೧.ಅದೆಷ್ಟು ಸೊಕ್ಕು ನಿನ್ನ ಮುಂಗುರುಳಿಗೆ
ರೆಪ್ಪೆ ಹಾದು,ಕಣ್ಣಂಚನು ಸರಿದು
ಕೆನ್ನೆಯ ಸವರುವುದು....
ಆಗ ಅದೇನೋ ಸಂಕಟ ನನ್ನೊಳಗೆ
ಇಲ್ಲವಲ್ಲ ಈ ಅವಕಾಶ ಎಂದೂ ನನ್ನ ತುಟಿಗೆ....
೨.ಕಾಲಿಗೆ ಗೆಜ್ಜೆ ಕಟ್ತಾರೆ ನಮ್ಮ್ ಕೆಲವು ಹೆಣ್ಣ್ ಮಕ್ಕಳು
ಆದ್ರೆ ಯಾಕೋ ಒಂದೇ ಕಾಲಿಗ್ ಕಟ್ಟೋ ಗೀಳು..
ಇನ್ನೊಂದ್ ಎಲ್ಲವ್ವಾ,
ಬಿದ್ದ್ ಗಿದ್ದ್ ಹೊತೇನ್ ?
ಅಂತ ಕೇಳಿದ್ರೆ ಹೇಳ್ತಾರಾ
"ಯು ನೋ, ದಿಸ್ ಇಸ್ ಫ್ಯಾಶನ್ "
ರೆಪ್ಪೆ ಹಾದು,ಕಣ್ಣಂಚನು ಸರಿದು
ಕೆನ್ನೆಯ ಸವರುವುದು....
ಆಗ ಅದೇನೋ ಸಂಕಟ ನನ್ನೊಳಗೆ
ಇಲ್ಲವಲ್ಲ ಈ ಅವಕಾಶ ಎಂದೂ ನನ್ನ ತುಟಿಗೆ....
೨.ಕಾಲಿಗೆ ಗೆಜ್ಜೆ ಕಟ್ತಾರೆ ನಮ್ಮ್ ಕೆಲವು ಹೆಣ್ಣ್ ಮಕ್ಕಳು
ಆದ್ರೆ ಯಾಕೋ ಒಂದೇ ಕಾಲಿಗ್ ಕಟ್ಟೋ ಗೀಳು..
ಇನ್ನೊಂದ್ ಎಲ್ಲವ್ವಾ,
ಬಿದ್ದ್ ಗಿದ್ದ್ ಹೊತೇನ್ ?
ಅಂತ ಕೇಳಿದ್ರೆ ಹೇಳ್ತಾರಾ
"ಯು ನೋ, ದಿಸ್ ಇಸ್ ಫ್ಯಾಶನ್ "
ಒಂದು ಕ್ಲಾಸಿಕಲ್ಲು...ಇನ್ನೊಂದು ಲೋಕಲ್ಲು...ಚೆನಾಗಿದೆ ಗಿರೀಶ್....ಬರೆಯುತ್ತಿರಿ...
ReplyDelete:-)
ReplyDeleteಮೊದಲ ಹನಿ ಸಾಕ್ಷಾತ್ಕಾರವಾಗಲು ನಾವೆಲ್ಲ ಬೇಗ ನಿಮಗೊಂದು ವಧು ನೋಡುತ್ತೇವೆ.
ReplyDeleteಎರಡನೇ ಹನಿಯು ಆಧುನಿಕ ಮಹಿಳೆಯರ ವಿಚಿತ್ರ ಅಭ್ಯಾಸಗಳನ್ನು ತೋರುತ್ತದೆ.
ಒಟ್ಟಾರೆ ಕಾವ್ಯಾತ್ಮಕ, ಗ್ರಾಮ್ಯ ಶೈಲಿ ಮೆಚ್ಚುಗೆಯಾಯ್ತು.
ಎರಡೂ ಸುಂದರ ಹನಿಗಳು ಗಿರೀಶ್ ಸರ್...
