Sunday, October 30, 2011

ಮತಾಂತರ !!!

ಎಂದೂ ತಪ್ಪದ ದೇವಸ್ಥಾನದ ಪೂಜೆ,ಸ್ವಾಮಿಗಳಿಗೆ ನಿಷ್ಟರಾಗಿದ್ದ ಜನ ,ಎಲ್ಲರೂ ಒಂದೊಂದು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಜನ ಇದ್ದಂತಹ ಊರಲ್ಲಿ ಒಂದು ಹಲಗೇರಿ ಇತ್ತು..ಊರು ಇದ್ದ ಕಡೆ ಹೊಲಗೇರಿ ಎಂಬಂತೆ.ಯಾವ ಕುಲಕ್ಕೂ ಸೀಮಿತವಾಗದ ದೇವಸ್ಥಾನದಲ್ಲಿ ಮೇಲ್ಜಾತಿಯವರೇ ಪೂಜೆ ಮಾಡುತ್ತಿದ್ದರೂ,ಊರಿನ ಕುಲದಿನೆಂಟು ಜಾತಿಯವರೂ,ಹಕ್ಕಿ ಶಿಕಾರ್ರು,ಕುಕ್ಕೆ ಕೊರಮರು ಹೀಗೆ ನಾನಾ ಪಂಗಡಗಳಿಗೆ ಸೇರಿದ ಜನರು  ಅಲ್ಲಿಗೆ ಬರುತ್ತಿದ್ದರು,ಕೆಲವೊಮ್ಮೆ ಭಜನೆಗೂ ಎಲ್ಲಾ ಜನರು ಬರುತ್ತಿದ್ದರು.

ಇಂಥ ಊರಲ್ಲಿ ಇದಕಿದ್ದ ಹಾಗೆ ಹೊಲಗೇರಿಯ ಕೆಲವು ದಲಿತರ ಮನೆಗಳ ಮೇಲೆ ಶಿಲುಬೆ ಏರತೊಡಗಿತು,ಕಾರ್ತಿಕ ಮಾಸ ಮುಗಿದ ಕೂಡಲೇ ಮನೆ ಮುಂದೆ ಕ್ರಿಸ್ಮಸ್ ನಕ್ಷತ್ರಗಳು  ಮೀನುಗ  ತೊಡಗಿತು.ಆ ಕಾಲೋನಿಯ ಎಷ್ಟೋ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು.ಶಿವ,ರಾಮ,ಹರಿಯ ಭಜನೆ ಮಾಡುತ್ತಿದ್ದವರು ಏಸು ಪ್ರಭು ಎಂದು ಗುನುಗುನಿಸಲು ಶುರು ಮಾಡಿದರು.ಇದೆಲ್ಲರ ಹಿಂದಿನ ರೂವಾರಿ,ದಲಿತರ ಕಾಲೋನಿಯ ಏಕೈಕ ಡಿಗ್ರಿ ಪಧವಿದರ ಸುರೇಶ ಮತ್ತು ಗ್ರಾಮ ಪಂಚಯ್ತೀ ಸದಸ್ಯೆಯೂ ಆದ,ತನ್ನ ತಾಯಿ ವಿಧವೆ ನೀಲಮ್ಮ.

ಕೆಲವು ಪಂಗಡಗಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು,ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೊತೆ ಕೆಲಸಕ್ಕೆ ಹಾಕಿಕೊಳ್ಳುತ್ತಿದ್ದರು.ಆದರೆ ಕೆಲವು ಮೇಲ್ಜಾತಿ ವರ್ಗದವರು ಮಾತ್ರ ಹೆಚ್ಹಾಗಿ ಓದಿಕೊಂಡಿದ್ದರು.ಇಂಥ ಸನ್ನಿವೇಶದಲ್ಲಿ ತಂದೆ ಕಳೆದುಕೊಂಡ ಸುರೇಶ ಮಾತ್ರ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತಾನೆ.

