ಮೆ ಊರಿಗೆ ಬಂದಾಗ ಇಬ್ಬರೂ ಭೇಟಿ ಮಾಡುತ್ತಿದ್ದೆವು....

ಬೇರೆ ದಿನಗಳಲಿ ಬರಿ ಫೋನು ಮತ್ತು ಇ-ಮೇಲ್ ನಲ್ಲಿ ನಮ್ಮಿಬ್ಬರ ಸಂಭಾಷಣೆ...
ಆದರೆ ದುರದೃಷ್ಟ ಅಂದರೆ ಇದೆ ಇರಬೇಕು.ಮನೆಯಲ್ಲಿ ಈ  ವಿಷಯ ಹೇಗೋ ತಿಳಿದು,ನನಗೆ ಮದುವೆ ನಿಶ್ಚಯ ಮಾಡಿ ಬಿಟ್ಟರು,ನಾನು ಮದುವೆ ಆದರೆ ರಮೆಶನನ್ನೇ ಆಗುತ್ತೇನೆ ಎಂದು ಹಠ ಹಿಡಿದರು ಕೂಡ ಯಾರು  ನನ್ನ ಮಾತನ್ನು ಕೇಳಲು ತಯಾರಿಲ್ಲ,ಕಡೆ ಪಕ್ಷ ನನ್ನ ಅಕ್ಕರೆಯ ಅಕ್ಕ ಕೂಡ,ಪ್ರೀತಿಯ ಅಣ್ಣ ಕೂಡ ಒಪ್ಪಲಿಲ್ಲ,ಅವನೇ ನನ್ನ ಮದುವೆಗೆ ಪಿತೂರಿ ಹೂಡಿದ್ದು...ಅವನೇ ಈ ಹುಡುಗನನ್ನು ಹುಡುಕಿದ್ದು, ಅಹಹ ಎಂತ ಹುಡುಗನನ್ನು ಹುಡುಕಿದ್ದಾನೆ,
ಅವನಿಗೂ ಮತ್ತು ರಮೇಶನಿಗೂ ಅಜ ಗಜಾಂತರ ವ್ಯತ್ಯಾಸ...

ನನ್ನ ತಾಯಿ ಕೂಡ ನನ್ನ ಮಾತನ್ನು ಕೇಳಲು ತಯಾರಿಲ್ಲ ,ಕಡೆ ಪಕ್ಷ ಮದುವೆ ಸ್ವಲ್ಪ ದಿನ ಮುಂದೂಡಿ,ನನ್ನ ಪರೀಕ್ಷೆ ಮುಗಿದ ಮೇಲೆ ಆಗುತ್ತೇನೆ ಎಂದರೂ ಯಾರು ಒಪ್ಪಲಿಲ್ಲ.
ಇಗಲೇ ಮದುವೆ ಆಗ ಬೇಕು ಎಂದರೆ ನಾನು ರಮೇಶನನ್ನು ಆಗುತ್ತೇನೆ ಎಂದೇ,ಆಗ ತಿಳಿಯಿತು ಇವರೆಲ್ಲ ಯಾಕೆ ಇವನನ್ನು ನನ್ನಿಂದ ದೂರ ಮಾಡುತ್ತಿದ್ದಾರೆ ಎಂದು,ನಮ್ಮಿಬ್ಬರದು ಬೇರೆ ಬೇರೆ ಜಾತಿ,ಇದೊಂದೇ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಇವರ್ಯಾರು ಒಪ್ಪಲಿಲ್ಲ ....

