Friday, April 5, 2013

ಮತ್ತೆ ಮತ್ತೆ ತೇಜಸ್ವಿ !!!

ಏಪ್ರಿಲ್ ೫,ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ ... ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಕುಂದೂರು ಬಳಿಯ ಬೇಟೆರಾಯನಕೋಟೆಯಲ್ಲಿ ಮಾರ್ಚ್ ೨೯,೨೦೧೩ ರಂದು  ಹಮ್ಮಿಕೊಂಡಿತ್ತು...
ಕೊಟ್ಟಿಗೆಹಾರದ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ತೇಜೋಮಯ ತೇಜಸ್ವಿ


ಈ ಚಾರಣ ಕಾರ್ಯಕ್ರಮಕ್ಕೆ ನಾಡಿನ ವಿವಿದೆಡೆಯಿಂದ ಚಾರಣ ಪ್ರಿಯರು,ಪರಿಸರ ಪ್ರಿಯರು,ಛಾಯಾಗ್ರಾಹಕರು,ವಿಸ್ಮಯ ಪ್ರತಿಷ್ಠಾನದ ಸದಸ್ಯರು,ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳು ಮತ್ತು ತೇಜಸ್ವಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.. ಈ ಕಾರ್ಯಕ್ರಮವು ಬೆಳಗ್ಗೆ ಮೂಡಿಗೆರೆ ಇಂದ ಹೊರಟು  ಕುಂದೂರು ತಲುಪಿ ಅಲ್ಲಿಂದ ಬೇಟೆರಾಯನಕೋಟೆಗೆ ನಮ್ಮ ತಂಡ  ಸಾಗಿತು..


ಬೇಟೆರಾಯನಕೋಟೆ
ಬೇಟೆರಾಯನಕೋಟೆ: ಇದು ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಒಂದು ಪ್ರದೇಶ ... ಇಲ್ಲಿ ಮುಂಚೆ ಒಬ್ಬ ಪಾಳೆಗಾರ ಆಳುತ್ತಿದ್ದನು ಎಂಬ ಮಾಹಿತಿ ಇದೆ .. ಹೊಯ್ಸಳರ ಮೂಲ ಕೂಡ ಪಶ್ಚಿಮ ಘಟ್ಟದ ಪ್ರದೇಶ ಆದ್ದರಿಂದ ಈ ಕೋಟೆಯೂ ಕೂಡ ಹೊಯ್ಸಳರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟಿರಬಹುದು .. ಇದೆ ಬೆಟ್ಟಗಳ ಸಾಲಿನಲ್ಲಿ ಬರುವ ಬಲ್ಲಾಳರಾಯನದುರ್ಗದಲ್ಲಿರುವ ಕೋಟೆ  ಕೂಡ ಹೊಯ್ಸಳರ ದೊರೆ ನರಸಿಂಹ ಬಲ್ಲಾಳ ಕಟ್ಟಿಸಿದ್ದು .. ಆಗಾಗಿ ಇದು ಕೂಡ ಅವರ ಕೆಳಗಿದ್ದ ಯಾರಾದರು ಪಾಳೆಗಾರ ಕಟ್ಟಿಸಿರಬಹುದು ಎಂದು ಊಹಿಸಬಹುದು ಅಷ್ಟೇ ..ಸಧ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಕೋಟೆಯ ಕುರುಹು ಕಾಣುತ್ತದೆ ಅಷ್ಟೇ ...

ಅಂದ ಹಾಗೆ ಇಲ್ಲಿ ಇತ್ತೀಚಿಗೆ ಆನೆಗಳ ಹಾವಳಿ ಕೂಡ ಜಾಸ್ತಿ ಎಂದು ಸ್ಥಳೀಯರು ಹೇಳಿದರು ...
ಚಾರಣದ ಹಾದಿಯಲ್ಲಿ

ಬೇಟೆರಾಯನಕೋಟೆಯಿಂದ ಕಾಣುವ ಸುತ್ತಮುತ್ತಲ ಗುಡ್ಡಗಳು
 
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಮನಃ ಪೂರ್ವಕ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.. ಅಲ್ಲದೆ ತೇಜಸ್ವಿ ಬರಹಗಳ ಬಗ್ಗೆ ಚರ್ಚೆಗಳನ್ನು ಕೂಡ ಹಲವಾರು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ...



