ಗಳಿಗೆಗಳು ಉರುಳಿದಂತೆ ದಿನಗಳು
ದಿನಗಳು ಉರುಳಿದಂತೆ ವರುಷಗಳು
ಸುಖ ದುಃಖಗಳನ್ನು ಹೊತ್ತು ಸಾಗುತ್ತಿದೆ ಜೀವನ !!!
ಆರಕ್ಕೇರದೆ ಮೂರಕ್ಕಿಳಿಯದೆ
ನಾಲ್ಕೈದರಲ್ಲೇ ಜೋತಾಡುತ್ತಿದೆ
ನಮ್ಮ ಭವಣೆ ,ಸಾಧನೆ...
*************************
ಕೈ ಜಾರಿ ನಯವಂಚಕನ ಸೇರಿದ ದುಡಿಮೆಯ ಫಲ
ಇದು ನನ್ನ ದಡ್ಡತನದಿ ಗತಿಸಿದ ತಪ್ಪು
ನನ್ನ ನಂಬಿಕೆಗ ಅವ ಬಗೆದ ದ್ರೋಹ !
ಆದರೆ,ನನಗದು ಶಿಕ್ಷೆ,ಅಪ್ಪನ ಮಾತು ಕೇಳದ್ದಕ್ಕೆ ತಕ್ಕ ಶಾಸ್ತಿ.
ಬರೀ ಶಿಕ್ಷೆ ಅಲ್ಲ,ಈಗಲಾದರೂ
ಜಾಗರೂಕನಾಗು ಎಂಬ ಭೋಧನೆ..
ಇಲ್ಲ,ಇನ್ನೊಮ್ಮೆ ಮೋಸ ಹೋಗಲಾರೆ !
ಕೊನೆಗೆ ಅನಿಸಿದ್ದು ಅಪ್ಪನ ಮಾತು ಕೇಳಬೇಕಿತ್ತು .
ಕೈಯೊಳಗಿನ ರಂಧ್ರಗಳಿಗೆ ತೇಪೆ ಹಾಕಬೇಕು...
ಸಮಯ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳಬೇಕು,
***********************
ನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು...
ಚಿಂತಿಸದೆ ಗತಿಸಿದ ಕರ್ಮಗಳನು
ಯೋಚಿಸದೆ ಮುಂದಿನ ಕಾರ್ಯಗಳನು
ಜೀವಿಸಬೇಕು ವರ್ತಮಾನದಲಿ..
****************************
ನೇಸರನ ನವ ಕಿರಣಗಳು ನಿಮ್ಮ ಬಾಳಲ್ಲಿ ಹೊಂಗಿರಣವಾಗಲಿ..
ಸುಖ ದುಃಖಗಳನ್ನೂ ಸಮವಾಗಿ ಸ್ವೀಕರಿಸುವ ಶಕ್ತಿ ನಿಮ್ಮದಾಗಲಿ..
ಶಾಂತಿ,ನೆಮ್ಮದಿ ನಿಮಗೆ ಆಸರೆ ಆಗಲಿ..
ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿಯಾಗಲಿ..
ಎಲ್ಲರಿಗೂ ನವ ವಸಂತದ ಹಾರ್ದಿಕ ಶುಭಾಶಯಗಳು....
Photo Courtesy:Girish.S
ದಿನಗಳು ಉರುಳಿದಂತೆ ವರುಷಗಳು
ಸುಖ ದುಃಖಗಳನ್ನು ಹೊತ್ತು ಸಾಗುತ್ತಿದೆ ಜೀವನ !!!
ಆರಕ್ಕೇರದೆ ಮೂರಕ್ಕಿಳಿಯದೆ
ನಾಲ್ಕೈದರಲ್ಲೇ ಜೋತಾಡುತ್ತಿದೆ
ನಮ್ಮ ಭವಣೆ ,ಸಾಧನೆ...