ನನಗೆ ಮದುವೆ ಗೊತ್ತಾಗಿರುವ ವಿಷಯ ಅವನಿಗೆ ಇನ್ನೂ ತಿಳಿದಿರಲಿಲ್ಲ.,ನನ್ನ ಮೊಬೈಲನ್ನು ಅಣ್ಣ ಕಿತ್ತುಕೊಂಡಿದ್ದ .ಅವನಿಂದ ಫೋನ್ ಏನಾದ್ರೂ ಬಂದರೆ ಇವನೇ ಮಾತಾಡಿ ಅವನಿಗೆ ವಿಷಯ ಹೇಳುತ್ತಾನೋ ಏನೋ ಭಯ ಕಾಡುತಿತ್ತು..,ಅಥವಾ ಅವನಿಗೆ ಬೆದರಿಕೆ ಏನಾದ್ರೂ ಹಾಕಿದ್ದನೋ ಅದೂ ಗೊತ್ತಿಲ್ಲ . ...ನನ್ನ ಮದುವೆಯ ಸಮಯದಲ್ಲಿ ರಮೇಶ ಬಂದು ನನ್ನ ಅಣ್ಣನ ಜೊತೆ ಮಾತಾಡಿದ್ದ ಅಂತೆ...ಆದರೆ ಅವನಿಗೆ ಅಣ್ಣ ಮತ್ತು  ಅವನ ಸ್ನೇಹಿತರು ಸೇರಿ ಹೊಡೆದಿದ್ದರು... 
ನಂತರ ರಮೇಶ ಸುಮಾರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದನಂತೆ...ಹಾಗೆ ಇವರೆಲ್ಲ ಸೇರಿ ಥಳಿಸಿದ್ದರು.. ಆದಾದ ನಂತರ ನಾನು ಅವನನ್ನು ನೋಡುತ್ತಿರುವುದು ಇದೆ ಮೊದಲು...

ಕೊನೆಗೂ ಮನೆಯವರ ಇಚ್ಚೆಯಂತೆ ನನ್ನ ಮದುವೆ  ಅವರು ನೋಡಿದ ಹುಡುಗನ ಜೊತೆಗೆ ಆಯಿತು,ಈಗ ನಮಗೆ ೬ ವರ್ಷದ ಮಗಳಿದ್ದಾಳೆ...ನಾವು ತುಂಬ ಅನ್ಯೋನ್ಯ ವಾಗಿದ್ದೇವೆ ಎಂದು ತಿಳಿದಿದ್ದರೆ ಅದು ತಪ್ಪು,...
ಆ ಸಮಯದಲ್ಲಿ ಅಣ್ಣ ಅಕ್ಕ ಮತ್ತು ಮನೆಯವರಿಗೆಲ್ಲ ನನ್ನ ಗಂಡನ ವಿಷಯ ಗೊತ್ತಿದ್ದರು ಯಾರು ಕೂಡ ನನಗೆ ಹೇಳಿರಲಿಲ್ಲ,ಇವನಿಗೆ ಆಗಲೇ ಒಂದು ಮದುವೆ ಆಗಿ ಒಬ್ಬ ೧೨  ವರ್ಷದ ಮಗ ಕೂಡ ಇದ್ದನು,ಇವನ ಮೊದಲ ಹೆಂಡತಿಗೆ  ಕಾಯಿಲೆ ಇತ್ತು,ಅವಳು ಜಾಸ್ತಿ ದಿನ ಬದುಕುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ...
ಆದ್ದರಿಂದ ಇವನಿಗೆ ಇನ್ನೊಂದು ಮದುವೆ ಆಗಲು ಕೆಲವರು  ಸಲಹೆ ನೀಡಿದ್ದರು ಮತ್ತು ಇವರು ನಮ್ಮ ದೂರದ ಸಂಭಂದಿ ಕೂಡ ಆಗಿದ್ದರು ..ನನ್ನ ಅಣ್ಣನಿಗೆ ಈ ವಿಷಯ ಮತ್ತು ನನ್ನ ರಮೇಶನ ಸ್ನೇಹದ ವಿಷಯ ಎರಡು ಒಟ್ಟಿಗೆ ಗೊತ್ತಾಗಿತ್ತು...
ಅಪ್ಪ ಅಮ್ಮನನ್ನು ಹೇಗೋ ಒಪ್ಪಿಸಿ ನನ್ನನ್ನು ಇವನ ಜೊತೆ ಮದುವೆ ಮಾಡಿಸಿ ಬಿಟ್ಟ...ನನ್ನ ಗಂಡ ನನಗಿಂತ ಏನಿಲ್ಲ ಅಂದರೂ ೧೫ ವರ್ಷ ದೊಡ್ಡವನು ..
ಆದ್ರೆ ನನಗೆ ಈ ಎಲ್ಲಾ ವಿಷಯ ಗೊತ್ತಾಗಿದ್ದು ನಾನು  ಇಲ್ಲಿಗೆ ಮದುವೆ ಆಗಿ ಬಂದು ೧ ವರ್ಷದ ನಂತರ..ಆದರೆ ಇವರ ಮೊದಲ ಹೆಂಡತಿ ಏಗೋ ಬದುಕಿದ್ದಾಳೆ,
ಆ ಕಾಯಿಲೆ ಕೂಡ ವಾಸಿಯಾಗಿದೆ..ಅವಳು ಮತ್ತು ಅವಳ ಮಗನನ್ನು ಅವಳ ತವರು ಮನೆಯಲ್ಲಿ ಇರಿಸಿದ್ದರಿಂದ ನನಗೆ ಈ  ವಿಷಯವೇ ಗೊತ್ತಿರಲಿಲ್ಲ,ಹೀಗೆ ಒಂದು ದಿನ ಅವಳು ಬಂದು ತನ್ನ ಪಾಲನ್ನು ಕೇಳಿದಾಗಲೇ ನನಗೆ ಗೊತ್ತಾಗಿದ್ದು,...
ಏನು ಮಾಡಬೇಕು ಎಂದು ಯೋಚಿಸುವ  ಸ್ಥಿತಿಯಲ್ಲಿ ಕೂಡ ನಾನು ಇರಲಿಲ್ಲ. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಸ್ಥಿತಿ ಏನು ಎಂದು ಅರ್ಥ ಮಾಡಿಕೊಳ್ಳಬಲ್ಲೆ,ಯಾರೇ ಆದರೂ ತನ್ನ ಗಂಡ ತಾನು ಬದುಕಿರುವಾಗಲೇ ಇನ್ನೊಬ್ಬಳನ್ನು ಮದುವೆ ಆಗುವುದನ್ನು ಸಹಿಸಿಕೊಳ್ಳುವುದಿಲ್ಲ.ನನಗೂ  ಅದೇ ರೀತಿಯ ಸ್ಥಿತಿ,ನನ್ನ ಗಂಡ  ನನಗಿಂತ ಮುಂಚೆ ಇನ್ನೋಬಳನ್ನು ವರಿಸಿದ್ದಾನೆ,ಆಕಾಶವೇ ಮೇಲೆ ಬಿದ್ದ ಹಾಗೆ ಆಯಿತು,ಯಾರನ್ನು ದೂರುವ ಪರಿಸ್ಥಿತಿ ಇಲ್ಲ ನನಗೆ....
ಇವನಿಗೆ ಅವಳ ಜೊತೆ ಸಂಸಾರ ಮಾಡಿ ಎಂದು ಹೇಳುವ ಧೈರ್ಯವೂ ಇಲ್ಲ.

