ಕಣ್ಣಾ ಮುಚ್ಚೇ.....
ಕಾಡೇ ಗೂಡು.....
ಉದ್ದಿನ ಮೂಟೆ......
ಉರುಳೆ ಹೋಯಿತು.....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೇ.....
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ........
ಬಾಲ್ಯದಲ್ಲಿ ಪ್ರತಿಯೊಬ್ಬರೂ ಈ ಹಾಡನ್ನು ಏನಿಲ್ಲ ಅಂದರೂ ಸಾವಿರ ಸರಿ ಆದರೂ ಹಾಡಿರುತ್ತೀವಿ....ಹುಡುಗಾಟದ ವಯಸ್ಸಿನಲ್ಲಿ ಇದನ್ನು ಬಹಳ ಖುಷಿ ಇಂದ ಮನೆಯ ಸುತ್ತ ಮುತ್ತಲ ಮಕ್ಕಳೆಲ್ಲಾ ಸೇರಿ ಅದೆಷ್ಟು ಸಂಭ್ರಮದಿಂದ ಹಾಡಿರುತ್ತಿದ್ದೆವು.... ಆದರೆ ಇದು ನಮ್ಮ ಜೀವನದ ಅಂತ್ಯಕ್ಕೆ ಎಷ್ಟು ಹೋಲಿಕೆ ಆಗುತ್ತದೆ.....
ಈ ಪದಗಳನ್ನು ನಮ್ಮ ಜೀವನಕ್ಕೆ ಈ ರೀತಿ ಹೋಲಿಸಬಹುದು...
ಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು,ಮನುಷ್ಯನ ಅಂತ್ಯ ..
ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...ಇಲ್ಲಿರುವುದು ಸುಮ್ಮನೆ,ಅಲ್ಲಿರುವುದು ನಮ್ಮನೆ ಎಂಬ ಹಾಗೆ ನಾವು ಸಧ್ಯ ಇರುವ ಮನೆ ಅದು ಕೇವಲ ಕ್ಷಣಿಕ,ಶಾಶ್ವತ ಅಲ್ಲ...ನಮ್ಮ ಸಮಾಧಿಯೇ ನಮಗೆ ಶಾಶ್ವತ...
ಉದ್ದಿನ ಮೂಟೆ ಅಂದರೆ ನಮ್ಮ ೬೦ ಕಿಲೋ,೮೦ ಕಿಲೋ, ಅಥವಾ ಕ್ವಿಂಟಾಲ್ ತೂಕದ ದೇಹ......
ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....ಇಲ್ಲಿ ಉದ್ದಿನ ಮೂಟೆ ಉರುಳಿ ಹೋಯಿತು ಎಂಬುದನ್ನು ಸೂಚಿಸುತ್ತದೆ....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....ಸತ್ತಾಗ ಪ್ರಾಣ ಪಕ್ಷಿ ಹಾರಿ ಹೋಯಿತು ಎಂದು ಹೇಳುವ ಹಾಗೆ ಇದು ಕೂಡ...
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು...
(ಹಾಗೆ ಇದು ಒಂದು ವ್ಯಾಖ್ಯಾನ ಅಷ್ಟೇ !!! ಇದರಲ್ಲಿ ತಪ್ಪು-ಒಪ್ಪುಗಳು ಇದ್ದರೂ ಇರಬಹುದು)
ಚಿಕ್ಕವರಿದ್ದಾಗ ಇದನ್ನು ಹೇಳುತ್ತಾ ಆಡುತಿದ್ದೆವು..... ಆದರೆ ಅದರ ಒಳಾರ್ಥ ಗೊತ್ತಿರ್ಲಿಲ್ಲ..... ಧನ್ಯವಾದಗಳು ತಿಳಿಸಿದ್ದಕ್ಕೆ.....
ReplyDeleteಇಷ್ಟೆಲ್ಲಾ ಅರ್ಥ ಇದೆ ಎಂದು ಗೊತ್ತೇ ಇರಲಿಲ್ಲ... ಅಬ್ಬಾ ಎನಿಸಿತು.. ನಿಜಕೂಡ ಆ ಸಾಲುಗಳು ನಮ್ಮ ಜೀವನದ ಕೊನೆ ಮತ್ತು ಇರುವಿಕೆಯ ಬಗ್ಗೆ ತಿಳಿಸಿದೆ.. ಥಾಂಕ್ಯೂ ಗಿರೀಶ್
ReplyDeleteexcellent information :)
ReplyDeleteGood !