ಒಂದು ಕ್ರೈಸ್ತ ಮಿಷನರಿ ನಡೆಸುತ್ತಿದ್ದ ಉಚಿತ ಹಾಸ್ಟೆಲ್ಲಿನಲ್ಲಿ ಸೇರುತ್ತಾನೆ,ಬೇರೆ ಕಡೆ ದುಡ್ಡು ಕಟ್ಟುವ ಶಕ್ತಿ ಇಲ್ಲದ ಕಾರಣ..ಹೀಗೆ ಅವನ ಓದು ಸಾಗುತ್ತಿದ್ದಾಗ,ಅವನ ಕಾಲೇಜಿನಲ್ಲೇ ಓದುತ್ತಿದ್ದ ಹಾಸ್ಟೆಲ್ಲಿನ ಪಕ್ಕದಲ್ಲೇ ಇದ್ದ ಚರ್ಚಿಗೆ ಪ್ರತಿ ಭಾನುವಾರ ಬರುತ್ತಿದ್ದ ಹುಡುಗಿಯ ಪರಿಚಯವಾಯಿತು.ಮೊದಮೊದಲು ನೆಪವೊಡ್ಡಿ ಚರ್ಚಿಗೆ ತಪ್ಪಿಸಿಕೊಳ್ಳುತ್ತಿದ್ದ ,ಬೈಬಲ್ ಓದಲು ಇಷ್ಟ ಪಡದ  ಸುರೇಶ ಅವಳ ಜೊತೆ ಚರ್ಚಿಗೆ ಹೋಗಲು ಮೊದಲು ಮಾಡಿದ.

ಬಿರುಗಾಳಿಯನ್ನು ತಡೆಯಲು ಹೇಗೆ ಸಾಧ್ಯ?ಸಮುದ್ರದ ಭೀಕರ ತೊರೆಯನ್ನು ನಿಲ್ಲಿಸಲು ಹೇಗೆ ಸಾಧ್ಯ ? ಅದೇಗೆ ಏಸು ಇದ್ದ ಒಂದು ರೊಟ್ಟಿಯನ್ನು ಅಷ್ಟೊಂದು ರೊಟ್ಟಿ ಮಾಡಿ ಸಾವಿರಾರು ಜನರಿಗೆ ನೀಡಿದ? ಇದೆಲ್ಲ ನಿಮ್ಮ ಮೂಡ ನಂಬಿಕೆ ಏನು ಬೈಬಲ್ಲಿನ ಸನ್ನಿವೇಶಗಳನ್ನು ಸುಳ್ಳು ಎಂದು ವಾದ ಮಾಡುತ್ತಿದ್ದ...ಕಾಲ ಜರುಗಿದಂತೆ ಫ್ಲೇವಿಯ ಎಂಬ ಹುಡುಗಿಯ ಪ್ರೀತಿಯ ಹಂಬಲದಲ್ಲಿ ಬಿದ್ದು,ಅವಳು ಮಡಿದ ಬೈಬಲ್ ಪಟನೆಗೆ ತಲೆದೂಗತೊಡಗಿದ.ಊರಿನ ತನ್ನ ಮನೆಯಲ್ಲಿದ್ದ  ಭಜನೆ ಪುಸ್ತಕಗಳು,ಶಾಲೆಯಲ್ಲಿ ಕೊಟ್ಟಿದ್ದ ಭಗವದ್ಗೀತೆ ಎಲ್ಲಾ ಓಲೆ ಸೇರಿದವು,ತಾನು ಕೂಡ ಬೈಬಲ್ ಓದಲು ಶುರು ಮಾಡಿದ..

ತಮ್ಮಿಬ್ಬರ ಮದುವೆ ಆಗಬೇಕೆಂದರೆ ಸುರೇಶ ತಮ್ಮ ಧರ್ಮಕ್ಕೆ ಬರಬೇಕು,ಅವನು ಇದನ್ನೇ ಪಾಲಿಸಬೇಕು ಎಂದು ಅರಿತಿದ್ದ ಫ್ಲೇವಿಯ ಅವನ ತಾಯಿಯನ್ನು ಹೇಗಾದರೂ ಒಪ್ಪಿಸಬೇಕು ಎಂದು ಪಣ ತೊಟ್ಟು,ಆಗಾಗ ಅವನ ಜೊತೆ ಇವನ ಹಳ್ಳಿಗೆ ಬರಲು ಶುರು ಮಾಡಿದಳು.ಪ್ರತಿ ಬಾರಿ ಬಂದಾಗಲು,ಸುರೇಶನ ತಾಯಿಗೆ ಏನೇನೋ ತುಂಬಲು ಶುರು ಮಾಡಿದಳು.ಮೇಲ್ಜಾತಿಯವರು ನಿಮ್ಮ ಓಣಿಗೆ ಬರಲ್ಲ,ನಿಮ್ಮ ಕೈಲಿ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಬಿಡಲ್ಲ,ಇಲ್ಲಿ ಸಮಾನತೆ ಇಲ್ಲ,ಆದರೆ ನಮ್ಮ ಧರ್ಮದಲ್ಲಿ ಈ ರೀತಿ ಇಲ್ಲ... ಏನೇನೋ ಹೇಳತೊಡಗಿದಳು...

