ಒಮ್ಮೆ ಬೆಂಗಳೂರಿನಿಂದ ನಮ್ಮ ಊರಿಗೆ ಬೆಳಗಿನ ರೈಲಿನಲ್ಲಿ ಹೋಗುತ್ತಿದ್ದೆ.ಕಿಡಕಿ ಬದಿಯ ಸೀಟಿನಲ್ಲಿ ಕುಳಿತು ಪೇಪರ್ ಓದುತ್ತ ಕುಳಿತಿದ್ದೆ.ಯಶವಂತಪುರದಲ್ಲಿ ಸುಮಾರು ೫-೬ ಜನ ೪೦-೫೦ ವರ್ಷದ ಜನರು ಬಂದು ನಾನು ಕುಳಿತಿದ್ದ ಆಚೀಚಿನ ಸೀಟಿನಲ್ಲಿ ಕುಳಿತಿಕೊಂಡರು.ನನ್ನ ಪಾಡಿಗೆ ಪೇಪರ್ ಓದಿದ ಮೇಲೆ ಒಂದು ಪುಸ್ತಕ ಓದುತ್ತ ಕುಳಿತೆ. ಅಷ್ಟೂ ಜನ ತಮಿಳಿನಲ್ಲಿ,ಸ್ವಲ್ಪ ಕನ್ನಡದಲ್ಲಿ ಕೂಡ ಏನೇನೋ ಮಾತಾಡುತ್ತ ಇದ್ದರು.ನಾನೇನು ಅಷ್ಟು ಅವರ ಕಡೆಗೆ ಗಮನ ಕೊಡಲಿಲ್ಲ.
ತುಮಕೂರು ದಾಟಿದ ಮೇಲೆ ನಾನು ಪುಸ್ತಕ ಮುಚ್ಚಿಟ್ಟು ಸುಮ್ಮನೆ ಕುಳಿತಿದ್ದೆ.ಸ್ವಲ್ಪ ಸಮಯದ ನಂತರ ಅವರಲ್ಲೊಬ್ಬರು ನನ್ನನ್ನು ಕುರಿತು "ನೀನು ಏನೋ ಯೋಚಿಸ್ತಿದ್ಯ?ಯಾವುದೋ ವಿಷಯ ನಿನ್ನನ್ನು ಬಹಳ ಕಾಡುತ್ತಿದೆ?ನೀನು ಬಹಳ ಬೇಜಾರ್ ಆಗಿರೋದ್ ನೋಡಿದ್ರೆ ನೀನು ಬಹಳ ದಿನದಿಂದ ಏನೋ ನೋವು ಅನುಭವಿಸುತ್ತಿದ್ದಿಯ? " ಹಾಗೆ ನನ್ನ ಬಲಗೈ ಹಸ್ತ ನೋಡಿ "ಸುಮಾರು ೮-೯ ತಿಂಗಳಿನಿಂದ ನೀನು ಏನ್ ಮಾಡಬೇಕು ಅನ್ಕೊತಿಯ ಅದನ್ನ ಮಾಡಕ್ಕೆ ಆಗ್ತಿಲ್ಲ ತಾನೆ ?"ಅಂತ ಹೇಳಿದರು.
ನಾನು ಕಕ್ಕಾಬಿಕ್ಕಿಯಾಗಿ ನೋಡ ತೊಡಗಿದೆ,ಕಾರಣ ಅದರಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ.
"ಇಲ್ಲ ,ಹಾಗೇನಿಲ್ಲ " ಅಂದೆ.
"ನಿನ್ನನ್ನ ನೋಡಿದ್ರೆ ಗೊತ್ತಾಗುತ್ತಪ್ಪ ನಂಗೆ..ನಿನ್ನ ಹೆಸರೇನು?ಏನ್ ಓದ್ತಾ ಇದ್ದೀಯ ?"ಅಂತ ಕೇಳಿದ್ರು.
"ಗಿರೀಶ್ ಅಂತ,ಇಂಜಿನಿಯರಿಂಗ್ ಮುಗಿಸಿದ್ದೀನಿ "
"ಇವಾಗ ಏನ್ ಮಾಡ್ತಿದ್ಯ,ಎಲ್ಲಾದರು ವರ್ಕ್ ಮಾಡ್ತಿದ್ಯ "
"ಕೆಲಸ ಹುಡ್ಕ್ತ ಇದೀನಿ "ಅಂದೆ.
