Monday, May 23, 2011

ರೈಲಿನಲ್ಲಿ ನಡೆದ ಕೆಲವು ಪ್ರಸಂಗಗಳು!!!!

BMTC ಬಸ್ ಇಳಿದು ಆ ಬಿಸಿಲ ಧಗೆಯಲಿ ಎರಡೂ  ಕೈಯಲ್ಲಿ ಲಗೇಜು ಹಿಡಿದು,fly over ಏರಿ  ಮತ್ತೆ ಕೆಳಗಿಳಿದು ಅಂಡರ್ ಪಾಸ್ ಎಂಬ ಸುರಂಗ ದಾಟಿ ,ಕೌಂಟರ್ ಮುಂದೆ ಲಗೇಜು ಇಟ್ಟು ಟಿಕೆಟ್ ಕೊಡಿ ಎಂದರೆ ಸರ್ ಚೇಂಜ್ ಇಲ್ಲ ದಯವಿಟ್ಟು ನೀವೇ ಇದ್ದರೆ ಕೊಟ್ಟು ಬಿಡಿ ಎಂದು ಆಕೆ ಹೇಳಿದಾಗ,'ಇದ್ದಿದ್ರೆ ಕೊಡುತ್ತಿದ್ದೆ,ನನ್ನ ಹತ್ರಾನು ಇಲ್ಲ ಎಂದರೆ ನೀವೇ ತಗೊಂಡು ಬರಬೇಕು ಎಂದಳು...
ಸರಿ ಬಿಡಮ್ಮ ತಾಯಿ ಎಂದು ಮನಸಿನಲ್ಲೇ ಹೇಳಿಕೊಳ್ಳುತ್ತಾ,ಹೇಗೂ  ಊಟ ಮಾಡಿಲ್ಲ,ಹೋಟೆಲಿಗೆ ಹೋದರೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ,ಊಟ ಮಾಡಿ ಆಕೆಯ ಇಚ್ಚೆಯಂತೆ ಚೇಂಜ್ ಕೊಟ್ಟು ಟಿಕೆಟ್ ತಗೊಂಡು ಮತ್ತೆ ಎರಡು ಕೈಯಲ್ಲಿ ಲಗೇಜು ಹಿಡಿದು ಅವಸರ ಅವಸರವಾಗಿ platform ಕಡೆಗೆ ಹೋಗುತ್ತಿದ್ದರೆ,ಬಿಸಿಲ ಧಗೆಗೆ ಬೆವರು ತೊಟ್ಟಿಕ್ಕುತ್ತಿತ್ತು.
*************************************
ಮುಕ್ಕಾಲು ಘಂಟೆ ಮುಂಚೆಯೇ ಬಂದು ರೈಲು ಹತ್ತಿ ಸೀಟಿಗಾಗಿ ಅರಸುತ್ತ ರೈಲಿನೊಳಗೆ ಸಾಗುತ್ತ ಹೋದೆ.ಕೆಲವು ಸೀಟು ಖಾಲಿ ಇದ್ದರು,ಆಗಲೇ ಅದನ್ನು ಆಕ್ರಮಿಸಿಕೊಂಡಿದ್ದವರ ಮುಖ ಚರ್ಯೆ ಇಂದ  ಕೂರಲು  ಮನಸ್ಸಾಗಲಿಲ್ಲ,ಹಾಗೆ ಮುಂದೆ ಸಾಗುತ್ತ ಹೋದಂತೆ ಎದುರು ಬದುರು ಸೀಟಿನಲ್ಲಿ ಒಬ್ಬೊಬ್ಬರು ಕೂತಿದ್ದರು,ಒಬ್ಬ ಸುಮಾರು ೧೫ ಪ್ರಾಯದ ಹುಡುಗ,ಇನ್ನೊಬ್ಬ ಬಹುಷಃ ೨೦ ಇರಬಹುದು...
***************************************
ಹಾಗೆ formality ಗೆ ಯಾರಾದ್ರು ಬರ್ತಾರ? ಎಂದು ಕೇಳಿದ ಕೂಡಲೇ,ಆ ಚಿಕ್ಕ ಹುಡುಗ "ಹೌದು ಅಣ್ಣ  ,ಇಬ್ಬರು  ಬರ್ತಾರೆ"ಅಂದ,ಇನ್ನೊಬ್ಬ"ಏ,ಇಲ್ಲ ಕೂರಿ ಸರ್ "ಅಂತ ಹೇಳಿ ಸ್ವಲ್ಪ ಸರಿದ..
"ಅಲ್ಲಪ್ಪ ,ಯಾರೋ ಬರ್ತಾರೆ ಅಂದೆ?"
"ಏನ್ ಮಾಡೋದು ಅಣ್ಣ ,ಆರಾಮಾಗಿ ಕೂರಬೇಕಲ್ಲ ಅದಕ್ಕೆ"
"ಮುಂಚೆ ಬಂದು ಕೂತಿದ್ಯ,ಅದಕ್ಕೆ ಹೀಗೆ ಹೇಳಿದೆ,ಬೇರೆ ಯಾರಾದ್ರೂ ಈ ಥರಾ ಕೂತು,ನಿನಗೆ ಇದೆ ಥರಾ ಹೇಳಿದ್ರೆ?"