ನೀವು ನಮ್ಮ ಧರ್ಮಕ್ಕೆ ಬನ್ನಿ,ನಿಮ್ಮ ಒಳ್ಳೆಯ ಸವಲತ್ತು ಗಳನ್ನು  ಕೊಡುತ್ತೇವೆ ಎಂದೆಲ್ಲಾ ಹೇಳಿ ಮೊದಲೇ ದುಡ್ಡು ಎಂದರೆ  ಬಾಯಿ ಬಿಡುತ್ತಿದ ನೀಲಮ್ಮ ಚರ್ಚಿನವರು ಕೊಟ್ಟ ಒಂದಷ್ಟು ಪಡೆದು  ಅಲ್ಲಿ ಒಂದು ಪುಸ್ತಕಕ್ಕೆ ಸಹಿ ಮಾಡಿ ಆ ಧರ್ಮಕ್ಕೆ ಮತಾಂತರಗೊಂಡಳು..ಇದರ ಹಿಂದೆಯೇ ತನ್ನ ಮದುವೆಗೆ ಅನುಕೂಲವಾಗುತ್ತದೆ ಎಂದು ಮೊದಲೇ ಅರಿತಿದ್ದ ಸುರೇಶ ಕೂಡ...ಇದರ ಜೊತೆಗೆ ಈ ಉರಿನಲ್ಲಿ ಹೊಸ ಪಂಗಡ ಒಂದು ಶುರು ಆಯಿತು..

ಆ ಹುಡುಗಿ ಪ್ರತಿ ಬಾರಿ ಊರಿಗೆ ಬಂದಾಗ ಸುರೇಶನ ಮನೆಯಲ್ಲಿ ಒಂದೊಂದು ಬದಲಾವಣೆ ಆಗ ತೊಡಗಿತು.ಮೊದಲು ಪ್ರತಿ ಸೋಮವಾರ ನಡೆಯುತ್ತಿದ್ದ ಪೂಜೆ ನಿಂತಿತು,ಭಾನುವಾರ ಚರ್ಚಿಗೆ ಹೋಗಲು ಶುರು ಮಾಡಿದಳು ನೀಲಮ್ಮ...ನಂತರ ಮನೆಯಲ್ಲಿದ್ದ ಗಣಪತಿ,ಶಿವ,ಲಕ್ಷ್ಮಿ ಪಟಗಳು ಗೋಡೆಯಿಂದ ತೆಗೆಯಲ್ಪಟ್ಟಿತ್ತು...ಇವೆಲ್ಲ ಸುಟ್ಟು ಬೂದಿ ಆದವು...ಶಿಲುಬೆಯ ಆಕೃತಿ ಗೋಡೆಯಲ್ಲಿ ಅಲಂಕಾರ ಗೊಂಡಿತು...ನಂತರ ಈ ಒಡವೆ ಗಳೆಲ್ಲ ಬರೀ ವಿಜೃಂಭಣೆ ,ಇದು ಏಸುವಿಗೆ ಇಷ್ಟವಿಲ್ಲ ಎಂದು ಹೇಳಿ,ನೀಲಮ್ಮನ ಬಳೆ,ಕಿವಿಯಲ್ಲಿದ್ದ ಓಲೆ,ಸರಗಳನ್ನು ತೆಗೆಸಿದಳು...ಹಣೆಗೆ ಕುಂಕುಮ ಹರಿಶಿನ ಹಚ್ಚಿಕೊಳ್ಳುವುದು ನಿಂತ ನಂತರ ಅವುಗಳೆಲ್ಲ ತಿಪ್ಪೆ ಸೇರಿದವು..ಹಬ್ಬ ಹರಿದಿನಗಳು  ಗುತ್ತು ಗುರಿ ಇಲ್ಲದಂತಾಯಿತು...ಕೇವಲ ಕ್ರಿಸ್ಮಸ್ ಆಚರಣೆ ಶುರು ಆಯಿತು..ಹೀಗೆ ಒಂದೊಂದು ಬದಲಾವಣೆ ಆದ ನಂತರ ನೀಲಮ್ಮ ಪೂರ್ತಿ ಕ್ರೈಸ್ತ ಮಹಿಳೆ ಆದಳು...