ಕೊನೆಗೆ ಅವಳಿಗೆ ಕಾನೂನಿನ ಪ್ರಕಾರ ವಿಚ್ಚೇದನ ಕೊಟ್ಟು,ಅವಳಿಗೆ ಒಂದು ಮನೆಯನ್ನು ಕೊಡಿಸಿದ್ದಾಯಿತು..

ಸಮಯ ಕಳೆದ ನಂತರ ನಮಗೂ ಒಂದು ಮಗುವಾಯಿತು,ಆದರೆ ನನ್ನ ಗಂಡನಿಗೆ ನನ್ನ ಮೇಲೆ ಒಲವು ಕೂಡ ಕಡಿಮೆ ಆಯಿತು.ಯಾವಾಗಲು ಅವಳ ಮನೆಯಲ್ಲಿ ಇರುತ್ತಾನೆ,ಆಫೀಸು ಮುಗಿದ ಮೇಲೆ ಅವಳ ಮನೆಗೇ ಹೋಗುತ್ತಾನೆ,...
 ನನ್ನ ಅಡುಗೆಯೆಲ್ಲ ಮುಸುರೆಗೆ ಹಾಕುವುದು,ಅಪ್ಪ ಎಲ್ಲಿ ಎಂದು ಕೇಳಿದ ಮಗಳಿಗೆ ಆಫಿಸಿನಲ್ಲಿ ಕೆಲಸ ಇರುವುದರಿಂದ ಇವತ್ತು ಬರಲ್ಲ ನಾಳೆ ಬರುತ್ತಾರೆ ಎಂದು ಸುಳ್ಳು ಹೇಳುವುದು ರೂಡಿ ಆಗಿಬಿಟ್ಟಿದೆ.ಅಲ್ಲದೆ ಅವರು ನನ್ನ ಮಗಳ  ಸ್ಕೂಲಿನ ಫೀ ಕೂಡ ಸರಿಯಾಗಿ ದುಡ್ಡು ಕೊಡುತ್ತಿಲ್ಲ...ಆದರೆ ಅವಳ ಮಗನಿಗೆ ಕಾಲೇಜಿಗೆ ಡೊನೇಶನ್ ಕೊಡುತ್ತಾನೆ...ಮನೆ  ಖರ್ಚಿಗೆ ಕೂಡ ಕೊಡುತ್ತಿಲ್ಲ..ಏನೋ ನಂಬಿಕೆ ಇರುವುದರಿಂದ ನಮ್ಮ ಬೀದಿಯ ಅಂಗಡಿ ಮೂರ್ತಿ  ಸಾಲ ಕೊಡುತ್ತಾರೆ,ಸಾಲ  ವಾಪಸ್ ಕೊಟ್ಟು ಆಗಲೇ ೩ ತಿಂಗಳಾಗಿದೆ.ನಾಳೆ ಹಬ್ಬಕ್ಕೆ ಮನೆಗೆ ಬರುತ್ತಾರೆ ಎಂಬುದು ಅನುಮಾನ...