ReplyDeleteಹೀಗೂ ಯೋಚಿಸಬಹುದಾ ಅನ್ನಿಸಿತು ನಿಮ್ಮ ಬರಹ ನೋಡಿ.. ನಿಜ.. ನಿಮ್ಮ ವ್ಯಾಖ್ಯಾನದಲ್ಲಿ ಬಲವಿದೆ.. ನನಗೆ ಕೊನೆಯ ಸಾಲಿನಲ್ಲಿ, ನಿಮ್ಮಯ ಹಕ್ಕಿ ಅಡಗಿಸಿಕೊಲ್ಲಿ ಅನ್ನುದರಲ್ಲಿ, ನಮ್ಮ ಆತ್ಮ ಎಂದು ಹೇಗೆ ಆಗುತ್ತದೆ ಎನ್ನುವುದು ಅರ್ಥವಾಗಲಿಲ್ಲ.. (ಆತ್ಮದ ನೆನಪಿರಬಹುದು..) ನೀವೆಲ್ಲ ನಿಮ್ಮ ಪ್ರಾಣಪಕ್ಷಿಯನ್ನು ಹಿಡಿದಿಟ್ಟುಕೊಳ್ಳಿ ಎಂದೂ ಇರಬಹುದು..
ReplyDeleteಇಷ್ಟವಾಯಿತು ನಿಮ್ಮ ಯೋಚನಾ ಲಹರಿ..
Zara Hatke!
Waaw! Girish Super aagide! entha artha kalpisiddeera.. hats off for your imagination!
ReplyDelete@Pravara K V:ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDelete@Suguna Madam:ಲೇಖನ ಮೆಚ್ಚಿದಕ್ಕೆ ಧನ್ಯವಾದಗಳು....
@Ashwini:Thanks a lot...
ReplyDelete@V.R.Bhat Sit:Thank you so much sir...
@Sahana Madam:ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು...
ReplyDeleteಅದು ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಲೀನವಾಗಿಸಿಕೊಲ್ಲಿ ಎಂದು...
Thanx a lot ..
@Pradeep:Thanks you so much for your support..
:). ನಿಮ್ಮ ಕಲ್ಪನೆ ಚೆನ್ನಾಗಿದೆ.
ReplyDeleteoh really nice information
ReplyDelete@Subhramanya Sir:Thank you so much !!!
ReplyDelete@Asha Madam:Thanx a lot !!!
Good one girish.... Nice representation
ReplyDeleteThank you so much Sandeep !!!
ReplyDeleteಅರ್ಥಗರ್ಬಿಥ ಹೋಲಿಕೆಗಳು ..........
ReplyDeleteಚೆನ್ನಾಗಿದೆ........:)
@Kavya:Thank you for compliments..
ReplyDeleteoh.. istella ola artha ide anta gotte irlilla girish..
ReplyDeletethanks for the article :)
yes Shivu..Thanx for compliments..
ReplyDeleteನಾನು ಬಾಲ್ಯಕ್ಕೆ ಈಗ ಹೋಗಿ ಬಂದೆ.
ReplyDeleteನಮ್ಮೆಲ್ಲ ಶಿಶು ಗೀತೆಯ ಸರಳ ಭಾಷ್ಯ ಇದು. ಧನ್ಯವಾದಗಳು.
ಧನ್ಯೋಸ್ಮಿ ಗುರುಗಳೇ... ಬಹುತೇಕ ನಮ್ಮ ಶಿಶು ಗೀತೆಗಳಲ್ಲಿ ಲೌಕಿಕ ಜೀವನದ ಬಗ್ಗೆ ಅರ್ಥ ಅಡಗಿದೆ... ಆಗ ನಮಗೆ ಇದರ ಬಗ್ಗೆ ಅರ್ಥ ಗೊತ್ತಿರಲಿಲ್ಲ ಈಗ ಅವೆಲ್ಲ ಅರ್ಥ ಆಗ ತೊಡಗಿದೆ..
ReplyDelete