ತನ್ನ ಅಣ್ಣ,ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದಾಗ ,ಅದು ಚರ್ಚಿನಲ್ಲಿ ಮದುವೆ ಸಮಾರಂಭ ಇಟ್ಟು ಕೊಳ್ಳೋಣ ಎಂದ್ದಾಗ,ಈ ಮದುವೆ ಮುರಿದು ಬಿತ್ತು ಅಲ್ಲದೆ ನೀಲಮಮ್ನ ಅಣ್ಣ ಅವಳ ಜೊತೆ ಜಗಳ ಮಾಡಿಕೊಂಡು ಹೋದ...

ಗ್ರಾಮದಲ್ಲಿ ನಡೆಯುವ ಸಿದ್ಧ ಮಲ್ಲೇಶ್ವರನ ಜಾತ್ರೆಗೆ ಹೋಗುವುದನ್ನು ನಿಲ್ಲಿಸಿದಳು...ದೇವಸ್ಥಾನಕ್ಕೆ ಕಾಣಿಕೆ ನಿಲ್ಲಿಸಿದಳು...ಆಗಾಗ ಮನೆಗೆ ಬರುತ್ತಿದ್ದ ಸ್ವಾಮಿಯನ್ನು ಕರೆಯುವುದನ್ನು ನಿಲ್ಲಿಸಿದಳು..ಬದಲಾಗಿ ಚರ್ಚಿನ ಫಾದರ್ ಗಳು ಬರಲು ಶುರು ಮಾಡಿದರು...

ಇದೆಲ್ಲದರ ಜೊತೆಗೆ ಮನೆಯಲ್ಲಿ ಒಂದಿಷ್ಟು ಬೈಬಲ್ ಪ್ರತಿಗಳನ್ನು ಇಟ್ಟುಕೊಂಡು,ತನ್ನ ಓಣಿಯ ಹೆಂಗಸರಿಗೆಲ್ಲ ಓದಲು ಬರದ ನೀಲಮ್ಮ,ತನ್ನ ಮಗನಿಂದ ಮತ್ತು ಆ ಹುಡುಗಿಯಿಂದ ಮತ್ತು ಚರ್ಚಿನಲ್ಲಿ ಹೇಳುತ್ತಿದ್ದ ಬೈಬಲ್ಲಿನ ಪಾಠವನ್ನು ಒಪ್ಪಿಸ ತೊಡಗಿದಳು...ಇದಕ್ಕೆಲ್ಲ ಕಾರಣ,ಇನೊಂದಿಷ್ಟು ಜನರನ್ನು ಚರ್ಚಿಗೆ ತಂದರೆ ಇನ್ನಷ್ಟು ದುಡ್ಡನ್ನು ಕೊಡುತ್ತೇವೆ ಎಂದು ಹೇಳಿದ್ದೆ ಕಾರಣ...

ಇದರಿಂದ ತಮಗೂ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ತಿಳಿದ ಎಮ್ಮೆ ಮಲ್ಲನ ಹೆಂಡತಿ ನಾಗಮ್ಮ, ಸುಣ್ಣದ ಬಸವನ ಸೊಸೆ ಕಾಳಮ್ಮ..ಹೀಗೆ ಒಬ್ಬೊಬ್ಬರಾಗಿ ಚರ್ಚಿಗೆ ಹೋಗಲು ಶುರು ಮಾಡಿದರು...

ಕೆಲವು ಗಂಡಸರು ಮಾತ್ರ ತಮ್ಮ ಮನೆಗೆ ಬಂದ ಫಾದರ ಗಳಿಗೆ ಬೈದು ,ಇನ್ನೊಮ್ಮೆ ಬಂದರೆ ಕಾಲು ಮುರಿಯುವುದಾಗಿ ಬೆದರಿಸಿ ಕಳುಹಿಸಿದರು..