ಕಾಲಿಂಗ್ ಬೆಲ್ ಆದಾಗ ಬಹುಷಃ ನನ್ನ ಗಂಡ ಎಂದು ಬಾಗಿಲು ತೆರೆದರೆ ರಮೇಶ ಬಂದು ನಿಂತಿದ್ದಾನೆ...,ಇಂಥ ಸನ್ನಿವೇಶದಲ್ಲಿ ಅವನನ್ನು ನೋಡಿ ಖುಷಿ  ಪಡಬೇಕೋ ಒಂದೂ ತಿಳಿಯುತ್ತಿಲ್ಲ,ಅವನನ್ನು ನೋಡಿ ಸುಮಾರು ೮ ವರ್ಷ ಆಗಿದೆ,ಅವನನ್ನು ನೋಡುವ ಅವಕಾಶವೇ ಸಿಕ್ಕಿರಲಿಲ್ಲ,

ಈಗ ಅಕಸ್ಮಾತಾಗಿ ಮನೆಗೆ ಬಂದು ಬಿಟ್ಟಿದ್ದಾನೆ,ನಾನು ಒಳಗೆ ಬರಲು ಹೇಳಿ ಮುಂದೆ ನಡೆದೇ,ಅವನಿಗೆ ಮದುವೆ ಆಗಿದೆ ಎಂದು ಭಾವಿಸಿದ್ದೆ  ,ಆದರೆ ಇನ್ನೂ ಆಗಿಲ್ಲ,ಕಾರಣ ಕೇಳಿದರೆ ಆದರೆ ನಿನ್ನನ್ನೇ ಆಗುವುದು,ಇಲ್ಲ ಅಂದರೆ  ಈಗೆ ಇರುತ್ತೀನಿ  ಅಂತ ಬೇರೆ ಹೇಳುತ್ತಿದ್ದಾನೆ,ಅವನ ತಂಗಿ ಮತ್ತು ಇಬ್ಬರೂ ತಮ್ಮಂದಿರ ಮದುವೆ ಆಗಿದ್ದರು ಇವನು ಇನ್ನು ಆಗಿಲ್ಲ...

ಇಷ್ಟು ವರ್ಷ ನನಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ನನ್ನಿಂದ ದೂರ ಇದ್ದ...ಈಗ ನನ್ನ ಕಾಲೇಜು ಸ್ನೇಹಿತರಿಂದ ನನ್ನ ಅಡ್ರೆಸ್ಸ್ ತೆಗೆದುಕೊಂಡು ಬಂದಿದ್ದಾನೆ...

ಇವನು ಬಂದಾಗ ಸಧ್ಯ ನನ್ನ ಗಂಡ ಮನೆಯಲ್ಲಿ ಇಲ್ಲ, ಈಗ  ನನ್ನ ಗಂಡನಿಗೆ ಡಿವೋರ್ಸ್ ಕೊಟ್ಟು ತನ್ನನ್ನು ಮದುವೆ ಆಗಲು ಹೇಳುತ್ತಿದ್ದಾನೆ...
 ನನ್ನ ಮಗಳನ್ನು ಕೂಡ ಕರೆದು ಕೊಂಡು ಹೋಗೋಣ ಎನ್ನುತ್ತಿದ್ದಾನೆ.ಸ್ವಲ್ಪ ಸಮಯ ಯೋಚಿಸ ಬೇಕು ಎಂದು ಹೇಳಿ ಅವನನ್ನು ಕಳಿಸಿ ಬಿಟ್ಟಿದ್ದೇನೆ,ಆದರೆ ಈಗ  ನನ್ನ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲ ಒಂದೇ ಎರಡೇ?