*************************
ಕೈ ಜಾರಿ ನಯವಂಚಕನ ಸೇರಿದ ದುಡಿಮೆಯ ಫಲ
ಇದು ನನ್ನ ದಡ್ಡತನದಿ ಗತಿಸಿದ ತಪ್ಪು
ನನ್ನ ನಂಬಿಕೆಗ ಅವ ಬಗೆದ ದ್ರೋಹ !
ಆದರೆ,ನನಗದು ಶಿಕ್ಷೆ,ಅಪ್ಪನ ಮಾತು ಕೇಳದ್ದಕ್ಕೆ ತಕ್ಕ ಶಾಸ್ತಿ.
ಬರೀ ಶಿಕ್ಷೆ ಅಲ್ಲ,ಈಗಲಾದರೂ
ಜಾಗರೂಕನಾಗು ಎಂಬ ಭೋಧನೆ..
ಇಲ್ಲ,ಇನ್ನೊಮ್ಮೆ ಮೋಸ ಹೋಗಲಾರೆ !
ಕೊನೆಗೆ ಅನಿಸಿದ್ದು ಅಪ್ಪನ ಮಾತು ಕೇಳಬೇಕಿತ್ತು .
ಕೈಯೊಳಗಿನ ರಂಧ್ರಗಳಿಗೆ ತೇಪೆ ಹಾಕಬೇಕು...
ಸಮಯ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳಬೇಕು,
***********************
ನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು...
ಚಿಂತಿಸದೆ ಗತಿಸಿದ ಕರ್ಮಗಳನು
ಯೋಚಿಸದೆ ಮುಂದಿನ ಕಾರ್ಯಗಳನು
ಜೀವಿಸಬೇಕು ವರ್ತಮಾನದಲಿ..
****************************
ನೇಸರನ ನವ ಕಿರಣಗಳು ನಿಮ್ಮ ಬಾಳಲ್ಲಿ ಹೊಂಗಿರಣವಾಗಲಿ..
ಸುಖ ದುಃಖಗಳನ್ನೂ ಸಮವಾಗಿ ಸ್ವೀಕರಿಸುವ ಶಕ್ತಿ ನಿಮ್ಮದಾಗಲಿ..
ಶಾಂತಿ,ನೆಮ್ಮದಿ ನಿಮಗೆ ಆಸರೆ ಆಗಲಿ..
ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿಯಾಗಲಿ..
ಎಲ್ಲರಿಗೂ ನವ ವಸಂತದ ಹಾರ್ದಿಕ ಶುಭಾಶಯಗಳು....
Photo Courtesy:Girish.S
Happy new year..
ReplyDeleteಸರ್ವರಿಗೂ ೨೦೧೨ಕ್ಕೆ ಸ್ವಾಗತ
ReplyDeleteಗಿರೀಶ,
ReplyDeleteIf winter comes can spring be far behind?
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹಾಯ್ ಗಿರೀಶ್,
ReplyDeleteನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು........ಸುಂದರ ಸಾಲುಗಳು..........
ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು..
Hi Girish nice poems.. Happy new year to you too
ReplyDeleteನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು....
ReplyDeletekanasu nanasagali
happy new year
ಹಳೆಯ ವರ್ಷದ ವಿಶ್ಲೇಷಣೆ ಮಾಡುತ್ತಾ ಹೊಸ ವರ್ಷದ ಸಂಕಲ್ಪ ಮೂಡಿಸಿದ್ದಿರಾ...ಹೊಸವರ್ಷದ ಶುಭಾಶಯಗಳು.
ReplyDeleteSushma,Guru Prasad,Sunaath sir,Ashok sir,Pradeep,Asha madam,Sitaram sir : Thank you all !!!
ReplyDeleteಆವತ್ತೇ ಪ್ರತಿಕ್ರಿಯಿಸುವಾಗ ನೆಟ್ ನೆಟ್ಟಗೆ ಕೈಕೊಟ್ಟಿತು.. ಒಳ್ಳೆ ಕವನ. ಹಾರೈಕೆಗಳು ತಮಗೆ.
ReplyDelete[Ishwar Kikrana]ಧನ್ಯವಾದಗಳು
ReplyDelete