"ಇದೆ ನೋಡು ನಿನ್ನನ್ನ ಬಹಳ ಕಾಡ್ತಿರೋದು, ಎಷ್ಟು ದಿನ ಆಯಿತು ನಿನ್ನ ಇಂಜಿನಿಯರಿಂಗ್ ಮುಗಿಸಿ ,ಎಷ್ಟು ನಿನ್ನ ವಯಸ್ಸು ಇವಾಗ "
"೪ ತಿಂಗಳು ಆಗಿದೆ ಇಂಜಿನಿಯರಿಂಗ್ ಮುಗಿದು"
"ನಿನ್ನ ವಯಸ್ಸು "ಅಂತ ಮತ್ತೆ ಕೇಳಿದರು.
"೨೧ "ಅಂದೆ.
"ನೋಡು ಗಿರೀಶ್ ಒಂದು ಮಾತು ಹೇಳ್ತೀನಿ.ನಿಂಗೆ ಈ ವಯಸ್ಸಿಗೆ ಕೈ ತುಂಬ ದುಡ್ಡು ಸಿಗೋ ಕೆಲಸ ಸಿಕ್ಕಿದ್ರೆ ನಿನ್ನ ಚಪ್ಪಲಿ ಕಾಲಲ್ಲಿ ಇರಲ್ಲ ,ತಲೆ ಮೇಲೆ ಬಂದು ಬಿಡುತ್ತೆ,ಹಾಗಂತ ನಿಂಗೆ ಈಗ ಕೆಲಸ ಸಿಗದೇ ಇರಲಿ ಅಂತ ನಾನು ಹೇಳಲ್ಲ " ಅಂತ ಚಿನ್ನದಂಥ ಮಾತು ಹೇಳಿ ಮತ್ತೆ ಶುರು ಮಾಡಿದರು.
"ಒಂದಲ್ಲ ಒಂದು ದಿನ ಕೆಲಸ ಸಿಗುತ್ತೆ,ತಾಳ್ಮೆ ಇಂದ ಕಾಯಬೇಕು ಅಷ್ಟೇ, ಆ ದೇವರು ಎಲ್ಲರನ್ನು ಈ ಥರಾ ಪರೀಕ್ಷೆ ಮಾಡಲ್ಲ,ನಿನ್ನನ್ನ ಮಾಡ್ತಿದ್ದಾನೆ ಅಂದ್ರೆ ಖುಷಿ ಪಡು, ಒಂದು ದಿನ ನಿಂಗೆ ಒಳ್ಳೆದಾಗುತ್ತೆ "ಅಂತ ಧೈರ್ಯ ತುಂಬಿದರು.
ನನಗೆ ಪರಿಚಯವೇ ಇಲ್ಲದ,ಇನ್ನೂ ಸ್ವಲ್ಪ ಒತ್ತು ಕಳೆದರೆ ಅವರೂ ತಮ್ಮ ಸ್ಟೇಷನ್ ನಲ್ಲಿ ನಾನು ನನ್ನ ಸ್ಟೇಷನ್ ನಲ್ಲಿ ನಮ್ಮ ನಮ್ಮ ದಾರಿ ಹಿಡಿದು ಹೋಗುತ್ತೇವೆ.ಆಮೇಲೆ ಅವರ್ಯಾರೋ ನಾನ್ಯಾರೋ? ನನ್ನ ಆತ್ಮೀಯರು ಕೂಡ ಈ ರೀತಿ ಧೈರ್ಯ ತುಂಬಿರಲಿಲ್ಲ,ಕೆಲವು ನೆಂಟರು ಇನ್ನೂ ಕೆಲಸ ಸಿಕ್ಕಿಲ್ಲ ಅಂತ ಹೀಯಾಳಿಸುತ್ತಲೇ ಇದ್ದರು. ಇಂಥ ಪರಿಸ್ಥಿತಿಯಲ್ಲಿ ಅವರು ಹೇಳಿದ ಈ ಮಾತುಗಳು ನನ್ನನ್ನು ತುಂಬ ಕಾಡಿದವು ಮತ್ತು ಅಷ್ಟೇ ಅರ್ಥ ಪೂರ್ಣ ಆಗಿದ್ದವು. ಅವರ ಮಾತಿಗೆ ಏನು ಹೇಳಲು ಗೊತ್ತಾಗದೆ ಸುಮ್ಮನೆ ಕುಳಿತಿದ್ದೆ.
"ಜೀವನದಲ್ಲಿ ಈ ಥರಾ ಕಷ್ಟ,ನೋವು ಅನುಭವಿಸಿದರೆ ಮಾತ್ರ ಅದಕ್ಕೆ ಒಂದು ಅರ್ಥ,ಮುಂದೆ ಒಂದು ಇದನೆಲ್ಲ ನೆನಪು ಮಾಡ್ಕೋತಿಯ.ಅವಾಗ ಗೊತ್ತಾಗುತ್ತೆ ಇದರ ಬೆಲೆ ನಿಂಗೆ ,ಸ್ವಲ್ಪ ದಿನ ಅಷ್ಟೇ ಒಳ್ಳೆ ಕೆಲಸ ಸಿಗುತ್ತೆ ಬಿಡು "ಅಂತ ನನ್ನನ್ನು ಹುರಿದುಂಬಿಸುತ್ತಿದ್ದರು .
ನಂತರ ನನ್ನ ಊರು,ನನ್ನ ಕುಟುಂಬದ ಬಗ್ಗೆ ವಿಚಾರಿಸಿ,ಅವರೂ ತನ್ನ ಸ್ನೇಹಿತರೊಡನೆ ಪ್ರತಿ ತಿಂಗಳು ಅಮಾವಾಸ್ಯೆಯಂದು ತಿಪಟೂರಿನ ಬಳಿ ಒಂದು ದೇವಸ್ಥಾನಕ್ಕೆ ೧೨ ವರ್ಷದಿಂದ ತಪ್ಪದೆ ಹೋಗುವ,ಮತ್ತು ಅದೂ ಕೂಡ ಇದೆ ರೈಲಿನಲ್ಲಿ ಹೋಗುವ ವಿಷಯವನ್ನು ಹೇಳಿದರು.
ಇನ್ನೇನು ಅವರು ಇಳಿಯುವ ಸ್ಟೇಷನ್ ಹತ್ತಿರ ಬರುತ್ತಿದ್ದಾಗ ಕೊನೆಯದಾಗಿ "ನಾನು ಕೂಡ ಬೆಂಗಳುರಿಗ ಕೆಲಸ ಹುಡುಕಲು ಅದೂ ಕೂಡ ತಮಿಳುನಾಡಿನಿಂದ ಬಂದು ಸುಮಾರು ೮ ತಿಂಗಳು ಇದೆ ರೀತಿ ಅನುಭವಿಸಿದ್ದೆ ,ಎಲ್ಲಾ ನೆಂಟರು ನನ್ನನ್ನು ದೂರ ಇಟ್ಟಿದ್ದರು,ಜಾಸ್ತಿ ಯೋಚನೆ ಮಾಡಬೇಡ "ಅಂತ ಹೇಳಿ ಹೋದರು.
ಅವರು ಹೋದ ಮೇಲೆ ಅವರಾಡಿದ ಮಾತುಗಳು ನನ್ನನ್ನು ಧೈರ್ಯವಾಗಿಸಿದವು,ಅವರ ಹೇಳಿದ ಒಂದೊಂದು ಮಾತುಗಲ್ಲು ಯೋಚಿಸುತ್ತ ಕುಳಿತಿದ್ದೆ.
ಮನೆಗೆ ತಲುಪಿದ ಮೇಲೆ ನನ್ನ ತಾಯಿಗೆ ಈ ವಿಷಯವನ್ನು ಹೇಳಿದ ಮೇಲೆ ಅವರು "ನೋಡು ಎಂಥ ಮಾತು ಹೇಳಿದರೆ,ಸಾಯೋವರ್ಗೂ ನೆನಪಿಟ್ಕೋ"ಅಂತ ಹೇಳಿದರು.
chennagi bariteehra....munduvaresi
ReplyDelete@Digwas::thumba thanks, kanditha munduvaristhini....Innu chennagi baryoke prayathna madthini
ReplyDeleteನಿಮ್ಮ ಅನುಭವ ಬಹಳ ಅಮೂಲ್ಯವಾದದ್ದು. ಕಷ್ಟದಲ್ಲಿದ್ದಾಗ ಈ ರೀತಿಯ ಪ್ರೋತ್ಸಾಹಕರ ಮಾತುಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು.
ReplyDelete@prabhamani::kanditha adu nanna athma vishwasavannu echhisittu..nimma prathikriyege dhanyavaadagalu...
ReplyDeletenija girish..
ReplyDeleteone inspiring statement can heal lot of pain residing in us...
:)