Wednesday, January 26, 2011

ನಮ್ಮ ರಾಷ್ಟ್ರ ಧ್ವಜದ ಸ್ಥಿತಿ

ಇಂದು ನಮ್ಮ ದೇಶದ ೬೨ನೇ ಗಣರಾಜ್ಯೋತ್ಸವದ ಸಂಭ್ರಮ .ಎಲ್ಲಾ ರಾಷ್ಟ್ರೀಯ ದಿನಾಚರಣೆಗಳಂತೆ  ಇಂದೂ ಕೂಡ ರಾಷ್ಟ್ರ ಧ್ವಜವನ್ನು ಹಾರಿಸುವುದು ವಾಡಿಕೆ .



ಇಂದು ಬೆಳಗ್ಗೆ ಯಾವುದೋ ಒಂದು ಕಾರ್ಯಕ್ರಮವನ್ನು ಮುಗಿಸಿ ವಾಪಸ್ಸಾಗುವಾಗ ಬಸ್ ಸ್ಟಾಪ್ ನಿಂದ ರೂಮಿನ ಕಡೆ ನಡೆದು ಹೋಗುತ್ತಿದ್ದೆ .ದಾರಿಯಲ್ಲಿ ಒಂದು ಪುಸ್ತಕದ ಅಂಗಡಿಯಲ್ಲಿ ಪ್ಲಾಸ್ಟಿಕ್  ಧ್ವಜಗಳನ್ನು ಮಾರಾಟಕ್ಕಿಟ್ಟಿದ್ದನ್ನು ೨-೩ ದಿನಗಳ ಹಿಂದೆಯೇ ಗಮನಿಸಿದ್ದೆ . ನಾನು ಅಂಗಡಿಯ ಹತ್ತಿರ ಬಂದಾಗ ಕೆಳಗಡೆ ಬಿದ್ದಿರುವುದನ್ನು ನೋಡಿ ಅದರ ಹತ್ತಿರ ಹೋದೆ .ಅದಕ್ಕೂ ಮುಂಚೆ ಅದೆಷ್ಟು ಜನ ಅದನ್ನು ತುಳಿದಿದ್ದರೋ ಗೊತ್ತಿಲ್ಲ .

ನಂತರ  ನಾನು ಆ ಧ್ವಜವನ್ನು  ಎತ್ತಿ ಆ ಅಂಗಡಿಯ ಮಾಲಿಕನಿಗೆ ಕೊಟ್ಟು ,"ನೋಡಿ ಕೆಳಗಡೆ ಬಿದ್ದಿತ್ತು .ಸ್ವಲ್ಪ ಕರೆಕ್ಟ್ ಆಗಿ ಜೋಡಿಸಿಕೊಳ್ಳಿ " ಅಂತ ಹೇಳಿದೆ  .
"ಒಹ್ ,ನೋಡೇ ಇರಲಿಲ್ಲ ಸರ್ ", ಅಂದ ಅವನು ಅದನ್ನು ಒಳಗಡೆ ಇಟ್ಟ ನಂತರ ನಾನು ಹೊರಟೆ .
ನಮ್ಮ  ರಾಷ್ಟ್ರ  ಧ್ವಜದ ಸ್ಥಿತಿ ನೋಡಿ ಮರುಕ ಉಂಟಾಯಿತು . ಈ ಪ್ಲಾಸ್ಟಿಕ್  ಧ್ವಜಗಳು ರಾಷ್ಟ್ರೀಯ  ದಿನಚಾರಣೆಗಳಂದು  ಒಂದು ಆಟಿಕೆಯ ಸಾಮಾನಾಗಿ ಮಾರ್ಪಡುತ್ತದೆ ಮತ್ತು ಇನ್ನು ಕೆಲವರಿಗೆ ಅದು ಒಂದು ರೀತಿಯ ಶೋಕಿಯ ವಸ್ತು .ತಮ್ಮ  ತಮ್ಮ ವಾಹನಗಳಲ್ಲಿ ಸಿಕ್ಕಿಸಿಕೊಂಡು ಹೋಗುವುದು .

ಅವರಿಗೆ ಧ್ವಜವನ್ನು ತಮ್ಮ ಗಾಡಿಗಳಲ್ಲಿ ಇರಿಸುವಾಗ ಇರುವ ಕಾಳಜಿ , ಮಧ್ಯ ದಾರಿಯಲ್ಲಿ  ಧ್ವಜ ಬಿದ್ದಾಗ ಅಥವಾ ಗಾಳಿಯಲ್ಲಿ ತೂರಿಕೊಂಡು ಹೋದಾಗ ಇರುವುದಿಲ್ಲ .
ಈ ದೃಶ್ಯವನ್ನು ನೋಡಿದ ನಂತರ ನನಗೆ ನೆನಪಾಗಿದ್ದು ,ನಾನು ಚಿಕ್ಕವನಿದ್ದಾಗ ,ನಮ್ಮ ಮನೆಯ ಪಕ್ಕದ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ,ಶಾಲೆಯ ಧ್ವಜ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದಿದ್ದು.
ಹೀಗೆ ನೂರಾರು ರೀತಿಯಲ್ಲಿ ನಮ್ಮ ಧ್ವಜವನ್ನು ನಮ್ಮ ಜನರೇ ಅವಮಾನ ಮಾಡುತ್ತಾರೆ . ಈ ಪ್ಲಾಸ್ಟಿಕ್ ಧ್ವಜಗಳ ಮಟ್ಟಿಗೆ ಹೇಳಬೇಕಾದರೆ ಇವನ್ನು ನಿಷೇಧಿಸುವುದು ಅತಿ ಅವಶ್ಯ ಅನಿಸುತ್ತದೆ .  ನಮ್ಮ  ರಾಷ್ಟ್ರ  ಧ್ವಜವು ಎಂದಿಗೂ ಈ ರೀತಿ ಅವಮಾನ ಪಡಬಾರದು ಮತ್ತು ಅದರ ಗೌರವ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು

3 comments:

  1. girish kanunina prakaara beekabitti dhwajagalannu mudrisuvantilla adare keluvararu? kanunu eruvade muriyuvudakke allave sarkara e bagge tale keduskolalla bidi

    ReplyDelete
  2. santosh avare neevu heluvudu sariyagide.yaava srakaranu idara bagge thale kedisikolluvudilla,yakandare avarige madakke eshto kelasa ide nodi.

    ReplyDelete
  3. Just show off kodade, avra desha bakthi na jana thorisbeku..........
    Adre Putta makkalige ,small flags itkolodu kushi kodatthe....avrige thili helbeku, adara hindina moulyada bagege.........:)

    ReplyDelete