ಒಬ್ಬ ಗಂಡು ಇನ್ನೊಬ್ಬ ಹೆಂಗಸನ್ನು ಮದುವೆ ಆದರೆ ಸಮಾಜ ಒಪ್ಪುತ್ತದೆ,ಆದರೆ ಒಬ್ಬ ಹೆಣ್ಣು ಇನ್ನೊಬ್ಬ ಗಂಡಸನ್ನು ಮದುವೆ ಆದರೆ ಸಮಮಾಜ ಒಪ್ಪುವುದಿಲ್ಲ,ಅದೂ ನೋಡುವ ದೃಷ್ಟಿಯೇ ಬೇರೆ ಆಗಿರುತ್ತದೆ..
ಅಲ್ಲದೆ ಇಷ್ಟು ದಿನ ನನ್ನ ಗಂಡನನ್ನು ಅಪ್ಪ ಎಂದು ಕರೆಯುವ ಮಗಳಿಗೆ ಇವನನ್ನು ಏನು ಅಂತ  ಪರಿಚಯ ಮಾಡಿಕೊಡಲಿ...ಇವನನ್ನು ಏನು ಅಂತ ಕರಿಬೇಕು ಎಂದು  ಹೇಳಿಕೊಡಲಿ?
ಅವಳು ದೊಡ್ಡವಳಾದ ಮೇಲೆ ಕೂಡ ಅವಳಿಗೆ ಈ ವಿಷಯ ಗೊತ್ತಾದರೆ ಅವಳ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು...ನನ್ನ ಮೇಲೆ ಅವಳಿಗೆ ಯಾವ ಭಾವನೆ ಹುಟ್ಟಬಹುದು...
ಅಲ್ಲದೆ ತವರು ಮನೆಯವರ  ಮಾನ  ಮರ್ಯಾದೆ  ಹಾಳು ಮಾಡಿದ  ಹಾಗೆ  ಆಗುತ್ತದೆ ..
ಇದನೆಲ್ಲ  ಯೋಚಿಸಿದರೆ ಬೇಕಿತ್ತಾ ಈ  ಜನ್ಮ ಎಂಬ ಕೊರಗು...ಯಾವಾಗಲೋ ಸಾಯ ಬೇಕು ಎಂದು ನಿರ್ಧಾರ ಮಾಡಿ ಮಗಳ ಮುಖ ನೋಡಿ ಎಷ್ಟಾದರೂ ಕಷ್ಟ ಅನುಭವಿಸಲು ತಯಾರಾಗಿದ್ದೇನೆ...ನಾನು ಸತ್ತರೆ ಅವಳನ್ನು ನನ್ನ ಗಂಡ ಅಂತೂ ಸರಿಯಾಗಿ ಸಾಕುವುದಿಲ್ಲ..ನಾನಿರುವಾಗಲೇ ಹೀಗೆ,ಇನ್ನು ನಾನು ಸತು ಹೋದೆ ಅಂದರೆ ಅವಳ ಜೀವನವನ್ನು ಹಾಳು  ಮಾಡುತ್ತಾನೆ...ಈ ಕಾರಣಕ್ಕೆ ಭಂಡ ಧೈರ್ಯ ಮಾಡಿ ಸಾಯುವ ನಿರ್ಧಾರವನ್ನು ದೂರ ಮಾಡಿದ್ದು....
ಈ ಯೋಚನೆಯಲ್ಲೇ ರಾತ್ರಿ ಪೂರ ನಿದ್ದೆ ಇಲ್ಲದೆ ಕಳೆದದ್ದಾಯಿತು...
ನನ್ನ  ಮಗಳ  ಭವಿಷ್ಯದ ದೃಷ್ಟಿಯಲ್ಲಿ ನೋಡಿದರೆ ನಾನು ರಮೇಶನನ್ನು ಮದುವೆ ಆಗುವುದೇ ಒಳ್ಳೆಯದು ಅನಿಸುತ್ತಿದೆ...ಮಗಳಿಗೆ ಸ್ವಲ್ಪ ಬುದ್ಧಿ ಬಂದ ವಯಸ್ಸಿಗೆ ಈ ವಿಷಯದ ಬಗ್ಗೆ ತಿಳಿ ಹೇಳಬಹುದು ಎಂದು ನನ್ನ ಅನಿಸಿಕೆ...
ರಮೇಶ ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಮತ್ತು ಅವಳ ವಿಧ್ಯಾಭ್ಯಾಸಕ್ಕೆ ಸಹಕರಿಸುತ್ತಾನೆ ಎಂದು ನನ್ನ ನಂಬಿಕೆ...
ಕತ್ತಲು ತುಂಬಿರುವ ನನ್ನ ಬದುಕಲ್ಲಿ ಈ ದೀಪಾವಳಿಯ ದಿನ ರಮೇಶ ಬೆಳಕು ಚೆಲ್ಲಬಹುದು ಎಂಬ ವಿಶ್ವಾಸ ಇದೆ,
ಆದರೂ ಏನು ಮಾಡಬೇಕು ಎಂಬ ಧೃಡ ನಿರ್ಧಾರ ಒಂದಿಲ್ಲ....
ರಮೇಶನ ಜೊತೆ ಹೋದರೆ ಕಟ್ಟಿಕೊಂಡ ಗಂಡನನ್ನು ಬಿಟ್ಟವಳು ಎಂಬ ಹಣೆ ಪಟ್ಟಿ..ಅಲ್ಲದೆ ಗಂಡನ ವರ್ತನೆ  ಈ ರೀತಿ...ಹೇಗೆ ಸಾಗಿಸಲಿ ನನ್ನ ಜೀವನ...ಹೇಗೆ ಸಾಕಲಿ ನನ್ನ ಮಗಳನ್ನ?