"ಹೀ ಹೀ ಹೀ"ಅಂತ  ನಕ್ಕ.
ಸರಿ ಅಂತ ಲಗೇಜು ಇಟ್ಟು,ಅಲ್ಲೇ ಕೂತರೆ ಬೆವರು  ಇಳಿಯುತ್ತಿದೆ..ಫ್ಯಾನ್ ಕೂಡ ಆನ್ ಇಲ್ಲ,ಇದೆ initial point ಆದ್ದರಿಬ್ದ ರೈಲು ಹೊರಡುವ ಅರ್ಧ ಘಂಟೆ ಮುಂಚೆ ಫ್ಯಾನ್ ಆನ್ ಮಾಡುತ್ತಾರೆ.
ಪ್ರಯಾಣ ಮಾಡುವಾಗ  ಯಾವುದಾದರು ಪುಸ್ತಕ ಓದುವ ಅಭ್ಯಾಸ ನನಗೆ.ಅಭ್ಯಾಸ ಬಲದಂತೆ ಪುಸ್ತಕ ತೆಗೆದು,ಶೆಖೆ ಇದ್ದರಿಂದ ಸ್ವಲ್ಪ ಒತ್ತು ಗಾಳಿ ಬಿಸಿಕೊಳ್ಳೋಣ ಎಂದು,ಆ ಪುಸ್ತಕದಲ್ಲೇ ಬೀಸಿಕೊಳ್ಳುತ್ತಿದ್ದೆ.
"ಇನ್ನೊಂದು ೧೦ ನಿಮಿಷ ಅಣ್ಣ,ಇನ್ನೇನ್ ಫ್ಯಾನ್ ಆನ್ ಮಾಡುತ್ತಾರೆ" ಅಂತ ಅವನೇ ಶುರು ಮಾಡಿದ.
ಸರಿ ಮತ್ತಿನ್ನೇನು ಮಾಮೂಲು  ಚಾಳಿಯಂತೆ ಇಬ್ಬರೂ ಎಲ್ಲಿಗೆ ಹೋಗಬೇಕು,ಯಾವೂರು,ಅದೂ  ಇದು ಕುಶಲೋಪರಿ ಮಾತಾಡುತ್ತ ಕುಳಿತೆವು,ಎದುರುಗಿದ್ದವನು ಮಧ್ಯೆ ಏನೇನೋ ಪಸರಿಸುತ್ತಿದ್ದ.
ಸರಿ ಫ್ಯಾನ್ ಆನ್ ಆಯಿತು,ಪುಸ್ತಕ ತೊಡೆ ಮೇಲಿಟ್ಟು,ಸ್ವಲ್ಪ ನಿದ್ದೆ ಮಾಡೋಣ ಅನಿಸಿತು,ಹಾಗೆ ನಿದ್ರೆಗೆ ಜಾರಿದೆ.
*******************************************
ಸ್ವಲ್ಪ ಸಮಯದ ನಂತರ ಏನೇನೋ ಕಿವಿಗೆ ಬಿಳಲು ಶುರು ಆಯಿತು,ಯಾವುದೋ ಸಿನಿಮಾ ಗೀತೆ,
ಜೊತೆಗೆ ಯಾರೋ ಒಬ್ಬ "ಏ ಮುಚ್ಕಂಡು ಹೋಗು,ಕೊಡಲ್ಲ ಅಂತ ಹೇಳಿಲ್ವ?"
"ಏ ಅಣ್ಣಯ್ಯ,ಮಾಮು ಕೊಡೋ,ಯಾಕ್ ಹೀಗೆ ಸತಾಯಿಸುತ್ತಿದ್ದಿಯ?"ಅಂತ ಕೇಳಿಸಿತು.
ಎದ್ದು ನೋಡಿದರೆ,ನಾನು ಹತ್ತಿದಾಗ ತಕ್ಕ ಮಟ್ಟಿಗೆ ಖಾಲಿ ಇದ್ದ ಭೋಗಿ ತುಂಬಿದೆ,ಅಲ್ಲದೆ ಮೇಲಿನ ಸಂಭಾಷಣೆ ಪಕ್ಕದ ಸೀಟಿನಲ್ಲಿ ನಡೆಯುತ್ತಿದೆ,ಅಲ್ಲದೆ ರೈಲು ಯಶವಂತಪುರ ದಾಟಿದೆ.
ಅಲ್ಲಿ ಕೂತಿದ್ದ ಒಬ್ಬ ಯುವಕನಿಗೆ ಹಿಜಡಾ ದುಡ್ಡಿಗಾಗಿ ಪೀಡಿಸುತ್ತಿದ್ದ(ಳು)(ನು)(ತ್ತು).
ಅಲ್ಲಿಂದ ನಮ್ಮ ಸೀಟಿಗೆ ಬಂದು ಕೈ ಯೊಡ್ಡಿದಾಗ,ಅದರ ಜೊತೆ ಏನು ಮಾತು ಎಂದು ಸುಮ್ಮನೆ ಒಂದಷ್ಟು ಚಿಲ್ಲರೆ ಕೊಟ್ಟೆ.ರೈಲಿ ನಲ್ಲಿ  ಪ್ರತಿ ಸಾರಿ ಪ್ರಯಾಣ ಮಾಡುವಾಗ ಇದು ಮಾಮೂಲು,ಒಂಥರಾ ಮಾಮಂದಿರ ಮಾಮುಲಿದ್ದ ಹಾಗೆ.....

ಸರಿ ಅದು ಆಕಡೆ ಹೋದ ತಕ್ಷಣ ಪಕ್ಕದ  ಸೀಟಿನಲ್ಲಿ ಕೂತಿದ್ದ ಇಬ್ಬರು  ಚಿಕ್ಕ ಮಕ್ಕಳು ಸುಮಾರು ೭ ವರ್ಷ ಇರಬಹುದು.
ಅದರಲ್ಲೊಬ್ಬ  ತನ್ನ ಅಪ್ಪನಿಗೆ 'ಅಪ್ಪ ಇವರ್ಯಾರು ?"ಅಂದ,ಅವನ ಅಪ್ಪ ಮಾತು ಶುರು ಮಾಡುವ ಮುಂಚೆಯೇ ಇಷ್ಟೊತ್ತು ಅದರ ಜೊತೆ ವಾಗ್ವಾದ ಮಾಡುತ್ತಿದ್ದ ಇನ್ನೊಬ್ಬ"ಅಯ್ಯೋ ಬಿಡ್ರಪ್ಪ,ಯಾಕ್ ತಲೆ ಕೆಡಿಸ್ಕೊಳ್ತಿರ?"ಅಂದಾಗ
ಇನ್ನೊಬ್ಬ"ದೇವರು ಕಣಪ್ಪ"ಅಂದು ಬಿಟ್ಟ.
ಪಾಪ ಕಿಡಕಿ ಬದಿಯಲ್ಲಿ ಕೂತಿದ್ದ ಆ ಮಕ್ಕಳ  ತಾಯಿ ಕಕ್ಕಾ ಬಿಕ್ಕಿಯಾಗಿ ಬಿಟ್ಟರು.
ಇತ್ತ ಒಬ್ಬ ಮಗ ಅಪ್ಪನಿಗೆ ,ಇನ್ನೊಬ್ಬ ಮಗ ತಾಯಿಗೆ "ಹೌದೆನಪ್ಪ,ಹೌದೆನಮ್ಮ,ದೇವರು ಅಂದ್ರೆ ಇವರೇನಾ ಅಂತ ಪೀಡಿಸಲು ಶುರು ಮಾಡಿದರು.
ಅವರು ಕಾಟ ತಡೆಯಲಾರದೆ"ಇವರು ಗಂಡು ಅಲ್ಲ,ಹೆಣ್ಣು ಅಲ್ಲ"ಅಂದ.
ಅವರಿಬ್ಬರಲ್ಲಿ ದೊಡ್ಡವನು"ಗಂಡು ಅಂದ್ರೆ ಪುಲ್ಲಿಂಗ,ಹೆಣ್ಣು ಅಂದ್ರೆ ಸ್ತ್ರೀಲಿಂಗ,ಇವರು ಯಾವ ಲಿಂಗ"ಅಂದ....
ಶಾಲೆಯ  ಪರಿಭಾಷೆ ಇರಬಹುದು..
ಇರಲಿ.....
***********************************
ಹೀಗೆ ಅವರ ಮಾತು ನಡೆಯುತ್ತಿತ್ತು..
ನಾನು ನನ್ನ ಪಾಡಿಗೆ ತೊಡೆ ಮೇಲಿದ್ದ ಪುಸ್ತಕ ಓದಲು ಶುರು ಮಾಡಿದೆ..
ಎಲ್ಲಾ ರೈಲಿನ ಹಾಗೆ ಇದರಲ್ಲೂ ಚುರುಮುರಿ,ಬಿಸ್ಕತ್ತು,ಕಾಫಿ,ಟೀ ಮಾರುವವರು ಬರುತ್ತಲೇ ಇದ್ದರು,ನನ್ನ ಪಾಡಿಗೆ ಕಾದಂಬರಿ ಓದುತ್ತ,ಮಧ್ಯದಲ್ಲಿ ಪಕ್ಕದಲ್ಲಿದ್ದವನ ಜೊತೆ ಹರಟುತ್ತ ಕಾಲ ಕಳೆಯುತ್ತಿದ್ದಾಗ,ಬಿಸ್ಕತ್ತು ಮಾರುವವನು ಬಂದ..

ಪಕ್ಕದ ಸೀಟಿನ  ಆ ಹುಡುಗರು,ಬೇಕು ಎಂದಾಗ,ಮಕ್ಕಳ ಆಜ್ಞೆಯಂತೆ ಕೊಡಿಸಲು ಮುಂದಾದ ಅಪ್ಪನಿಗೆ,ಒಬ್ಬ ಕ್ರೀಂ ಬಿಸ್ಕೇಟು ಬೇಕು ಅಂದ,ಇನ್ನೊಬ್ಬ ಇನ್ನೇನೋ ಬೇಕು  ಎಂದ,ಮಾರುವವನು ಯಾವುದೋ ಒಂದ ತಗಂಡು ದುಡ್ಡು ಕೊಡಪ್ಪ,ಮುಂದಕ್ಕೆ ಹೋಗಬೇಕು ಅಂತ ಮನಸ್ಸಿನಲ್ಲೇ ಅಂದು ಕೊಂಡಿರಬೇಕು,ಅಲ್ಲಿಯವರೆಗೂ ಇತ್ತು ಅವರ ಕಾಟ,
ಯಾವುದೋ ಒಂದೂ ತಗಂಡ್ರು,ದುಡ್ಡು ಕೊಟ್ಟ,ಅವನು ಮುಂದಕ್ಕೆ ಹೋದ..
******************************************************************************
ಇನ್ನು ಸ್ವಲ್ಪ ಸಮಯದ ನಂತರ ನೀರು ಮಾರುವವನು ಬಂದ,ನನ್ನ ಹಿಂದಿನ ಸೀಟಿನಲ್ಲಿ ಕೂತಿದ್ದ ಹುಡುಗಿ  ಬೇಕೆಂದಾಗ ಅವನು ಒಂದು  ಬಾಟಲ್ ವಾಟರ್ ಕೊಟ್ಟ,ಅವಳು cold ನೀರು ಇಲ್ಲವ ಅಂತ ಕೇಳಿದಳು,ಅವನೇನು refrigerator
ಕೂಡ ಇಟ್ಟುಕೊಂಡು ಓಡಾಡ ಬೇಕಾ ?ಅವಳ ಮಾತಿಗೆ ಅತಿಶಯೋಕ್ತಿ ಅನ್ನಬೇಕೋ,ಅವಿವೇಕತನ ಅನ್ನಬೇಕೋ ಅಥವಾ ದುರಹಂಕಾರ ಅನ್ನಬೇಕೋ ಒಂದೂ ತಿಳಿಯಲಿಲ್ಲ.....
*******************************************************************************
ಸ್ವಲ್ಪ ಮುಂದೆ ಹೋದಾಗ  ಒಂದು  ಚಕ್ಕ ಮಗು ಚಡ್ಡಿಯಲ್ಲೇ ಮಲ ವಿಸರ್ಜನೆ ಮಾಡಿತು,ಅದರ ತಾಯಿ ಹತ್ತಿರವೇ ಇದ್ದ ಡೋರ್ ಬಳಿ ಹೋಗಿ ಆ ಮಗುವನ್ನು  ತೊಳೆಯಲು  ಮೊದಲು   ಮಾಡಿದಳು ,ಗಾಳಿ ಬೀಸುತ್ತಿದ್ದ ಕಾರಣ,ಆ ನೀರು ಗಾಳಿಗೆ ಹಿಂದೆ ಕಿಡಕಿ ಬಳಿ ಕೂತಿದ್ದವರಿಗೆ ಹಾರುತ್ತಿತ್ತು,ಅಲ್ಲೊಬ್ಬ  ಸಿಡಿದೆದ್ದು ಆ ಕಡೆ toilet ಇದೆ ಅಲ್ಲಿಗೆ ಹೋಗಿ ತೊಳೆಯಬಾರದ ,ಬುದ್ದಿ ಗಿದ್ದಿ  ಇದಿಯ ಅಂತ ದಬಾಯಿಸಿದ.
'ಅಯ್ಯೋ ಮಗು ಸರ್ ,ಏನ್ ಮಾಡ್ಲಿ ?"
"ಹೌದಮ್ಮ ಮಗೂನೆ,ತೊಳಿತಿರೋದು ನೀನ್ ತಾನೆ,ಅಲ್ಲೋಗು,ಇಲ್ಲಿ  ಕೂತಿರುವವರಿಗೆ ಮುಖಕ್ಕೆ ಹಾರುತ್ತಿದೆ,ಅಸಯ್ಯ ಅನ್ಸುತ್ತೆ"
ಅವಳ ವರ್ತನೆಗೆ ಏನನ್ನಬೇಕು....ನೀವೇ ಹೇಳಿ...
