Sunday, January 9, 2011

ನನ್ನ ಸಖಿ

ಕಮಲದ ಹೂವಂತೆ ಅರಳಿದ ನಿನ್ನ ಮುಖ
ಉಲ್ಲಾಸ ಪಟ್ಟಿದ್ದು ಈ ನಿನ್ನ ಸಖ

ಮಲ್ಲಿಗೆ ಹೂವಂತಿರುವ ಆ ನಿನ್ನ ನಗು
ಎಂದೆಂದೂ ಬಾಡದಿರಲಿ ಈ ಸೊಬಗು

ಮೃದು ಕೋಮಲವಾದ ನಿನ್ನ ಮನಸ್ಸು
ನನ್ನೆಡೆಗೆ ಸೆಳೆಯಲು ಮಾಡಲೇ ಉಗ್ರ ತಪಸ್ಸು

ತಿಳಿನೀರಿನಂತಿರುವ ಆ ನಿನ್ನ ನಯನ
ಕೊಡಲೇ ಅದಕೆ ಒಂದೆರಡು ಚುಂಬನ

ಗುಲಾಬಿ ಕೆಂಪಿನ ಆ ನಿನ್ನ ತುಟಿಯತ್ತ
ಸವರಿಸಲು ಹೊರಟಿದೆ ನನ್ನ ತುಟಿ ಪುಟಿಯುತ್ತ

ರೇಷ್ಮೆಯಂತಿರುವ ಆ ನಿನ್ನ ಕೂದಲನು
ನಾನೊಮ್ಮೆ ಎಣೆಯಲು ಕಾದಿರುವೆನು

ವಿಶಾಲವಾದ ನಿನ್ನ ಹೃದಯ
ಅದಕೆ ಎಂದೆಂದೂ ನಾನೇ ಒಡೆಯ

ಈ ನಿನ್ನ ಸೌಂದರ್ಯಕೆ ಮಾರು ಹೋಗಿ
ಹೇಳುವೆ "ನಾ ನಿನ್ನ ಪ್ರೀತಿಸುವೆ" ಎಂದು ಕೂಗಿ ಕೂಗಿ

ಏ ನನ್ನ ಮುದ್ದು ಸಖಿ
ನಿನ್ನಿಂದ ನಾನೆಂದೂ ುಖೀ

5 comments: