ಕಳೆದ ವಾರ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಸಂತೆ ಶಿವರ ಎಂಬ ಗ್ರಾಮದ ಬಸವರಾಜು ಎಂಬ ರೈತರ ತೋಟಕ್ಕೆ ಹೋಗಿದ್ದೆವು.ಅವರ ತೋಟದಲ್ಲಿ ಕಂಡ ಕೆಲವು ವಿಚಿತ್ರ ಮತ್ತು ವಿಸ್ಮಯ ಸಂಗತಿಗಳನ್ನು ಹೇಳಬೇಕೆಂಬ ಆಶಯ..
ಮೊದಲನೆಯದು,ಆ ತೋಟವನ್ನು ಸುಮಾರು ೧೮ ವರ್ಷದಿಂದ ಬೇಸಾಯ ಮಾಡಿಲ್ಲ..ಎರಡನೆಯದು ಆ ತೋಟದಲ್ಲಿ ಗೂಬೆಯನ್ನು ಸಾಕಿದ್ದಾರೆ...
ಬೇಸಾಯ ಮಾಡದೆ ಇರುವ ತೋಟವನ್ನು Zero Cultivation Land ಎಂದು ಕರೆಯುತ್ತಾರೆ..ಈ ರೀತಿ ಮಾಡುವುದರಿಂದ ಭೂಮಿಯಲ್ಲಿ ಎರೆ ಹುಳುಗಳು ಸಾಯುವುದಿಲ್ಲ ಮತ್ತು ಆ ಹುಳುಗಳು ಭೂಮಿ ಒಳಗೆ ಕೆಲವು ಪ್ರಕ್ರಿಯೆಗಳನ್ನು ನಡೆಸಿ ಆ ಗಿಡಗಳಿಗೆ ಗೊಬ್ಬರದ ರೀತಿ ಸಹಾಯ ಮಾಡುತ್ತದೆ. ಅಲ್ಲದೆ ಆ ತೋಟದಲ್ಲಿ ಅವರು ಬಳಸುವ ಔಷಧಿಗಳು ಭೇವಿನ ಎಣ್ಣೆ,ಬೆಳ್ಳುಳ್ಳಿ ಮತ್ತು ಮೆಂತ್ಯವನ್ನು ಅರೆದು ಮಾಡಿದ ರಸ,ಹುಳಿ ಮಜ್ಜಿಗೆ ಮತ್ತು ಗಂಜಲ,ಹೀಗೆ ಪ್ರತಿಯೊಂದು ಕೂಡ ಸಾವಯವ ಪದ್ದತಿ.ಯಾವುದೇ ರಾಸಾಯನಿಕ ವಸ್ತುವನ್ನು ಅವರು ಈ ತೋಟದಲ್ಲಿ ಬಳಸಿಲ್ಲ..
ಇದಕ್ಕಿಂತ ಮುಖ್ಯ ಸಂಗತಿ ಎಂದರೆ ಇಲ್ಲಿ ಗೂಬೆಯನ್ನು ಸಾಕಿದ್ದಾರೆ...ಗಿಳಿ,ಪಾರಿವಾಳ,love birds ಹೀಗೆ ಬೇರೆ ಬೇರೆ ಹಕ್ಕಿಗಳನ್ನು ಸಾಕುವುದು ಅಷ್ಟೇನೂ ಕುತೂಹಲಕಾರಿ ವಿಷಯ ಅಲ್ಲ...ಆದರೆ ಇಲ್ಲಿ ಅವರು ಗೂಬೆಯನ್ನು ಸಾಕಿದ್ದೇವೆ ಎಂದಾಗ ಒಂದು ರೀತಿಯ ಶಾಕ್ ಆಯಿತು, ಹಾಗೆ ಅದರ ಬಗ್ಗೆ ಕುತೂಹಲ ಹೆಚ್ಚಾಯಿತು...
ಮೊದಲು ಅವರು ಒಂದು ಗೂಬೆಯನ್ನು ತಂದು ಸಾಕಲು ಮೊದಲು ಮಾಡಿದಾಗ ಒಂದು ಪೆಟ್ಟಿಗೆಯನ್ನು ಅದಕ್ಕಾಗಿ ಮೀಸಲು ಇಟ್ಟಿದ್ದರಂತೆ.ಪ್ರತಿ ದಿನ ಅದಕ್ಕೆ ಹಣ್ಣು ಹಂಪಲು ಹೀಗೆ ಅದು ಇದು ತಿನ್ನುವುದಕ್ಕೆ ಕೊಟ್ಟು ತಮಗೆ ಬೇಕಾದ ರೀತಿಯಲ್ಲಿ ಒಗ್ಗಿಸಿ ಕೊಂಡಿದ್ದಾರೆ..ಕೆಲವರು ಪಾರಿವಾಳ ಸಾಕುವವರು ಅವಕ್ಕೆ ಒಂದು ಪೆಟ್ಟಿಗೆಯನ್ನು ಇಟ್ಟು ಅದರಲ್ಲಿ ಕೆಲವು ಬೆಳೆಗಳನ್ನು ಅವಕ್ಕೆ ಉಣ ಬಡಿಸುವ ಹಾಗೆ ಇವರೂ ಕೂಡ ಗೂಬೆಗಳಿಗೆ ಕೆಲವು ಬೆಳೆ ಮತ್ತು ಹಣ್ಣು ಗಳನ್ನು ಕೊಡುತ್ತಿದ್ದರಂತೆ,ಇದರಿಂದ ಅವು ಬೇರೆ ಕಡೆ ಹೋಗುತ್ತಿರಲಿಲ್ಲ. ಸಮಯ ಕಳೆದಂತೆ ಅವು ಇವರಿಗೆ ಸರಿಯಾಗಿ ಹೊಂದಿಕೊಂಡಿವೆ...
ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಗೂಬೆಯನ್ನು ಸಾಕಿರುವುದರಿಂದ ಆಗುತ್ತಿರುವ ಉಪಯೋಗಗಳು.ಮೊದಲನೆಯದಾಗಿ,ತೆಂಗಿನ ಮರ ಹತ್ತಿ ಕೆಲವು ಇಲಿಗಳು ಎಳನೀರನ್ನು ಕುಡಿಯುತ್ತವೆ,ಇದರಿಂದ ಆ ರೈತರಿಗೆ ತುಂಬ ನಷ್ಟ ಆಗುತ್ತದೆ..ಆದರೆ ಈ ಗೂಬೆಗಳು ಇಲಿಗಳು ಮತ್ತು ಹಾವುಗಳನ್ನು ತಿನ್ನುತ್ತದೆಯಂತೆ...ಇದರಿಂದ ಸ್ವಲ್ಪ ನಷ್ಟ ಕಡಿಮೆ ಆಗುತ್ತದೆ..ಅಲ್ಲದೆ ಅವು ಹಾವುಗಳನ್ನು ಕೂಡ ತಿನ್ನುವುದರಿಂದ ತೋಟದಲ್ಲಿ ಹಾವಿನ ಭಯ ಇರುವುದಿಲ್ಲ...ಹಾವುಗಳನ್ನು ತಿನ್ನುವುದನ್ನು ನಂಬದೆ ಮತ್ತೊಮ್ಮೆ ಕೇಳಿದಾಗ ಕೆಲವು ಬಾರಿ ಅವರೇ ಇದನ್ನು ಗಮನಿಸಿರುವ ವಿಷಯವನ್ನು ಹೇಳಿದರು...
ಮತ್ತೆ ಇದರ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಆ ತೋಟದ ಯಜಮಾನರು ಅಲ್ಲಿಗೆ ಹೋದಾಗ ಅವು ಅವರ ಬಳಿ ಬಂದು,ಅವರು ತಂದು ಕೊಡುವ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತವೆ..ಆ ಮನೆಯವರು ಬಿಟ್ಟು ಬೇರೆ ಯಾರಾದರು ಆ ತೋಟದ ಒಳಗಡೆ ಹೋದರೆ ಅವು ಸುಖಾ ಸುಮ್ಮನೆ ಕೂಗಲು ಶುರು ಮಾಡುತ್ತವೆ.ಇದರಿಂದ ಕಳ್ಳರು ಆ ತೋಟಕ್ಕೆ ಹೋಗಲು ಹೆದರುವುದರಲ್ಲಿ ಬೇರೆ ಸಂದೇಹವೇ ಇಲ್ಲ...
ಬೇರೆಯವರು ಆ ತೋಟವನ್ನು ನೋಡ ಬೇಕು ಎಂದುಕೊಂಡರೆ ಆ ಮನೆಯವರಲ್ಲಿ ಯಾರಾದರು ಒಬ್ಬರ ಜೊತೆಗೆ ಹೋಗಬೇಕು..ಇಲ್ಲದಿದ್ದರೆ ಆ ಕರ್ಕಶ ಶಬ್ದವನ್ನು ಕೇಳಬೇಕಾಗುತ್ತದೆ...
ಆ ಗೂಬೆಗಳನ್ನು ಅವರು ಎಷ್ಟರ ಮಟ್ಟಿಗೆ ಪಳಗಿಸಿಕೊಂದಿದ್ದಾರೆ ಎಂದರೆ ಮೊದಲ ತಂದ ಮರಿಯನ್ನು ಮಾತ್ರ ಅವರು ಆ ಪೆಟ್ಟಿಗೆಯಲ್ಲಿ ಇಟ್ಟು ಸಾಕಿದ್ದು,ನಂತರ ಅದರ ಮರಿಗಳು ಈ ವಾತಾವರಣಕ್ಕೆ ಮತ್ತು ಆ ಪ್ರಕ್ರಿಯೆಗೆ ಹೊಂದಿಕೊಂಡು ಹೋಗುತ್ತಿವೆ...ಹೀಗೆ ಆ ಗೂಬೆಗಳ ಒಂದರ ನಂತರ ಇನ್ನೊಂದು ಪರಂಪರೆ ಆ ತೋಟದಲ್ಲಿ ಅದರ ಪಾಡಿಗೆ ಅವು ಹೊಂದಿಕೊಳ್ಳುತ್ತಿವೆ....
ಇನ್ನೊಂದು ವಿಷಯ ಎಂದರೆ ಪಾರಿವಾಳಗಳನ್ನು ಸಾಕುವುದರಿಂದ ಆಗುವ ಸಮಸ್ಯೆ ಎಂದರೆ ಅದರ ಶಬ್ದಕ್ಕೆ ಹಾವುಗಳು ಸಮೀಪ ಬರುತ್ತವೆ...ಇದು ಹಳ್ಳಿಗಳಲ್ಲಿ ಹೆಚ್ಚು,ಆದರೆ ಪಟ್ಟಣಗಳಲ್ಲಿ ಹಾವುಗಳು ಕಾಣುವುದೇ ಅಪರೂಪ...

ಗಿರೀಶ್ ನಿಜವಾಗಿಯೂ ಬಹಳ ಅಚ್ಚರಿಯಾಯ್ತು ಗೂಬೆ ಸಾಕಿರುವ ಮತ್ತು ಅದರ ಉಪಯೋಗಗಳ ಕೇಳಿ. ಗೂಬೆಗಳು ಹಾವುಗಳನ್ನು ತಿನ್ನುತ್ತವೆ ಎಂದರೆ ನಿಜವಾಗಿಯೂ ಆಶ್ಚರ್ಯವೇ!
ReplyDeleteಗಿರೀಶ್,
ReplyDeleteಗೂಬೆಗಳ ಬಗ್ಗೆ ತಿಳಿದು ನಿಜವಾಗಲೂ ಆಶ್ಚರ್ಯ ಆಯ್ತು.. ಒಳ್ಳೆಯ ಮಾಹಿತಿ ನೀಡಿದ್ದೀರಿ.
ವ೦ದನೆಗಳು.
ತೆಂಗಿನ ತೋಟದಲ್ಲಿ ತಂಗಿರೋ ಗೂಬೆಗಳ ಬಗ್ಗೆ ಓದಿ ಬಹಳನೇ ಆಶ್ಚರ್ಯ ಆಯಿತು.. ಗೂಬೇಗಲಿನ್ದನು ಮಾನವನಿಗೆ ಸಹಾಯ ಉಂಟು ಎಂದು ತಿಳಿದೇ ಇರಲಿಲ್ಲ.. ಬಹಳ ಒಳ್ಳೆ ಅಂಕಣ..
