ಗಿಡ ನೆಟ್ಟರೆ,ಭವಿಷ್ಯದ ಬದುಕಿಗೆ ಭರವಸೆ ನೆಟ್ಟಂತೆ,
ಬದುಕಿನ ಆಶಯಕ್ಕೆ ನೀರೆರೆದಂತೆ..
ಅವರ ಗೆಳೆತನವ ಪೋಷಿಸಿದಂತೆ...
ಮೆಲುಗಾಳಿಯ ಚುಂಬನ ಸವೆದು ಪಾವನವಾದಂತೆ,
ಪ್ರಕೃತಿಯ ರಮ್ಯತೆಯ ಅನುಭವಿಸಿದಂತೆ...
ಸ್ವರ್ಗದ ಬಳಿ ಮನೆ ಕಟ್ಟಿದಂತೆ,
ಹಾಡಿಗೆ ಹಕ್ಕಿಯ ಚಿಲಿಪಿಲಿ ಇಂಚರ ನಾದವಾದಂತೆ...
ಶಾಂತ ನೀರವ ಇಳಿಬೆಳಕಿನಲ್ಲಿ ಸ್ವರ್ಗದ
ತ್ರಿವಿಧ ಇಂಪು ಆಲಿಸಿದಂತೆ...
ಹಸಿರಿನೊಡನೆ ಬೆಸುಗೆಯ ಬೆಸೆದಂತೆ,
ಭೂ ತಾಯಿಯ ಉಳಿಸಿದಂತೆ..
ಹಸಿರು ಬೆಳೆಸೋಣ..ಪ್ರಕೃತಿ ಉಳಿಸೋಣ...ಹಸಿರಲ್ಲಿ ಉಸಿರಿದೆ...
ವಿಶ್ವ ಪರಿಸರ ದಿನದಂದು ಹಸಿರು ಬೆಳಸಲು,ಮರ ಬೆಳೆಸಲು ಮುನ್ನುಡಿ ಬರೆಯೋಣ...
ಫೋಟೋ:ಗಿರೀಶ್.ಎಸ್
ಅರ್ಥಪೂರ್ಣವಾಗಿದೆ! ತುಂಬಾ ಇಷ್ಟವಾಯಿತು.. ನಾನು ದಿನ ಮನೆಯ ಗಿಡಗಳಿಗೆ ನೀರು ಹಾಕುತ್ತೇನೆ.. ಗಿಡ ಮರಗಳಿದ್ದರೆ ನಾವು ಇರುವೆವು. ಅವನ್ನು ಉಳಿಸಬೇಕು. ಹಸಿರನ್ನು ಕಾಪಾಡಬೇಕು..
ReplyDeleteಅಶ್ವಿನಿ,ಧನ್ಯವಾದಗಳು..ನೀವು ಕೂಡ ಗಿಡಗಳನ್ನು ಬೆಳೆಸುವುದು ಕೇಳಿ ಸಂತೋಷವಾಯಿತು....ಹೀಗೆ ಹಸಿರನ್ನು ಕಾಪಾಡುತ್ತಿರಿ ..ಅದು ನಮ್ಮನ್ನು ಕಾಪಾಡುತ್ತದೆ...
ReplyDeletenice one girish..
ReplyDeleteThank you..... :-)
Delete