ಅಲ್ಲದೆ ಅವರು ಮುಖ್ಯ ಗುರಿಯಾಗಿಸಿಕೊಂಡಿದ್ದು ಕಾಯಿಲೆ ಬಿದ್ದವರನ್ನು ,ಅವರಿಗೆ ಬೈಬಲ್ ನಲ್ಲಿರುವ ಏಸು ಕಾಯಿಲೆ ವಾಸಿ ಮಾಡಿದ ಪ್ರಸಂಗಗಳನ್ನು ಹೇಳಿ ತಾವು ಚರ್ಚಿಗೆ ಬಂದರೆ ತಮ್ಮ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿದರೂ,ಚರ್ಚಿಗೆ ಹೋದರು ತಮ್ಮ ಕಾಯಿಲೆ ವಾಸಿ ಆಗದೆ ಇದ್ದಾಗ ಇದೆಲ್ಲ ಸುಳ್ಳು ಎಂದು ನಂಬಿ ತಮಗೆ ಸಿಕ್ಕ ದುಡ್ಡನ್ನು ಇಟ್ಟಿಕೊಂಡು ಚರ್ಚಿಗೆ ಹೋಗುವುದನ್ನು ಕೆಲವರು ನಿಲ್ಲಿಸಿದರು...

ವರ್ಷಕ್ಕೊಮ್ಮೆ ಮಾಸ್ತಮ್ಮ ದೇವರಿಗೆ ಕೋಳಿ,ಕುರು ಬಲಿ ಕೊಡಲು ಓಣಿಗೆ ಒಣಿಯೇ ಗಾಡಿಗಳಲ್ಲಿ ಹೋಗುತ್ತಿದ್ದರೆ,ಈ ಬಾರಿ ಹೋಗುವವರ ಸಂಖ್ಯೆ ಕಡಿಮೆ ಆಗ ತೊಡಗಿತು...

ಹೀಗೆ ಕೆಲವು ಜನರು ಊರಿನ ಹಿರಿಯರ ಸಲಹೆ ಅಂತೆ ಮತ್ತೆ ತಮ್ಮ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಾಗೆ ಮುಂದುವರೆದರು, ನೀಲಮ್ಮನಂಥ  ಕೆಲವರು ಚರ್ಚಿಗೆ ಹೋಗಲು ನಿಲ್ಲಿಸಲಿಲ್ಲ... ಸುರೇಶ ಫ್ಲೆವಿಯಳನ್ನು ಮದುವೆ ಆಗಿ ಅದೇ ಚರ್ಚಿನಲ್ಲಿ ಕೆಲಸಕ್ಕೆ ಆ ಧರ್ಮ ಪ್ರಚಾರಕ್ಕೆ ಕೆಲ್ಸಕ್ಕೆ ಸೇರಿಕೊಂಡ... ತನ್ನ ಉರಿನಲ್ಲಿ ಕೂಡ ಇನ್ನಷ್ಟು ಜನರನ್ನು ಚರ್ಚಿಗೆ ಕರೆ ತರಲು ಪ್ರಯತ್ನ ಮಾಡಿದರೂ  ಊರಿನ ಗಂಡಸರೆಲ್ಲ ಸೇರಿ ಧರ್ಮದೇಟು ಕೊಟ್ಟಾಗ ತನ್ನ ಉರಿನಲ್ಲಿ ಆ ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ....

--------------------------------------------------------------------------
## ಕಥೆ ##

23 comments:

  1. ಇಂತಹ ಒಂದು ಪುನಃ ಪರಿವರ್ತನೆ ಅಗತ್ಯ. ಮತಾಂತರ ಅನ್ನುವುದೊಂದು ಹೇಳಲಾಗದ, ವ್ಯಕ್ತಪಡಿಸಲಾಗದ ಸಮಸ್ಯೆ . ಒಳ್ಳೆ ಬರಹ :)

    ReplyDelete
  2. ಎಲ್ಲಿಯವರೆಗೆ ಮನಸ್ಸುಗಳಲ್ಲಿ ಮೌಡ್ಯತೆ ಮನೆಮಾಡಿರುತ್ತದೋ ಅಲ್ಲಿಯವರೆಗೂ ಈ ಸಮಸ್ಯೆ ತಪ್ಪಿದ್ದಲ್ಲ. ವಾಸ್ತವ ಚಿತ್ರಣ.

    ReplyDelete
  3. ವಾಸ್ತವ ಚಿತ್ರಣ.

    ReplyDelete
  4. [Ishwar Bhat]ನಿಜ ಇದೊಂದು ತುಂಬ ಕೆಟ್ಟ ಸಮಸ್ಯೆ ಆಗಿದೆ..ಕೆಲವು ರಾಜಕೀಯ ಪಕ್ಷಗಳು ತಮ್ಮ ಉಪಯೋಗಕ್ಕಾಗಿ ಕೂಡ ಇದನ್ನು ಪ್ರೋತ್ಸಾಹಿಸುತ್ತಾ ಬಂದಿದೆ...ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...

