Monday, July 23, 2012

ಹುಯ್ಯೋ ಹುಯ್ಯೋ ಮಳೆರಾಯ.....

ಮುನಿದಿಹಳು ಕ್ಷಮಯಾಧರಿತ್ರಿ,
ಒಡಲೊಡೆದು ಕಾದಿಹಳು ನಿನಗೆ,
ತಲ್ಲಣಿಸು ಬಾ ಅವಳನು ... ಓ ಮಳೆರಾಯ !!

ಕೆರೆ ಕಟ್ಟೆಗಳು ಒಣಗಿಹುದು,
ಪಕ್ಷಿ ಸಂಕುಲವು ಕಂಗೆಟ್ಟಿಹುದು ,
ದಯೆ ತೋರು ಅವುಗಳ ಜೀವಕೆ ... ಓ ಮಳೆರಾಯ !!

ಬೆಳೆ ಇಲ್ಲ,ದವಸ ಇಲ್ಲ,
ಚಿಂತಾಕ್ರಾಂತನಾಗಿಹನು ರೈತ,
ಕೃಪೆ ತೋರು ಅವನ ಮೇಲೆ... ಓ ಮಳೆರಾಯ !!

ನಿನ್ನನೇ ನೆಚ್ಚಿಹವು ಅದೆಷ್ಟೋ ಜೀವಗಳು....

12 comments:

  1. ಮನುಷ್ಯ ಪ್ರಕೃತಿಯ ಮೇಲೆ ಮಾಡೋ ದೌರ್ಜನ್ಯಕ್ಕೆ ಪ್ರಕೃತಿಯು ಮುನಿದಿದೆ ಸರ್....
    ಮಳೆರಾಯನ ಆಗಮನಕ್ಕೆ ಚಂದದ ಕವಿತೆ...

    ReplyDelete
    Replies
    1. ಸುಷ್ಮಾ,ಪ್ರಕೃತಿ ಮುನಿದಿರುವುದು ನಿಜ.ಮನುಷ್ಯ ಇದೆ ರೀತಿ ತನ್ನ ದೌರ್ಜನ್ಯವನ್ನು ಮುಂದುವರೆಸಿದರೆ ಒಂದಲ್ಲ ಒಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಅಲ್ಲವೇ ?

      Delete
  2. ಮಳೆರಾಯ ಬರಲಿ ಬಂದು ಬರಡು ಭೂಮಿಯ ತಣ್ಣಿಸಲಿ ಎಂದು ಆಶಿಸುವ ನಾವುಗಳು ಅವ ಯಾಕೆ ಬರುತ್ತಿಲ್ಲ ಎಂಬುದರ ಬಗ್ಗೆ ಯೋಚಿಸೋದು ಉತ್ತಮ. ಕವಿತೆ ಚೆನ್ನಾಗಿದೆ.
    ಮಳೆರಾಯ ಬಂದು ಆರ್ಭಟಿಸಲಿ.

    ReplyDelete
    Replies
    1. ಅಶ್ವಿನಿ.ನಿಮ್ಮ ಮಾತು ಅಕ್ಷರಶಃ ಸತ್ಯ,ನಾವು ಮನುಷ್ಯರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು... ಹೀಗೆ ಮುಂದುವರಿದರೆ ಘೋರವಾದ ಕ್ಲಿಷ್ಟ ಸಮಯವನ್ನು ನಾವು ಮುಂದೆ ಎದುರಿಸಬೇಕಾಗುತ್ತದೆ...

      Delete
  3. ಮಳೆರಾಯ ಒಂದು ಕಡೆ ನೆರೆ ಉಕ್ಕಿಸಿದರೆ, ಹಲವು ಕಡೆ ಬರದ ದರ್ಶನ ಮಾಡಿಸುತ್ತಾನೆ. ಎರಡೂ ಕಡೆ ತಲ್ಲಣಿಸುವುದು ಭೂಮಿಯೇ.

    ಒಳ್ಳೆಯ ವಸ್ತು ಭಾವನಾತ್ಮಕ ಕವನ. ಹಾಡಿಕೊಳ್ಳ ಬಲ್ಲ ಸಾಹಿತ್ಯ.

    ReplyDelete
    Replies
    1. ನಿಜ ಸರ್,ಈ ಏರುಪೇರಿನಿಂದ ಒಂದೊಂದು ಭಾಗದ ಜನರಿಗೆ ತೃಪ್ತಿ ಆಗಿದ್ದರೆ,ಕೆಲವು ಭಾಗದವರು ಆಕಾಶ ನೋಡುತ್ತಾ ಮಳೆಗಾಗಿ ಕಾದಿದ್ದಾರೆ...

      Delete
  4. ಉಯ್ಯೋ ಉಯ್ಯೋ ಅಲ್ಲ ಸಾರ್, ಹುಯ್ಯೋ ಹುಯ್ಯೋ ಅಲ್ವಾ?

    ReplyDelete
    Replies
    1. ಸರಿಪಡಿಸಿದ್ದೇನೆ... ಕೆಲವು ಕಡೆ 'ಉಯ್ಯೋ' ಎಂದೂ ಕೆಲವು ಕಡೆ 'ಹುಯ್ಯೋ' ಎಂದು ಬಳಕೆ ಆಗಿದೆ..ಆ ಗೊಂದಲದಲ್ಲಿ ನಾನು "ಉಯ್ಯೋ" ಎಂದು ಉಪಯೋಗಿಸಿದ್ದೆ...
      ತಪ್ಪನ್ನು ತಿಳಿಸಿದಕ್ಕೆ ಧನ್ಯವಾದ ತಮಗೆ...

      Delete
  5. ಮಳೆ ಇದ್ದರೇ ಇಳೆ..
    ಇಳೆ ಇದ್ದರೇ ಬೆಳೆ
    ಬೆಳೆ ಇದ್ದರೇ ಬೇಳೆ
    ಬೇಳೆ ಇದ್ದರೇ ಬಾಳೆ
    ಸುಂದರ ಕವನ ಗಿರೀಶ್..ಒಂದಕೊಂದು ಅವಲಂಬಿತ..ನಾಣ್ಯದ ಎರಡು ಮುಖಗಳಿದ್ದಂತೆ.
    ಚೆನ್ನಾಗಿ ವಿವರಿಸಿದ್ದೀರ...ನಮನಗಳು..

    ReplyDelete
    Replies
    1. ಶ್ರೀಕಾಂತ್ ಸರ್,ನಿಮ್ಮ ಈ ಕಿರು ಕವನವು ತುಂಬಾ ಚೆನ್ನಾಗಿದೆ..ಸತ್ಯಾಂಶ ಇದೆ..ನಿಮಗೂ ನಮನಗಳು...

      Delete
  6. Replies
    1. Thank you Sandeep... Call me as Girish,that is enough.Plz dont call me as Sir.

      Delete