Thursday, March 28, 2013

ಬಳಲಿದ ಕಾಯ !!!

ಮಳೆ ನೀರು ಸೋರುವ ಗುಡಿಸಲು,
ಒಲೆ ಮುಂದೆ ಕುಳಿತ ಒಣ ದೇಹ ,
ಗಂಜಿ ಬೇಯಿಸಲು ಒಲೆ ಹಚ್ಚಲೂ ಇರದ ಶಕ್ತಿ,
ಕಬ್ಬಿಣದಂತಿಹ ಆಕೆಯ ಎಲುಬುಗಳು
ಬತ್ತಿ ಹೋಗಿರುವ ಎದೆ ಹಾಲು
ರವಿಕೆಯಿಂದ ಮೊಲೆಗಳು ಹೊರ ಇಣುಕಿದ್ದರೂ,
ಸೆರಗು ಎಳೆಯಲಾರದಷ್ಟು ಇಲ್ಲದ ಪ್ರಜ್ಞೆ..
ಹಸಿದ ಮಗುವಿನ ಚಿಂತೆಯಲಿ
ಇನ್ನೂ ಬಾರದ ಗಂಡನ ಕಾಯುವಿಕೆಯಲಿ..


ಹೊರಗೆ ಮಲಗಿರುವ ಹಸುಗೂಸು,
ಬಳ್ಳಿಗೂ ಸಾಟಿ ಎಂಬಂತೆ ಒಣಗುತ್ತಿಹುದು,
ಹಸಿವು ತಾಳಲಾರದ ಆಕ್ರಂದನ,
ಎದೆ ಹಾಲಿನ ರುಚಿಯೂ ತಿಳಿಯದ ಬಡ ಕೂಸು,
ಬಲಿತಿರದ ನಾಲಗೆಯಲ್ಲಿ ಹಸಿವನ್ನು,
ಅಳದೆ ಹೇಗೆ ಬಣ್ಣಿಸಿತು ?


ಅಳಲು ತಾಯಿಯ ಹೃದಯ ಮುಟ್ಟಿತೇ ಹೊರತು
ಸಂತೆ ಬೀದಿಯ ಹೆಂಡದಂಗಡಿಯಲ್ಲಿ
ಶರಾಬು ಕುಡಿದು,
ಹೆಂಡತಿ ಮಗುವಿನ ಚಿಂತೆಯಿಲ್ಲದೆ
ಊರೊರಗಿನ ತೋಟದ ಮನೆಯಲ್ಲಿ,
ಸೂಳೆಯ ಮಗ್ಗುಲಲಿ ಮಲಗಿರುವ
ಹುಟ್ಟಿಸಿದಾತನ ಕಲ್ಲು ಹೃದಯವನಲ್ಲ...

8 comments:

  1. ಗಿರೀಶ,
    ಬೇಜವಾಬ್ದಾರಿ ಗಂಡ ಹಾಗು ಸಹನೆಯೇ ಮೂರ್ತಿವೆತ್ತ ಹೆಣ್ಣಿನ ಚಿತ್ರವನ್ನು ವಾಸ್ತವವಾಗಿ ಮೂಡಿಸಿದ್ದೀರಿ. ಇದೇ ಅಲ್ಲವೇ, ಗಂಡು ಹಾಗು ಹೆಣ್ಣಿನ ನಡುವೆ ಇರುವ ವ್ಯತ್ಯಾಸ?

    ReplyDelete
  2. ಕವನ ಚೆನ್ನಾಗಿದೆ ಕುಡಿತ ಮನೆಗಳನ್ನು ಹಾಳು ಮಾಡುತ್ತದೆ....

    ReplyDelete
  3. ಸುಮಾರು ನಾಲ್ಕನೇ ತರಗತಿ ಇರಬೇಕು ಅದರಲ್ಲಿ ಓದಿದ ಪಾಠ ಅಥವಾ ಪದ್ಯ ನೆನಪಿಗೆ ಬಂತು. ಕುಡಿತದ ಕೆಡಕುಗಳು.. ಹಾಗೆಯೇ ಎಂಟನೆ ತರಗತಿಯಲ್ಲಿ ಕಲ್ಲರಳಿ ಹೂವಾಗಿ ಎನ್ನುವ ಕಥೆಯಲ್ಲಿ ಬಂಗಾರಿ ಪಾತ್ರ ನೋಡಿದ ಹಾಗೆ ಭಾಸವಾಯಿತು. ಸುಂದರವಾಗಿದೆ ಅಷ್ಟೇ ಮನಸ್ಸಿಗೆ ಬೇಸರವಾಗುತ್ತದೆ ಕವನದ ಹೂರಣದ ಬದುಕು.

    ReplyDelete
  4. ನಡೆಯುತ್ತಿರುತ್ತದೆ.

    ReplyDelete
  5. ನಿರೂಪಣೆ ಇಷ್ಟವಾಯ್ತು ಗಿರೀಶ್...
    ಭಾವದ ಓಘ ಸಹಾ ಚೆನ್ನಾಗಿದೆ...
    ಸರಳ ಶಬ್ಧಗಳಲ್ಲಿ ಸಂದರ್ಭವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತೀರಿ...
    ಎಲ್ಲೋ ಓದಿದ ಸಾಲು ನೆನಪಾಯ್ತು...
    "ಕೊಡು ತಾಯಿವರವ ಕುಡುಕನಲ್ಲದ ಗಂಡನ"....
    ಬರೆಯುತ್ತಿರಿ...
    ನಮಸ್ತೆ :)

    ReplyDelete
  6. ಗಿರಿ-ಶಿಖರದಲ್ಲಿ ಕಾವ್ಯಧಾರೆ.. ಚೆನ್ನಾಗಿದೆ

    ReplyDelete
  7. ಮನ ಮುಟ್ಟೋ ಭಾವ ...ನಿಜ ಸಮಾಜದ ಅದೆಷ್ಟೋ ಮಹಿಳೆಯರ ಭಾವವನ್ನು ಪ್ರತಿಬಿಂಬಿಸಿ ಬರೆದಿದ್ದೀರ ...
    ಇಷ್ಟವಾಯ್ತು ...ಬರೀತಾ ಇರಿ ...

    ReplyDelete