Thursday, October 25, 2012

ಏ ಮರವೇ....

ಸುಡು ಸುಡುವ ಬಿಸಿಲಲ್ಲಿ ಇಳಿದ ಬೆವರ
ಅಳಿಸುತ್ತಿತ್ತು ನಿನ್ನ ತಂಗಾಳಿಯ ಆದರ.
ಕರೆದು ಕರೆದು ಹಾದು ಹೋಗುತ್ತಿದ್ದ ಜನರ.
ಅದೆಷ್ಟು ಜನರಿಗೆ ನೀ ಮಾಡಿದೆಯೋ ಉಪಕಾರ ?

ರಸ್ತೆ ಅಗಲಿಸುವ ನೆಪವೊಡ್ಡಿತು ಸರಕಾರ
ನೀ ಉರುಳಿಬಿದ್ದೆ ನೆಲಕ್ಕೆ ಎತ್ತದೆ ಚಕಾರ.
ಇಲ್ಲಿಗೆ ಮುಗಿದಿತ್ತು, ನಿನ್ನ ಅವರ ನಡುವೆ ಸಮರ
ಇಲ್ಲಿಯವರೆಗೂ ನೀ ಆಗಿದ್ದೆ ಅಜರಾಮರ !!!

ಎಷ್ಟೋ ಜನರು ಊಡಿದ್ದರು ನಿನ್ನಡಿಯಲ್ಲಿ ಸಂಸಾರ
ಈಗ ಸೂರಿಲ್ಲದೆ ಅವರ ಗೋಳು ಅಪಾರ
ನಿನ್ನ ನೆನಪು ಮಾತ್ರ ಅಮರ !!

ನಿನ್ನ ಜೊತೆಗೆ ಮುಗಿಯಿತು ಹಕ್ಕಿಗಳ ಚಿಲಿಪಿಲಿ ಕಲರವ
ನೀ ಅವಕ್ಕೆ ಮಾಡಿದ ಉಪಕಾರ, ಮಧುರ ....

8 comments:

  1. ಗಿರೀಶರೆ,
    ಕಟುವಾಸ್ತವತೆಯನ್ನು ಬಿಂಬಿಸುತ್ತಿರುವ ನಿಮ್ಮ ಕವನದ ಒಳಗಿನ ಅಳಲು ಸೊಗಸಾಗಿ ಮೂಡಿ ಬಂದಿದೆ.

    ReplyDelete
    Replies


    1. ಸರ್ ನಮ್ಮ ಊರಿನ ಬಳಿ ಸಾವಿರಾರು ಮರಗಳನ್ನು ಕಡಿಯುತ್ತಿದ್ದಾರೆ... ಎಲ್ಲವು ಶತಮಾನದಷ್ಟು ಹಳೆಯದು ಎಂದು ಭಾವಿಸಬಹುದು.... ಈಗ ಆ ದಾರಿಯಲ್ಲಿ ಹೋಗುವಾಗ ಯಾವುದೋ ಮರಳು ಭೂಮಿಯಲ್ಲಿ ಹೋಗುತ್ತಿರುವ ಹಾಗೆ ಭಾಸವಾಗುತ್ತದೆ... ಈ ಸಾಲುಗಳ ಹಿಂದೆ ಆ ಒಂದು ಮರುಕ ಅಡಗಿದೆ... ಧನ್ಯವಾದಗಳು ಪ್ರತಿಕ್ರಿಯೆಗೆ...

      Delete
  2. ಮರದ ಕಥೆ ಚೆನ್ನಾಗಿ ಮೂಡಿ ಬಂದಿದೆ ಗಿರೀಶ್...ಇಷ್ಟ ಆಯ್ತು..
    ಹಾಂ
    "ಇಲ್ಲಿಗೆ ಮುಗಿದಿತ್ತು, ನಿನ್ನ ಅವರ ನಡುವೆ ಸಮರ" ಎನ್ನುವ ಸಾಲಿಗೂ "ನೀ ಉರುಳಿಬಿದ್ದೆ ನೆಲಕ್ಕೆ ಎತ್ತದೆ ಚಕಾರ." ಅರ್ಥವನ್ನು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ ದಯವಿಟ್ಟು ವಿವರಿಸುವಿರಾ??

    ಉತ್ತಮ ಕವನಕ್ಕಾಗಿ ವಂದನೆಗಳು..