Photos:Darshan Shindhe

4 comments:

  1. ಪೂ ಚಂ ತೇ ಒಂದು ಪಶ್ಚಿಮ ಘಟ್ಟಗಳ ಸಾಲಿನ ಹಾಗೆ ಪ್ರತಿಯೊಂದು ಬಾರಿ ಒಂದು ಬಗೆಯಲ್ಲಿ ಖುಷಿಕೊಡುತ್ತದೆ. ಅಂತಹ ಸವಿ ರಸಿಕರ ಅಭಿಮಾನಿಗಳ ಜೊತೆಯಲ್ಲಿ ಕಳೆದ ಒಂದು ದಿನ ನಿಜಕ್ಕೂ ಅಮರ ಸಂತಸ ಎನ್ನಬಹುದು. ಬೇಟೆರಾಯನ ಕೋಟೆ ಬಗ್ಗೆ ಚೆನ್ನಾಗಿದೆ ವಿವರಣೆ. ಚಿತ್ರಗಳು ಸುಂದರವಾಗಿವೆ (ಫೇಸ್ ಬುಕ್ ನಲ್ಲಿ ದರ್ಶನ ಹಾಕಿದ ಫೋಟೋಗಳನ್ನು ನೋಡಿದೆ). ಸುಂದರ ಲೇಖನ ಗಿರಿ.

    ReplyDelete
  2. ಗಿರೀಶಣ್ಣ.. ನನ್ನ ಮೊದಲ ಚಾರಣವಿದು.. ಮೊದಲ ಚಾರಣವನ್ನು ನೀವೆಲ್ಲಾ ಸ್ಮರಣೀಯವೆನಿಸಿದ್ದೀರಿ.. ಕೋಟೆಯ ವಿವರಣೆ ನಾನು ಅಲ್ಲಿ ಕೇಳಿರಲಿಲ್ಲ.. ಧನ್ಯವಾದಗಳು..

    ReplyDelete
  3. ಸಾರ್ವಕಾಲೀನ ಸಾಹಿತಿ ಎನಿಸಿಕೊಳ್ಳುವುದು ಸುಮ್ಮನೆ ಮಾತಲ್ಲ. ಅದು ಪೂಚಂತೇ ಅವರಿಗೆ ಮಾತ್ರ ಸಲ್ಲುವ ಮಾತು. ಅವರ ನೆನಪಲ್ಲಿ ಸಂಕೀರ್ಣಗಳು, ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಗಳ್ಳಿ ಭಾಗವಹಿಸಿದ್ದೆ. ಚಾರಣವೆನ್ನುವುದು ನಮಗೆ ಆಗದ ಸಂಗತಿ ಗಿರೀಶೂ! "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಗೂ ಮತ್ತು ಪ್ರಸ್ತುತ ಪಡೆಸಿದ ನಿಮಗೂ ನಾನು ಆಭಾರಿ.

    ReplyDelete
  4. ಶ್ರೀಕಾಂತ್ ಸರ್,ನೀವು ಕೂಡ ಬರಬಹುದಿತ್ತು ಈ ಚಾರಣಕ್ಕೆ.. ನೀವು ಹೇಳಿದ ಹಾಗೆ ತೇಜಸ್ವಿ ಬಗ್ಗೆ ತಿಳಿದುಕೊಳ್ಳುವುದು ಅಂದರೆ ನನಗೆ ಬಹಳ ಕುತೂಹಲ ..ಆಗಾಗಿ ಅವರ ಸ್ನೇಹಿತರ ಜೊತೆ ಕಳೆದ ಆ ಸಮಯ ನಿಜಕ್ಕೂ ಸಂತಸವನ್ನು ಉಂಟುಮಾಡಿತು ..ಮುಂದಿನ ಬಾರಿ ನೀವೂ ಬನ್ನಿ.ಅಲೆಮಾರಿಗಳು ತಂಡ ಎಲ್ಲ ಸೇರಿ ಹೋಗೋಣ ..

    ಅಜಯ್,ನಿಮ್ಮ ಆಕಸ್ಮಿಕ ಭೇಟಿ ಸಂತೋಷ ಕೊಟ್ಟಿತು ..ಅಂದ ಹಾಗೆ ಕೋಟೆಯ ಬಗ್ಗೆ ತಿಳಿದಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ ..

    ಬದರಿ ಸರ್,ವಿಸ್ಮಯ ಪ್ರತಿಷ್ಠಾನ ಕೂಡ ಕೆಲವು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ..ನೀವು ಹೇಳಿದ ಹಾಗೆ ತೇಜಸ್ವಿ ಖಂಡಿತ ಸಾರ್ವಕಾಲೀನ ಸಾಹಿತಿ ಅನ್ನುವುದರಲ್ಲಿ ಹುರುಳಿಲ್ಲ ..

    ReplyDelete