ಕಳೆದ ವಾರ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಸಂತೆ ಶಿವರ ಎಂಬ ಗ್ರಾಮದ ಬಸವರಾಜು ಎಂಬ ರೈತರ ತೋಟಕ್ಕೆ ಹೋಗಿದ್ದೆವು.ಅವರ ತೋಟದಲ್ಲಿ ಕಂಡ ಕೆಲವು ವಿಚಿತ್ರ ಮತ್ತು ವಿಸ್ಮಯ ಸಂಗತಿಗಳನ್ನು ಹೇಳಬೇಕೆಂಬ ಆಶಯ..
ಮೊದಲನೆಯದು,ಆ ತೋಟವನ್ನು ಸುಮಾರು ೧೮ ವರ್ಷದಿಂದ ಬೇಸಾಯ ಮಾಡಿಲ್ಲ..ಎರಡನೆಯದು ಆ ತೋಟದಲ್ಲಿ ಗೂಬೆಯನ್ನು ಸಾಕಿದ್ದಾರೆ...
ಬೇಸಾಯ ಮಾಡದೆ ಇರುವ ತೋಟವನ್ನು Zero Cultivation Land ಎಂದು ಕರೆಯುತ್ತಾರೆ..ಈ ರೀತಿ ಮಾಡುವುದರಿಂದ ಭೂಮಿಯಲ್ಲಿ ಎರೆ ಹುಳುಗಳು ಸಾಯುವುದಿಲ್ಲ ಮತ್ತು ಆ ಹುಳುಗಳು ಭೂಮಿ ಒಳಗೆ ಕೆಲವು ಪ್ರಕ್ರಿಯೆಗಳನ್ನು ನಡೆಸಿ ಆ ಗಿಡಗಳಿಗೆ ಗೊಬ್ಬರದ ರೀತಿ ಸಹಾಯ ಮಾಡುತ್ತದೆ. ಅಲ್ಲದೆ ಆ ತೋಟದಲ್ಲಿ ಅವರು ಬಳಸುವ ಔಷಧಿಗಳು ಭೇವಿನ ಎಣ್ಣೆ,ಬೆಳ್ಳುಳ್ಳಿ ಮತ್ತು ಮೆಂತ್ಯವನ್ನು ಅರೆದು ಮಾಡಿದ ರಸ,ಹುಳಿ ಮಜ್ಜಿಗೆ ಮತ್ತು ಗಂಜಲ,ಹೀಗೆ ಪ್ರತಿಯೊಂದು ಕೂಡ ಸಾವಯವ ಪದ್ದತಿ.ಯಾವುದೇ ರಾಸಾಯನಿಕ ವಸ್ತುವನ್ನು ಅವರು ಈ ತೋಟದಲ್ಲಿ ಬಳಸಿಲ್ಲ..
ಇದಕ್ಕಿಂತ ಮುಖ್ಯ ಸಂಗತಿ ಎಂದರೆ ಇಲ್ಲಿ ಗೂಬೆಯನ್ನು ಸಾಕಿದ್ದಾರೆ...ಗಿಳಿ,ಪಾರಿವಾಳ,love birds ಹೀಗೆ ಬೇರೆ ಬೇರೆ ಹಕ್ಕಿಗಳನ್ನು ಸಾಕುವುದು ಅಷ್ಟೇನೂ ಕುತೂಹಲಕಾರಿ ವಿಷಯ ಅಲ್ಲ...ಆದರೆ ಇಲ್ಲಿ ಅವರು ಗೂಬೆಯನ್ನು ಸಾಕಿದ್ದೇವೆ ಎಂದಾಗ ಒಂದು ರೀತಿಯ ಶಾಕ್ ಆಯಿತು, ಹಾಗೆ ಅದರ ಬಗ್ಗೆ ಕುತೂಹಲ ಹೆಚ್ಚಾಯಿತು...
ಮೊದಲು ಅವರು ಒಂದು ಗೂಬೆಯನ್ನು ತಂದು ಸಾಕಲು ಮೊದಲು ಮಾಡಿದಾಗ ಒಂದು ಪೆಟ್ಟಿಗೆಯನ್ನು ಅದಕ್ಕಾಗಿ ಮೀಸಲು ಇಟ್ಟಿದ್ದರಂತೆ.ಪ್ರತಿ ದಿನ ಅದಕ್ಕೆ ಹಣ್ಣು ಹಂಪಲು ಹೀಗೆ ಅದು ಇದು ತಿನ್ನುವುದಕ್ಕೆ ಕೊಟ್ಟು ತಮಗೆ ಬೇಕಾದ ರೀತಿಯಲ್ಲಿ ಒಗ್ಗಿಸಿ ಕೊಂಡಿದ್ದಾರೆ..ಕೆಲವರು ಪಾರಿವಾಳ ಸಾಕುವವರು ಅವಕ್ಕೆ ಒಂದು ಪೆಟ್ಟಿಗೆಯನ್ನು ಇಟ್ಟು ಅದರಲ್ಲಿ ಕೆಲವು ಬೆಳೆಗಳನ್ನು ಅವಕ್ಕೆ ಉಣ ಬಡಿಸುವ ಹಾಗೆ ಇವರೂ ಕೂಡ ಗೂಬೆಗಳಿಗೆ ಕೆಲವು ಬೆಳೆ ಮತ್ತು ಹಣ್ಣು ಗಳನ್ನು ಕೊಡುತ್ತಿದ್ದರಂತೆ,ಇದರಿಂದ ಅವು ಬೇರೆ ಕಡೆ ಹೋಗುತ್ತಿರಲಿಲ್ಲ. ಸಮಯ ಕಳೆದಂತೆ ಅವು ಇವರಿಗೆ ಸರಿಯಾಗಿ ಹೊಂದಿಕೊಂಡಿವೆ...
ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಗೂಬೆಯನ್ನು ಸಾಕಿರುವುದರಿಂದ ಆಗುತ್ತಿರುವ ಉಪಯೋಗಗಳು.ಮೊದಲನೆಯದಾಗಿ,ತೆಂಗಿನ ಮರ ಹತ್ತಿ ಕೆಲವು ಇಲಿಗಳು ಎಳನೀರನ್ನು ಕುಡಿಯುತ್ತವೆ,ಇದರಿಂದ ಆ ರೈತರಿಗೆ ತುಂಬ ನಷ್ಟ ಆಗುತ್ತದೆ..ಆದರೆ ಈ ಗೂಬೆಗಳು ಇಲಿಗಳು ಮತ್ತು ಹಾವುಗಳನ್ನು ತಿನ್ನುತ್ತದೆಯಂತೆ...ಇದರಿಂದ ಸ್ವಲ್ಪ ನಷ್ಟ ಕಡಿಮೆ ಆಗುತ್ತದೆ..ಅಲ್ಲದೆ ಅವು ಹಾವುಗಳನ್ನು ಕೂಡ ತಿನ್ನುವುದರಿಂದ ತೋಟದಲ್ಲಿ ಹಾವಿನ ಭಯ ಇರುವುದಿಲ್ಲ...ಹಾವುಗಳನ್ನು ತಿನ್ನುವುದನ್ನು ನಂಬದೆ ಮತ್ತೊಮ್ಮೆ ಕೇಳಿದಾಗ ಕೆಲವು ಬಾರಿ ಅವರೇ ಇದನ್ನು ಗಮನಿಸಿರುವ ವಿಷಯವನ್ನು ಹೇಳಿದರು...
ಮತ್ತೆ ಇದರ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಆ ತೋಟದ ಯಜಮಾನರು ಅಲ್ಲಿಗೆ ಹೋದಾಗ ಅವು ಅವರ ಬಳಿ ಬಂದು,ಅವರು ತಂದು ಕೊಡುವ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತವೆ..ಆ ಮನೆಯವರು ಬಿಟ್ಟು ಬೇರೆ ಯಾರಾದರು ಆ ತೋಟದ ಒಳಗಡೆ ಹೋದರೆ ಅವು ಸುಖಾ ಸುಮ್ಮನೆ ಕೂಗಲು ಶುರು ಮಾಡುತ್ತವೆ.ಇದರಿಂದ ಕಳ್ಳರು ಆ ತೋಟಕ್ಕೆ ಹೋಗಲು ಹೆದರುವುದರಲ್ಲಿ ಬೇರೆ ಸಂದೇಹವೇ ಇಲ್ಲ...
ಬೇರೆಯವರು ಆ ತೋಟವನ್ನು ನೋಡ ಬೇಕು ಎಂದುಕೊಂಡರೆ ಆ ಮನೆಯವರಲ್ಲಿ ಯಾರಾದರು ಒಬ್ಬರ ಜೊತೆಗೆ ಹೋಗಬೇಕು..ಇಲ್ಲದಿದ್ದರೆ ಆ ಕರ್ಕಶ ಶಬ್ದವನ್ನು ಕೇಳಬೇಕಾಗುತ್ತದೆ...
ಆ ಗೂಬೆಗಳನ್ನು ಅವರು ಎಷ್ಟರ ಮಟ್ಟಿಗೆ ಪಳಗಿಸಿಕೊಂದಿದ್ದಾರೆ ಎಂದರೆ ಮೊದಲ ತಂದ ಮರಿಯನ್ನು ಮಾತ್ರ ಅವರು ಆ ಪೆಟ್ಟಿಗೆಯಲ್ಲಿ ಇಟ್ಟು ಸಾಕಿದ್ದು,ನಂತರ ಅದರ ಮರಿಗಳು ಈ ವಾತಾವರಣಕ್ಕೆ ಮತ್ತು ಆ ಪ್ರಕ್ರಿಯೆಗೆ ಹೊಂದಿಕೊಂಡು ಹೋಗುತ್ತಿವೆ...ಹೀಗೆ ಆ ಗೂಬೆಗಳ ಒಂದರ ನಂತರ ಇನ್ನೊಂದು ಪರಂಪರೆ ಆ ತೋಟದಲ್ಲಿ ಅದರ ಪಾಡಿಗೆ ಅವು ಹೊಂದಿಕೊಳ್ಳುತ್ತಿವೆ....
ಇನ್ನೊಂದು ವಿಷಯ ಎಂದರೆ ಪಾರಿವಾಳಗಳನ್ನು ಸಾಕುವುದರಿಂದ ಆಗುವ ಸಮಸ್ಯೆ ಎಂದರೆ ಅದರ ಶಬ್ದಕ್ಕೆ ಹಾವುಗಳು ಸಮೀಪ ಬರುತ್ತವೆ...ಇದು ಹಳ್ಳಿಗಳಲ್ಲಿ ಹೆಚ್ಚು,ಆದರೆ ಪಟ್ಟಣಗಳಲ್ಲಿ ಹಾವುಗಳು ಕಾಣುವುದೇ ಅಪರೂಪ...