    ReplyDelete
    Replies
    1. ಚಿನ್ಮಯ್, ಚಕಾರ ಅಂದರೆ ಪ್ರತಿರೋಧ ಎಂದು ಅರ್ಥ... ಮರ ಯಾವುದೇ ಪ್ರತಿರೋಧವನ್ನು ಒಡ್ಡದೆ ಗರಗಸಕ್ಕೆ ಬಲಿ ಆಗುತ್ತದೆ... ಆಗಾಗಿ ಆ ರೀತಿ ಬಳಸಿದ್ದು... ಎದುರಾಳಿ ಸತ್ತರೆ ಅಲ್ಲಿಗೆ ಸಮರ ಮುಗಿದ ಹಾಗೆ ಅಲ್ಲವೇ... ಇಲ್ಲಿ ಮರ ಮತ್ತು ಮರ ಕಡಿಯುವವನ ನಡುವಿನ ಸಮರ ಎಂದು ತಿಳಿಯಬಹುದು... ಪ್ರತಿಕ್ರಿಯೆಗೆ ಧನ್ಯವಾದಗಳು....

      Delete
  3. ನನ್ನ ಅಳಲನ್ನು ಇಲ್ಲಿ ಗಟ್ಟಿ ಕವನವಾಗಿಸಿ, ನೀವು ಗಿರಿ ಶಿಖರ ಎಂದು ನಿರೂಪಿಸಿದ್ದೀರಿ.

    ReplyDelete
    Replies
    1. ಸರ್ ತುಂಬ ದೊಡ್ಡ ಮಾತು ಹೇಳಿಬಿಟ್ಟಿರಿ .... ಇದು ನಿಮ್ಮ ಅಳಲು ಮಾತ್ರ ಅಲ್ಲ...ನನ್ನದು ಕೂಡ... ೫-೬ ಜನ ಬಾಚಿ ತಬ್ಬ ಬಹುದಾದಂತಹ ದೊಡ್ಡ ದೊಡ್ಡ ಮರಗಳನ್ನು ನಿರಾಳವಾಗಿ ಕಡಿದು ಬಿಸಾಕಿದ್ದಾರೆ... ಒಂದು ಕಾಲದಲ್ಲಿ ಬಾಣಾವರ -ಜಾವಗಲ್-ಹಳೇಬೀಡು-ಬೇಲೂರು ಮಧ್ಯೆ ಹೋಗಬೇಕಾದರೆ ಎರಡೂ ಬದಿಯಲ್ಲಿ ಇಂಥ ಮರಗಳು ನೂರಾರು ಇದ್ದವು.. ಹೀಗೆ ಅದರ ಕುರುಹು ಕೂಡ ಸಿಗದ ಹಾಗೆ ಆಗಿದೆ... ಈ ಸಾಲುಗಳ ಹಿಂದಿನ ನನ್ನ ಅಳಲು ಈ ಒಂದು ಕೃತ್ಯ ಅಷ್ಟೇ.....

      Delete
  4. ನಿಮ್ಮ ಕವನದ ಸಾಲುಗಳು ನಿಜ ಗಿರೀಶ್...ಕೇವಲ ಎರಡು ದಿನಗಳ ಹಿಂದಷ್ಟೇ ಹಳೆಬೀಡಿನ ದಾರಿಯಲ್ಲಿ ಹೋದಾಗ ಮನ ಕಲಕಿದ್ದು ನಿಜ..ದಶಕದ ಹಿಂದೆ ಹೋದಾಗ ಎರಡು ಸಾಲಿನಲ್ಲೂ ಮರಗಳು ಸ್ವಾಗತ ನೀಡುತಿದ್ದವು ..ಇಂದು ಕೇವಲ ದೂಳು, ಕಸ, ಬಿರು ಬಿಸಿಲು ಬೇಸರದಿಂದ ನೋಡುತ್ತವೆ ನಮ್ಮನ್ನು...ಮಾನವ ಯಾವುದನ್ನು ಬಿಡೋಲ್ಲ ಅನ್ನುವುದು ನಿಜ..

    ReplyDelete
    Replies
    1. ಹೌದು ಸರ್, ಈ ಕ್ಷಣದಲ್ಲಿ ಅಲ್ಲಿ ಸಸಿಗಳನ್ನು ನೆಟ್ಟರೂ ಅದು ಅಷ್ಟು ಹೆಮ್ಮರವಾಗಿ ಬೆಳೆಯಲು ಇನ್ನು ವರ್ಷಗಳೇ ಬೇಕು ಅನ್ನುವುದರಲ್ಲಿ ಅನುಮಾನವಿಲ್ಲ.. ಅವುಗಳನ್ನು ವರ್ಷಗಟ್ಟಲೆ ಆಸ್ವಾಧಿಸಿದ ನಮಗೆ ಈಗ ಅಲ್ಲಿ ಭೋಳು ಭೂಮಿಯನ್ನು ನೋಡಿದಾಗ ಮನ ಕದಲುವುದು ಸತ್ಯ...

      Delete