ReplyDeleteಗೂಬೆಗಳನ್ನು ಸಾಕೋದು! ನಿಜಕ್ಕೂ ಗ್ರೇಟ್. ಒಳ್ಳೆಯ ಲೇಖನ. ಗೂಬೆಗಳ ಬಗ್ಗೆ ನಾನು ಬರೆದ ಲೇಖನ ಇಲ್ಲಿದೆ -http://bhoorame.blogspot.com/2009/08/blog-post_31.html
ReplyDelete@Pradeep:ಪ್ರದೀಪ್ ಆಶ್ಚರ್ಯ ಅನ್ನುವುದರಲ್ಲಿ ಅನುಮಾನವೇ ಇಲ್ಲ...ನನಗು ಒಮ್ಮೆ ಇದನ್ನು ನೋಡಿ ಗಾಬರಿ ಆಯಿತು!!!
ReplyDelete@Asha Madam:ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.....ಧನ್ಯವಾದಗಳು !!!
ReplyDelete@Spicy Sweet Madam:ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..ಎಲ್ಲ ಹಕ್ಕಿಗಳಿಂದ ಕೂಡ ಮನುಷ್ಯನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಇದೆ..ಆದರೆ ಕೆಲವೊಮ್ಮೆ ಮನುಷ್ಯನೇ ಅವುಗಳ ವಿರುದ್ಧ ಕ್ರೂರಿ ಆಗಿ ಬಿಡುತ್ತಾನೆ...
ReplyDeleteಹೀಗೆ ಬರುತ್ತಿರಿ..
@Suma Madam:ನಿಮ್ಮ ಲೇಖನವನ್ನು ಕೂಡ ಓದಿದೆ...ನೀವು ಕೂಡ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ...ವಂದನೆಗಳು !!!
ReplyDeletegirish sir olleya lekhana.indu praanigalalle praamaanikateyannu kaanabeku.vandanegalu.
ReplyDelete@Kalavathi Madam:ಮನುಷ್ಯ ಪ್ರಾಮಣಿಕನಾದರೆ ಅವನು ಸಾಕುವ ಪ್ರಾಣಿಗಳು ಕೂಡ ಅಲ್ಲವೇ?
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು !!!
ಗಿರೀಶ,
ReplyDeleteತುಂಬ ವಿಸ್ಮಯದ, ಅಷ್ಟೇ ಅದ್ಭುತವಾದ ಸಂಗತಿ. ಮಾಹಿತಿ ನೀಡಿದ್ದಕ್ಕೆ ಧನ್ಯವಾದ.
ಗೂಬೆಯೊಂದಿಗಿನ ಒಡನಾಟ ಆಶ್ಚರ್ಯದ ವಿಷಯ ಇದು. ಹೀಗೆ ಒಂದಕ್ಕೊಂದು ನೈಸರ್ಗಿಕವಾಗೇ ನಿಯಂತ್ರಣದಲ್ಲಿದ್ದರೆ ಒಳ್ಳೆಯದು.
ReplyDelete@Sunaath Sir:ಸರ್ ನಿಮ್ಮ ಪ್ರೋತ್ಸಾಹಕ್ಕೆ ಎಂದೂ ಚಿರ ಋಣಿ..ಧನ್ಯವಾದಗಳು
ReplyDelete@Vikas:ವಿಕಾಸ್ ನಿಮ್ಮ ಮಾತಿಗೆ ನನ್ನ ಸಮ್ಮತಿಯು ಇದೆ...ಪರಿಸರದಲ್ಲಿ ಯಾವಾಗಲು ಹೀಗೆ ಮನುಷ್ಯ ಮತ್ತು ಬೇರೆ ಪ್ರಾಣಿಗಳು ನಿಯಂತ್ರಣ ಕಾಯ್ದು ಕೊಳ್ಳಬೇಕು !!!
ReplyDeleteವಾವ್, ಉತ್ತಮವಾದ ಮಾಹಿತಿ. ಗೂಬೆಗಳನ್ನು ಹೀಗೂ ಉಪಯೋಗಿಸಬಹುದು ಎಂದು ಗೊತ್ತಿರಲಿಲ್ಲ. ಮನುಷ್ಯ ಒಬ್ಬ ಬಿಟ್ಟು ಎಲ್ಲಾ ಪ್ರಾಣಿಗಳೂ ಪ್ರಯೋಜನಕಾರಿಯೇ
ReplyDeleteOdi acchariyaaytu....... olle niroopane......