ReplyDeleteತುಂಬಾ ಚೆನ್ನಾಗಿದೆ... :)
ReplyDeleteಹಹಹ ಎನಪ್ಪಾ ಹನಿಗಳು .. ಮದುವೆಗೆ ತಯಾರಿರುವೆ ಎಂದೇ..? ಚೆನ್ನಾಗಿವೆ ಹನಿಗಳು
ReplyDeleteಮುಂಗುರುಳು ಒಂದು ಇದ್ರೆ ಚೆನ್ನ
ReplyDeleteಜಲಧಾರೆಯಾಗಿ ಬೀಳುವ ಆ ಕುರುಳನ್ನ
ಸರಿಸಿ ಸರಿಸಿ ಆಡುವ ಕಣ್ಣಾಮುಚ್ಚಾಲೇ ಸೊಗಸು
ಅರೆ ಈ ಮುಂಗುರುಳಿನ ನೃತ್ಯಕ್ಕೆ ಬೇಕಲ್ಲ ಹಿಮ್ಮೇಳ ಎಂದಾಗ
ಒಂಟಿ ಕಾಲಿನ ಗೆಜ್ಜೆ ಮಾಡಿತು ಸದ್ದು ಘಲ್ ಘಲ್ ಘಲ್...
ಚಂದವಿದೆ ಗಿರಿ ಕವಿತೆ....
ಮುಡಿಯಿಂದ ಅಡಿಯ ತನಕ ತಲುಪಿದ ಪದ ಚಾತುರ್ಯ...ನೋಡಿದಾಗ
ಆದಷ್ಟು ಬೇಗ ಖೆಡ್ಡ ಆಪರೇಷನ್ ಸಿದ್ಧವಾಗ್ತಿರುವ ಸೂಚನೆ ಸಿಗುತ್ತಿದೆ..
ಶುಭವಾಗಲಿ ಗೆಳೆಯ...
ಮೊದಲನೆಯದ್ದು ಚೆನ್ನಾಗಿದೆ. ಎರಡನೆಯದ್ದು ತಮಾಷೆಯಾಗಿದೆ.
ReplyDeleteಹಹಹ.....ಎರಡೂ ಹನಿಗಳು ಚೆನ್ನಾಗಿವೆ....ಮೊದಲನೆಯದು ಜಾಸ್ತಿ ಇಷ್ಟ ಆಯಿತು....
ReplyDeleteಚಿನ್ಮಯ್,ಮಾಚಿಕೊಪ್ಪ ಸರ್,ಬದರಿ ಸರ್,ಸುಷ್ಮಾ,ಸುದೀಪ,ಸುಗುಣಕ್ಕ,ಶ್ರೀಕಾಂತ್ ಸರ್,ಈಶ್ವರ್ ಕಿರಣ ,ಅಶೋಕ್ ಸರ್: ಎಲ್ಲರಿಗೂ ಧನ್ಯವಾದಗಳು..
ReplyDeleteಅಂದ ಹಾಗೆ ಬದರಿ ಸರ್,ಸಧ್ಯಕ್ಕೆ ನನಗೆ ವಧು ನೋಡುವ ತ್ರಾಸು ತಗೊಬ್ಯಾಡ್ರಿ... ಆ ಸಂದರ್ಭ ಬಂದಾಗ ಹೇಳ್ತೀನಿ ನಿಮಗೆ :-)
ಸುಗುಣಕ್ಕ,ಮದುವೆಗೆ ತಯಾರಿ ಇದ್ದೀನಿ ಅಂತಲ್ಲ... ಏನೋ ವಯೋ ಸಹಜ ಆಸೆಗಳು ಅಷ್ಟೇ... ಈಗಲೇ ಮದ್ವೆ ಆಗೋಕ್ಕೆ ಹೆಣ್ಣು ಕೊಡವರು ಯಾರು ನನಗೆ..
ಶ್ರೀಕಾಂತ್ ಸರ್,ಆಪರೇಶನ್,ಗೀಪರೆಶನ್ ಎಂತದ್ದು ಇಲ್ಲ...ಮದುವೆಗೆ ನಿಮ್ಮನ್ನು ಕರೆಯದೆ ಇರ್ತಿನಾ ಹೇಳಿ...