ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...
ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...
"ಸುಷ್ಮಾ,ಒಂದು ಮಾತು ಕೇಳಲಾ ?"
"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...
"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.
"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"
"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...
ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....
ಪಾಪ.. ಆ ಹುಡುಗನ ಎಡೆ ಮೇಲೆ ಮೆಟ್ಟಿ ಹೋದಳಾ ಆ ಹುಡುಗಿ.. ಅವನು ಆ ಪ್ರಶ್ನೆ ಕೇಳದೆಯೇ ಇರದಿದ್ದರೆ ಹಿತವಾಗಿರುತ್ತಿತ್ತೂ ಏನೋ..
ReplyDelete[Sahana]ಅವಳು ಇನ್ಯಾರನ್ನೋ ಇಷ್ಟ ಪಡುವಾಗ ಇವನು ಅವಳನ್ನು ಇಷ್ಟ ಪಟ್ಟ..ಅದೇ ತೊಂದರೆ ಆಗಿದ್ದು...
ReplyDeleteಇಷ್ಟಪಡುವುದರಲ್ಲೇನೂ ತಪ್ಪಿಲ್ಲ, ತುಮುಲಗಳನ್ನು ಮೆಟ್ಟಿ ನಿಂತು ಬದುಕನ್ನು ರೂಪಿಸಿಕೊಳ್ಳುವ ಇಚ್ಚಾಶಕ್ತಿ ಮುಖ್ಯ. ಚಿಕ್ಕದಾದರೂ ಚೆನ್ನಾಗಿದೆ.
ReplyDelete[ಸುಭ್ರಮಣ್ಯ ಸರ್] ಬದುಕನ್ನು ರೂಪಿಸಿಕೊಳ್ಳುವ ಮತ್ತು ಇಂಥ ಸನ್ನಿವೇಶಗಳನ್ನು ಹೆದರಿಸುವ ಮನಸ್ಥಿತಿ ತುಂಬ ಮುಖ್ಯ...ಧನ್ಯವಾದಗಳು...
ReplyDeletemana muttitu
ReplyDelete[Asha Madam]ತುಂಬ ದಿನದ ನಂತರ ಈ ಕಡೆ ಬಂದಿದ್ದೀರಿ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDeleteಪಾಪ ಆ ಹುಡುಗ .. ಕಳೆದು ಹೋದದ್ದನ್ನು ಪ್ರಶ್ನಿಸಲೇ ಬಾರದಿತ್ತೇನೋ ! ಜೀವನದ ಆಯ್ಕೆ ಅವಳಿಗೆ ಹಿತವಾಗಿದ್ದರು ಅವನಿಗೆ ಕಹಿಯಾಗಿ ಹೋಯಿತು.ಚೆನ್ನಾಗಿದೆ ಲೇಖನ.
ReplyDelete[Ashwini]ಪರರ ವಸ್ತು ಪಾಷಾಣ ಅಲ್ಲವೇ? ಕೆಲವೊಮ್ಮೆ ಸತ್ಯ ಕಹಿ ಆಗಿರುತ್ತದೆ..ಹಾಗೆ ಆ ಹುಡುಗನಿಗೆ ಆಯಿತು... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDeleteಕುಳಿತು ಕೊರಗುವುದಕ್ಕಿಂತ ... ಅವಳನ್ನು ಕೇಳಿದನಲ್ಲ, ಅದು ನಿಜವಾದ ದೈರ್ಯಸ್ತಿಕೆ ...
ReplyDeleteಇಲ್ಲಿ ಇಬ್ಬರ ತಪ್ಪು ಇಲ್ಲ . ಪ್ರತಿಕ್ರಿಯೆಗೆ ತಕ್ಕ ಪ್ರತಿಕ್ರಿಯೆ ...
[Sandeep]ಖಂಡಿತ ನಿಮ್ಮ ಮಾತು ಸತ್ಯ.. ಅವನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಹೇಳಿಬಿಟ್ಟು ನಿರಾಳನಾದ ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDelete