೧. ತಿಳಿನೀರಿಗೆ ಕಲ್ಲೆಸೆದು ಮೂಡಿದ ನೂರೆಂಟು ಬಿಂಬಗಳೆಂಬ
'ನಾನು'ಗಳಲ್ಲೇ ಹುಡುಕುತ್ತಿಹೆನು ನಾನು ನನ್ನನು..
೨. ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
ಮುತ್ತಿಟ್ಟರೆ ಅರಳುವ ಅವಳ ತುಟಿ ,
ನಾಚಿದ ಬಳ್ಳಿಯಂತೆ ಮುದುಡುವುದವಳ ಕಣ್ಣ ರೆಪ್ಪೆ !!!
೩. ಅಲೆಯೊಂದು ಸೃಷ್ಟಿಯಾಯಿತು ನನ್ನೆದೆಯ ಬಡಿತಕ್ಕೆ,
ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ
ಮಿಲನವಾದವು ಎರಡೂ ಅಲೆಗಳು ..
ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ....
ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...
ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ
ಮಿಲನವಾದವು ಎರಡೂ ಅಲೆಗಳು ..
ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ....
ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...
೪. ನಿನ್ನ ಪ್ರೀತಿಗೆ ನನ್ನ ಸಿಹಿ ಮುತ್ತುಗಳೇ ಸುಂಕ ಗೆಳತಿ ,
ಮುತ್ತಲ್ಲದೆ ಬೇರೇನೂ ಕೇಳಬೇಡ..
೫.. ಕಣ್ತುಂಬ ಕನಸುಗಳನ್ನು ಬಿತ್ತಿ ,
ಕಣ್ಣಂಚಲೇ ಮರೆಯಾದವಳು .
ನೆನಪುಗಳು ಅಳಿಯುವ ಮುನ್ನವೇ
ಹಳೆ ಕನಸುಗಳಿಗೆ ಹೊಸ ಬಣ್ಣ ಹಚ್ಚುತ್ತಿಹಳು..
೬. ನನ್ನೆದೆಯ ವೀಣೆಯ ಸ್ವರಕ್ಕೆ ನುಡಿಯಾದವಳು ,
ಕಣ್ಮುಚ್ಚಿ ಮಲಗಿದರೂ ಕಣ್ಣೊಳಗಿನ ಬಿಂಬವಾಗಿ ಕಾಡುತ್ತಿಹಳು..
೭. ಚಳಿಗೆ ಕನಸುಗಳೂ ಹೆಪ್ಪುಗಟ್ಟು ತ್ತಿವೆ ಗೆಳತಿ ,
ನೀನಾದರೂ ಇರಬಾರದೇ ಸನಿಹ ?
ಬೆಚ್ಚಗೆ ಅಪ್ಪಿಕೊಳ್ಳಲು , ಬಿಸಿ ಮುತ್ತೊಂದ ನೀಡಲು..
ಎಲ್ಲ ಹನಿಗಳೂ ಅಮೋಘ ಸಾರ್.
ReplyDeleteಎರಡನೇ ಹನಿಯು ನಮ್ಮ ಮನಸುಗಳನ್ನು ಮೀಟುವಂತಿದೆ...
ಹನಿಗಳು ಚೆನ್ನಾಗಿವೆ, ಗಿರೀಶರೆ. ಯಾವಾಗಲೂ ಬೀಳುತ್ತಿರಲಿ.
ReplyDeleteಮನಸ್ಸು ಸಜ್ಜಾದಾಗ ಪದಗಳ ಮನಸ್ಸು ಎದ್ದು ಕಾಡುತ್ತವೆ..
ReplyDeleteಪ್ರತಿಯೊಂದು ಸುಂದರ ಅನುಭೂತಿ ಕೊಡುವ ಸಾಲುಗಳು
ಇಷ್ಟವಾದವು.. ಬೇಗನೆ ಆ ಹನಿಗಳ ಮಾಲೀಕರಾಗಿರಿ!!!
ಸೂಪರ್ ಗಿರಿ
ಓಹ್..ಗಿರಿ ಶಿಖರದಲ್ಲಿ ಪ್ರೇಮಸಿಂಚನ ನಡಿತಾ ಇದ್ದಂಗೆ ಇದ್ಯಲ್ಲಾ ,ಎನ್ ಕಥೆ :P ...ಚೆನಾಗಿದೆ ಗುರುಗಳೇ :)..ಟಚ್ ಆಗೋ ಸಾಲುಗಲು :* :)..ಬರಿತಾ ಇರಿ :)
ReplyDeleteNice Giri bhai :-)
ReplyDelete>>
ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
ಮುತ್ತಿಟ್ಟರೆ ಅರಳುವ ಅವಳ ತುಟಿ ,<< Eno nadita ide ansta ide ;-)
ಕನಸುಗಳೂ ಹೆಪ್ಪುಗಟ್ಟುತ್ತಿವೆ ಸಾಲುಗಳು ಹಿಡಿಸಿದವು. ಸಾಧ್ಯವಾದರೆ ನನ್ನ blog ಗೆ ಹಾಗೇ ಭೇಟಿ ಕೊಡಿ. hosachiguruu.blogspot.in/
ReplyDelete