Friday, December 26, 2014

ಆಗಾಗ ಬಿದ್ದ ಹನಿಗಳು !!!

೧. ತಿಳಿನೀರಿಗೆ ಕಲ್ಲೆಸೆದು ಮೂಡಿದ ನೂರೆಂಟು ಬಿಂಬಗಳೆಂಬ
   'ನಾನು'ಗಳಲ್ಲೇ ಹುಡುಕುತ್ತಿಹೆನು ನಾನು ನನ್ನನು.. 

೨. ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
   ಮುತ್ತಿಟ್ಟರೆ ಅರಳುವ ಅವಳ ತುಟಿ ,
  ನಾಚಿದ ಬಳ್ಳಿಯಂತೆ ಮುದುಡುವುದವಳ ಕಣ್ಣ ರೆಪ್ಪೆ !!!

೩. ಅಲೆಯೊಂದು ಸೃಷ್ಟಿಯಾಯಿತು ನನ್ನೆದೆಯ ಬಡಿತಕ್ಕೆ,
   ಮತ್ತೊಂದು ಅಲೆ ಸೃಷ್ಟಿಯಾಯಿತು ಅವಳ ಗೆಜ್ಜೆ ಸದ್ದಿಗೆ ,
  ಎದೆಯ ಬಳಿ ಅವಳು ಹೆಜ್ಜೆ ಇಟ್ಟಾಗ 
  ಮಿಲನವಾದವು ಎರಡೂ ಅಲೆಗಳು ..
  ಸೃಷ್ಟಿಯಾಯಿತೊಂದು ಹೊಸ ಸ್ವರ...ನನ್ನೆದೆಯ ವೀಣೆಯಿಂದ.... 
  ಪದವೊಂದು ಹೊರಹೊಮ್ಮಿತು ಅವಳ ಮೃದು ಕಂಠದಿಂದ ...

೪. ನಿನ್ನ ಪ್ರೀತಿಗೆ ನನ್ನ ಸಿಹಿ ಮುತ್ತುಗಳೇ ಸುಂಕ ಗೆಳತಿ ,
    ಮುತ್ತಲ್ಲದೆ ಬೇರೇನೂ ಕೇಳಬೇಡ.. 

೫.. ಕಣ್ತುಂಬ ಕನಸುಗಳನ್ನು ಬಿತ್ತಿ ,
    ಕಣ್ಣಂಚಲೇ ಮರೆಯಾದವಳು .
   ನೆನಪುಗಳು ಅಳಿಯುವ ಮುನ್ನವೇ 
   ಹಳೆ ಕನಸುಗಳಿಗೆ ಹೊಸ ಬಣ್ಣ ಹಚ್ಚುತ್ತಿಹಳು..  

೬. ನನ್ನೆದೆಯ ವೀಣೆಯ ಸ್ವರಕ್ಕೆ ನುಡಿಯಾದವಳು ,
    ಕಣ್ಮುಚ್ಚಿ ಮಲಗಿದರೂ ಕಣ್ಣೊಳಗಿನ ಬಿಂಬವಾಗಿ ಕಾಡುತ್ತಿಹಳು.. 

೭. ಚಳಿಗೆ ಕನಸುಗಳೂ ಹೆಪ್ಪುಗಟ್ಟು ತ್ತಿವೆ ಗೆಳತಿ ,
    ನೀನಾದರೂ ಇರಬಾರದೇ ಸನಿಹ ?
   ಬೆಚ್ಚಗೆ ಅಪ್ಪಿಕೊಳ್ಳಲು , ಬಿಸಿ ಮುತ್ತೊಂದ ನೀಡಲು.. 

6 comments:

  1. ಎಲ್ಲ ಹನಿಗಳೂ ಅಮೋಘ ಸಾರ್.
    ಎರಡನೇ ಹನಿಯು ನಮ್ಮ ಮನಸುಗಳನ್ನು ಮೀಟುವಂತಿದೆ...

    ReplyDelete
  2. ಹನಿಗಳು ಚೆನ್ನಾಗಿವೆ, ಗಿರೀಶರೆ. ಯಾವಾಗಲೂ ಬೀಳುತ್ತಿರಲಿ.

    ReplyDelete
  3. ಮನಸ್ಸು ಸಜ್ಜಾದಾಗ ಪದಗಳ ಮನಸ್ಸು ಎದ್ದು ಕಾಡುತ್ತವೆ..
    ಪ್ರತಿಯೊಂದು ಸುಂದರ ಅನುಭೂತಿ ಕೊಡುವ ಸಾಲುಗಳು
    ಇಷ್ಟವಾದವು.. ಬೇಗನೆ ಆ ಹನಿಗಳ ಮಾಲೀಕರಾಗಿರಿ!!!

    ಸೂಪರ್ ಗಿರಿ

    ReplyDelete
  4. ಓಹ್..ಗಿರಿ ಶಿಖರದಲ್ಲಿ ಪ್ರೇಮಸಿಂಚನ ನಡಿತಾ ಇದ್ದಂಗೆ ಇದ್ಯಲ್ಲಾ ,ಎನ್ ಕಥೆ :P ...ಚೆನಾಗಿದೆ ಗುರುಗಳೇ :)..ಟಚ್ ಆಗೋ ಸಾಲುಗಲು :* :)..ಬರಿತಾ ಇರಿ :)

    ReplyDelete
  5. Nice Giri bhai :-)
    >>
    ಮುಟ್ಟಿದರೆ ಮುದುಡುವ ನಾಚಿಕೆ ಗಿಡ ,
    ಮುತ್ತಿಟ್ಟರೆ ಅರಳುವ ಅವಳ ತುಟಿ ,<< Eno nadita ide ansta ide ;-)

    ReplyDelete
  6. ಕನಸುಗಳೂ ಹೆಪ್ಪುಗಟ್ಟುತ್ತಿವೆ ಸಾಲುಗಳು ಹಿಡಿಸಿದವು. ಸಾಧ್ಯವಾದರೆ ನನ್ನ blog ಗೆ ಹಾಗೇ ಭೇಟಿ ಕೊಡಿ. hosachiguruu.blogspot.in/

    ReplyDelete