*************************************************************
ಹೀಗೆ ಮುಂದೆ ಹೋದಂತೆ,ಅಲ್ಲೊಂದು ಕ್ರಾಸಿಂಗ್ ಗೆ ಸ್ವಲ್ಪ ಸಮಯ  ನಿಲ್ಲಿಸಿ ಬಿಟ್ಟ,ಮತ್ತೆ ಕಾಫಿ,ಟೀ ಅದು ಇದು ವ್ಯಾಪಾರ ಶುರು ಆಯಿತು  ,ಸ್ವಲ್ಪ ಜೋರಾಗಿಯೇ  ಯಾಕೆ   ಅಂದ್ರೆ  ,ಕ್ರಾಸಿಂಗ್ ಇದೆಯಲ್ಲ  ಹಾಗಾಗಿ ..
ಕೂತು  ಕೂತು  ಸಾಕಾಗಿತ್ತು ,ಎಲ್ಲರಂತೆಯೇ  ನಾನು ಕೂಡ ಪುಸ್ತಕ ಅಲ್ಲೇ ಇಟ್ಟು( ಸೀಟು ಕಾದಿರಿಸಿದೆ .ಟವೆಲ್ಲು  ಹಾಕುವ  ಬುದ್ದಿ ನಮ್ಮ ಜಾಯಮಾನದಲ್ಲಿಯೇ  ಅಂಟಿಕೊಂಡು  ಬಂದಿದೆ ,ಯಾರೋ ಕೂತಿದ್ದ ಸೀಟಿಗೆ ಸೀಟು ಹಾಕುವವರು ,ಇಷ್ಟೊತ್ತು ಆ ಸೀಟನ್ನು  ವಿರಾಜಮಾನವಾಗಿ ಆಳಿ ,ಈಗ  ಬಿಟ್ಟು  ಕೊಡುತ್ತೀನ  ?ಖಂಡಿತ  ಇಲ್ಲ)
ಕೆಳಗಿಳಿದು platform ನಲ್ಲಿ  ಟೀ ಹೀರುತ್ತಾ  ನಿಂತು  ಬಿಟ್ಟೆ ,
ಅಷ್ಟೊತ್ತಿಗಾಗಲೇ  ಅಲ್ಲೊಂದು ಇಲ್ಲೊಂದು  ಗುಂಪುಗಳು  ಆಗಿ  ದೇಶದ  ಎಲ್ಲಾ ವಿಚಾರಗಳು ಎಲ್ಲರ  ಬಾಯಲ್ಲೂ  ರಾರಾಜಿಸುತ್ತಿದ್ದವು ,ನಾನು ಕೂಡ ಒಂದು   ಗುಂಪಿಗೆ  ಸದಸ್ಯನಾಗಿಬಿಟ್ಟೆ ,ಜೊತೆಗೆ ಮೇನಕ ,ಮಾಧುರಿ  ಏನಾಗಬಹುದು  ಮುಂದೆ ಎಂಬುದು  ತಲೆಯಲ್ಲಿ  ಹುಳು ಬಿಟ್ಟ ಹಾಗೆ ಆಗಿತ್ತು (ಮೇನಕ ,ಮಾಧುರಿ ನಾನು ಓದುತ್ತಿದ್ದ ಕಾದಂಬರಿಯ ಪಾತ್ರಗಳು )
ಅಷ್ಟರಲ್ಲೇ ಯಾರೋ ಒಬ್ಬ ಕಿಡಕಿಯಿಂದ ಕಾಫಿ ಕಪ್ ಅನ್ನು ಹೊರಗೆ ಎಸೆದ,ಅದು ನಮ್ಮ ಗುಂಪಿನ ಪಕ್ಕದಲ್ಲಿಯೇ ಬಿತ್ತು,ಆಗ ಅಲ್ಲೊಬ್ಬ ಅದನ್ನು ಕೆಳಕ್ಕೆ ತಳ್ಳುತ್ತ "ಈ ಮುಂಡೆ ಮಕ್ಕಳಿಗೆ ಮಾನ ಮರ್ಯಾದೆ ಇಲ್ಲ,ಹೀಗಾ ಬಿಸಾಡೋದು platform  ಮೇಲಕ್ಕೆ,?ಯಾರಾದ್ರೂ ಓಡಾಡುತ್ತಿರುತ್ತಾರೆ ಅನ್ನೋ common  ಸೆನ್ಸ್ ಕೂಡ ಇಲ್ಲ"
"ನಮ್ಮ ಜನಗಳಿಗೆ ಸರ್ಕಾರಿ ಜಾಗ ಅಂದ್ರೆ ಹೀಗೆ,ಹೆಂಗ್ ಬೇಕೋ ಹಂಗೆ,ಅವರ ಮನೇಲೂ ಈ ಥರಾ ಬಿಸಾಡುತ್ತಾರ ?" 
"ಅಯ್ಯೋ ಬಿಡಿ ಸರ್,ಏನ್ ಮಾಡಕ್ಕಾಗುತ್ತೆ ,ಈ ನನ್ ಮಕ್ಕಳಿಗೆ  ಬುದ್ಧಿ  ಬರಲ್ಲ,ಅವರು ಹೀಗೇನೆ"
"ಏನೋ ಸರ್,ನಮ್ಮ ಯಡ್ಡಿ ಏನಾದ್ರು? ಗಾಂಧೀ statue ಮುಂದೆ ಧರಣಿ ಮಾಡಿದರಂತೆ,ಇವಾಗ ಈ ಸಂಜೆ ಪೇಪರ್ ನಲ್ಲಿ  ಓದಿದೆ"
"ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗಲಿ ಬಿಡಿ"
"ಏನ್ ಕೆಲಸ ಮಾಡಿದ್ದಾರೆ ಸರ್ ಇವರು,ಒಂದು ರೋಡ್ ನೆಟ್ಟಗೆ ರಿಪೇರಿ   ಮಾಡಿದ್ದಾರಾ?,ಜಪಾನ್ ನಲ್ಲಿ ಸುನಾಮಿ ಆದಾಗ ಒಂದು ವಾರಕ್ಕೆ ಯಾರ ಹೆಲ್ಪ್ ಇಲ್ಲದೆ ಅವರೇ ರೋಡ್  ರಿಪೇರಿ ಮಾಡಿದ್ದರೆ,ಇವರು ನೋಡಿದ್ರೆ  ಹೀಗೆ"
ಇನ್ನೊಬ್ಬ Hiroshima,naagasaki ವಿಷಯ ತೆಗೆದು ಶುರು ಮಾಡಿದ..
"ನಮ್ಮ ಶಿರಾಡಿ ಘಾಟ್ ರೋಡ್ ನಲ್ಲಿ ಮಳೆಗಾಲದಲ್ಲಿ ಹಾಳಾಗಿ ಹೋಗುತ್ತೆ,ಅವರು ರಿಪೇರಿ ಮಾಡೋ ಹೊತ್ತಿಗೆ ಮುಂದಿನ ಮಳೆಗಾಲ ಬಂದಿರುತ್ತೆ"ಅಂದೆ..
ಅಷ್ಟೊತ್ತಿಗೆ ಇನ್ನೊಬ್ಬ  ಈ ರೈಲು ಇಷ್ಟೊತ್ತು ನಿಂತು ಬಿಟ್ಟಿತಲ್ಲ ,ನಂಗೆ ಬಸ್ ಮಿಸ್ ಆಗಬಹುದು  ಅಂದ . 
ನನಗೂ ಅದೇ ತವಕ ಶುರು  ಆಯಿತು,ಯಾಕಂದ್ರೆ  ಅದೇ ಲಾಸ್ಟ್ ಬಸ್.
ಸ್ವಲ್ಪ ಹೊತ್ತಿನಲ್ಲೇ ಎದುರಿಂದ ಬಂದ ರೈಲು ವೇಗವಾಗಿ  ಹೋಯಿತು,ಇನ್ನೇನು ನಮ್ಮ ರೈಲಿನ ಸೈರನ್ ಕೂಗ ಬೇಕು ಅಷ್ಟೊತ್ತಿಗೆ platform ನಲ್ಲಿದ್ದ ಜನ ರೈಲಿಗೆ ಹತ್ತುತ್ತಿದ್ದರು..
ಒಬ್ಬ "ಇವನು ಇದೆ ಥರಾ ಫಾಸ್ಟ್ ಆಗಿ ಹೋಗಿ ಟೈಮ್ ಪಿಕ್ ಅಪ್ ಮಾಡ ಬೇಕು,ಆಗ್ಲೇ ಅರ್ಧ ಘಂಟೆ ಲೇಟ್ ಆಗಿ ಬಿಟ್ಟಿದೆ"ಅಂದರೆ,ಇನ್ನೊಬ್ಬ "ರೈಲು ಯಾವತ್ತು ಕರೆಕ್ಟ್ ಟೈಮ್ ಗೆ ಬರುತ್ತೆ ರೀ?"ಅಂದ..ಕಾಟು ಸತ್ಯದ ಮಾತು...
ಹೋಗ್ಲಿ ಬಿಡಪ್ಪ ಇನ್ನೇನ್ ಮಾಡಕ್ಕಾಗುತ್ತೆ ಅಂತ ಹತ್ತಿದೆವು..
ಅದಲ್ಲದೆ ಬೇರೆ ಬೇರೆ ವಿಷಯಗಳು ಪ್ರಸ್ತಾಪ ಆಗಿದ್ದವು..
ಮುಂದೆ ಸಾಗಿತು ನಮ್ಮ ಪಯಣ ಹಾಗೆಯೇ...ನನ್ನ ಲಾಸ್ಟ್ ಬಸ್ ಹಿಡಿದು ಬಂದು ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಸಮಯ  ೧೦ ಘಂಟೆ...
ಇದೆ ರೀತಿ ರೈಲು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ  ಇನ್ನು ವಿಚಿತ್ರ  ಘಟನೆಗಳಿಗೆ ಸಾಕ್ಷಿ ಆಗಿದ್ದೇನೆ..
ಹೀಗೆ ಸಾಗಿತು ನನ್ನ ಊರಿನ ಪ್ರಯಾಣ..