ReplyDeleteಉಪಯುಕ್ತ ಮಾಹಿತಿ ನೀಡುವ ಲೇಖನ. ಚೆನ್ನಾಗಿದೆ. ಗೂಬೆ ಉಪಯೋಗ ಇನ್ನೂ ಸಾಕಷ್ಟು. ಆದ್ದರಿಂದ ಯಾರನ್ನಾದರೂ ಗೂಬೆ ಎಂದು ತೆಗಳುವ ಮುನ್ನ ಯೋಚಿಸಿ....:)
ReplyDelete@Deepasmitha sir:ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ..ಖಂಡಿತ ಎಲ್ಲಾ ಪ್ರಾಣಿಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿಯೇ !!!ಹೀಗೆ ಬರುತ್ತಿರಿ
ReplyDelete@Pravara:ಧನ್ಯವಾದಗಳು ಪ್ರವರ ಅವರೇ ..ನನ್ನ ಬ್ಲಾಗಿಗೆ ಸ್ವಾಗತ ತಮಗೆ !!!
ReplyDelete@Kumara raita:ಸರ್ ತಮಗೂ ಕೂಡ ನನ್ನ ಬ್ಲಾಗಿಗೆ ಸ್ವಾಗತ...ಇನ್ನು ಎಷ್ಟೋ ಉಪಯೋಗಗಳು ಗೂಬೆ ಇಂದ ಇವೆ !!!
ReplyDeleteಗಿರೀಶ್,
ReplyDeleteನನಗೆ ಗೊತ್ತೇ ಇರಲಿಲ್ಲ ಗೂಬೆಗಳನ್ನೂ ಸಾಕುತ್ತಾರೆಂದು... ಒಳ್ಳೆಯ ವಿಷಯ ತಿಳಿದುಕೊಂಡಂತಾಯಿತು ಧನ್ಯವಾದಗಳು
@Suguna madam:ಹೌದು ಗುಬೆಗಳನ್ನು ಕೂಡ ಬಹಳ ಪ್ರೀತಿಯಿಂದ ಅವರು ಸಾಕಿದ್ದರೆ...ಅವುಗಳ ಮರಿಗಳು ಕೂಡ ಆ ತೋಟದಲ್ಲಿ ಅವರಿಗೆ ಹೊಂದಿಕೊಂಡು ಹೋಗುತ್ತಿವೆ !!!
ReplyDeleteಗೂಬೆ ಸಾಕಿರುವ ವಿಷಯ ತಿಳಿದು ಬಹಳ ಅಚ್ಚರಿಯಾಯ್ತು! ಉತ್ತಮ ಮಾಹಿತಿ ನೀಡಿದ್ದೀರಿ ಗಿರೀಶ್, ಧನ್ಯವಾದಗಳು.
ReplyDelete@Prabhamani madam:ಮೇಡಂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನಿಜವಾಗಲು ಅದು ಅಚ್ಚರಿಯ ವಿಷಯವೇ ಸರಿ !!!
ReplyDeleteಗಿರೀಶ,
ReplyDeleteನಿಮ್ಮ ಆಸಕ್ತಿ ಕಂಡು ಸಂತೋಷವಾಯಿತು. ಗೂಬೆ ಸಾಕಿರುವುದು ಮತ್ತು ಅವು ಹೊಂದಿಕೊಂಡು ಬೆಳೆಯುತ್ತಿರುವುದು, ಇವೆಲ್ಲಾ ವಿಶೇಷ ಅನಿಸಿತು. ಒಳ್ಳೆಯ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸುಬ್ರಹ್ಮಣ್ಯ ಸರ್,
ReplyDeleteನಿಮ್ಮ ಅಮೂಲ್ಯ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು...
Nice information
ReplyDeleteNice info..
ReplyDeleteRaghu
@Sandeep: Thank you !!!
ReplyDelete@Raghu :Thanks !!!
ReplyDelete