Wednesday, June 8, 2011

! ! ? ?

ಕಳೆದು ಹೋದವು ವಸಂತಗಳು ಅದೆಷ್ಟೋ ,
ಸಂಪಾದಿಸಿದ್ದು ಶೂನ್ಯ ಆಸ್ತಿ,ಎಲ್ಲಾ ಕಳೆದದ್ದೇ ಜಾಸ್ತಿ,
ಆದರೆ ಗಳಿಸಿದ ಸ್ನೇಹ,ಪ್ರೀತಿ ಎಂಬ ಸಂಪತ್ತು ಅಪಾರ,
ಕಳೆದುಕೊಳ್ಳಲಾಗದ ಅತಿ ಬೆಲೆ ಬಾಳುವ ಸಂಪತ್ತು...

ಮುಂದಿವೆ ನೂರೆಂಟು ಕವಲು ದಾರಿ,
ಎಲ್ಲೂ ಮುನ್ನಡೆಯಲು ಒಪ್ಪದ ಚಿತ್ತ,
ನನ್ನದೇ ಬೇರೊಂದು ಕವಲುದಾರಿಯಲಿ ಸಾಗುವ ಹವಣಿಕೆಯಲಿ,
ಅದರ ಅನ್ವೇಷನೆಯಲಿ ಸಾಗುತ್ತಿದೆ ಜೀವನವೆಂಬ ಪಯಣ.

ಸಾಧಿಸಲು ಉಳಿದಿವೆ ಹತ್ತಾರು ಕನಸುಗಳು,
ಜೊತೆಗೆ ಸೇರುತ್ತಿವೆ ಇನ್ನಷ್ಟು,ಮತ್ತಷ್ಟು,
ಸಾಧಿಸಬೇಕೆಂಬ ಹಂಬಲ,
ಸಾಧಿಸುತ್ತೇನೆ ಎಂಬ ಛಲ,
ತಡವಾದರೂ ಸರಿ ಸಾಧಿಸಿಯೇ ತೀರುತ್ತೇನೆಂಬ ಹಠ,ಧೈರ್ಯ....

22 comments:

  1. ನಿಮ್ಮ ಸಾಧನೆಯ ಛಲ ಪ್ರಶಂಸನಾರ್ಹವಾಗಿದೆ. Hats off!

    ReplyDelete
  2. ಸಾಧನಾತ್ಮಕ ಸಾಲುಗಳು ... ಚೆನ್ನಾಗಿದೆ
    ಇನ್ನು ಬರೆಯಿರಿ ...ಜೊತೆಗೆ ಆದಷ್ಟು ಬೇಗ ನಿಮ್ಮ ಗುರಿಯನ್ನು ತಲುಪಿ ....

    ReplyDelete
  3. @Sunaath Sir: Thanx a lot !!!
    @Sandeep:Thanks for your heartly wishes !!!

    ReplyDelete
  4. ನಿಮ್ಮ ಸಾಧನೆಯ ಛಲ ಅಚಲವಾಗಿ ಮುಂದುವರಿಯಲಿ.ಕವಿತೆಯ ಆಶಯ ಚೆನ್ನಾಗಿದೆ.

    ReplyDelete
  5. ಚೆನ್ನಾಗಿವೆ ಗಿರೀಶ್ ನಿಮ್ಮ ಸಾಲುಗಳು.. ಅಂತ್ಯಪ್ರಾಸ ಕೂಡಿಸಿದ್ದರೆ ಇನ್ನು ಚೆನ್ನಾಗಿರುತಿತ್ತು ಎಂದು ನನ್ನ ಅನಿಸಿಕೆ.

    ReplyDelete
  6. @Doctor Sir:Welcome to my Blog..Thank you!!!
    @Pradeep:I agree with you,Thankx for your valuable suggestion !!!

    ReplyDelete
  7. ಗಿರೀಶು..

    ತುಂಬಾ ಸುಂದರವಾದ ಸಾಲುಗಳು..

    ಪ್ರತಿಸಾಲುಗಳು ಸ್ಪೂರ್ತಿಕೊಡುವಂತಿದೆ..

    ಅಭಿನಂದನೆಗಳು ಚಂದದ ಸಾಲುಗಳಿಗೆ...

    ReplyDelete
  8. ಗಿರೀಶ್ ನಿಮಗೆ ಶುಭವಾಗಲಿ ನಿಮ್ಮಲ್ಲಿರುವ ಸಾಧಿಸುವ ಚಲ ನಿಜಕ್ಕೂ ಮೆಚ್ಚಬೇಕಾದ್ದೇ ಸರಿ. ಕವನದ ಸಾಲುಗಳು ಇಷ್ಟವಾಯಿತು...

    ReplyDelete
  9. ಗಿರೀಶ,
    ನಿಮ್ಮ ಉತ್ಸಾಹ ಎಂದೂ ಬತ್ತದಿರಲಿ. ನಿಮ್ಮ ಸದುದ್ದೇಶಗಳು ಈಡೇರಲೆಂದು ಹಾರೈಸುತ್ತೇನೆ.

    ReplyDelete
  10. @Prakash Mama:ಅನಂತ ಅನಂತ ಧನ್ಯವಾದಗಳು.ನೀವು ನಮಗೆ ಕೊಡುವ ಸ್ಪೂರ್ತಿ ಹೀಗೆ ಇರಲಿ
    @Suguma Madam :ಸಾಲುಗಳನ್ನು ಮೆಚ್ಚಿದಕ್ಕೆ ಧನ್ಯವಾದಗಳು..ನಿಮ್ಮ ಶುಭ ಆರೈಕೆ ಸದಾ ಹೀಗೆ ಇರಲಿ

    ReplyDelete
  11. @ಸುಬ್ರಮಣ್ಯ ಸರ್ :ನಿಮ್ಮ ಹಾರೈಕೆಗೆ ಕೋಟಿ ಕೋಟಿ ಧನ್ಯವಾದಗಳು..
    @ಸುಮ ಮೇಡಂ:ಧನ್ಯವಾದಗಳು
    @ವಿ .ಆರ್.ಭಟ್ ಸರ್:ಧನ್ಯವಾದಗಳು

    ReplyDelete
  12. ಶುಭವಾಗಲಿ, ನಿಮ್ಮ ಪಯಣಕ್ಕೆ. ನಾವು ಸಿಕ್ಕಾಗ ನಿಮ್ಮ ನಗುವಿರಲಿ.

    ReplyDelete
  13. Nice lines..All the best..

    Nimmava,
    Raghu.

    ReplyDelete
  14. Girish sir,, nimma saalugalu thumba chennagive...vandanegalu...

    ReplyDelete
  15. ನಿಮ್ಮೆಲ್ಲ ಕನಸುಗಳು ನನಸಾಗಲಿ.. ಗಿರೀಶ್. ಅಭಿನ೦ದನೆಗಳು.

    ಅನ೦ತ್

    ReplyDelete
  16. @Sathish sir:Thank you..
    @Raghu:welcome to my blog and thank u..
    @Manamuktha:Thank you madam..

    ReplyDelete
  17. @Sashi bellayaru:sir thank you for your feedback..
    @Ananth raj sir:Thanks a lot...

    ReplyDelete
  18. wow superb...........
    really fantastic, energetic lines.........:)
    liked it alot........:):)

    ReplyDelete
  19. @Kavya: Yes,life must be energetic na...Thanx...

    ReplyDelete