14 comments:

  1. ರೈಲು ಪ್ರಯಾಣದ ವಿವಿಧ ಘಟನೆಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಕೆ ಧನ್ಯವಾದಗಳು! :)

    ReplyDelete
  2. ಚೆನ್ನಾಗಿ ಬರ್ದಿದಿಯ ಗಿರಿ. ಹಿಂದಿನ ಲೇಖನಗಳಿಗಿಂತ ಪ್ರಬುದ್ಧವಾಗಿದೆ.
    ಆದರೆ, spell mistakes ಬಹಳ ಇದೆ. Type ಮಾಡಿ ಆದಮೇಲೆ spell
    check ಮಾಡಿ ಆಮೇಲೆ ಪೋಸ್ಟ್ maadu. ಚಿಕ್ಕ ಘಟನೆಗಳಾದರೂ, ಚೊಕ್ಕವಾಗಿ ಬರ್ದಿದಿಯ.

    ReplyDelete
  3. @Pradeep:Thanks
    @Chandrakanth:Thanks..now i have corrected the mistakes...

    ReplyDelete
  4. ಪ್ರಸಂಗಗಳ ಪರಿಚಯ ಚೆನ್ನಾಗಿದೆ ..
    ಪೀಡಿಸುತ್ತಿದ್ದ(ಳು)(ನು)(ತ್ತು) - (ಇದಕ್ಕೆ) (ಇವಳಿಗೆ / ಇವನಿಗೆ) ಶಾಲೆಯಲ್ಲಿ ಏನಂಥ ಕರಿತರೋ ಗೊತಾಗ್ಲಿಲ್ಲ
    ಅದೆಲ್ಲ ಸರಿ ಎಲ್ಲಿಂದ ಯಾವೂರಿಗೆ ಹೋಗ್ತಾ ಇದ್ದೀರಾ ಅಂತ ಹೇಳಲಿಲ್ಲ .

    ReplyDelete
  5. sandeep:even i dont know what they will for those peoples..by the by i was moving from B'lore to Halebidu(i mean till Arasikere in train)

    ReplyDelete
  6. hahaha chennagide oLLe anubhava haagidre yavaglu trainalli hoguvaaga alva girish

    ReplyDelete
  7. suguna madam...adelle ond dodda kathegalu..idakku munche innu vichitra anubhavagalu aagive...yaavagalaadaru bareyuttene avugala bagge..

    ReplyDelete
  8. Interesting.. :)

    ==
    But i didn't like below lines for blaming for asking cold water...
    "ಅವಳು cold ನೀರು ಇಲ್ಲವ ಅಂತ ಕೇಳಿದಳು,
    ಅವನೇನು refrigerator ಕೂಡ ಇಟ್ಟುಕೊಂಡು ಓಡಾಡ ಬೇಕಾ ?ಅವಳ ಮಾತಿಗೆ ಅತಿಶಯೋಕ್ತಿ ಅನ್ನಬೇಕೋ,ಅವಿವೇಕತನ ಅನ್ನಬೇಕೋ ಅಥವಾ ದುರಹಂಕಾರ ಅನ್ನಬೇಕೋ ಒಂದೂ ತಿಳಿಯಲಿಲ್ಲ....."

    ಅವಳು ಕೇಳಿರುವುದರಲ್ಲಿ ತಪ್ಪಿಲ್ಲ ಗಿರೀಶ್...
    ಬಿಸಿ ಇಲ್ಲದ ಕಾಫಿ ಕೊಟ್ಟಾಗ, ಸ್ಟೋವ್ ಏನು ಪಕ್ಕಕ್ಕೆ ಇಟ್ಟುಕೊಂಡು ತಿರುಗಬೇಕಾ ಎಂದು ಕೇಳಿದಂತೆ ಇದೆ ನಿನ್ನ ಪ್ರಶ್ನೆ.
    its my viewpoint aste.. omme yochisi nodu.. :)
    ==

    ReplyDelete
  9. itz not like that Shivu..usually coffee vendors will carry coffee and tea in flask..so obviously it will be quite hot..

    but coming to water bottle,even though they carry cold water only,after some time it will get warm..so no water vendors will carry cold water...always they prefer to sell warm watter only...itz my experience in these many years travelling in train..

    simply y shall i write like that for that girl na?

    ReplyDelete
  10. ನಿನ್ನ ಪ್ರಯಾಣ , ನಾನು ಕಂಡ ಘಟನೆ ನೆನಪಿಸಿತು .......
    usually ನಮ್ ಹುಡುಗಿಯರಿಗೆ ,"ಪೀದಿಸುಥಿದವು" ಅವರನ್ ಕಂಡ್ರೆ ಒಂದು ಥರ ಭಯ .....
    so ಅವ್ರನ್ ನೋಡಿದ್ರೆ , ಟ್ರೈನ್ ನಲ್ಲಿ ಅಷ್ಟ್ ಮಾತಾಡಿ ಎಲ್ಲರ ತಲೆ ತಿನ್ನೋ ನಾನು ಫುಲ್ ಗುಪ್-ಚುಪ್ ಹಾಗ್ಬಿದ್ತಿನಿ ...
    ಅವತ್ತು ಹಾಗೆ , ಚಪ್ಪಾಳೆ ಹೊಡಿಯುತ್ತ ತಮ್ಮ actions ಇಂದ "ಪೀಡಿಸುತಿದ್ದರು ".....
    ಅವ್ರ ನೋಡಿ ,ಪುಟ್ಟ ಮಗು ಅದರ ತೊದಲು ನುಡಿಯಿಂದ "ಯಾಕ್ ಅವ್ರು ಬರಿ ಚಪ್ಪಾಳೆ ಹೊಡಿತಾರೆ ?" ಎಂದಾಗ , ಅವ್ರ ಮಮ್ಮಿ "ಅವರಿಗೆ ಮಾತ್ ಬರೋಲ್ಲಾ ,ಅದಕ್ಕೆ ಹಾಗೆ actions ಮಾಡ್ತಾರೆ "....
    ಒಂದು ರೌಂಡ್ ಅಲ್ಲಿನ ವಾತಾವರಣ ಎಲ್ಲರನ್ನು ತಿಲಿಗೊಲಿಸಿತು ......:):)

    ReplyDelete
  11. Kavya.Thanx for sharing your experience in train .....

    ReplyDelete