12 comments:

 1. ಕಥೆ ಚನ್ನಾಗಿದೆ
  "ಅವಳ ಜೀವನವನ್ನು ಹಾಲು ಮಾಡುತ್ತಾನೆ" ಎಂಬುದು "ಅವಳ ಜೀವನವನ್ನು ಹಾಳು ಮಾಡುತ್ತಾನೆ" ತಿದ್ದುಪಡಿಯಾಗ ಬೇಕಿದೆ. ಉಳಿದಂತೆ ಕಥೆಯ ನಿರೂಪಣೆ ನಮ್ಮನ್ನೂ ಕೊನೆಯವರೆವಿಗೂ ಓದಿಸಿತು. ಪ್ರೀತಿ ಬಗೆಗಿನ ದುರಂತ ಕೊನಗಳು ಹಲವಾರು ಅದರಲ್ಲಿ ಈ ಕಥೆಯು ಒಂದು ಅನ್ನಿಸುತ್ತದೆ. ನಿಮ್ಮ ಬರವಣಿಗೆ ಇನ್ನು ಉಪಯುಕ್ತವಾಗಿ ಮೂಡಲಿ.

  ಹರೀಶ್ (ಹೊನ್ನ ಹನಿ)

  ReplyDelete
 2. girish sir, kate chennaagide.munduvaresi.

  ReplyDelete
 3. girish,
  ಇನ್ನೂ ಸಮಾಜದಲ್ಲಿ ಹೆಣ್ಣು ದೂಷಿತಳೇ? ಗಂಡನ ಅನಾಚಾರಕ್ಕೆ ಹೆಂಡತಿಗೆ ಯಾಕೆ ಶಿಕ್ಷೆ... ?ಹೆಣ್ಣಿಗೆ ಅವಳದೆ ಆದ ಸ್ವಾತಂತ್ರ್ಯವಿಲ್ಲವೆ ?

  ಹೆಣ್ಣಿನ ದೂಷಣೆ ಕೊನೆಗೊಳ್ಳಲಿ......

  ReplyDelete
 4. ಸರಾಗವಾಗಿ ಓದಿಸಿಕೊಂಡು ಹೋಗುವ ಮಾರ್ಮಿಕ ಕತೆ!

  ReplyDelete
 5. nice story....but its not realisitic....eega neevu helida kathe thara nadeyodu kanasinalli matra!!! anyways namma imaginations gantu limit illa bidi...munduvaresi...

  ReplyDelete
 6. ಗಿರೀಶ,

  ಕತೆ ಚೆನ್ನಾಗಿದೆ. ಇನ್ನೂ ಬರಲಿ.