    [Prabhamani Madam]ಖಂಡಿತ ನಿಮ್ಮ ಮಾತು ಸತ್ಯ... ಧನ್ಯವಾದಗಳು

    ReplyDelete
  5. [Machikoppa sir] and [Sunaath sir]ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  6. ಚೆನ್ನಾಗಿದೆ ಗಿರೀಶ್..

    ReplyDelete
  7. ವಾಸ್ತವದ ಚಿತ್ರಣ ಚೆನ್ನಾಗಿ ಮೂಡಿದೆ. ಮತಾಂತರಕ್ಕೆ ಧಿಕ್ಕಾರ!

    ReplyDelete
  8. [Pradeep]ನಿಮ್ಮ ಮೆಚ್ಚುಗೆಗೆ ವಂದನೆಗಳು...

    ReplyDelete
  9. ಗಿರೀಶ,
    ಇದು ಕತೆಯ ಜೊತೆಗೆ ವಾಸ್ತವವೂ ಆಗಿದೆ. ಕ್ರೈಸ್ತ ಮಿಷನರಿಗಳು 'ಸೈಲೆಂಟ್ ಕಿಲ್ಲರ್' ಎನ್ನುವುದರಲ್ಲಿ ಅನುಮಾನವಿಲ್ಲ.

    ReplyDelete
  10. [Subrahmanya sir]ವಾಸ್ತವದ ಕೆಲವು ಸಂಗತಿಗಳ ಆಧಾರದ ಮೇಲೆ ಇದನ್ನು ಬರೆದದ್ದು...ನಿಮ್ಮ ಮಾತಿಗೆ ನನ್ನದು ಪೂರ್ತಿ ಸಮ್ಮತಿ ... ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  11. ಗಿರೀಶ್ ತುಂಬಾನೇ ಚೆನ್ನಾಗಿದೆ ಕಥೆ ನಾನು ಇದೇ ರೀತಿಯ ಕಥೆಯನ್ನು ಬರೆಯಬೇಕು ಎಂದುಕೊಳ್ಳುತ್ತಲಿದ್ದೆ ನನ್ನ ಆಸೆಯಂತೆ ಇಲ್ಲಿ ಕಥೆ ಮೂಡಿದೆ. ಧನ್ಯವಾದಗಳು
    ಇಷ್ಟು ದಿನ ಕೆಲಸಗಳ ಒತ್ತಡದಲ್ಲಿದ್ದರಿಂದ ನಿಮ್ಮ ಬ್ಲಾಗ್ ಓದಲಾಗಲಿಲ್ಲ ಕ್ಷಮೆ ಇರಲಿ

    ReplyDelete
  12. [Suguna Madam]ಕಥೆಯನ್ನು ಮಚ್ಚಿದ್ದಕ್ಕೆ ಧನ್ಯವಾದಗಳು...ತಡವಾದರೂ ಪ್ರತಿಕ್ರಿಯಿಸಿದ್ದಿರಿ...ತುಂಬ ಸಂತೋಷ...

    ReplyDelete
  13. [Vasanth Kodihalli]welcome to my blog...ಮಚ್ಚಿದ್ದಕ್ಕೆ ಧನ್ಯವಾದಗಳು

    ReplyDelete
  14. Good one Mr.Girish,religious conversion in Hassan district is rampant.Need more reforms in Hindu community as well.
    -https://twitter.com/#!/TwI_LAnThRoPiST

    ReplyDelete
  15. Thank you Mr.Suman.. religious conversion is not only in Hassan district...Itz there in whole India..after independence Christianity population has increased by around 60% in India..And i agree with you that there must be a reforms in Hindus also...
    Thank you..

    ReplyDelete
  16. ಚೆನ್ನಾಗಿದೆ ......:):)
    ಹೀಗೆ ಆದರೆ ನಮ್ಮ ಹಿಂದೂ ಸಂಸ್ಕೃತಿಯ ಪಾಡು ...???

    ReplyDelete
  17. [Kavya]ಧನ್ಯವಾದಗಳು.. ಹೀಗಾಗಲೇ ಎಷ್ಟೋ ಹಿಂದೂಗಳು ಕ್ರೈಸ್ತ ಧರ್ಮದ ಅನುಯಾಯಿಗಲಾಗಿದ್ದಾರೆ... ಹೀಗೆ ಮುಂದುವರಿದರೆ ಬಹಳ ಕಷ್ಟ..

    ReplyDelete