  ReplyDelete
 7. chennagide kathe girish.. barita iri

  ReplyDelete
 8. ನಿರೂಪಣೆ ಚೆನ್ನಾಗಿದೆ.. ಆದರೆ ನಾಯಕಿಯ ಜೀವನದಲ್ಲಿ ಇಷ್ಟೊಂದು ತಿರುವುಗಳಾ! ಕೆಲವೊಂದು ಕಡೆ ಅಸಹಜವೆನಿಸಿತು.. ಆದರೂ ಕೊನೆ ತನಕ ಏನಾಗುವುದೆಂದು ಕಾತುರತೆಯಿತ್ತು.. ನಾಯಕಿಯ ಯೋಚನೆಗಳಿಗೊಂದು ಅಂತಿಮ ಉತ್ತರ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು..

  ReplyDelete
 9. ಕಥೆ ಚೆನ್ನಾಗಿದೆ ಗಿರೀಶ್ ..
  ಪಾಪ ಅ ಹೆಣ್ಣನ್ನು ಇಂತ ಸಂಕಟದಲ್ಲಿ ಬಿಟ್ಟಿದೀರಲ್ಲ ...
  ಬೇಗ ಕಥೆಯನ್ನು ಮುಂದುವರಿಸಿ ....

  ReplyDelete
 10. @ಹರೀಶ್:ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನೀವು ಹೇಳಿದಂತೆ ಅವುಗಳನ್ನು ತಿದ್ದುಪಡಿ ಮಾಡಿದ್ದೇನೆ..ಮತ್ತೆ ಭೇಟಿ ಕೊಡಿ...
  @ಕಲರವ: ಧನ್ಯವಾದಗಳು..ಹೀಗೆ ಬರುತ್ತಿರಿ...ನೀವು ನನ್ನನ್ನು ಸರ್ ಅಂತ ಕರೆಯುವುದು ಬೇಡ ಎನ್ನುವುದು ನನ್ನ ಅನಿಸಿಕೆ..
  @ಆಶಾ ಮೇಡಂ:ಸಮಾಜದಲ್ಲಿ ಹೆಣ್ಣು ಖಂಡಿತ ದೂಷಿತಳಲ್ಲ...ಅವಳಿಗೂ ಒಂದು ಸ್ವಾತಂತ್ರ್ಯ ಇದೆ..ಇಲ್ಲೇ ನಾನು ಹೆಣ್ಣಿನ ದೂಷಣೆ ಮಾಡಿಲ್ಲ...ಒಂದು ಸಂಭವಿಸ ಬಹುದಾದಂಥ ಕಥೆ ಅಷ್ಟೇ..
  @ಸುನಾಥ್ ಸರ್:ಸರ್ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.

  ReplyDelete
 11. @ಅಶ್ವಿನಿ:ಥ್ಯಾಂಕ್ಸ್..ನಿಜ ನಮ್ಮ ಕಲ್ಪನೆಗಳಿಗೆ ಮಿತಿಯೇ ಇಲ್ಲ...ಆದರು ಈ ರೀತಿ ಸನ್ನಿವೇಶ ಎಲ್ಲೋ ಒಂದು ಕಡೆ ನಡೆದಿರಬಹುದಲ್ಲವೇ?
  @ಸುಭ್ರಮಣ್ಯ ಸರ್:ಧನ್ಯವಾದಗಳು....ಹೀಗೆ ಭೇಟಿ ಕೊಡುತ್ತಿರಿ.
  @ಸುಗುಣ ಮೇಡಂ:ಧನ್ಯವಾದಗಳು..ಖಂಡಿತ ಬರೆಯುತ್ತೇನೆ

  ReplyDelete
 12. @ಪ್ರದೀಪ್:ಥ್ಯಾಂಕ್ಸ್..ಕೆಲವು ಸನ್ನಿವೇಶಗಳು ಅಸಹಜವಾದರೂ,ಎಲ್ಲೋ ಒಂದು ಕಡೆ ಇದೆ ಸಹಜವಾದ ಒಂದು ಕಥೆ...ಅವಳ ಯೋಚನೆಗಳಿಗೆ ಅಂತಿಮ ನಿರ್ಧಾರ ಕೊಡಬೇಕು ಅಂದುಕೊಂಡರು,ಅಲ್ಲಿಗೆ ಕೊನೆಗೊಳಿಸಿದೆ...
  @ಸಂದೀಪ್:ಧನ್ಯವಾದಗಳು...ಖಂಡಿತ ಮುಂದುವರೆಸುತ್ತೇನೆ..

  ReplyDelete